• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

11-ಇ ನಕ್ಷೆ ಮತ್ತು ನಿರಪೇಕ್ಷಣಾ ಪತ್ರ- ಇನ್ನು ಮುಂದಕ್ಕೆ ಬೇಕಾ?

Tulunadu News Posted On June 27, 2021
0


0
Shares
  • Share On Facebook
  • Tweet It

11ಇ ಈಗ ಅತೀ ಹೆಚ್ಚು ಚರ್ಚೆಯಲ್ಲಿರುವ ವಿಷಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ ಮಾಡಬೇಕಾದ್ದಲ್ಲಿ ಸ್ಥಳೀಯ ಪ್ರಾಧಿಕಾರಗಳಿಂದ ನಿರಪೇಕ್ಷಣಾ ಪತ್ರ ಹಾಗೂ ಸರ್ವೆ ಇಲಾಖೆಯಿಂದ 11ಇ ಹಾಜರುಪಡಿಸಬೇಕೆಂಬ ಕಡ್ಡಾಯ ನಿಯಮ ಕಾನೂನು ಸಮ್ಮತವಲ್ಲ ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ಭೂಪರಿವರ್ತನೆಗೆ ಇನ್ನು ಮುಂದೆ ಸ್ಥಳೀಯ ಪ್ರಾಧಿಕಾರಗಳಾದ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಾಗೂ ಬೇರೆ ಬೇರೆ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಹಾಜರುಪಡಿಸಬೇಕಾದ ಅಗತ್ಯವಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ನೀಡಿರುವ ಮಹತ್ತರ ಆದೇಶ ಭವಿಷ್ಯದಲ್ಲಿ ದೂರಗಾಮಿ ಪರಿಣಾಮವನ್ನು ಉಂಟುಮಾಡಲಿದೆ. ಅಷ್ಟಕ್ಕೂ 11-ಇ ನಕ್ಷೆ ಯಾವಾಗ ಅಗತ್ಯ ಬೀಳುತ್ತಿತ್ತು ಎಂದರೆ ನೀವು ಯಾವುದೇ ಜಾಗವನ್ನು ಮಾರುತ್ತೀರಿ ಅಥವಾ ಖರೀದಿಸುತ್ತೀರಿ ಎಂದಾಗ 11-ಇ ನಕ್ಷೆ ಬೇಕಾಗುತ್ತಿತ್ತು.

ಇನ್ನು ಇದನ್ನು ಮಾಡಿಸಬೇಕಾದರೆ ಮೂಡಾಕ್ಕೆ ಹೋಗಬೇಕು. ಅಲ್ಲಿ ಹಣ ಕೊಡದೇ ನಕ್ಷೆ ಬಿಡಿ ಒಂದು ಕುರ್ಚಿ ಕೂಡ ಅಲುಗಾಡುವುದಿಲ್ಲ. ಇನ್ನು ತಾಲೂಕು ಕಚೇರಿಯಿಂದ ಸರ್ವೇಯರ್ ನಮ್ಮ ಜಾಗಕ್ಕೆ ಬಂದು ಪ್ರಕ್ರಿಯೆ ಮಾಡಬೇಕಾದರೆ ಅವರಿಗೆ ನಾವೇ ಕಾರು ತೆಗೆದುಕೊಂಡು ಹೋಗಿ ಕರೆದುಕೊಂಡು ಬಂದು ಅವರು ಜಾಗ ನೋಡಿದ ಬಳಿಕ ಅವರ ಕಿಸೆಯಲ್ಲಿ 2000 ರೂಪಾಯಿ ಹಾಕಬೇಕು ಮತ್ತು ಕಚೇರಿಗೆ ಬಿಟ್ಟುಬರಬೇಕು. ಆಗ ಏನಾದರೂ ನಿಮ್ಮ ಕೆಲಸ ಆದರೂ ಆಗಬಹುದು. ಆದರೆ ನಿಜಕ್ಕೂ 11-ಇ ನಕ್ಷೆ ಅಗತ್ಯ ಇದೆಯಾ ಎನ್ನುವ ಪ್ರಶ್ನೆ ಬಂದಾಗ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಯಾಕೆಂದರೆ ನಮ್ಮ ಜಾಗ ಬೇರೆಯವರಿಗೆ ಮಾರುವಾಗ ಡಾಕ್ಯುಮೆಂಟ್ ನಲ್ಲಿ ಸ್ಕೆಚ್ ಇರುತ್ತದೆ. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖವೂ ಇರುತ್ತದೆ. ಉದಾಹರಣೆಗೆ ಮಂಗಳೂರು ತಾಲೂಕಿನ ಕಸಬ ಗ್ರಾಮದ 327 ಸರ್ವೇ ನಂಬರಿನ…… ಹೀಗೆ ವಿವರವಾಗಿ ದಾಖಲಾಗಿರುತ್ತದೆ. ಜಾಗವನ್ನು ರಿಜಿಸ್ಟ್ರರ್ ಮಾಡುವಾಗ ಸ್ಕೆಚ್ ಇದ್ದರೆ ಸಾಕು. ಆದರೆ ಮನೆ ಕಟ್ಟುವಾಗ ಮತ್ತು ಮಾರುವಾಗ 11-ಇ ಸ್ಕೆಚ್ ಇರಲೇಬೇಕು ಎನ್ನುವ ಕಾನೂನನ್ನು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ್ದು.

