• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಲ್ಲಿ ಪ್ರತಿಮೆ ಸ್ಥಾಪಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ, ಬಾವಿ ಕಾಣಿಸಿದ್ದು ಸುಯೋಗ!

Hanumantha Kamath Posted On June 14, 2021


  • Share On Facebook
  • Tweet It

ನಾನು ಬಾಲ್ಯದಲ್ಲಿ ಇದ್ದಾಗ ಉದಯವಾಣಿ ಪತ್ರಿಕೆಗಿಂತ ಮೊದಲು ನವಭಾರತ ಎನ್ನುವ ಪತ್ರಿಕೆ ಮಂಗಳೂರಿನಲ್ಲಿ ಇತ್ತು. ಅದರ ಕಚೇರಿ ಮತ್ತು ಪ್ರಿಂಟಿಂಗ್ ಪ್ರೆಸ್ ಎಲ್ಲವೂ ಈಗ ಓಶಿಯನ್ ಪರ್ಲ್ ಹೋಟೇಲು ಇರುವ ಜಾಗದಲ್ಲಿ ಇತ್ತು. ಅದರ ಎದುರಿಗೆ ಒಂದು ವೃತ್ತ ಅಥವಾ ಸರ್ಕಲ್ ಇದ್ದ ಕಾರಣ ಅದನ್ನು ನವಭಾರತ ವೃತ್ತ ಎಂದು ಜನರು ಕರೆಯುತ್ತಿದ್ದರು. ಆ ಕಾರಣದಿಂದ ಕಾಲಾಂತರದಲ್ಲಿ ಅದೇ ಹೆಸರು ಚಲಾವಣೆಯಲ್ಲಿ ಇತ್ತು. ನವಭಾರತ ಪತ್ರಿಕೆಯನ್ನು ವಿ.ಎಸ್ ಕುಡ್ವರು ನಡೆಸುತ್ತಿದ್ದರು ಮತ್ತು ಅಲ್ಲಿ ಅವರದ್ದೇ ಹೆಸರಿನ ಬಸ್ ಶೆಲ್ಟರ್ ಕೂಡ ಇತ್ತು. ಈಗ ಅದು ಓಶಿಯನ್ ಪರ್ಲ್ ಬಸ್ ಸ್ಟಾಪ್ ಆಗಿದೆ. ನಂತರದ ತಲೆಮಾರು ಅದನ್ನು ಕೊಡಿಯಾಲ್ ಬೈಲ್ ಸರ್ಕಲ್ ಎಂದೇ ಕರೆಯಲು ಶುರುಮಾಡಿತ್ತು. ಯಾಕೆಂದರೆ ಆಗ ನವಭಾರತ ಬಂದಾಗಿತ್ತು. ಜನರಿಗೆ ಆ ಹೆಸರಿನ ಮಹತ್ವ ಮರೆತುಹೋಗಿತ್ತು. ಯಾವಾಗ ನವಭಾರತ ಅಲ್ಲಿ ಮುಚ್ಚಿ ಅಲ್ಲಿಯೇ ಪಕ್ಕದಲ್ಲಿ ಸಿಟಿ ಪಾಯಿಂಟ್ ಎನ್ನುವ ಕಟ್ಟಡ ತಲೆ ಎತ್ತಿತ್ತಲ್ಲ ಆ ನಂತರ ಬಂದ ಬಳಿಕ ಈಗಿನ ತಲೆಮಾರು ಅದನ್ನು ಸಿಟಿಪಾಯಿಂಟ್ ಎಂದೇ ಕರೆಯುತ್ತಿತ್ತು. ಒಟ್ಟಿನಲ್ಲಿ ಅದಕ್ಕೊಂದು ಸರಿಯಾದ ಹೆಸರು ಯಾರ ಬಾಯಲ್ಲಿಯೂ ಇರಲಿಲ್ಲ. ಹಾಗಂತ ಅದಕ್ಕೆ ಕಾನೂನಾತ್ಮಕವಾಗಿ ಯಾವುದೇ ಹೆಸರು ಇರಲಿಲ್ಲ ಎಂದಲ್ಲ. ಮಂಗಳೂರು ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಮಂಜೇಶ್ವರ ಗೋವಿಂದ ಪೈ ವೃತ್ತ ಎಂದೇ ಇತ್ತು. ವೃತ್ತದಲ್ಲಿ ಕೂಡ ಅದೇ ಹೆಸರು ಬರೆದು ಫಲಕ ಕೂಡ ಹಾಕಲಾಗಿತ್ತು. ಕನ್ನಡ ಪರ ಹೋರಾಟಗಾರರು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿದ್ದರು. ಸಿಟಿಪಾಯಿಂಟ್ ಕಟ್ಟಡದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಚೇರಿ ವೃತ್ತದ ನಿರ್ವಹಣೆಯನ್ನು ಹೊತ್ತುಕೊಂಡಿತ್ತಾದರೂ ಕೇವಲ ಕಾಟಾಚಾರಕ್ಕೆ ನಿರ್ವಹಣೆ ಮಾಡಿದಂತೆ ಕಾಣುತ್ತಿತ್ತು. ಹೀಗಿರುವಾಗ ಈ ವೃತ್ತವನ್ನು ಆಧುನಿಕರಣಗೊಳಿಸಿ ಅಲ್ಲಿ ಮಂಜೇಶ್ವರ ಗೋವಿಂದ ಪೈಗಳ ಕಂಚಿನ ಅಥವಾ ಪಂಚಲೋಹದ ಪ್ರತಿಮೆ ನಿಲ್ಲಿಸಿ ಒಂದು ಶಾಶ್ವತ ಸುಂದರೀಕರಣಕ್ಕೆ ನಾವು ಯಾಕೆ ಮುಂದಾಗಬಾರದು ಎಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರೂ, ಮಂಗಳೂರು ನಗರ ದಕ್ಷಿಣದ ಶಾಸಕರೂ ಆಗಿರುವ ವೇದವ್ಯಾಸ ಕಾಮತ್ ಅವರಿಗೆ ಅನಿಸಿತ್ತು. ಹಾಗಂತ ಮನಸ್ಸು ಬಂದ ಕೂಡಲೇ ನಾವು ನಮಗೆ ಬೇಕಾದ ಹಾಗೆ ಮಾಡಲು ಆಗುವುದಿಲ್ಲವಲ್ಲ. ಆದ್ದರಿಂದ ಕಾನೂನಾತ್ಮಕವಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ನಿರ್ವಹಿಸುವ ಹೊಣೆಯನ್ನು ಹೊತ್ತುಕೊಳ್ಳಲು ನಮ್ಮ ಟ್ರಸ್ಟ್ ಸಿದ್ಧವಾಗಿತ್ತು. ಯಾವುದೇ ಒಂದು ಸರ್ಕಲ್ ಅಭಿವೃದ್ಧಿ ಕಾಣಬೇಕಾದರೆ ಅದನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಅವರು ಆಕ್ಷೇಪ ಇಲ್ಲ ಎಂದು ಹೇಳಿದ ಮೇಲೆ ಮುಂದುವರೆಯಲು ಸಾಧ್ಯ. ಯಾಕೆಂದರೆ ವೃತ್ತದ ಅಗಲ, ಉದ್ದ ಮತ್ತು ಎತ್ತರ ಎಲ್ಲವೂ ಟ್ರಾಫಿಕ್ ರೂಲ್ಸ್ ಗಳಿಗೆ ಅಡಚಣೆಯಾಗದಂತೆ ಇರಬೇಕಾಗಿರುವುದರಿಂದ ಪೊಲೀಸ್ ಇಲಾಖೆಯ ಅನುಮತಿ ಅಗತ್ಯ. ಈ ಹಿಂದೆ ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಹೊಸ ಗಡಿಯಾರ ಗೋಪುರವನ್ನು ನಿರ್ಮಿಸಲು ಸ್ಮಾರ್ಟ್ ಸಿಟಿ ಮುಂದಾದಾಗ ಆಗಿನ ಡಿಸಿಪಿ ವಿನಯ್ ಗಾಂವ್ಕರ್ ಅದಕ್ಕೆ ತೀವ್ರ ಆಕ್ಷೇಪ ಎತ್ತಿದ್ದರು. ಯಾಕೆಂದರೆ ಅದರಿಂದ ಅಲ್ಲಿ ಟ್ರಾಫಿಕ್ ಸುಗಮ ಸಂಚಾರಕ್ಕೆ ದಕ್ಕೆ ಬರುವ ಸಾಧ್ಯತೆ ಇತ್ತು. ಆ ಬಳಿಕ ಆ ವೃತ್ತವನ್ನು ಒಂದಿಷ್ಟು ಕಿರಿದು ಮಾಡಲಾಗಿತ್ತು. ಆದ್ದರಿಂದ ನಾವು ಈ ವೃತ್ತದ ವಿಷಯ ಬಂದಾಗ ನಮ್ಮ ಟ್ರಸ್ಟಿನಿಂದ ಲಿಖಿತ ಮನವಿಯನ್ನು ಪೊಲೀಸ್ ಇಲಾಖೆಗೆ ಕೊಡಲಾಯಿತು. ಆದರೆ ನಮಗೆ ಬಂದ ಉತ್ತರ ಏನೆಂದರೆ ಆ ವೃತ್ತ ಅವೈಜ್ಞಾನಿಕವಾಗಿ ಇರುವುದರಿಂದ ಅದನ್ನು ಪಾಲಿಕೆ ಸರಿಪಡಿಸಿದ ನಂತರವೇ ಮುಂದಿನ ತೀರ್ಮಾನ ಎಂದು ಹೇಳಲಾಯಿತು. ಹೀಗಿರುವಾಗಲೇ ಆ ವೃತ್ತವಿದ್ದ ಜಾಗವನ್ನು ಮೊನ್ನೆ ಸಮತಟ್ಟು ಮಾಡಲಾಗಿದೆ. ಲೇಡಿಹಿಲ್ ಪ್ರದೇಶದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಕರೆಯಲ್ಪಡುವ ವೃತ್ತದಂತೆ ಇಲ್ಲಿ ಕೂಡ ಕಾಂಕ್ರೀಟ್ ಬೌಂಡರಿಯನ್ನು ಹಾಕಿ ನಂತರ ನಮಗೆ ಹಸ್ತಾಂತರದ ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಅಲ್ಲೊಂದು ಪ್ರಾಚೀನ ಬಾವಿ ಕೂಡ ಪತ್ತೆಯಾಗಿದೆ. ಈಗ ನಮ್ಮ ಟ್ರಸ್ಟ್ ಏನು ಯೋಜನೆ ಹಾಕಿಕೊಂಡಿದೆ ಎಂದರೆ ಆ ಬಾವಿಯನ್ನು ಉಳಿಸಿ, ಅಭಿವೃದ್ಧಿಗೊಳಿಸಿ ಅಲ್ಲಿಯೇ ಮಂಜೇಶ್ವರ ಗೋವಿಂದ ಪೈಗಳ ಪ್ರತಿಮೆ ನಿರ್ಮಿಸಿ ಅದರೊಂದಿಗೆ ಕರಾವಳಿಯ ಸೊಗಡನ್ನು ಸೃಷ್ಟಿಸುವ ಕೆಲಸ ಮಾಡಬೇಕಾಗಿದೆ. ಆ ಬಾವಿಯ ನೀರು ವೃತ್ತದೊಳಗೆ ಕೈದೋಟ ತರಹದ್ದನ್ನು ಬೆಳೆಸುವಾಗ ಅಲ್ಲಿಯೇ ಬಳಕೆಯಾಗುತ್ತದೆ.
