• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಿನ್ನಾನನ್ನು ಬೇಕಾದರೆ ನಿಮ್ಮ ಚಿಕ್ಕಪ್ಪ ಎನ್ನಿ, ನಮಗೆ ಬೇಸರವಿಲ್ಲ, ಆದರೆ!!

Hanumantha Kamath Posted On November 2, 2021


  • Share On Facebook
  • Tweet It

ಅಖಿಲೇಶ್ ಯಾದವ್ ಹೇಳಿಕೆಯ ಬಗ್ಗೆ ಅವರ ತಂದೆಯೇ ಆಶ್ಚರ್ಯಚಕಿತರಾಗಿದ್ದಾರೆ. ಅಖಿಲೇಶ್ ಯಾಕೆ ಹೀಗೆ ಹೇಳಿದ್ರು ಎಂದು ಅವರೇ ತಮ್ಮ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಹೇಗಾದರೂ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಅಲ್ಪಸಂಖ್ಯಾತರ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಬಿಡಬೇಕು ಎನ್ನುವ ಧಾವಂತದಲ್ಲಿರುವ ಅಖಿಲೇಶ್ ಅದಕ್ಕಾಗಿ ಅಂತಹ ಯಾವುದೇ ಹೇಳಿಕೆಯನ್ನು ಕೊಡಲು ಸಿದ್ಧರಿದ್ದಾರೆ. ಅವರು ಹೇಳಿರುವ ಹೊಸ ಹೇಳಿಕೆ ಏನೆಂದರೆ ಮೊಹಮ್ಮದ್ ಆಲಿ ಜಿನ್ನಾ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲರು ಒಂದೇ ಎಂದು ಹೇಳಿರುವುದು. ಜಿನ್ನಾ ಹಾಗೂ ಪಟೇಲರು ಸಮಕಾಲೀನರು ಹೌದು. ಆದರೆ ಒಬ್ಬರು ದೇಶ ವಿಭಜಿಸಲು ತಮ್ಮ ಬುದ್ಧಿಶಕ್ತಿಯನ್ನು ಬಳಸಿದರು. ಇನ್ನೊಬ್ಬರು ದೇಶವನ್ನು ಒಟ್ಟು ಮಾಡಲು ತಮ್ಮ ಜೀವನವನ್ನು ಧಾರೆ ಎರೆದರು. ಇದೇ ವ್ಯತ್ಯಾಸ.

ತ್ರೇತಾಯುಗದಿಂದ ಕಲಿಯುಗದ ತನಕ ಪ್ರತಿ ಯುಗದಲ್ಲಿಯೂ ಕೌರವರಂತವರು ಇದ್ದಾರೆ, ಪಾಂಡವರಂತವರು ಇದ್ದಾರೆ. ರಾಕ್ಷಸರೂ ಇದ್ದಾರೆ ಮತ್ತು ದೇವತೆಗಳು ಇದ್ದಾರೆ. ಹಾಗಂತ ಕೌರವರು, ಪಾಂಡವರು, ರಾಕ್ಷಸರು, ದೇವತೆಗಳು ಒಂದೇ ಎಂದು ಹೇಳಲು ಸಾಧ್ಯವಿದೆಯೇ? ಅಷ್ಟು