• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಳೆದ ಒಂದೂವರೆ ವರ್ಷದಿಂದ ನಮಗೆ ನಿತ್ಯ ವೈದ್ಯರದ್ದೇ ದಿನ!!

Hanumantha Kamath Posted On July 2, 2021


  • Share On Facebook
  • Tweet It

ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುತ್ತಾರೆ. ಆದರೆ ಒಬ್ಬ ರೋಗಿಗೆ ಅದರಲ್ಲಿಯೂ ಈ ಕೊರೊನಾ ಸಹಿತ ಅದರ ಅನೇಕ ರೂಪಾಂತರಿ ಫಂಗಸ್, ಡೆಲ್ಟಾ ಸಹಿತ ವಿವಿಧ ರೋಗಗಳಿಂದ ಬಳಲುತ್ತಿರುವ ಪ್ರತಿ ರೋಗಿಗೆ ಮತ್ತು ನಿತ್ಯ ಟಿವಿ, ಪತ್ರಿಕೆಗಳಲ್ಲಿ ಮೇಲಿನಿಂದ ಕೆಳಗಿನ ತನಕ ಕೇವಲ ವೈದ್ಯಕೀಯ ಲೋಕದ್ದೇ ಸುದ್ದಿಯನ್ನು ನೋಡುವವರಿಗೆ ಕಳೆದ ಒಂದೂವರೆ ವರ್ಷದಿಂದ ನಿತ್ಯ ವೈದ್ಯರದ್ದೇ ದಿನವಾಗಿದೆ. ಹಾಗಂತ ಫೇಸ್ ಬುಕ್ಕಿನಲ್ಲಿ ವೈದ್ಯರನ್ನು ಕೊಂಡಾಡುವವರು ನಿಜಕ್ಕೂ ವೈದ್ಯರ ಬಗ್ಗೆ ಅದೇ ಭಾವನೆಯನ್ನು ಹೊಂದಿರುತ್ತಾರಾ ಅಥವಾ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಹೊಗಳಿಕೆ ಸೀಮಿತವೇ ಎಂದು ನೋಡಬೇಕಾಗುತ್ತದೆ.

ಯುನೈಟೆಡ್ ಆಫ್ ಅಮೇರಿಕಾದಲ್ಲಿ 135 ವರ್ಷಗಳ ಹಿಂದೆ ಪ್ರಿಂಟಾಗಿದ್ದ ಮೆಡಿಕಲ್ ಜರ್ನಲ್ ನಲ್ಲಿ ಬರೆದಿದ್ದ ವಾಕ್ಯವೊಂದು ಸಾರ್ವಕಾಲಿಕ ಸತ್ಯ ಎಂದು ಇವತ್ತಿಗೂ ಅನಿಸುತ್ತಿದೆ. “ಯಾವನೇ ಒಬ್ಬ ವೈದ್ಯ ತನ್ನ ಮೇಲೆ ಯಾವ ದಿನ ಅಥವಾ ಯಾವ ಘಳಿಗೆಯಂದು ಹಲ್ಲೆ ಆಗುತ್ತೆ, ಆರೋಪ ಬರುತ್ತದೆ, ಬ್ಲ್ಯಾಕ್ ಮೇಲ್ ಆಗುತ್ತೆ, ಪ್ರಕರಣ ದಾಖಲಾಗುತ್ತದೆ ಎಂದು ಹೇಳಲಾಗದ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ” ಎಂದು ಬರೆಯಲಾಗಿತ್ತು. ಅದರ ಅರ್ಥ ಇಷ್ಟೇ, ಶತಮಾನಗಳ ಹಿಂದಿನಿಂದಲೂ ವೈದ್ಯಕೀಯ ಲೋಕ ಅತ್ಯಂತ ಹೆಚ್ಚು ಭಯಬೀತ ವಾತಾವರಣದಲ್ಲಿ ಸೇವೆ ಸಲ್ಲಿಸುವಂತಹ ಪರಿಸ್ಥಿತಿ ಇದೆ. ಹಾಗಂತ ಆವತ್ತಿನಿಂದ ಇವತ್ತಿನ ತನಕ ವೈದ್ಯರು ಸಂಕಷ್ಟದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದಲ್ಲ, ಆದರೆ ಆವತ್ತು ಬರೆದ ವಾಕ್ಯ ಇತ್ತೀಚಿನ ಕೆಲವು ವರ್ಷಗಳಲ್ಲಿ ಒಂದಿಷ್ಟು ಹೆಚ್ಚೆ ನಿಜ ಎನಿಸುವಂತೆ ತೋರುತ್ತಿದೆ. ಬಹುಶ: ಇವತ್ತಿನ ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಕ್ಲಿಪ್ ಇದಕ್ಕೆ ಹೆಚ್ಚು ಕಾರಣ ಇರಬಹುದು.

