• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ಮಾರ್ಟ್ ಸಿಟಿಯವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಿರುವುದರಿಂದ……

Hanumantha Kamath Posted On November 10, 2021


  • Share On Facebook
  • Tweet It

ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಯಾರೂ ಹೇಳುವವರು, ಕೇಳುವವರು ಇಲ್ಲ ಎಂದು ಸ್ಪಷ್ಟವಾಗುತ್ತಿದೆ. ಸ್ಮಾರ್ಟ್ ಸಿಟಿ ಮಂಡಳಿಯ ಅಧಿಕಾರಿಗಳು ಒಂದು ರೀತಿಯಲ್ಲಿ ಬಿಳಿಯಾನೆ ಇದ್ದ ಹಾಗೆ. ಇವರಿಗೆ ತಿಂಗಳಿಗೆ ಲಕ್ಷಗಟ್ಟಲೆ ಸಂಬಳವನ್ನು ನೀಡಲಾಗುತ್ತದೆ. ಆದರೆ ಇವರು ಅದಕ್ಕೆ ಸರಿಯಾಗಿ ಕೆಲಸ ಮಾಡುತ್ತಾರೋ ಎಂದು ನೋಡಿದರೆ ಮಂಗಳೂರಿನ ಮಟ್ಟಿಗೆ ದೊಡ್ಡ ಜೀರೋ ಎಂದು ಅನಿಸುತ್ತದೆ. ಇವರಿಗೆ ಯಾವ ಭಯವೂ ಇಲ್ಲ. ಇವರು ಸರಿಯಾಗಿ ಕೆಲಸ ಮಾಡದಿರುವುದರಿಂದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಜನರು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ ತಪ್ಪು ಈ ಅಧಿಕಾರಿಗಳದ್ದು ಎಂದು ಯಾರಿಗೂ ಗೊತ್ತಿಲ್ಲ. ಎಸಿ ಕೋಣೆಯಲ್ಲಿ ಕುಳಿತು ಪೆನ್, ಪೇಪರ್ ಹಿಡಿದು ಸ್ಕೆಚ್ ಹಾಕಿ ಕುಳಿತುಕೊಳ್ಳುವುದರಿಂದ ವಾಸ್ತವದಲ್ಲಿ ಅದು ಅನುಷ್ಟಾನವಾಗುತ್ತಿದೆಯಾ ಎನ್ನುವುದು ಅಧಿಕಾರಿಗಳಿಗೆ ಗೊತ್ತೆ ಇಲ್ಲ. ಅನುಷ್ಟಾನವಾಗದಿದ್ದರೆ ಅದು ಅವರಿಗೆ ಬಿದ್ದು ಹೋಗಿಲ್ಲ. ಯಾಕೆಂದರೆ ಇವರನ್ನು ಯಾರೂ ಕೇಳುವುದಿಲ್ಲ. ಅಭಿವೃದ್ಧಿ ನಿರಂತರವಾಗಿರುತ್ತದೆ ಮತ್ತು ಅದು ಯಾವತ್ತೂ ಮುಗಿಯುವುದಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಸರ್ವಾಂಗೀಣ ಅಭಿವೃದ್ಧಿಯಾದಾಗ ಮಾತ್ರ. ಒಂದು ಕಾಮಗಾರಿ ವರ್ಷಗಟ್ಟಲೆ ನಡೆಯುತ್ತಿದ್ರೆ ಅದನ್ನು ನಿರಂತರ ಅಭಿವೃದ್ಧಿ ಎಂದು ಹೇಳುವುದಿಲ್ಲ. ಅದನ್ನು ನಿರಂತರ ಕಿರಿಕಿರಿ ಎಂದೇ ಹೇಳಬೇಕಾಗುತ್ತದೆ. ಅಷ್ಟಕ್ಕೂ ಉದಾಹರಣೆಗಳಿಲ್ಲದೆ ನಾನು ಮಾತನಾಡುವುದಿಲ್ಲ.