• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರನ್ನು ನಾರುವ ಪರಿಸ್ಥಿತಿಗೆ ತಂದವರಿಗೆ ದೀಪಾವಳಿ ಶುಭಾಶಯ!!

Hanumantha Kamath Posted On November 9, 2021


  • Share On Facebook
  • Tweet It

ಮಂಗಳೂರಿನ ಎಲ್ಲಾ ರಸ್ತೆಗಳು ಇನ್ನು ಕಸದ ತೊಟ್ಟಿಗಳಾಗಲು ಸಹಕರಿಸಿದ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್, ಅವರಿಗೆ ಹಾಗೆ ಮಾಡಲು ಉಪಕರಿಸಿದ ಮಹಾನಗರ ಪಾಲಿಕೆ ಹಾಗೂ ಕಣ್ಣಿದ್ದು ಕುರುಡರಾಗಿರುವ ಎಲ್ಲಾ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅಭಿನಂದನೆಗಳು. ಎರಡು ತಿಂಗಳ ಮೊದಲೇ ಒಂದು ಪ್ರಶಸ್ತಿ ನಿಗದಿಪಡಿಸಿ ತ್ಯಾಜ್ಯ ನಗರ ಎಂದು ಇವರಿಗೆಲ್ಲ ಸಾಮೂಹಿಕ ಪ್ರಶಸ್ತಿ ನೀಡಬೇಕಿತ್ತು. ಆದರೆ ಇವರು ಸರಿಯಾಗಬಹುದು ಎಂದು ಕಾಯಲಾಗಿತ್ತು. ಆದರೆ ಇವರು ಸುಧಾರಿಸುವುದಿಲ್ಲ. ಆದ್ದರಿಂದ ತಡವಾಗಿಯಾದರೂ ಇವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಬರಬೇಕಿದೆ. ಯಾವಾಗ ಆಂಟೋನಿ ವೇಸ್ಟ್ ನವರು ಮನೆಮನೆಗೆ ಬಂದು ಕಸ ಸಂಗ್ರಹಿಸಿಕೊಂಡು ಹೋಗುವುದಿಲ್ಲ ಎಂದು ಗ್ಯಾರಂಟಿಯಾಯಿತೋ ಜನರು ಮೊದಲು ಮನೆಯ ಗೇಟಿನ ಬಳಿ ಇಡುತ್ತಿದ್ದವರು ಈಗ ಸಿಕ್ಕಿದ ಕಡೆ ಬಿಸಾಡುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಮನೆಯಿಂದ ಕಸವನ್ನು ಎಲ್ಲಿಯಾದರೂ ಕಂಪೌಂಡಿನ ಆಚೆಗೆ ಎಸೆದರೆ ಆಯಿತು ಎನ್ನುವ ಯೋಚನೆ ಮತ್ತು ಯೋಜನೆ ಎಲ್ಲರದ್ದು. ಹೀಗೆ ತಮ್ಮ ವಾರ್ಡಿನ ನಾಗರಿಕರು ಕಸ ಬಿಸಾಡುವ ದಾರಿಗಳನ್ನು ಹುಡುಕುತ್ತಿದ್ದರೂ ಮೌನವಾಗಿ ಅದನ್ನು ನೋಡುತ್ತಿರುವ ಕಾರ್ಪೋರೇಟರ್ ಗಳ ತಾಳ್ಮೆಯನ್ನು ಮೆಚ್ಚಲೇಬೇಕು. ಒಂದೋ ಅನೇಕ ನಾಗರಿಕರ ದೂರು ಇದ್ದಂತೆ ಕೆಲವು ಕಾರ್ಪೋರೇಟರ್ ಗಳು ಮನೆಗಳಿಂದ ಆಚೆ ಬರುವುದು ಪಾಲಿಕೆಯ ಪರಿಷತ್ ಸಭೆಯಿದ್ದಾಗ ಅಥವಾ ತಮ್ಮ ವಾರ್ಡಿನಲ್ಲಿ ಶಾಸಕರ ಗುದ್ದಲಿಪೂಜೆ ಅಥವಾ ಉದ್ಘಾಟನೆ ಇದ್ದಾಗ ಮಾತ್ರ. ಆದ್ದರಿಂದ ಜನರು ತಮ್ಮ ಕಸ ತಂದು ಕಾರ್ಪೋರೇಟರ್ ಗಳ ಮನೆಬಾಗಿಲಿಗೆ ಸುರಿಯುವ ತನಕ ಅಂತವರಿಗೆ ಗೊತ್ತಾಗುವುದಿಲ್ಲ. ಇನ್ನು ಅನೇಕ ಕಾರ್ಪೋರೇಟರ್ ಗಳಿಗೆ ಆಂಟೋನಿ ವೇಸ್ಟಿನವರು ದೀಪಾವಳಿಯ ತ್ಯಾಜ್ಯದ ಕವರ್ ಅನ್ನು ಮೊದಲೇ ತಲುಪಿಸಿ ಆಗಿರಬೇಕು. ಆದ್ದರಿಂದ ಅವರು ಮೌನಕ್ಕೆ ಶರಣಾಗಿದ್ದಾರೆ. ಇನ್ನು ಪಾಲಿಕೆಯ ಹೆಲ್ತ್ ಇನ್ಸಪೆಕ್ಟರ್ ಗಳ ಕಥೆಯೇ ಬೇರೆ. ಹಿಂದೆ ಅವರು ಕನಿಷ್ಟ ಮಧ್ಯಾಹ್ನದ ತನಕ ತಮಗೆ ನಿಗದಿಗೊಳಿಸಲಾಗಿರುವ ವಾರ್ಡುಗಳಲ್ಲಿ ಇರುತ್ತಿದ್ದರು. ಈಗ ಅವರು ಕೂಡ ವಾರ್ಡುಗಳಿಗೆ ಕಾಲಿಡುವುದು ನಿಂತು ಹೋಗಿದೆ. ಹೀಗೆ ಯಾರೂ ಈ ಸಮಸ್ಯೆಯನ್ನು ನೋಡುತ್ತಿಲ್ಲವಾದ್ದರಿಂದ ನಾಯಿಗಳಿಗೆ ಅಲ್ಲಲ್ಲಿ ಹಬ್ಬದೂಟ. ಒಟ್ಟಿನಲ್ಲಿ ಈ ಮನಪಾ ಸದಸ್ಯರಿಗೆ, ಅಧಿಕಾರಿಗಳನ್ನು ಮೆಚ್ಚುತ್ತಿರುವುದು ನಾಯಿಗಳು ಮಾತ್ರ.

