• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೊಡ್ಡ ಗಣಪತಿ ಮಾಡಿದವರು ತಕ್ಷಣ ಚಿಕ್ಕದು ಮಾಡಿ!!

Tulunadu News Posted On September 7, 2021


  • Share On Facebook
  • Tweet It

ಚೌತಿಗೆ ಗಣಪತಿಯ ಮೂರ್ತಿಯನ್ನು ತರುವುದೆಂದರೆ ಫ್ಯಾನ್ಸಿ ಸ್ಟೋರಿಗೆ ಹೋಗಿ ಬೊಂಬೆ ತೆಗೆದುಕೊಂಡ ಹಾಗೆ ಅಲ್ಲ ಎನ್ನುವುದನ್ನು ನಮ್ಮ ಸರಕಾರಗಳು ಅರಿತುಕೊಳ್ಳಬೇಕು. ಇಲ್ಲದೇ ಹೋದರೆ ಗಣೇಶ ಹಬ್ಬಕ್ಕೆ ನಾಲ್ಕು ದಿನಗಳು ಇರುವಾಗ ಸಾರ್ವಜನಿಕ ಗಣೇಶೋತ್ಸವಕ್ಕೆ ಇವರು ತರುತ್ತಿರುವ ನಿಯಮಗಳನ್ನು ನೋಡಿ ಗಣೇಶೋತ್ಸವ ಸಮಿತಿಯವರು ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೆ ಬಿದ್ದಿದ್ದಾರೆ. ಸರಕಾರದಿಂದ ಬಂದಿರುವ ಮಾರ್ಗಸೂಚಿಯ ಮೊದಲ ನಿಯಮವನ್ನೇ ನೋಡಿ. ಗಣೇಶನ ಮೂರ್ತಿ ನಾಲ್ಕು ಅಡಿ ಮೀರುವಂತಿಲ್ಲ ಎನ್ನುವ ಆದೇಶವನ್ನು ಹೊರಡಿಸುತ್ತಾರೆ ಎಂದರೆ ಈ ನಿಯಮ ಮಾಡಿದವರಿಗೆ ಗಣೇಶ ಹಬ್ಬದ ಬಗ್ಗೆ ಏನೂ ಕಾಮನ್ ಸೆನ್ಸ್ ಇಲ್ಲ ಎನ್ನುವುದು ಸ್ಪಷ್ಟ. ನೀವು ಸ್ವಲ್ಪ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆನೆ ನೋಡಿ. ಇಲ್ಲಿ ಮಂಗಳೂರು ನಗರದಲ್ಲಿಯೇ ಸಂಘನಿಕೇತನ, ಸರಕಾರಿ ಬಸ್ ನಿಲ್ದಾಣ, ಕೇಂದ್ರ ಮೈದಾನ ಹೀಗೆ ಕೆಲವು ಕಡೆ ದೊಡ್ಡ ದೊಡ್ಡ ಆಕಾರದ ಗಣಪತಿಯನ್ನು ಇಡುತ್ತಾರೆ. ಆ ಗಣಪತಿಯನ್ನು ತಯಾರಿಸುವವರು ತಿಂಗಳುಗಳ ಮೊದಲೇ ಒಂದು ವೃತದಂತೆ ಅದನ್ನು ಅನುಷ್ಠಾನಗೊಳಿಸಿ ತಯಾರಿಸಲು ಅಣಿಯಾಗುತ್ತಾರೆ. ಅವರು ಬೃಹದಾಕಾರದ ಗಣಪತಿಯನ್ನು ತಯಾರಿಸಿ ಶುರುಮಾಡಿರುತ್ತಾರೆ. ಸರಕಾರದವರು ನಾಲ್ಕು ದಿನಗಳು ಇರುವಾಗ ಅಷ್ಟು ದೊಡ್ಡ ಗಣಪತಿಯನ್ನು ಇಡಲು ಬಿಡುವುದಿಲ್ಲ ಎಂದರೆ ಅದನ್ನು ತಕ್ಷಣ ಚಿಕ್ಕದು ಮಾಡಲು ಅದೇನು ಮ್ಯಾಜಿಕ್ ಶೋ ಎಂದುಕೊಂಡಿದ್ದಾರಾ? ಆದ್ದರಿಂದ ಸಾಕಷ್ಟು ಮುಂಚಿತವಾಗಿಯೇ ಇದನ್ನೆಲ್ಲ ತಿಳಿಸಬೇಕಲ್ಲವೇ? ಇನ್ನು ಹಬ್ಬ ಬರಲು ನಾಲ್ಕು ದಿನಗಳು ಇರುವಾಗ ಪರಿಸ್ಥಿತಿಯನ್ನು ನೋಡಿ ಆ ಪ್ರಕಾರ ವಿಷಯವನ್ನು ನಿರ್ಧರಿಸಿ ಸೂಚನೆ ನೀಡಲಾಗುವುದು ಎಂದು ಸಿಎಂ ಈ ಹಿಂದೆ ಒಮ್ಮೆ ಹೇಳಿದ್ದರು. ಆದ್ರೆ ಗಣೇಶ ಅಥವಾ ದಸರಾ ವಿಷಯದಲ್ಲಿ ಇದು ಸರಿಯಾದ ಕ್ರಮ ಅಲ್ಲ. ನಮ್ಮಲ್ಲಿ ದಸರಾ ಕೂಡ ಅದ್ದೂರಿಯಾಗಿ ಆಚರಿಸಲಾಗುತ್ತದೆ. ದೇವಿಯ ಮೂರ್ತಿಯನ್ನು ಈಗಾಗಲೇ ತಯಾರಿಸಲು ಶುರು ಮಾಡಿ ಆಗಿದೆ.