ಆದರೆ ಅದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಮಾತ್ರ ಚಿಕ್ಕದ್ದಲ್ಲ. ಈ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಯಡ್ಯೂರಪ್ಪನವರು ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ರಾಜ್ಯದ ಹಿಂದಿನ ಸರಕಾರ ಮಾಡಿದ ತಪ್ಪನ್ನು ಮುಂದುವರೆಸಿಕೊಂಡು ಹೋಗಬೇಕಾಗಿರಲಿಲ್ಲ. ಆದರೆ ಅದು ಮುಂದುವರೆದು ಹೋಗುತ್ತಿದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ನಾಗರಿಕರು ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಹಾಗಂತ ನಗರ ಪ್ರದೇಶದಲ್ಲಿ ವಾಸಮಾಡುವವರಿಗೆ 11-ಇ ಬೇಡಾ. ನಗರ ಬಿಟ್ಟು ಜಿಲ್ಲೆಯ ಹೊರಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ 11-ಇ ಬೇಕಾಗುತ್ತಿತ್ತು. ಹಿಂದೆ ಭೂ ಪರಿವರ್ತನೆಗೆ ಮೂಡಾ ಮಾತ್ರವಲ್ಲ ಸ್ಥಳೀಯ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣಾ ಮಂಡಳಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿ, ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ, ಅಗ್ನಿಶಾಮಕ ದಳ ಇವರಿಂದ ಎನ್ ಒಸಿ ಬೇಕಾಗುತ್ತಿತ್ತು.

ಈಗ ಏಕಾಏಕಿ ಎನ್ ಒಸಿ ಬೇಡಾ ಎಂದರೆ ಅದರಿಂದಲೂ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ವಿವಾದಗಳು ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಹಿಂದೆ 11-ಇ ನಕ್ಷೆಗಳನ್ನು ಭೂಪರಿವರ್ತನೆಗೆ ಕಡ್ಡಾಯ ಮಾಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ತುಂಬಾ ತೊಂದರೆಯಾಗುತ್ತಿತ್ತು. ಭೂಪರಿವರ್ತನೆಗೆ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಹೈಕೋರ್ಟಿನ ತೀರ್ಪಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಭೂಪರಿವರ್ತನೆಗೆ ಅನುಸರಿಸುತ್ತಿದ್ದ ಕಠಿಣ ನಿಯಮವು ಸಡಿಲಗೊಂಡು ಸಾರ್ವಜನಿಕರಿಗೆ ಭೂಪರಿವರ್ತನೆಗೆ ಅನುಕೂಲವಾಗಲಿದೆ. ನ್ಯಾಯಾಲಯದ ಆದೇಶವನ್ನು ಸರಕಾರದ ಪ್ರಧಾನ ಕಾರ್ಯದರ್ಶಿ, ಭೂಮಾಪನಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಭೂಮಾಪನಾ ಇಲಾಖೆಯ ಉಪನಿರ್ದೇಶಕರಿಗೆ ನೀಡಿದ್ದರೂ , ಎಲ್ಲಿಯೂ ಆದೇಶವನ್ನು ಪಾಲಿಸದೇ ಹಿಂದಿನಂತೆ ಕಠಿಣ ನಿಯಮಗಳನ್ನು ಇಲಾಖೆ ಮುಂದುವರೆಸಿದೆ. ಈ ಕುರಿತು ಜನರೊಂದಿಗೆ ಸ್ಪಂದಿಸಬೇಕಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

0
Shares
  • Share On Facebook
  • Tweet It




Trending Now
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
Tulunadu News March 17, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
  • Popular Posts

    • 1
      ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search