• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಗರ ಯೋಜನಾ ದಾಖಲೆಗಳು ನಾಯಿನರಿ ಪಾಲಾಗುವ ಮೊದಲು!!

Hanumantha Kamath Posted On September 3, 2021


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾ ವಿಭಾಗ ಎನ್ನುವುದಿದೆ. ಇದು ಒಂದು ರೀತಿಯಲ್ಲಿ ಪಾಲಿಕೆಯ ಹೃದಯ ಇದ್ದ ಹಾಗೆ. ನಿಮ್ಮ ಜಾಗದ ದಾಖಲೆಗಳು ಇರಬಹುದು, ಕಟ್ಟಡ ನಿರ್ಮಾಣ ಪರವಾನಿಗೆ ಪತ್ರಗಳು ಇರಬಹುದು, ಕಟ್ಟಡ ಪ್ರವೇಶ ಪತ್ರಗಳು ಇರಬಹುದು, ನಿರ್ಮಾಣದಲ್ಲಿ ಅನಧಿಕೃತ, ಅಕ್ರಮವಾಗಿ ಕಟ್ಟಲ್ಪಟ್ಟಾಗ ಅದಕ್ಕೆ ಸಂಬಂಧಪಟ್ಟ ಪೂರಕ ದಾಖಲೆಗಳು ಇರಬಹುದು, ಇದೆಲ್ಲವನ್ನು ಇಟ್ಟುಕೊಂಡಿರುವುದು ಇದೇ ನಗರ ಯೋಜನಾ ವಿಭಾಗ. ಇಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಯಾವುದೇ ಒಂದು ದಾಖಲೆ ಕೂಡ ನಾಶವಾಗಿ ಹೋದರೆ ಅಥವಾ ಮಿಸ್ ಆದರೆ ಅಥವಾ ಕಳವು ಆಗಿ ಹೋದರೆ ಅದನ್ನು ಅಷ್ಟು ಸುಲಭವಾಗಿ ಭರಿಸಲು ಆಗುವುದಿಲ್ಲ. ಸದ್ಯ ಆ ದಾಖಲೆಗಳನ್ನು ಇಡುವ ರೆಕಾರ್ಡ್ ರೂಂ ಫುಲ್ ಆಗಿದೆ. ಈಗ ಅಲ್ಲಿ ಏನೂ ಜಾಗ ಇಲ್ಲ.
ಹಾಗಿರುವಾಗ ಪಾಲಿಕೆ ಏನು ಮಾಡಬೇಕಿತ್ತು? ಈ ದಾಖಲೆಗಳನ್ನು ಸೂಕ್ತವಾಗಿ ಸಂಗ್ರಹಿಸಿಡಲು ಒಂದು ಉತ್ತಮ ವ್ಯವಸ್ಥೆ ಮಾಡಬೇಕಿತ್ತು. ಆದರೆ ಇವರಿಗೆ ಈ ದಾಖಲೆಗಳ ಸುರಕ್ಷತೆ ಮುಖ್ಯ ಅಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಇವರು ಮಾಡಿರುವ ಕಿತಾಪತಿಯೇ ಅಂತಹುದು. ಈ ರೆಕಾರ್ಡ್ ರೂಂ ಪಕ್ಕದಲ್ಲಿ ಹಿಂದೆ ಇದ್ದ ಕೋಣೆಗಳನ್ನು ಕೆಡವಿ ಅದರ ಬದಲಿಗೆ ಮೂರು ಐಷಾರಾಮಿ ಚೇಂಬರ್ ಗಳನ್ನು ಕಟ್ಟಿಸಿಕೊಂಡಿದ್ದಾರೆ. ಅದು ಯಾರಿಗ್ಯಾರಿಗೆ ಗೊತ್ತಾ? ಒಂದು ಚೇಂಬರ್ ಜಂಟಿ ಆಯುಕ್ತರಿಗೆ, ಇನ್ನೊಂದು ಕಂದಾಯ ಆಯುಕ್ತರಿಗೆ, ಮತ್ತೊಂದು ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರಿಗೆ ಎಂದು ಕಟ್ಟಿಸಿಕೊಂಡಿದ್ದಾರೆ. ಅದಕ್ಕೆ ತಗಲಿರುವ ವೆಚ್ಚ ಬರೋಬ್ಬರಿ 37 ಲಕ್ಷ ರೂಪಾಯಿಗಳು. ಅಷ್ಟೇ ಅಲ್ಲ ಇವರುಗಳು ತಮಗಾಗಿ ಒಂದು ಪ್ಯಾಂಟ್ರಿಯನ್ನು ಕೂಡ ಜನರ ತೆರಿಗೆಯ ಹಣದಲ್ಲಿ ಕಟ್ಟಿಸಿಕೊಂಡಿದ್ದಾರೆ. ಅಂದರೆ ಜನರ ತೆರಿಗೆಯ ಹಣ ಇದ್ದರೆ ಇವರು ಪ್ಯಾಂಟ್ರಿಯಲ್ಲ ಏನು ಬೇಕಾದರೂ ಕಟ್ಟಿಸಿಕೊಳ್ಳಬಲ್ಲರು. ನಿಮಗೆ ಗೊತ್ತಿರಲಿ, ಪಾಲಿಕೆಯ ಆಯುಕ್ತರಿಗೆ ಪ್ಯಾಂಟ್ರಿ ಇಲ್ಲ. ಹಾಗಿದ್ದ ಮೇಲೆ ಅವರ ಕೈಕೆಳಗಿನ ಅಧಿಕಾರಿಗಳಿಗೆ ಈ ಸವಲತ್ತು ಯಾಕೆ? ಯಾಕೆಂದರೆ ಹೇಳುವವರು ಇಲ್ಲ, ಕೇಳುವವರು ಇಲ್ಲ. ಈಗ ಈ ಫೋಟೊಗಳನ್ನು ಗಮನಿಸಿ. ಆ ಕೋಟ್ಯಾಂತರ ಬೆಲೆಬಾಳುವ ದಾಖಲೆಗಳು ಅಲ್ಲಲ್ಲಿ ಅಟ್ಟಿಕಟ್ಟಿ ಇಡಲಾಗಿದೆ. ಏನಾದರೆ ಹೆಚ್ಚುಕಡಿಮೆ ಆದರೆ ಉತ್ತರ ಕೊಡಬೇಕಾದವರು ಯಾರು? ಅದರ ಅನೇಕ ಫೋಟೋಗಳನ್ನು ನಾನು ಇವತ್ತಿನ ಜಾಗೃತ ಅಂಕಣದಲ್ಲಿ ಹಾಗೆ ಪೋಸ್ಟ್ ಮಾಡುತ್ತಿದ್ದೇನೆ.
ಅಷ್ಟಕ್ಕೂ ಇವರು ಮೂವತ್ತೇಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಚೇಂಬರ್ ಗಳನ್ನು ಕಟ್ಟಿಸಿಕೊಂಡಿದ್ದಾರಲ್ಲ, ಅದೇನು ಸರಿಯಾಗಿ ಉಪಯೋಗಕ್ಕೆ ಬರುತ್ತದೆಯಾ ಎಂದು ನೋಡಿದರೆ ಅದು ಕೂಡ ಇಲ್ಲ. ಇವರು ಅಲ್ಲಿ ಕುಳಿತುಕೊಳ್ಳುವುದೇ ಹೆಚ್ಚೆಂದರೆ 3.30 ರಿಂದ 5 ಗಂಟೆಯವರೆಗೆ ಮಾತ್ರ. ಅದು ಕೂಡ ನಿತ್ಯ ಇರುವ ಸಾಧ್ಯತೆಗಳು ಕಡಿಮೆ. ಹಾಗಾದರೆ ನಿಜಕ್ಕೂ ಆಗಬೇಕಿರುವುದು ಏನು? ಒಂದು ಉತ್ತಮ ಸ್ಟೋರ್ ರೂಂ ವ್ಯವಸ್ಥೆ. ಅದನ್ನು ಎಲ್ಲಿ ಮಾಡಬಹುದು ಎನ್ನುವುದನ್ನು ಈಗ ನೋಡೋಣ. ಮೊದಲನೇಯದಾಗಿ ಈ ಲಾಲ್ ಭಾಗಿನಲ್ಲಿರುವ ಪಾಲಿಕೆಯ ಕಟ್ಟಡ ಮತ್ತು ಅದಕ್ಕೆ ತಾಗಿಕೊಂಡು ಪಾಲಿಕೆಯದ್ದೇ ವಾಣಿಜ್ಯ ಕಟ್ಟಡ ಇದೆಯಲ್ಲ, ಅದರ ನಡುವೆ ಸಾಕಷ್ಟು ಸೆಟ್ ಬ್ಯಾಕ್ ಗಾಗಿ ಜಾಗವನ್ನು ಬಿಟ್ಟುಕೊಡಲಾಗಿದೆ. ಈಗ ಆ ಎರಡು ಕಟ್ಟಡಗಳ ನಡುವೆ ಒಂದು