ಮಂಜೇಶ್ವರ ಗೋವಿಂದ ಪೈಗಳ ಹೆಸರಿನ ವೃತ್ತವನ್ನು ಆಕರ್ಷಕವನ್ನಾಗಿಸುವುದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಬಹುಕಾಲದ ಕನಸು. ಯಾಕೆಂದರೆ ಗೋವಿಂದ ಪೈಗಳು ನಮ್ಮ ರಾಜ್ಯದ ಮೊದಲ ರಾಷ್ಟ್ರಕವಿ. ಅವರು ಹುಟ್ಟಿದ್ದು ತಮ್ಮ ತಾಯಿಯ ತಂದೆಯ ಮನೆಯಿದ್ದ ಮಂಜೇಶ್ವರದಲ್ಲಿ ಆದರೂ ಅವರ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿ ನಡೆದಿತ್ತು. ಮದ್ರಾಸ್ ಪ್ರಾಂತ್ಯದ ಆಡಳಿತ ಇದ್ದಾಗ ಮಂಜೇಶ್ವರ ಕರ್ನಾಟಕದಲ್ಲಿತ್ತು. ನಂತರ ಭಾಷಾವಾರು ರಚನೆ ಎಂದು ಹೇಳುತ್ತಾ ನಮ್ಮಿಂದ ಕಾಸರಗೋಡನ್ನು ಕಿತ್ತುಕೊಳ್ಳಲಾಯಿತು. ರಾಷ್ಟ್ರಕವಿ ಎಂಬುವುದು ಸಣ್ಣ ಬಿರುದು ಏನಲ್ಲ. ಈ ಮಣ್ಣಿನಲ್ಲಿ ಹುಟ್ಟಿದ ಮಹಾನ್ ಸಾಹಿತಿಯ ಕೃತಿಗಳನ್ನು ಅದರೊಂದಿಗೆ ಮುಂದಿನ ತಲೆಮಾರಿಗೆ ಗೋವಿಂದ ಪೈಗಳ ಹೆಸರನ್ನು ದಾಟಿಸುವ ಕೆಲಸ ನಾವು ಮಾಡಲೇಬೇಕಿದೆ. ಅಸಾಮಾನ್ಯ ಸಾಹಿತ್ಯ ಕೃತಿಗಳನ್ನು ರಚಿಸಿದ ಭಾರತದ 9 ಜನರಿಗೆ ಮಾತ್ರ ಇಲ್ಲಿಯ ತನಕ ಈ ಬಿರುದು ದಯಪಾಲಿಸಲಾಗಿದೆ. ಅದರಲ್ಲಿ ನಮ್ಮವರೇ ಆದ ಗೋವಿಂದ ಪೈಗಳು ಹಾಗೂ ಕುವೆಂಪು ಇದ್ದಾರೆ. ಅಮಿತಾಬ್ ಬಚ್ಚನ್ ತಂದೆ ಹರಿವಂಶ ರಾಯ್ ಬಚ್ಚನ್ ಕೂಡ ಒಬ್ಬರು. ಅಂತಹ ಗೋವಿಂದ ಪೈಗಳು ಕನ್ನಡಕ್ಕೆ ಕೊಟ್ಟ ಕೊಡುಗೆ ಸಾಗರದಷ್ಟು ಆಳ ಮತ್ತು ವಿಸ್ತಾರವಾಗಿದೆ. ಅದರೊಂದಿಗೆ ಅವರು ಗೌಡ ಸಾರಸ್ವತ ಬ್ರಾಹ್ಮಣರೂ ಆಗಿರುವುದು ಆ ಸಮುದಾಯಕ್ಕೂ ಒಂದು ಹೆಮ್ಮೆ. ಅಂತವರ ಪ್ರತಿಮೆ ಸ್ಥಾಪಿಸುವ ಅವಕಾಶ ಸಿಕ್ಕಿದ್ದು ನಮ್ಮ ಟ್ರಸ್ಟಿನ ಅದೃಷ್ಟ ಮತ್ತು ಅಲ್ಲಿ ಬಾವಿ ಕಾಣಿಸಿದ್ದು ಸುಯೋಗ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search