ಇತ್ತೀಚಿನ ದಿನಗಳಲ್ಲಿ ನಾವು ವೈದ್ಯರ ಮಹತ್ವ ಅರ್ಥವಾಗುವ ಸೂಕ್ಷ್ಮತೆಯನ್ನು ಕಳೆದುಕೊಂಡು ಬಿಟ್ಟಿದೆವೇನೋ ಎಂದು ಅನಿಸುತ್ತಿದೆ. ಜೀವ ಉಳಿಸುವವರು, ವೈದ್ಯ ನಾರಾಯಣೋ ಹರಿ ಎನ್ನುವಂತಹ ದೊಡ್ಡ ದೊಡ್ಡ ಶಬ್ದಗಳನ್ನು ಬಿಡಿ. ಒಂದು ಸಿಂಪಲ್ ಲಾಜಿಕ್ ಹೇಳುತ್ತೇನೆ, ಕೇಳಿ. ಮಧ್ಯರಾತ್ರಿಯ ಎರಡು ಗಂಟೆಗೆ ಮನೆಯ ಫ್ಯಾನ್ ತಿರುಗುತ್ತಿಲ್ಲ, ಸೆಕೆಯಾಗುತ್ತಿದೆ, ನಿದ್ದೆ ಬರುತ್ತಿಲ್ಲ ಎಂದು ಎಪ್ರಿಲ್ ಸೆಕೆ ತಡೆಯಲಾರದೆ ನೀವು ಫ್ಯಾನ್ ರಿಪೇರಿ ಮಾಡುವವನಿಗೆ ಫೋನ್ ಮಾಡಿ ಹೇಳಿದರೆ ಅವನು ಓಡೋಡಿ ಬರುತ್ತಾನಾ?, ಇಲ್ಲ. ಅವನು ಬರುವುದು ಮರುದಿನ ಬೆಳಿಗ್ಗೆ. ಒಬ್ಬ ಪ್ಲಂಬರ್ ಕೂಡ ಮಧ್ಯರಾತ್ರಿ ಬಂದು ರಿಪೇರಿ ಮಾಡಲಾರ. ಅದೇ ನೀವು ಒಬ್ಬ ವೈದ್ಯನಿಗೆ ಮಧ್ಯರಾತ್ರಿಯ ಸಿಹಿ ನಿದ್ರೆಯ ಹೊತ್ತಿನಲ್ಲಿ ಕರೆ ಮಾಡಿ ಸೇವೆಗೆ ವಿನಂತಿಸಿ ಆತ ಸೀದಾ ಎದ್ದು ಬರುತ್ತಾರೆ. ಅದು ವೈದ್ಯಲೋಕದ ಸಿದ್ಧಾಂತ. ಕಳೆದ ನಲ್ವತ್ತು ವರ್ಷಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಸಂಭವಿಸುತ್ತಾ ಇರಬಹುದು. ಆದರೆ ಕಳೆದ ಐದು ವರ್ಷಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ವೈದ್ಯಕೀಯ ರಂಗವನ್ನು ಸೇವೆ ಎಂದು ಪರಿಧಿಯಿಂದ ತೆಗೆದು ವ್ಯಾಪಾರ ಕ್ಷೇತ್ರವನ್ನಾಗಿ ಮಾಡಿದ್ದು. ಇದರ ಹಿಂದೆ ನಮ್ಮ ಹಿಂದಿನ ರಾಜ್ಯ ಸರಕಾರ ಕೈವಾಡವಿದೆ.