ಈ ಆಂಟೋನಿ ವೇಸ್ಟ್ ಇದೆಯಲ್ಲ, ಅವರದ್ದು ಪುಣೆ ಮೂಲದ ಕಂಪೆನಿ. ಅವರು ದೊಡ್ಡ ದೊಡ್ಡ ನಗರಗಳನ್ನು ನೋಡಿ ಬಂದವರು. ಅವರಿಗೆ ಮಂಗಳೂರು ಎಂದರೆ ಚಿಲ್ಲರೆ ತರಹ ಇರಬಹುದು. ಅದಕ್ಕೆ ಸರಿಯಾಗಿ ಅವರು ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಬಂದವರು. ಆಗ ಪಾಲಿಕೆಯಲ್ಲಿಯೂ ಕಾಂಗ್ರೆಸ್ ಇತ್ತು. ಆದ್ದರಿಂದ ಬಿಸ್ಕಿಟ್ ಎಲ್ಲಿ ಬಿಸಾಡಬೇಕು ಎನ್ನುವುದು ಅವರಿಗೆ ಮೊದಲೇ ಗೊತ್ತಾಗಿದೆ. ಹಿಂದಿನ ಶಾಸಕರು, ಮೇಯರ್, ಅಧಿಕಾರಿಗಳು ಆಂಟೋನಿ ವೇಸ್ಟಿನವರಿಗೆ ಬೇಕಾದ ಹಾಗೆ ಇದ್ದ ಕಾರಣ ಅವರು ಮಂತ್ರಗಿಂತ ಉಗುಳೇ ಜಾಸ್ತಿ ಮಾಡಿದ್ದರು. ಅವರಿಗೆ ಯಾರನ್ನು ಬ್ಲ್ಯಾಕ್ ಮೇಲ್ ಮಾಡಿದರೆ ಇಲ್ಲಿ ನಿಶ್ಚಿಂತೆಯಿಂದ ಏಳು ವರ್ಷಗಳ ಗುತ್ತಿಗೆಯನ್ನು ಮುಗಿಸಬಹುದು ಎನ್ನುವುದು ಗೊತ್ತಿತ್ತು. ಅಂತಹ ಕಂಪೆನಿಗೆ ಮತ್ತೊಮ್ಮೆ ಒಂದು ವರ್ಷದ ಗುತ್ತಿಗೆ ನವೀಕರಣವಾಗುವಾಗ ಆದ ಆನಂದ ಅಷ್ಟಿಷ್ಟಲ್ಲ. ನಮ್ಮಂತವರಿಗೂ ಗುತ್ತಿಗೆ ನವೀಕರಣ ಮಾಡುತ್ತಾರೆ ಎಂದಾದರೆ ಈ ಪಾಲಿಕೆಯವರು ಅದೆಷ್ಟು ಮಹಾನುಭಾವರು ಎನ್ನುವುದು ಅವರಿಗೆ ಗೊತ್ತಾಗಿದೆ. ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಭಂಡ ಧೈರ್ಯ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಚಿಲಿಂಬಿಯ ಮಲರಾಯ ಧೂಮಾವತಿ ದೈವಸ್ಥಾನದ ರಸ್ತೆಯಲ್ಲಿ ಎರಡು ದಿನಗಳಿಗೊಮ್ಮೆ ಕಸ ಸಂಗ್ರಹ ಮಾಡಲಾಗುತ್ತಿದೆ. ಇನ್ನು ಆಂಟೋನಿ ವೇಸ್ಟಿನವರ ಬಳಿ ಈಗ ಹಿಂದಿನ ಸಂಗ್ರಹ ವಾಹನಗಳು ಇಲ್ಲ. ಇವರಿಗೆ ಹಣ ಪಾವತಿ ಮೂರು ಕ್ಯಾಟಗರಿಯ ಮೂಲಕ ಕೆಲಸ ಮತ್ತು ಖರ್ಚಿನ ಆಧಾರದಲ್ಲಿ ನಡೆಯುತ್ತಿತ್ತು. ಮೊದಲನೇಯದಾಗಿ ತ್ಯಾಜ್ಯದ ತೂಕ, ಎರಡನೇಯದಾಗಿ ವಾರ್ಡುಗಳಲ್ಲಿ ಕಸ ಸಂಗ್ರಹಿಸಿ ಪಚ್ಚನಾಡಿಗೆ ಸುರಿದು ಬರುವ ದೂರ ಮತ್ತು ಕಾರ್ಮಿಕರ ಸಂಬಳ ಆಧರಿಸಿ ನೀಡಲಾಗುತ್ತಿತ್ತು. ಈ ಕಿಲೋಮೀಟರ್ ಆಧಾರದ ಮೇಲೆ ಹಣ ನಿಗದಿಪಡಿಸುವುದು ಎಂದರೆ ಒಂದು ಕಸದ ಲಾರಿ ಕೃಷ್ಣಾಪುರದಿಂದ ಪಚ್ಚನಾಡಿಗೆ ಹೋಗುವ ಕಿಲೋ ಮೀಟರ್ ಹೆಚ್ಚಾಗುತ್ತದೆ. ಅದೇ ಕುಡುಪು ಏರಿಯಾದಿಂದ ಬಹಳ ಕಡಿಮೆ ಇರುತ್ತದೆ. ಇದನ್ನು ಗಮನಿಸಿದರೆ ಈ ವಾಹನಗಳು ಎರಡು ದಿನಗಳಿಗೊಮ್ಮೆ ವಾರ್ಡಿಗೆ ಬಂದರೆ ಆಗ ಖಂಡಿತವಾಗಿಯೂ ಅವರ ಬಿಲ್ ಕಡಿಮೆಯಾಗಲೇಬೇಕು. ಕಾರ್ಮಿಕರ ವೇತನ ಕೂಡ ಕಡಿಮೆಯಾಗಲೇಬೇಕು. ಆದರೆ ಬಿಲ್ ಮಾತ್ರ ಚೆನ್ನಾಗಿ ದಂಡಿಯಾಗಿ ಪಾವತಿಯಾಗುತ್ತಲೇ ಇರುತ್ತದೆ. ಇತ್ತ ಮಂಗಳೂರು ಮಾತ್ರ ತ್ಯಾಜ್ಯ ನಗರಿಯಾಗಿ ಬದಲಾಗುತ್ತಾ ಇದೆ!!