ದೂರ ಯಾಕೆ, ಅಖಿಲೇಶ್ ಸಿಂಗ್ ಮತ್ತು ಯೋಗಿ ಆದಿತ್ಯನಾಥ್ ಸಿಂಗ್ ಇಬ್ಬರೂ ಸಮಕಾಲೀನರು. ಹಾಗಂತ ಇಬ್ಬರು ಒಂದೇ ಎಂದು ಹೇಳಲು ಆಗುತ್ತದೆಯಾ? ಯೋಗಿ ಬದುಕನ್ನು ಸನ್ಯಾಸಿಯಂತೆಯೇ ಕಳೆಯುತ್ತಿರುವವರು. ಅಖಿಲೇಶ್ ಆಸ್ಟ್ರೇಲಿಯಾದಲ್ಲಿ ಕಲಿತು ಮೋಜು ಮಸ್ತಿ ನೋಡಿ ಬಂದವರು. ಯೋಗಿ ತಮ್ಮ ಜನಸೇವೆಯಿಂದ ಐದು ಬಾರಿ ಸಂಸದರಾದವರು. ಅಖಿಲೇಶ್ ತಂದೆಯಿಂದ ರಾಜಕೀಯ ಗದ್ದುಗೆಯನ್ನು ಬಳುವಳಿಯಾಗಿ ಪಡೆದುಕೊಂಡವರು. ಆದ್ದರಿಂದ ಒಂದೇ ಎಂದು ಹೇಳಲು ಆಗುವುದಿಲ್ಲ. ಒಂದು ವೇಳೆ ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ ಮತ್ತು ಜಿನ್ನಾ ಅವರು ಒಂದೇ ಮನಸ್ಥಿತಿಯವರು ಎಂದು ಅಂದುಕೊಂಡರೂ ಅದರಲ್ಲಿ ಸಮಸ್ಯೆ ಇಲ್ಲ. ಆದರೆ ಯಾವ ಕಾರಣಕ್ಕೂ ಸರ್ದಾರ್ ವಲ್ಲಭಬಾಯ್ ಪಟೇಲ್ ಈ ಕ್ಯಾಟಗರಿಯಲ್ಲಿ ಸೇರುವುದಿಲ್ಲ. ಪಟೇಲ್ ಒಬ್ಬರು ರಾಜಕೀಯ ಸಂತನ ತರಹ ಸ್ವಾತಂತ್ರ್ಯ ಬಂದಾಗ ನುಚ್ಚುನೂರಾಗಿದ್ದ ಐನೂರಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಭಾರತದೊಂದಿಗೆ ಜೋಡಿಸಲು ಹಗಲಿರುಳು ಶ್ರಮಿಸಿದ್ದರು. ಅವರಲ್ಲಿ ಅಖಂಡ ಭಾರತದ ಕಲ್ಪನೆಯಿತ್ತು. ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ಉಳಿಸಬೇಕು ಮತ್ತು ಅದಕ್ಕಾಗಿ ಬೇರೆ ಬೇರೆಯಾಗಿರುವ ಅಸಂಖ್ಯಾತ ಬಿಡಿ ಬಿಡಿ ರಾಜ್ಯಾಡಳಿತವನ್ನು ಒಂದೇ ವೇದಿಕೆಗೆ ತರಬೇಕು ಎನ್ನುವ ದೂರದೃಷ್ಟಿ ಇತ್ತು. ಅವರು ಅದಕ್ಕಾಗಿ ನಿರಂತರವಾಗಿ ಶ್ರಮಿಸಿದರು. ಅವರು ಹೈದ್ರಾಬಾದ್ ನಿಜಾಮನಿಂದ ಹಿಡಿದು ತುಂಡು ಅರಸರ ತನಕ ನಿರಂತರ ಸಂವಾದ ನಡೆಸಿ ದೇಶವನ್ನು ಉಳಿಸಿದ್ದರು. ನಿಮಗೆ ಆ ಸಮಯದ ಸಣ್ಣ ಅರಿವಿದ್ದರೆ ಅಂತಹ ಪರಿಸ್ಥಿತಿಯಲ್ಲಿ ದೇಶವನ್ನು ಏಕೀಕರಣ ಮಾಡುವ ಸವಾಲು ಹೇಗೆ ಇತ್ತು ಎನ್ನುವ ಕಲ್ಪನೆ ಉಂಟಾಗುತ್ತದೆ. ಈಗ ಮೊಬೈಲ್ ನಂತಹ ಫೋನ್ ವ್ಯವಸ್ಥೆಇದೆ. ಆಗ ಟ್ರಂಕ್ ಕಾಲ್ ಗತಿಯಾಗಿತ್ತು. ಈಗ ವಾಟ್ಸಪ್ ಇದೆ. ಸಂವಹನ ಸುಲಭ. ಆಗ ಅದ್ಯಾವುದೂ ಇರಲಿಲ್ಲ. ಇದ್ದದ್ದು ಪಟೇಲರ ಧೃಡವಾದ ಇಚ್ಚಾಶಕ್ತಿ ಮಾತ್ರ. ಇಲ್ಲದಿದ್ದರೆ ಇಷ್ಟು ವಿಶಾಲ ರಾಷ್ಟ್ರದಲ್ಲಿ ಸುತ್ತಾಡಿ ದೇಶವನ್ನು ಏಕೀಕರಣದ ಸೂತ್ರದ ಅಡಿಯಲ್ಲಿ ಸೇರಿಸಲು ಸಾಧ್ಯವಾಗುತ್ತಿತ್ತಾ? ಆದ್ದರಿಂದ ಯಾವುದೇ ಕಾರಣಕ್ಕೂ ಜಿನ್ನಾ ಹಾಗೂ ಪಟೇಲ್ ಒಂದೇ ರೀತಿ ಆಗಲು ಸಾಧ್ಯವಿಲ್ಲ. ಆದರೆ ಅಖಿಲೇಶ್ ಸಿಂಗ್ ಇದೆಲ್ಲ ಗೊತ್ತಿಲ್ಲದೇ ಹೇಳಿದ್ರಾ ಎಂದು ನೋಡಿದರೆ ಹಾಗೆ ಏನೂ ಇಲ್ಲ. ಅವರು ಸಾಕಷ್ಟು ಕಲಿತವರು. ಅವರಿಗೆ ನಮ್ಮ ದೇಶದ ಇತಿಹಾಸ ಗೊತ್ತಿಲ್ಲ ಎಂದಲ್ಲ. ಆದರೆ ಅವರಿಗೆ ತುರ್ತಾಗಿ ಅಲ್ಪಸಂಖ್ಯಾತರನ್ನು ಒಲಿಸಲೇಬೇಕಲ್ಲ. ಮುಸ್ಲಿಮರನ್ನು ಒಲಿಸಬೇಕಾದರೆ ಜಿನ್ನಾ ಅವರನ್ನು ಹೊಗಳಬೇಕು ಎಂದು ತಿಳಿದಿರುವ ಅಖಿಲೇಶ್ ಅದಕ್ಕಾಗಿ ಜಿನ್ನಾ ಅವರನ್ನು ಹೊಗಳಿದ್ದಾರೆ. ಜಿನ್ನಾ ಧರ್ಮದ ಆಧಾರದಲ್ಲಿ ಭಾರತವನ್ನು ವಿಭಾಗಿಸಲು ಟೊಂಕಕಟ್ಟಿ ನಿಂತವರು. ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ದೇಶವನ್ನು ನಿರ್ಮಿಸಬೇಕು ಎನ್ನುವುದು ಅವರ ಅತ್ಯಂತ ದೊಡ್ಡ ಗುರಿಯಾಗಿತ್ತು. ಅದನ್ನು ಗಾಂಧಿ ಮುಂದೆ ಇಟ್ಟು ಈಡೇರಿಸಿಕೊಳ್ಳುವಲ್ಲಿ ಅವರು ಯಶಸ್ವಿಯೂ ಆದರು. ಅವರ ಒಬ್ಬನ ಯಶಸ್ಸು ಲಕ್ಷಾಂತರ ಜನ ಅಮಾಯಕರ ಸಾವು, ನೋವು, ಅತ್ಯಾಚಾರ, ದೌರ್ಜನ್ಯದೊಂದಿಗೆ ಅಂತ್ಯವಾಯಿತು ಎನ್ನುವುದನ್ನು