ಒಂದು ರಸ್ತೆಯನ್ನು ಕಾಂಕ್ರೀಟಿಕರಣ, ಒಳಚರಂಡಿ, ಫುಟ್ ಪಾತ್ ಮಾಡಲು ಎಷ್ಟು ಸಮಯ ಬೇಕಾಗಬಹುದು ಎಂದು ಸ್ಮಾರ್ಟ್ ಸಿಟಿ ಮಂಡಳಿಯ ಅಧಿಕಾರಿಗಳನ್ನು ಕೇಳಿನೋಡಿ. ಅವರ ಬಳಿ ಸ್ಪಷ್ಟವಾದ ಉತ್ತರ ಇರಲು ಸಾಧ್ಯವಿಲ್ಲ. ಅದಕ್ಕೆ ತಾಜಾ ಉದಾಹರಣೆ ಬಂದರು ಪ್ರದೇಶ. ಬಂದರು ಪ್ರದೇಶದ ಅನ್ಸಾರಿ ರಸ್ತೆಯನ್ನು ತೆಗೆದುಕೊಳ್ಳಿ. ಇಲ್ಲಿ ಒಂದು ರಸ್ತೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಅಗೆದು ಹಾಕಿ ಇವತ್ತಿಗೆ ಬರೋಬ್ಬರಿ ಎರಡೂವರೆ ವರ್ಷ ಆಯಿತು. ಇನ್ನೂ ಕಾಮಗಾರಿ ಮುಗಿದಿಲ್ಲ. ಸದ್ಯ ಮುಗಿಯುವ ಯಾವ ಲಕ್ಷಣಗಳು ಕೂಡ ಕಾಣುವುದಿಲ್ಲ. ಇದರಿಂದ ಏನಾಗಿದೆ. ಅಲ್ಲಿನ ವ್ಯಾಪಾರಿಗಳಿಗೆ ಸೀಕ್ ಸಂಕಟ ಶುರುವಾಗಿದೆ. ನಿತ್ಯ ಅಂಗಡಿಯ ಎದುರಿಗೆ ಎದ್ದೇಳುವ ಧೂಳು ಮತ್ತು ಅದರಲ್ಲಿರುವ ಕೋಟ್ಯಾಂತರ ವಿಷಕಣಗಳು ಈ ವ್ಯಾಪಾರಿಗಳಲ್ಲಿ ಟಿಬಿ, ಸೈನಸ್ ಮತ್ತು ಏನೇನೋ ಕಾಯಿಲೆಯನ್ನು ತರುತ್ತಿದೆ. ಈ ಕಾಯಿಲೆಗಳು ಬಂದರೆ ಅದಕ್ಕೆ ಯಾರು ಕಾರಣ? ಸ್ಮಾರ್ಟ್ ಸಿಟಿ ಅಧಿಕಾರಿಗಳಾ ಅಥವಾ ಮಹಾನಗರ ಪಾಲಿಕೆಯಾ? ಯಾರಾದರೂ ಒಬ್ಬರು ಕೋರ್ಟಿಗೆ ಹೋಗಿ ತನ್ನ ಆರೋಗ್ಯ ಹಾಳಾಗಲು ಇಂತಿಂತವರು ಕಾರಣ ಎಂದು ದಾವೆ ಹೂಡಿದರೆ ಅವಸ್ಥೆ ಏನಾಗಬಹುದು. ಮರ್ಯಾದೆ ಯಾರದ್ದು ಹೋಗಬಹುದು. ಜನರು ಹೆಚ್ಚೆಂದರೆ ಅವರ ಕಾರ್ಪೋರೇಟರ್ ಅವರಿಗೆ ನಿತ್ಯ ಎದುರಿಗೆ ಸಿಗುವುದರಿಂದ ಕೆಲಸ ಯಾವಾಗ ಮುಗಿಯುತ್ತೆ ಎಂದು ಕೇಳಬಹುದು. ಅದು ತಪ್ಪಿದರೆ ಮೇಯರ್ ಅವರಿಗೆ ಕೇಳುತ್ತಾರೆ. ಸಿಕ್ಕಿದರೆ ಶಾಸಕರಿಗೂ ಕೇಳಬಹುದು.

tulunadunewsಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಯಾರು ಪ್ರಶ್ನಿಸುವುದು. ಈ ಒಂದು ರಸ್ತೆ ಮಾತ್ರವಲ್ಲ. ಮಂಗಳೂರಿನ ಸಿಗ್ನಲ್ ಲೈಟ್ಸ್ ಇರುವ ಹಂಪನಕಟ್ಟೆಯಿಂದ ಹಿಡಿದು ಭಾರತೀಯ ಜನತಾ ಪಾರ್ಟಿಯ ಕಚೇರಿ ಇರುವ ಕೊಡಿಯಾಲ್ ಬೈಲ್ ತನಕ ಈ ಸ್ಮಾರ್ಟ್ ಸಿಟಿ ಮಂಡಳಿಯವರು ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷಗಳಾಗಿವೆ. ಇವರು ಫುಟ್ ಪಾತ್ ಮೇಲೆ ಚೇಂಬರ್ ಮಾಡುತ್ತಾರೆ ಎಂದು ನಾವು ನಂಬಿ ಇವರಿಗೆ ಅಗೆಯಲು ಬಿಟ್ಟು ಕೆಲಸ ಈಗಲೂ ಹಾಗೆ ಬಿಟ್ಟಿದ್ದಾರೆ. ಇನ್ನು ಇವರು ಅಗೆದ ಮಣ್ಣು ಅಲ್ಲಿಯೇ ಇದ್ದು, ಜನರು ಯಾವಾಗ ಬೇಕಾದರೂ ತೆರೆದ ಗುಂಡಿಯಲ್ಲಿ ಬೀಳುವ ಎಲ್ಲಾ ಸಾಧ್ಯತೆ ಇದೆ. ಮಳೆಗಾಲ ಬಂದಾಗ ಈ ಪರಿಸ್ಥಿತಿಯನ್ನು ಕೇಳುವುದೇ ಬೇಡಾ. ಇನ್ನು ಡೊಂಗರಕೇರಿಯ ಅಂಬೆಂಬಳ್ ಸುಬ್ಬರಾವ್ ಪೈ ರಸ್ತೆಗೆ ಬರೋಣ. ಅಲ್ಲಿ ಕೆನರಾ ಹೈಸ್ಕೂಲ್ ಸಹಿತ ಪ್ರಾಥಮಿಕ ಶಾಲೆ ಕೂಡ ಇದೆ. ಆ ರಸ್ತೆಯಲ್ಲಿ ರಸ್ತೆಯ ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಆಗಿದೆ. ಲಾಕ್ ಡೌನ್ ಇದ್ದಾಗ ಶಾಲೆ ಇರಲಿಲ್ಲ. ನಂತರ ಲಾಕ್ ಡೌನ್ ಸಡಿಲಿಕೆ ಆಯಿತು. ವಾಹನ ಸವಾರರು ಮಾತ್ರ ಅತ್ತ ಇತ್ತ ಹೋಗಲು ಪರದಾಡುತ್ತಿದ್ದರು. ಈಗ ಶಾಲೆಗಳು ಶುರುವಾಗಿದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಈ ರಸ್ತೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೊಂಡ ತೆಗೆದು ಮಣ್ಣು ಮೇಲೆ ಹಾಕಿರುವುದು ಒಂದು ತೊಂದರೆ ಆದರೆ ಕಾಮಗಾರಿ ಪೂರ್ಣವಾಗಿ ಮುಗಿಯಲಿಲ್ಲ, ಇನ್ನು ಇಷ್ಟೇ ಕೆಲಸ ಬಾಕಿ ಇದೆ ಎಂದು ಗೊತ್ತಾದಾಗ ಇನ್ನಷ್ಟು ಅಸಹ್ಯ ಈ ಸ್ಮಾರ್ಟ್ ಸಿಟಿ ಮೇಲೆ ಆಗುತ್ತದೆ. ಇಲ್ಲಿ ಕೂಡ ಚೇಂಬರ್ ಕವರ್ ಮಾಡದೇ ಇರುವುದರಿಂದ ಮಕ್ಕಳು ಹೊಂಡದಲ್ಲಿ ಬಿದ್ದರೆ ಆ ಪಾಪ ಯಾರಿಗೆ ತಟ್ಟಲಿದೆ ಹೇಳಿ. ಇನ್ನು ಈಗ ಆಗುತ್ತಿರುವ ಕಾಮಗಾರಿ ಮುಗಿಯಲು ಆರು ತಿಂಗಳು ಬೇಕಾದರೆ ಅದರ ಇನ್ನೊಂದು ಬದಿಯಲ್ಲಿ ಚರಂಡಿ, ಫುಟ್ ಪಾತ್ ಕಾಮಗಾರಿಗಳು ನಡೆಯಲಿವೆ. ಅದು ಎಷ್ಟು ವರ್ಷ ತೆಗೆದುಕೊಳ್ಳುತ್ತದೆಯೋ ಯಾರಿಗೆ ಗೊತ್ತು. ಇನ್ನು ರಥಬೀದಿಯಿಂದ ಶರವು ಗಣಪತಿ ದೇವಸ್ಥಾನದ ರಸ್ತೆಯನ್ನೇ ತೆಗೆದುಕೊಳ್ಳೋಣ. ಅದು ಕೂಡ ಕೇಳುವವರು ಯಾರೂ ಇಲ್ಲ. ಯಾವುದೇ ಒಂದು ಕಾಮಗಾರಿ ಆರಂಭವಾಗುವಾಗ ಅದು ಇಂತಿಷ್ಟೇ ದಿನಗಳ ಒಳಗೆ ಮುಗಿಯಬೇಕು ಎನ್ನುವ ನಿಗದಿತ ಮಾಪನ ಇರುತ್ತದೆ. ಆದರೆ ಇವರಿಗೆ ಅದ್ಯಾವುದೂ ಅನ್ವಯ ಆಗುವುದಿಲ್ಲವೋ ಅಥವಾ ಇವರು ಯಾರನ್ನೂ ಕ್ಯಾರ್ ಮಾಡುವುದಿಲ್ಲವೋ, ದೇವರಿಗೆ ಗೊತ್ತು!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search