• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರೇಡ್ ಆಗುವಾಗ ಗೋಣಿಯಲ್ಲಿ ತುಂಬುವಷ್ಟು ಹಣ, ಬಂಗಾರ, ಶಿಕ್ಷೆ ಮಾತ್ರ ಆಗಲ್ಲ!!

Hanumantha Kamath Posted On November 29, 2021


  • Share On Facebook
  • Tweet It

ಈ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಅಥವಾ ಲೋಕಾಯುಕ್ತ ರೇಡ್ ಆದಾಗ ಅಷ್ಟು ಭ್ರಷ್ಟರ ಫೋಟೋ ಹಾಕಿ ಗ್ರಾಫಿಕ್ ಡಿಸೈನ್ ಮಾಡಿ ಅದಕ್ಕೆ ಹಿನ್ನಲೆ ಮ್ಯೂಸಿಕ್ ಬೀಟ್ ಹಾಕಿ ಎರಡು ದಿನ ಟಿವಿ ಮಾಧ್ಯಮಗಳು ತೋರಿಸುತ್ತಲೇ ಇರುತ್ತವೆ. ಮೊನ್ನೆಯಂತೂ ಅಜಯ್ ದೇವಗನ್ ನಟನೆಯ ರೇಡ್ ಸಿನೆಮಾದಲ್ಲಿ ಇದ್ದಂತೆ ಪೈಪುಗಳಿಂದಲೂ ಹಣ ಬಂತು. ಸಿನೆಮಾ ನೋಡಿ ಈ ಅಧಿಕಾರಿಗಳಿಗೆ ಹಣ ಅಡಗಿಸಿಡುವ ಐಡಿಯಾ ಬರುತ್ತದಾ ಅಥವಾ ಇವರ ಅಡಗಿಸಿಡುವ ಐಡಿಯಾಗಳು ಲೀಕ್ ಆಗಿ ಅದು ಸಿನೆಮಾ ಮಾಡುವವರಿಗೆ ಹೊಸ ಹೊಸ ಐಡಿಯಾ ಕೊಡುತ್ತಾ, ಒಟ್ಟಿನಲ್ಲಿ ಎಲ್ಲವೂ ನಡೆಯುತ್ತಲೇ ಇರುತ್ತದೆ. ಇನ್ನು ನೀವು ಗಮನಿಸಿರಬಹುದು. ಪ್ರತಿ ಬಾರಿ ರೇಡ್ ಆದಾಗ ಈ ಅಧಿಕಾರಿಯ ಬಳಿ ಲೆಕ್ಕಕ್ಕಿಂತ ಇನ್ನೂರು ಶೇಕಡಾ ಹೆಚ್ಚು ಆಸ್ತಿಪಾಸ್ತಿ ಪತ್ತೆಯಾಗಿದೆ ಎಂತಲೋ, ನಾಲ್ಕು ನೂರು ಶೇಕಡಾ ಹೆಚ್ಚು ಆದಾಯ ಕಂಡುಬಂದಿದೆ ಎಂದೋ ಮಾಧ್ಯಮಗಳು ವರದಿ ಮಾಡುತ್ತವೆ. ಅಷ್ಟಕ್ಕೂ ಈ ಶೇಕಡಾವಾರು ಲೆಕ್ಕ ಜನಸಾಮಾನ್ಯರ ತಲೆಗೆ ಹೋಗಲಿಕ್ಕಿಲ್ಲ. ವಿಷಯ ಏನೆಂದರೆ ಒಬ್ಬ ಅಧಿಕಾರಿ ಸರಕಾರಿ ಸೇವೆಗೆ ಸೇರಿದ ದಿನದಿಂದ ಹಿಡಿದು ಅವನ ಮೇಲೆ ಈ ದಾಳಿ ಆದ ದಿನದ ತನಕದ ಒಟ್ಟು ಆದಾಯವನ್ನು ಲೆಕ್ಕ ಹಾಕಿ ಈ ಶೇಕಡವನ್ನು ತಾಳೆ ಹಾಕಲಾಗುತ್ತದೆ. ಕೆಲವರು ರೇಡ್ ಆದ ದಿನ ಕೂಡ ಹೊರಗೆ ಮಾಧ್ಯಮಗಳ ಬಳಿ ಬಂದು ತಾವು ಸತ್ಯ ಹರಿಶ್ಚಂದ್ರನ ಸ್ವಂತ ಅಣ್ಣನ ಮಗ ಎನ್ನುವ ರೀತಿಯಲ್ಲಿ ಹೇಳಿಕೆ ಕೊಡುತ್ತಿರುವುದು ಸದ್ಯದ ಹೊಸ ಸ್ಟೈಲ್. ಆದರೆ ಹೀಗೆ ರೇಡ್ ಆದ ಎಷ್ಟು ಮಂದಿ ನಿಜಕ್ಕೂ ತಾವು ಮಾಡಿದ ಭ್ರಷ್ಟತೆಯಿಂದ ಶಿಕ್ಷೆ ಅನುಭವಿಸಿದ್ದಾರೆ ಎನ್ನುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಯಾಕೆಂದರೆ ರೇಡ್ ಆದ ಒಟ್ಟು ಜನರ ಪೈಕಿ 5% ಜನರಿಗೂ ಶಿಕ್ಷೆ ಆಗುವುದಿಲ್ಲ. ಇತ್ತೀಚೆಗೆ 15 ಭ್ರಷ್ಟರ ಮೇಲೆ ರೇಡ್ ಆಯಿತಲ್ಲ. ಅದರಲ್ಲಿ ಒಬ್ಬ ಅಧಿಕಾರಿಗೂ ಶಿಕ್ಷೆ ಆಗುವುದಿಲ್ಲ, ಬೇಕಾದರೆ ನೋಡುತ್ತೀರಿ. ಯಾವತ್ತು ರೇಡ್ ಆದ ದಿನ ಟಿವಿಯಲ್ಲಿ ಕಂತೆ ಕಂತೆ ಹಣ, ಬಂಗಾರ, ದಾಖಲೆ ಪತ್ರಗಳನ್ನು ತೋರಿಸುತ್ತಾರೆ. ಹಣ ಮತ್ತು ಬಂಗಾರವನ್ನು ತೂಕ ಮಾಡಲು ಹೆಚ್ಚುವರಿ ಯಂತ್ರ ತರಿಸಿದ್ದೂ ಇದೆ. ಆದರೂ ಯಾಕೆ ಶಿಕ್ಷೆ ಆಗಲ್ಲ ಎನ್ನುವುದೇ ಆಶ್ಚರ್ಯಕರ ವಿಷಯ. ಯಾಕೆ ಎನ್ನುವುದನ್ನು ಒಂದೊಂದಾಗಿ ನೋಡುತ್ತಾ ಬರೋಣ.