ಇನ್ನು ಮಾರ್ಗಸೂಚಿಯ ಎರಡನೇ ನಿಯಮವನ್ನು ನೋಡೋಣ. ರಾಜ್ಯದಲ್ಲಿ ಐದು ದಿನಗಳ ತನಕ ಮಾತ್ರ ಸಾರ್ವಜನಿಕ ಗಣೇಶನನ್ನು ಕೂರಿಸಬೇಕು ಎನ್ನುವ ಆದೇಶ ಹೊರಡಿಸಲಾಗಿದೆ. ಇನ್ನು ರಾಜ್ಯದ ಗಡಿಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳ ತನಕ ಮಾತ್ರ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಬೇಕು ಎನ್ನುವುದನ್ನು ಇಲ್ಲಿ ಪ್ರತ್ಯೇಕ ಸಭೆ ಮಾಡಿ ಜಿಲ್ಲಾಧಿಕಾರಿಯವರು ಸೂಚನೆ ಹೊರಡಿಸಿದ್ದಾರೆ. ಇದು ಕೇವಲ ಹಿಂದೂ ಸಂಘಟನೆಗಳನ್ನು ಖುಷಿ ಮಾಡಲು ತೆಗೆದುಕೊಂಡಿರುವ ಕ್ರಮ. ಇಲ್ಲದೇ ಹೋದರೆ ಭಾರತೀಯ ಜನತಾ ಪಾರ್ಟಿ ಸರಕಾರ ಇದ್ದು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಕೊಡದೇ ಇದ್ದರೆ ಕೇಸರಿ ಭದ್ರಕೋಟೆಯಲ್ಲಿ ಅಸಮಾಧಾನ ಮೂಡುತ್ತದೆ ಎಂದು ಗೊತ್ತಿರುವುದರಿಂದ ಸಿಂಪಲ್ಲಾಗಿ ಆಚರಿಸಿ ಎಂದು ಅವಕಾಶ ನೀಡಲಾಗಿದೆ. ಆದರೆ ಪೆಂಡಾಲ್ ಗಳಲ್ಲಿ ಇಡಲು ಅನುಮತಿ ನೀಡಲಾಗಿಲ್ಲ.
ಆದರೆ ದಕ್ಷಿಣ ಕನ್ನಡ ಜಿಲ್ಲೆಗೂ ರಾಜ್ಯದ ಬೇರೆ ಜಿಲ್ಲೆಗೂ ಸಾರ್ವಜನಿಕ ಗಣೇಶೋತ್ಸವದ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿ ಬೆಂಗಳೂರು ಅಥವಾ ಮುಂಬೈ ತರಹ ರಸ್ತೆಗೊಂದು, ಕೆಲವು ಏರಿಯಾಗಳಲ್ಲಿ ಎರಡ್ಮೂರು ಇಡುವ ಸಂಪ್ರದಾಯ ಇಲ್ಲ. ಡಿಜೆ ನಮ್ಮಲ್ಲಿ ಹಿಂದಿನಿಂದಲೂ ಇಲ್ಲ. ಏನಿದ್ದರೂ ಭಜನೆ, ಭಕ್ತಿಗೀತೆಗಳ ಧ್ವನಿ ನಿಮಗೆ ಪೆಂಡಾಲ್ ಗಳಿಂದ ಕೇಳಬಹುದು. ಹೆಚ್ಚೆಂದರೆ ರಾತ್ರಿ ತುಳು ನಾಟಕಗಳು, ಯಕ್ಷಗಾನಗಳು ಗಣೇಶೋತ್ಸವದ ಸಂಭ್ರಮಕ್ಕೆ ಇಂಬು ನೀಡುತ್ತವೆ. ಈಗ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವಾರ್ಡಿಗೆ ಒಂದೇ ಸಾರ್ವಜನಿಕ ಗಣಪತಿಯನ್ನು ಇಡಬೇಕು ಎಂದು ಹೇಳಲಾಗಿದೆ. ಇದರಿಂದ ಹೊಸ ವಿವಾದವೊಂದು ಉದ್ಭವವಾಗುತ್ತಿದೆ. ನಮ್ಮಲ್ಲಿ ಇಂತಹ ಸಮಸ್ಯೆ ಇಲ್ಲದಿದ್ದರೂ ಉತ್ತರ ಕರ್ನಾಟಕ ಅಥವಾ ಮೈಸೂರು ಕರ್ನಾಟಕವನ್ನು ತೆಗೆದುಕೊಳ್ಳಿ. ಅಲ್ಲಿ ಒಂದೇ ವಾರ್ಡಿನಲ್ಲಿ ಅನೇಕ ಕಡೆ ಗಣಪತಿಯನ್ನು ಇಡಲಾಗುತ್ತದೆ. ಒಂದು ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಲ್ವತ್ತು ವರ್ಷಗಳಿಂದ ಸಾರ್ವಜನಿಕ ಗಣಪತಿ ಉತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಇಟ್ಟುಕೊಳ್ಳೋಣ. ಅದೇ ವಾರ್ಡಿನಲ್ಲಿ ಹಿಂದೂ ಸಂಘಟನೆಯವರು ಮೂವತ್ತು ವರ್ಷಗಳಿಂದ ತಮ್ಮ ಸಂಘಟನೆಯ ಮೂಲಕ ಗಣಪತಿಯನ್ನು ಸಾರ್ವಜನಿಕವಾಗಿ ಪೂಜಿಸುತ್ತಿದ್ದಾರೆ ಎಂದು ಇಟ್ಟುಕೊಳ್ಳೋಣ. ಅಲ್ಲಿನ ಶಾಸಕರು ಬಿಜೆಪಿಯವರು ಎಂದಾದರೆ ಅವರು ಏನು ಮಾಡಬೇಕು? ನಿಸ್ಸಂಶಯವಾಗಿ ಅತೀ ಹೆಚ್ಚು ವರ್ಷಗಳಿಂದ ಯಾವ ಸಂಘಟನೆಯವರು ಇಡುತ್ತಿದ್ದಾರೆ ಅವರಿಗೆ ಅವಕಾಶ ಕೊಡಬೇಕು. ಹಾಗಂತ ಕಾಂಗ್ರೆಸ್ಸಿನವರಿಗೆ ಹಿಂದೂ ಸಂಘಟನೆಯವರು ಸುಮ್ಮನೆ ಬಿಡುತ್ತಾರಾ? ನಮ್ಮ ಸರಕಾರ ಇದ್ದು, ನಮ್ಮ ಶಾಸಕರು ಇದ್ದು, ಕಾಂಗ್ರೆಸ್ಸಿಗೆ ಹೇಗೆ ಅನುಮತಿ ಕೊಟ್ಟರು ಎಂದು ಗಲಾಟೆ ಮಾಡಲ್ವ? ಹಾಗಂತ ಹಿಂದೂ ಸಂಘಟನೆಯವರಿಗೆ ಇಡಲು ಕೊಟ್ಟರೆ ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕೀಯ ಮಾಡಿದ ಹಾಗೆ ಆಗಲ್ವಾ? ಯಾವಾಗ ಚುನಾವಣೆ ನಡೆಯತ್ತದೆಯೋ, ಆವಾಗ ಕೊರೊನಾ ಇರುವುದಿಲ್ಲ. ಯಾವಾಗ ರಾಜಕಾರಣಿಗಳ ಮದುವೆ ನಡೆಯುತ್ತದೆಯೋ ಆಗ ಕೊರೊನಾ ಇರಲ್ಲ. ಯಾವಾಗ ಮತ ಎಣಿಕೆ ಇರುತ್ತೋ ಆವತ್ತು ಸಂಭ್ರಮಾಚರಣೆ ಇರುತ್ತದೆ ಎಂದು ಕೊರೊನಾ ಅತ್ತ ಬರುವುದಿಲ್ಲ. ಕೊರೊನಾ ಏನಿದ್ದರೂ ಬರುವುದು ಗಣೇಶನ ಹಬ್ಬ ಇರುವಾಗ ಮಾತ್ರ. ಆದ್ದರಿಂದ ಹಬ್ಬದ ದಿನ ಮಾತ್ರ ಮಾರ್ಗಸೂಚಿ. ಬೇರೆ ಸಂದರ್ಭದಲ್ಲಿ ಮಾರ್ಗಸೂಚಿಗಳೇ ಇರುವುದಿಲ್ಲ. ಯಾಕೆಂದರೆ ತಮಗೆ ಬೇಕಾದ ಹಾಗೆ ನಿರ್ಧರಿಸುವುದು ಆಡಳಿತ ಪಕ್ಷದವರು. ಅವರು ತಮಗೆ ತಾವೇ ಬೇಲಿ ಹಾಕಲು ಎಲ್ಲಿ ರೆಡಿ ಇರುತ್ತಾರೆ? ಬೇಲಿ ಏನಿದ್ದರೂ ನಮಗೆ ಮಾತ್ರ!
  • Share On Facebook
  • Tweet It


- Advertisement -


Trending Now
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Tulunadu News June 1, 2023
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Tulunadu News May 31, 2023
Leave A Reply

  • Recent Posts

    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
  • Popular Posts

    • 1
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 2
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 3
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 4
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 5
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search