ಕನೆಕ್ಟಿಂಗ್ ಫ್ಲೋರ್ ತರಹದ ವ್ಯವಸ್ಥೆ ಮಾಡಿದರೆ ಅಲ್ಲಿ ಬೇಕಾದಷ್ಟು ಜಾಗ ಇವರಿಗೆ ಸಿಗುತ್ತದೆ. ಅದರಲ್ಲಿಯೇ ಎರಡು ಫ್ಲೋರ್ ಗಳನ್ನು ಕಟ್ಟಿ ಮೊದಲ ಮಹಡಿ ಮತ್ತು ಎರಡನೇಯ ಮಹಡಿಯ ತರಹದ ವ್ಯವಸ್ಥೆಯನ್ನು ಮಾಡಿದರೆ ಆಗ ಬೇಕಾದಷ್ಟು ಜಾಗ ಸಿಕ್ಕಿದಂತೆ ಆಗುತ್ತದೆ. ಆ ಜಾಗದಲ್ಲಿ ಈ ಬೆಲೆಬಾಳುವ ಫೈಲ್ ಗಳನ್ನು ಸೂಕ್ತವಾಗಿ ಸಂಗ್ರಹಿಸಿ ಇಡಬಹುದು. ಅದು ಬಿಟ್ಟು ಈ ಹತ್ತು ವರ್ಷಗಳ ಹಿಂದಿನ ದಾಖಲೆಗಳನ್ನು ಕೂಡ ಗಂಟು ಮೂಟೆ ಕಟ್ಟಿ ಅಲ್ಲಲ್ಲಿ ಬಿಸಾಡಿದರೆ ಇವರಿಗೆ ಯಾವ ಧೈರ್ಯದ ಮೇಲೆ ಒರಿಜಿನಲ್ ದಾಖಲೆಗಳನ್ನು ಕೊಡುವುದು. ಹಾಗಾದರೆ ಇವರು ಇದನ್ನೆಲ್ಲ ಸರಿ ಮಾಡಲ್ವಾ? ಮಾಡಲು ಮುಖ್ಯವಾಗಿ ಬೇಕಾಗಿರುವುದು ಇಚ್ಚಾಶಕ್ತಿ. ಅದು ಮಾತ್ರ ಪಾಲಿಕೆಯ ಬಳಿಯಲ್ಲಿ ಇಲ್ಲ. ಅದು ಇಲ್ಲದೇ ಇರುವುದರಿಂದ ಈ ಎಲ್ಲ ಸಮಸ್ಯೆಗಳು ಉದ್ಭವವಾಗುತ್ತಿವೆ.
ಬೇಕಾದರೆ ನೀವೆ ಈ ಫೋಟೋಗಳನ್ನು ನೋಡಿ. ಇದರಲ್ಲಿ ನಿಮ್ಮದೇ ಮನೆಯ ಅಥವಾ ಕಟ್ಟಡದ ಅಥವಾ ವ್ಯವಹಾರಿಕ ದಾಖಲೆಗಳು ಇರಬಹುದು. ಇದನ್ನು ಹೀಗೆ ಬಿಡಲು ನಿಮ್ಮ ಮನಸ್ಸು ಒಪ್ಪುತ್ತದೆಯೇ? ನಿಮ್ಮ ಕರುಳು ಚುರುಕ್ ಎನ್ನುತ್ತಿಲ್ಲವೇ? ಈಗ ಮಂಗಳೂರು ಬೆಳೆಯುತ್ತಿರುವುದರಿಂದ ದಾಖಲೆಗಳ ಸಂಗ್ರಹಕ್ಕೆ ಇವರ ಬಳಿ ಸ್ಥಳಾವಕಾಶದ ಕೊರತೆ ಬರಬಹುದು. ಆದರೆ ಅದನ್ನು ದೂರದೃಷ್ಟಿಯಿಂದ ನೋಡಿ ಅದಕ್ಕೊಂದು ಮುಂದಾಲೋಚನೆ ಮಾಡಬೇಕಾಗಿರುವುದು ಪಾಲಿಕೆಯ ಕರ್ತವ್ಯ. ಅದಕ್ಕಾಗಿ ಸ್ಥಳವನ್ನು ಹೊಂದಿಸಿಕೊಳ್ಳುವುದು ಅನಿವಾರ್ಯ. ಅದನ್ನು ಬಿಟ್ಟು ಮೂರು ಚೇಂಬರ್ ಕಟ್ಟಿಸಲು ಇವರು 37 ಲಕ್ಷ ವಿನಿಯೋಗಿಸುತ್ತಾರೆ ಎಂದಾದರೆ ಇದನ್ನು ಏನೆಂದು ಕರೆಯುವುದು. ಇದನ್ನೆಲ್ಲ ನೋಡಬೇಕಾದ ಪಾಲಿಕೆಯ ಐಎಎಸ್ ಕಮೀಷನರ್ ಮತ್ತು ಮೇಯರ್ ಏನು ಮಾಡುತ್ತಿದ್ದಾರೆ!
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search