ಮೊದಲನೇಯದಾಗಿ ಈ ಪ್ರಕರಣಗಳು ಇಂತಿಷ್ಟೇ ಸಮಯದ ಒಳಗೆ ಮುಗಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಬ್ಬರು ಸಹಾಯಕ ನಗರ ಯೋಜನಾ ಅಧಿಕಾರಿಗಳ ಮೇಲೆ 2007 ರಲ್ಲಿ ಲೋಕಾಯುಕ್ತ ರೇಡ್ ಆಗಿತ್ತು. 2021 ರ ತನಕವೂ ಆ ಪ್ರಕರಣ ನಡೆಯುತ್ತಲೇ ಇತ್ತು. ಹೀಗೆ ಆದರೆ ಹೇಗೆ? ಒಂದು ಭ್ರಷ್ಟಾಚಾರದ ಪ್ರಕರಣದಲ್ಲಿ ಅಧಿಕಾರಿ ಭ್ರಷ್ಟ ಎಂದು ತೀರ್ಮಾನಿಸಲು ಒಂದು ದಶಕಗಿಂತಲೂ ಹೆಚ್ಚು ಸಮಯ ಬೇಕಾಗುತ್ತದೆಯಾ? ಒಂದೊಂದು ಪ್ರಕರಣ ಕೂಡ ಹೀಗೆ ನಿರಂತರವಾಗಿ ವರ್ಷಗಟ್ಟಲೆ ಮುಂದೂಡುತ್ತಾ ಹೋದರೆ ಮೊದಲನೇಯದಾಗಿ ಅಲ್ಲಿ ಸಾಕ್ಷ್ಯ ನಾಶ ಆಗುತ್ತದೆ. ಭ್ರಷ್ಟರು ತಮ್ಮ ಬಳಿ ಸಿಕ್ಕಿದ ಹೆಚ್ಚುವರಿ ಆದಾಯದ ಮೂಲಕ್ಕೆ ಏನಾದರೂ ಕಾರಣಗಳನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಯಾವುದಾದರೂ ಸಚಿವರನ್ನೋ, ಉನ್ನತ ಅಧಿಕಾರಿಯನ್ನೋ ಹೇಗಾದರೂ ಮಾಡಿ ತೃಪ್ತಿ ಮಾಡಿದರೆ ಪ್ರಕರಣ ಹಳ್ಳ ಹಿಡಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹಾಗಾದರೆ ಏನು ಮಾಡುವುದು? ಪ್ರಕರಣವನ್ನು ಎಳೆಯುವ ಬದಲು ನೇರವಾಗಿ ಇಂತಹ ಪ್ರಕರಣಗಳನ್ನು ರೇಡ್ ಆದ ಆರು ತಿಂಗಳೊಳಗೆ ತನಿಖೆ ಮಾಡಿ ಮುಗಿಸುವ ನಿಯಮ ಜಾರಿಗೆ ಬರಬೇಕು. ಆ ಆರು ತಿಂಗಳಲ್ಲಿ ಅಧಿಕಾರಿ ಅಮಾನತಾಗಿರಬೇಕು. ಇಲ್ಲದೇ ಹೋದರೆ ಏನು ಪ್ರಯೋಜನ? ಶನಿವಾರ ಬೆಳಿಗ್ಗೆ ರೇಡ್ ಆಗುತ್ತದೆ. ಸೋಮವಾರ ಆ ಅಧಿಕಾರಿ ತನ್ನ ಚೇಂಬರ್ ನಲ್ಲಿ ಕುಳಿತುಕೊಂಡ ಎಂದರೆ ಅದರಿಂದ ರೇಡ್ ನ ಉದ್ದೇಶ ಎಲ್ಲಿ ಈಡೇರಿದಂತಾಗುತ್ತದೆ. ಆದ್ದರಿಂದ ಸರಕಾರ ಹೊಸ ನಿಯಮ ತರದೇ ಹೋದರೆ ಅಲ್ಲಿಗೆ ಪ್ರಕರಣ ಎಷ್ಟು ವರ್ಷ ಹೋಗುತ್ತೆ ಎಂದು ತನಿಖಾಧಿಕಾರಿಗೂ ಗೊತ್ತಿರುವುದಿಲ್ಲ. ರೇಡ್ ಗೆ ಒಳಗಾದವರಿಗೂ ಅಂದಾಜು ಇರುವುದಿಲ್ಲ. ಇಲ್ಲದೇ ಹೋದರೆ ಅದೇ ಅಧಿಕಾರಿ ರೇಡ್ ಆದ ಕೆಲವೇ ದಿನಗಳಲ್ಲಿ ಮತ್ತೆ ತನ್ನ ಅಂಗಡಿ ತೆರೆದು ಇಂತಿಂತಹ ಕೆಲಸಕ್ಕೆ ಇಂತಿಷ್ಟು ಹಣ ಎಂದು ಡೀಲ್ ಕುದುರಿಸಿ ವ್ಯಾಪಾರಕ್ಕೆ ನಿಂತು ಬಿಡುತ್ತಾನೆ. ಕೆಲವು ದಿನಗಳ ನಂತರ ಜನರಿಗೂ ಇವನೇ ಭ್ರಷ್ಟ ಅಧಿಕಾರಿ, ರೇಡ್ ಗೆ ಒಳಗಾದವನು ಎನ್ನುವುದು ಮರೆತು ಹೋಗಿರುತ್ತದೆ.

