• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜನರಿಗೆ ತೊಂದರೆ ಆಗದಂತೆ ಅಭಿವೃದ್ಧಿ ಒಂದು ಕಲೆ, ಗೊತ್ತಿಲ್ಲದವರಿಗೆ ಬೀಳಲಿದೆ ಬರೆ!!

Hanumantha Kamath Posted On August 18, 2021


  • Share On Facebook
  • Tweet It

ಒಂದು ಕಡೆ ಜಲಸಿರಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ಅದಕ್ಕಾಗಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಇನ್ನೊಂದೆಡೆ ಮೆಸ್ಕಾಂ ಕೇಬಲ್ ಗಳನ್ನು ಅಂಡರ್ ಗ್ರೌಂಡ್ ಮಾಡಲು ರಸ್ತೆಗಳನ್ನು ಅಗೆಯಲಾಗುತ್ತಿದೆ. ಈ ಯೋಜನೆಯ ಗುತ್ತಿಗೆದಾರರು ಯಾವಾಗ ಎಲ್ಲಿ ರಸ್ತೆಗಳನ್ನು ಅಗೆಯುತ್ತಾರೆ ಮತ್ತು ಮುಚ್ಚುತ್ತಾರೆ ಎನ್ನುವುದನ್ನು ಯಾವ ಜ್ಯೋತಿಷಿಯು ಹೇಳಲಾರ. ಈಗ ಮಂಗಳೂರಿನ ಹೃದಯಭಾಗದಲ್ಲಿ ಎಲ್ಲಿ ನೋಡಿದರೂ ರಸ್ತೆಗಳನ್ನು ಅಗೆಯಲಾಗುತ್ತಿದೆ. ಜನಸಾಮಾನ್ಯರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಾರ್ಪೋರೇಟರ್ ಗಳು ಮಾತನಾಡುತ್ತಿಲ್ಲ. ಅಧಿಕಾರಿಗಳಿಗೆ ಇದರ ಅಗತ್ಯ ಬಿದ್ದಿಲ್ಲ. ಗುತ್ತಿಗೆದಾರರಿಗೆ ಹೇಳುವವರು ಕೇಳುವವರು ಇಲ್ಲ. ಮಂಗಳೂರು ಹೇಗೆ ಆಗಿದೆ ಎಂದರೆ ಆಪರೇಶನ್ ಮಾಡುತ್ತಾ ಇರುವಾಗ ವೈದ್ಯರು ಕೆಲಸವನ್ನು ಅರ್ಧಕ್ಕೆ ಬಿಟ್ಟು ಊಟಕ್ಕೆ ಹೋದ ಹಾಗೆ ಆಗಿದೆ. ಸರಿಯಾಗಿ ನೋಡಿದರೆ ಈ ಸಂಬಂಧಪಟ್ಟ ಇಲಾಖೆಯವರು ಮಂಗಳೂರು ಮಹಾನಗರ ಪಾಲಿಕೆಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಆದರೆ ಸೂಕ್ತ ಸಂವಹನದ ಕೊರತೆಯಿಂದಾಗಿ ಅದು ಆಗುತ್ತಾ ಇಲ್ಲ. ಅಭಿವೃದ್ಧಿ ಆಗಬೇಕಾಗಿರುವುದು ಹೌದು. ಆದರೆ ನಾಗರಿಕರಿಗೆ ತೊಂದರೆ ಆಗದಂತೆ ಅಭಿವೃದ್ಧಿ ಮಾಡಬೇಕಾಗಿರುವುದು ಕಲೆ. ಆ ಕಲೆ ಗೊತ್ತಿಲ್ಲದವರು ಕೇವಲ ಗುದ್ದಲಿಪೂಜೆ ಮಾಡಿ, ಎಲ್ಲರನ್ನು ಫೋಟೋದಲ್ಲಿ ಬರುವಂತೆ ಸಾಲಾಗಿ ನಿಲ್ಲಿಸಿ, ನಾಲ್ಕು ಕಾಮಿಡಿ ಮಾತನಾಡಿ, ಎಲ್ಲರಿಗೂ ಟಾಟಾ ಮಾಡಿ ಹೋಗುವುದರಿಂದ ಇತ್ತ ಹೆಸರು ಹಾಳಾಗುವುದು ಅವರದ್ದೇ.

ಈಗ ವಿದ್ಯುತ್ ಲೈನ್ ಗಳ ವೈಯರ್ ಗಳನ್ನು ಅಂಡರ್ ಗ್ರೌಂಡ್ ಮಾಡಿ ಭೂಮಿಯ ಮೇಲೆ ಲೈಟ್ ಮಾತ್ರ ಇರುವ ಯೋಜನೆ ಅನುಷ್ಟಾನಕ್ಕೆ ತರಲು ಕೆಲಸ ನಡೆಯುತ್ತಿದೆ. ಈಗ ಹಂಪನಕಟ್ಟೆಯ ಪಿರೇರಾ ಹೋಟೇಲಿನಿಂದ ಅಂದರೆ ಗಣಪತಿ ಹೈಸ್ಕೂಲ್ ಆಗಿ ಮೇಲೆ ಬರುತ್ತೇವಲ್ಲ, ಅಲ್ಲಿಂದ ಗಡಿಯಾರ ಗೋಪುರದ ತನಕ ರಸ್ತೆಯನ್ನು ಅಗೆದುಬಿಟ್ಟಿದ್ದಾರೆ. ಕೆಲಸ ಆರಂಭಿಸಿ ಹದಿನೇಳು ದಿನಗಳ ಮೇಲೆ ಆಯಿತು. ಈ ಅಗೆಯುತ್ತಿದ್ದಾಗ ಇದ್ದ ಉತ್ಸಾಹ ಅವರಿಗೆ ಈಗ ಇಲ್ಲ. ಕೇಳಿದ್ರೆ ಅವರ ಬಳಿ ಕೆಲಸಗಾರರೇ ಇಲ್ಲ. ರಸ್ತೆಯಲ್ಲಿ ಹೊಂಡ, ಗುಂಡಿಗಳು ಹಾಗೇ ಇದೆ. ಮೆಸ್ಕಾಂನವರಿಗೆ ಅವರಿಗೆ ಖುಷಿ ಇದ್ದಾಗ ಕೆಲಸ ಮಾಡುವುದು ಎನ್ನುವುದೇ ಅಭ್ಯಾಸವಾಗಿದೆ. ಬೇಕಾದರೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಮಹಾಮಾಯಾ ರೋಡ್ ಎನ್ನುವ ರಸ್ತೆ ರಥಬೀದಿ ರಸ್ತೆಯ ಸನಿಹದಲ್ಲಿದೆ. ಅಲ್ಲಿ ಆರು ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಅಲ್ಲಿ ಫುಟ್ ಪಾತ್ ಕೆಳಗೆ ಡಾಕ್ ಎನ್ನುವ ವ್ಯವಸ್ಥೆಯನ್ನು ಮಾಡಬೇಕಿದೆ. ಡಾಕ್ ಎಂದರೆ ಎರಡು ಬೃಹತ್ ಪೈಪುಗಳನ್ನು ಏಕವ್ಯವಸ್ಥೆಯಲ್ಲಿ ಇಟ್ಟಿಡುವುದು. ಒಂದು ಪೈಪಿನಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ಮಾಡಿದರೆ ಇನ್ನೊಂದು ಪೈಪಿನಲ್ಲಿ ಇಲೆಕ್ಟ್ರಿಕಲ್ ಕೇಬಲ್ ವೈಯರ್ ಗಳ ಸಂಪರ್ಕದ ವ್ಯವಸ್ಥೆ ಇರುತ್ತದೆ. ಮಹಾಮಾಯಾ ರಸ್ತೆಯಲ್ಲಿ ಡಾಕ್ ವ್ಯವಸ್ಥೆಯ ಕಾರ್ಯ ಮುಗಿದಿದೆ. ಆದರೆ ಅಲ್ಲಿಂದ ಮನೆಮನೆಗಳ ಮೀಟರ್ ಬೋರ್ಡಿಗೆ ಸಂಪರ್ಕ ಮಾಡುವುದನ್ನು ಸಂಪೂರ್ಣಗೊಳಿಸಿಲ್ಲ. ಇದರಿಂದ ಏನಾಗಿದೆ ಎಂದರೆ ರಸ್ತೆಗಳ ಬದಿ ಹಾಕಿರುವ ಕಂಬಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಈಗ ಅತ್ತ ಕಾಂಕ್ರೀಟ್ ಕಾಮಗಾರಿಯೂ ಪೂರ್ಣವಾಗದೇ ಫುಟ್ ಪಾತ್ ಒಪನ್ ಇದೆ. ಇತ್ತ ಮೆಸ್ಕಾಂ ಅವರ ಕೆಲಸವೂ ಮುಗಿಯದೇ ಈ ವರ್ಷದಲ್ಲಿ ಎಲ್ಲಿಯಾದರೂ ಗಣೇಶ ಚೌತಿ ಹಾಗೂ ನವರಾತ್ರಿ ಸಾರ್ವಜನಿಕ ಉತ್ಸವಕ್ಕೆ ಅನುಮತಿ ಸಿಕ್ಕಿದರೆ ಆ ರಸ್ತೆಯಲ್ಲಿ ನೂರಾರು ಜನರು ಏಕಕಾಲದಲ್ಲಿ ಸೇರಿದರೆ ಅದರಿಂದ ಖಂಡಿತ ಸಮಸ್ಯೆಯಾಗುತ್ತದೆ.