ಯಾವಾಗ ವೈದ್ಯ ಮತ್ತು ರೋಗಿಯ ಸಂಬಂಧ ವ್ಯಾಪಾರಿ ಮತ್ತು ಗ್ರಾಹಕ ಎಂದು ಬದಲಾಗುತ್ತಾ ಹೋದಂತೆ ವೈದ್ಯಕೀಯ ರಂಗವನ್ನು ಜನ ನೋಡುವ ದೃಷ್ಟಿ ಕೂಡ ಬದಲಾಯಿತು. ಹಿಂದೆ ಒಬ್ಬ ವೈದ್ಯ ಒಂದು ರೋಗವನ್ನು ಉದಾಹರಣೆಗೆ ಐವತ್ತು ರೂಪಾಯಿಯಲ್ಲಿ ಚಿಕಿತ್ಸೆ ಕೊಟ್ಟು ಗುಣಪಡಿಸಲು ಸಾಧ್ಯವಾಗುತ್ತಿದ್ದರೆ ಹೊಸ ಕಾನೂನಿನ ಅಡಿಯಲ್ಲಿ ಅದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಯೊಂದು ಚಿಕಿತ್ಸೆಗೂ ಸರಕಾರ ಕಾನೂನಿನ ಅಡಿಯಲ್ಲಿ ಮಾನದಂಡವನ್ನು ನಿಗದಿಪಡಿಸಿದ ಕಾರಣದಿಂದ ಚಿಕಿತ್ಸೆಗಳು ಸಹಜವಾಗಿ ದುಬಾರಿಯಾದವು. ಇದರಿಂದ ರೋಗಿಯ ಮನಸ್ಸಿನಲ್ಲಿಯೂ ನಿನ್ನೆ ತನಕ ಕಡಿಮೆಯಲ್ಲಿ ಆಗುತ್ತಿದ್ದ ಚಿಕಿತ್ಸೆಗಳು ಇವತ್ತು ಇಷ್ಟು ದುಬಾರಿ ಹೇಗೆ ಆದವು ಎಂದು ಅನಿಸಿತು. ಅದಕ್ಕೆ ಸರಿಯಾಗಿ ವೈದ್ಯಕೀಯ ಲೋಕದ ಹುಳುಕನ್ನು ತೋರಿಸುವ ಒಂದೆರಡು ಸಿನೆಮಾಗಳು ಬಿಡುಗಡೆಯಾದವು. ಅದರಲ್ಲಿ ಸತ್ತ ರೋಗಿಯೊಬ್ಬನನ್ನು ಆಪರೇಶನ್ ಥಿಯೇಟರ್ ನಲ್ಲಿ ಇಟ್ಟು ಸಮಯ ದೂಡುವಂತೆ ಚಿತ್ರಿಸಲಾಯಿತು.