ಎರಡನೇಯದಾಗಿ ಒಂದು ಫಾಸ್ಟ್ ಟ್ರಾಕ್ ಕೋರ್ಟ್ ಮೂಲಕ ಈ ಪ್ರಕರಣಗಳು ಇತ್ಯರ್ಥ ಆಗಬೇಕು. ಮೂರನೇಯದಾಗಿ ಭಾರತೀಯ ಜನತಾ ಪಾರ್ಟಿ ತಾನು ಅಧಿಕಾರಕ್ಕೆ ಬಂದ ಬಳಿಕ ಲೋಕಾಯುಕ್ತವನ್ನು ಶಕ್ತಿಶಾಲಿಗೊಳಿಸುತ್ತೇವೆ. ಎಸಿಬಿಯನ್ನು ಬರ್ಖಾಸ್ತು ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿತ್ತು. ಇಲ್ಲಿಯವರೆಗೆ ಏನೂ ಆಗಿಲ್ಲ. ಹೀಗಿರುವಾಗ ಇವರಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ. ಮಾತನಾಡಿದರೆ ಕಾಂಗ್ರೆಸ್ಸಿಗರು ರಾಜಭವನಕ್ಕೆ ಹೋಗುತ್ತಾರೆ. ಬಿಜೆಪಿಗರು ತಮ್ಮ ಭರವಸೆಯನ್ನು ಈಡೇರಿಸಲು ಮರೆತುಬಿಡುತ್ತಾರೆ. ಭ್ರಷ್ಟರು ಯಾವ ಸರಕಾರ ಬಂದರೂ ನೆಮ್ಮದಿಯಾಗಿ ಇರುತ್ತಾರೆ!

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search