  • Share On Facebook
  • Tweet It


- Advertisement -


Trending Now
ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
Hanumantha Kamath August 17, 2022
ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
Hanumantha Kamath August 15, 2022
Leave A Reply

  • Recent Posts

    • ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
    • ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
    • ಉಗುರು ಸಿಕ್ಕಿದರೆ ದೇಹ ನುಂಗುವವರಿಗೆ ಈದ್ಗಾ ಮೈದಾನ ಉದಾಹರಣೆ!
    • ಎಸಿಬಿ ರದ್ದು ಮಾಡಿದ್ದು ಕೋರ್ಟ್, ಬೆನ್ನು ತಟ್ಟಿಕೊಳ್ಳುವ ಅವಕಾಶ ಬಿಜೆಪಿಗೆ ಮಿಸ್!
    • ಹಲಾಲ್-ಜಟ್ಕಾ ವಿಷಯದಲ್ಲಿ ಪ್ರವೀಣ್ ಹತ್ಯೆಯಾಯಿತಾ ಎನ್ನುವ ತನಿಖೆ ಆಗಲಿ!
    • ಸಿಎಂ ಬದಲಾವಣೆಯಿಂದ ರಾಜ್ಯದ ಜನರಿಗೆ ಆಗುವಂತದ್ದು ಏನೂ ಇಲ್ಲ!!
    • ಸಿಬಲ್ ಅರಳು ಮರಳಿನ ಹೇಳಿಕೆ ಅವರ ಇವತ್ತಿನ ಪರಿಸ್ಥಿತಿ ಸೂಚಿಸುತ್ತದೆ!
    • ಹೆಣ್ಣುಮಕ್ಕಳು ನೇತಾಡಿ ಹೋಗುವ ಪರಿಸ್ಥಿತಿ ಬರಬಾರದಾಗಿತ್ತು!!
    • ಅಕ್ರಮ ಮರಳು ಗುತ್ತಿಗೆದಾರರು ಸಿಕ್ಕಿಬಿದ್ದರೆ ಶಿಕ್ಷೆ ಎಲ್ಲಿ ಆಗಿದೆ?
    • ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
  • Popular Posts

    • 1
      ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
    • 2
      ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
    • 3
      ಉಗುರು ಸಿಕ್ಕಿದರೆ ದೇಹ ನುಂಗುವವರಿಗೆ ಈದ್ಗಾ ಮೈದಾನ ಉದಾಹರಣೆ!
    • 4
      ಎಸಿಬಿ ರದ್ದು ಮಾಡಿದ್ದು ಕೋರ್ಟ್, ಬೆನ್ನು ತಟ್ಟಿಕೊಳ್ಳುವ ಅವಕಾಶ ಬಿಜೆಪಿಗೆ ಮಿಸ್!
    • 5
      ಹಲಾಲ್-ಜಟ್ಕಾ ವಿಷಯದಲ್ಲಿ ಪ್ರವೀಣ್ ಹತ್ಯೆಯಾಯಿತಾ ಎನ್ನುವ ತನಿಖೆ ಆಗಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search