ಇನ್ನು ಯಾವುದಾದರೂ ರಸ್ತೆ ಅಗಲೀಕರಣ ಆಗುವಾಗ ಜನರು ರಸ್ತೆಗೆ ಜಾಗ ಬಿಟ್ಟುಕೊಡುವುದು ಅಷ್ಟು ಸುಲಭದ ಮಾತಲ್ಲ. ಅವರನ್ನು ಜನಪ್ರತಿನಿಧಿಗಳು ಮನವೊಲಿಸಿ ನಾಗರಿಕರು ದೊಡ್ಡ ಮನಸ್ಸು ಮಾಡಿ ಜಾಗ ಬಿಟ್ಟುಕೊಟ್ಟ ನಂತರ ಅಲ್ಲಿ ಈ ಮೆಸ್ಕಾoನವರು ಫೀಡರ್ ಪಿಲ್ಲರ್ ಬಾಕ್ಸ್ ತಂದು ಈ ಜನ ಜಾಗ ಬಿಟ್ಟ ಕಡೆ ತಂದು ಇಟ್ಟಿರುತ್ತಾರೆ. ಈ ಬಾಕ್ಸಿನ ಉದ್ದೇಶ ಏನೆಂದರೆ ಈ ಅಂಡರ್ ಗ್ರೌಂಡಿನ ಕೆಲಸ ಆಗುವಾಗ ದೊಡ್ಡ ಕೇಬಲ್ ಅದಕ್ಕೆ ಜೋಡಿಸಿ ಅಲ್ಲಿಂದ ಮೀಟರ್ ಬಾಕ್ಸಿಗೆ ಅದರ ಸಂಪರ್ಕವನ್ನು ನೀಡುವುದು. ಈ ಫೀಡರ್ ಪಿಲ್ಲರ್ ಬಾಕ್ಸ್ ರಸ್ತೆಯ ಯಾವ ಜಾಗದಲ್ಲಿ ಹಾಕಬೇಕು ಎನ್ನುವುದರ ಕುರಿತು ಬೇರೆ ಬೇರೆ ಇಲಾಖೆಗಳೊಂದಿಗೆ ಸಂವಹನ ಇಲ್ಲ. ಇವರು ತಂದು ಒಂದು ಕಡೆ ಹಾಕುವುದು. ರಸ್ತೆ ಅಗಲೀಕರಣ ಆಗುತ್ತಾ ಇರುವಾಗ ಪುನ: ಅದನ್ನು ತೆಗೆಯಬೇಕಾದರೆ ಹೆಚ್ಚುವರಿ ಖರ್ಚು. ಒಂದು ವೇಳೆ ಪಾಲಿಕೆಯಲ್ಲಿ ಇವರು ಮಾಹಿತಿ ಕೊಟ್ಟರೆ ಆಗ ಪಾಲಿಕೆಯವರು ಮೆಸ್ಕಾಂ ಹಾಗೂ ಜಲಸಿರಿ ಯೋಜನೆಯ ಅಗೆಯುವ ಪ್ರದೇಶ, ಎಷ್ಟು ದಿನಗಳೊಳಗೆ ಕೆಲಸ ಮುಗಿಯಬೇಕು ಎಲ್ಲವನ್ನು ರೂಪುರೇಶೆ ಹಾಕಿ ಕೊಟ್ಟರೆ ಕೆಲಸ ಸಲೀಸಾಗಿ ಮುಗಿಯುತ್ತದೆ. ಈಗ ತಾಲೂಕು ಆಫೀಸಿನಲ್ಲಿ ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತದೆ. ಅಲ್ಲಿ ಎರಡು ವರ್ಷಗಳಿಂದ ಒಂದು ಇಂಟರ್ ಲಾಕ್ ಹಾಕುವಂತಹ ಕೆಲಸ ಇವರಿಗೆ ಮಾಡಲು ಆಗಲಿಲ್ಲ. ಇನ್ನು ಪ್ರಾಪರ್ಟಿ ಕಾರ್ಡ್ ಆಫೀಸ್ ಕೆಲಸ. ಅಲ್ಲಿ ಜೋರು ಮಳೆ ಬಂದರೆ ನೀರು ಒಳಗೆ ಬರುತ್ತದೆ. ಇದನ್ನೆಲ್ಲ ವಿವರವಾಗಿ ನಿಮಗೆ ಹೇಳಬೇಕು!!

  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search