ಈಗಿನ ಸಾಮಾಜಿಕ ಜಾಲತಾಣದ ಭರದಲ್ಲಿ ಅಂತಹ ನೆಗೆಟಿವ್ ಪಬ್ಲಿಸಿಟಿಗಳು ಬೇಗ ನಡೆಯುತ್ತವೆ. ಜನರು ಅದನ್ನು ಪೂರ್ಣಪ್ರಮಾಣದಲ್ಲಿ ನಂಬುವ ವಾತಾವರಣ ಸೃಷ್ಟಿಯಾಯಿತು. ಆದರೆ ಅಂತಹ ಪ್ರಕರಣಗಳು ಇಡೀ ದೇಶದಲ್ಲಿ ಶೇಕಡಾ ಒಂದರಷ್ಟು ಸಂಭವಿಸಿದರೂ ಎಲ್ಲಾ ನೂರು ಶೇಕಡಾ ವೈದ್ಯರೂ ಕೂಡ ಹಣ ಹೊಡೆಯುವ ರಾಕ್ಷಸರಂತೆ ಭ್ರಮೆ ಸೃಷ್ಟಿಸಲಾಯಿತು. ಆಸ್ಪತ್ರೆಗಳನ್ನು ಹಣ ಮಾಡುವ ಕಾರ್ಖಾನೆಗಳೆಂಬಂತೆ ತೋರಿಸಲಾಯಿತು. ವಾಸ್ತವವಾಗಿ ಏನೆಂದರೆ ಒಬ್ಬ ರೋಗಿ ಸಾವು ಬದುಕಿನ ಹೋರಾಟದಲ್ಲಿ ಆಸ್ಪತ್ರೆಗೆ ಸೇರುತ್ತಾನೆ ಎಂದೇ ಇಟ್ಟುಕೊಳ್ಳೋಣ. ಯಾವ ವೈದ್ಯ ಕೂಡ ರೋಗಿ ಸಾಯಲಿ ಎಂದು ಬಯಸುವುದಿಲ್ಲ. ತಮ್ಮ ಕೈಯಲ್ಲಿ ಯಾವೆಲ್ಲಾ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆಯೋ ಅದನ್ನಷ್ಟು ಮಾಡುತ್ತಾರೆ. ಕೆಲವೊಮ್ಮೆ ಒಂದೊಂದು ಮದ್ದು ಕೊಟ್ಟು ಐದಾರು ಘಂಟೆಗಳ ತನಕ ನಿಗಾಘಟಕದಲ್ಲಿ ಇಡಬೇಕಾಗುತ್ತದೆ. ಅನೇಕ ಬಾರಿ ಔಷಧಿಗಳ ಪರಿಣಾಮವೋ ಅಥವಾ ರೋಗಿಯ ಆಯುಷ್ಯ ಗಟ್ಟಿ ಇದ್ದ ಕಾರಣವೋ ರೋಗಿ ಬದುಕುಳಿಯಬಹುದು. ಆದರೆ ಕೆಲವು ಸಂದರ್ಭ ಅದೇ ಕಾಯಿಲೆ, ರೋಗ ಅಥವಾ ಅಪಘಾತಕ್ಕೆ ಒಳಗಾದ ವ್ಯಕ್ತಿ ಅದೇ ಔಷಧ ಕೊಡಲ್ಪಟ್ಟರೂ ಬದುಕುಳಿಯದೇ ಇರಬಹುದು. ಹಾಗಂತ ಆ ವ್ಯಕ್ತಿ ಬದುಕಿದ್ದ, ನಮ್ಮ ಮನೆಯವನನ್ನು ಈ ವೈದ್ಯರು ಕೊಂದುಬಿಟ್ಟರು ಎಂದು ಹೇಳುವುದು ಶುದ್ಧ ತಪ್ಪು.

ಅಪಘಾತಕ್ಕೆ ಒಳಗಾದ ಪ್ರತಿ ಮನುಷ್ಯನನ್ನೂ ಬದುಕುಳಿಸಲು ವೈದ್ಯರಿಗೂ ಸಾಧ್ಯವಿಲ್ಲ. ಈಗೀಗ ಬರುತ್ತಿರುವ ರೂಪಾಂತರಿ ವೈರಸ್ ಕಾಯಿಲೆಗಳ ಬುಡಕ್ಕೆ ಹೋಗಿ ಸಂಬಂಧಪಟ್ಟ ಔಷಧವನ್ನು ಕೊಡುವಷ್ಟರಲ್ಲಿ ರೋಗಿ ಸಾಯಲೂಬಹುದು. ಹಾಗಂತ ವೈದ್ಯರು ತಪ್ಪು ಔಷಧ ಕೊಟ್ಟು ಕೊಂದರು ಎಂದು ಹೇಳುವುದು ಇನ್ನೊಂದು ಮೂರ್ಖತನ. ಒಟ್ಟಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ತಾವು ಹಾಕಿದ ಬಂಡವಾಳವನ್ನು ಹಿಂಪಡೆಯುವ ನಿಟ್ಟಿನಲ್ಲಿ ಏನಾದರೂ ವ್ಯವಹಾರಿಕವಾಗಿ ಯೋಚಿಸಿದರೆ ಅದರಿಂದ ಇಡೀ ವೈದ್ಯಕುಲವೇ ವ್ಯವಹಾರಿಕವಾಗಿದೆ ಎಂದು ಅಂದುಕೊಳ್ಳುವುದು ತಪ್ಪು. ಹಾಕಿದ ಹಣ ಲಾಭದೊಂದಿಗೆ ಹಿಂದಿರುಗಬೇಕು ಎಂದು ಖಾಸಗಿ ಆಸ್ಪತ್ರೆಗಳು ಬಯಸುವುದು ಸಹಜ. ಆದರೆ ಎಲ್ಲಾ ವೈದ್ಯರ ಹೃದಯದಲ್ಲಿಯೂ ಮಾನವೀಯತೆ ಇದೆ ಎನ್ನುವುದನ್ನು ವೈದ್ಯರ ದಿನದಂದು ಮರೆಯದಿರೋಣ….

  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Hanumantha Kamath June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Hanumantha Kamath June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search