ಇತಿಹಾಸ ನೋಡಿದೆ. ಹೀಗಿರುವಾಗ ಜಿನ್ನಾ ಅವರನ್ನು ದೇಶಕ್ಕಾಗಿಯೇ ಪ್ರಾಣ ಅರ್ಪಿಸಿದ ಪಟೇಲರ ಜೊತೆ ತಳಕುಹಾಕುವುದು ಸರಿಯಲ್ಲ. ಆದರೆ ವಿಪಕ್ಷಗಳು ಪದೇ ಪದೇ ಯಾಕೆ ಇಂತಹ ವಿಷಯವನ್ನು ಎತ್ತುತ್ತವೆ ಎಂದರೆ ಅವರಿಗೆ ಗೊತ್ತಿರುವಂತೆ ಮುಸ್ಲಿಮರು ಭಾರತೀಯ ಜನತಾ ಪಾರ್ಟಿಗೆ ವೋಟ್ ಹಾಕುವುದು ಅಪರೂಪದಲ್ಲಿ ಅಪರೂಪ. ಒಂದು ಶೇಕಡಾ ಮುಸ್ಲಿಮರು ಕೂಡ ಬಿಜೆಪಿಗೆ ಮತ ನೀಡಲ್ಲ. ಎಲ್ಲಿಯ ತನಕ ಎಂದರೆ ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತ ಮೋರ್ಚಾದವರು ಕೂಡ ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವುದು ಚಾಲ್ತಿಯಲ್ಲಿರುವ ಜೋಕು. ಆದರೂ ತ್ರಿವಳಿ ತಲಾಖ್ ನಿಷೇಧ, ಉಜ್ವಲ್ ಯೋಜನೆ, ಉಜಾಲಾ ಯೋಜನೆ ಸಹಿತ ಅನೇಕ ಮಹಿಳಾಪರ ಧೋರಣೆಗಳಿಂದ ಮುಸ್ಲಿಂ ಮಹಿಳೆಯರು ಗಂಡನಿಗೆ ಹೇಳದೆ ಬಿಜೆಪಿಗೆ ಮತ ಹಾಕುತ್ತಿರಬಹುದು ಎನ್ನುವುದು ದೂರದ ನಂಬಿಕೆ. ಈ ಹಂತದಲ್ಲಿ ಅಲ್ಪಸಂಖ್ಯಾತರನ್ನು ಏಕಗಂಟಿನಲ್ಲಿ ತರಬೇಕು ಎಂದು ಅಖಿಲೇಶ್ ಅಂದುಕೊಂಡಿದ್ದಾರೆ. ಹೇಗೂ ಅವರದ್ದು ಮತ್ತು ಬಹುಜನ ಸಮಾಜಪಾರ್ಟಿಯದ್ದು ಮೈತ್ರಿ. ಮಾಯಾವತಿ ದಲಿತರ ಮತಗಳನ್ನು ಪಡೆದರೆ, ಅಲ್ಪಸಂಖ್ಯಾತರನ್ನು ತಾನು ಕ್ರೋಢಿಕರಿಸಿದರೆ ಉಳಿದ ಮೇಲ್ಜಾತಿಗಳನ್ನು ತಮ್ಮ ಪಕ್ಷದ ಬ್ರಾಹ್ಮಣ ಮುಖಂಡರು ಸೆಳೆದರೆ ಅಧಿಕಾರಕ್ಕೆ ಸುಲಭವಾಗಬಹುದು ಎನ್ನುವುದು ಕಲ್ಪನೆ. ಅದಕ್ಕಾಗಿ ಅವರು ಜಿನ್ನಾನನ್ನು ಬೇಕಾದರೂ ಹೊಗಳುತ್ತಾರೆ ಅಥವಾ ಲಾಡೆನ್ ನನ್ನು ಕೂಡ ತಮ್ಮ ಕುಲದೇವರು ಎಂದರೂ ಆಶ್ಚರ್ಯವಿಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search