• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಯುಪಿಯಲ್ಲಿ ಬಿಜೆಪಿ ಸೋಲಿಸಲು ರಣವೀಳ್ಯ ಪಡೆದ ಟೀಕಾಯತ್ ಹೊಸ ಅಸ್ತ್ರ!!

Tulunadu News Posted On December 1, 2021
0


0
Shares
  • Share On Facebook
  • Tweet It

ಮಲಗಿದ್ದವರನ್ನು ಎಬ್ಬಿಸಬಹುದು, ಆದರೆ ಮಲಗಿದ್ದಂತೆ ನಾಟಕ ಮಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಅದೇ ರೀತಿಯಲ್ಲಿ ತಮ್ಮ ನೈಜ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ಮಾಡುವವರನ್ನು ಸಮಾಧಾನಗೊಳಿಸಬಹುದು. ಆದರೆ ಪ್ರತಿಭಟನೆಯ ಹಿಂದೆ ಬೇರೆಯದ್ದೇ ಏಜೆಂಡಾ ಇಟ್ಟುಕೊಂಡು ಕುಳಿತವರನ್ನು ಸುಲಭದಲ್ಲಿ ಸಮಾಧಾನಿಸಲು ಸಾಧ್ಯವಿಲ್ಲ. ಅಂತಹ ಒಂದು ವಿಲಕ್ಷಣ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ದಾಮೋದರದಾಸ ಮೋದಿ ಎದುರಿಸುತ್ತಿದ್ದಾರೆ. ದೇಶವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಪರಿಶ್ರಮ ಮತ್ತು ಗುರಿ ಮಾತ್ರ ಇದ್ದರೆ ಸಾಕಾಗಲ್ಲ, ರಾಜಕೀಯ ಕೂಡ ಮಾಡಬೇಕು ಎನ್ನುವುದು ಮೋದಿಯವರಿಗೆ ಗೊತ್ತಿಲ್ಲದ ಸಂಗತಿ ಏನಾಗಿರಲಿಲ್ಲ. ಅವರು 13 ವರ್ಷ ಗುಜರಾತನ್ನು ಮತ್ತು ಏಳನೇ ವರ್ಷ ಭಾರತವನ್ನು ಮುನ್ನಡೆಸಿಕೊಂಡು ಬಂದವರು. ಆದರೆ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯವೇ ಮಾಡಬೇಕಾಗುತ್ತದೆ ಎಂದು ಅವರಿಗೆ ಒಂದು ಪ್ರತಿಭಟನೆ ತೋರಿಸಿಕೊಟ್ಟಿತ್ತು. ಈ ದೇಶದಲ್ಲಿ ಎರಡು ವಿಷಯಗಳಲ್ಲಿ ರಾಜಕೀಯ ಮಾಡಬಹುದು ಎನ್ನುವುದನ್ನು ಈ ದೇಶವನ್ನು ಆಳಿದವರು ಮತ್ತು ಆಳುವವರು ತೋರಿಸಿಕೊಟ್ಟಿದ್ದಾರೆ. ಅದರಲ್ಲಿ ಒಬ್ಬ ಯೋಧ ಮತ್ತೊಬ್ಬ ರೈತ. ಯೋಧರು ಏರ್ ಸ್ಟ್ರೈಕ್ ಮಾಡಿದಾಗ ಮೋದಿಯವರಿಗೆ ಮೈಲೇಜ್ ಸಿಕ್ಕಿದೆ. ಅದೇ ವಿಪಕ್ಷಗಳ ಕುಮ್ಮಕ್ಕಿನಿಂದ ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನೆ ಮಾಡಿದಾಗ ಮೋದಿಯವರಿಗೆ ಹಿನ್ನಡೆಯಾಗಿದೆ. ಈ ಎರಡರಲ್ಲಿಯೂ ಕೇಂದ್ರ ಸರಕಾರ ಸುದ್ದಿಯಲ್ಲಿತ್ತು. ಅಷ್ಟಕ್ಕೂ ಈ ರೈತರ ಹೆಸರಿನ ಹೋರಾಟದಲ್ಲಿ ಅವರ ಮುಖ್ಯ ಉದ್ದೇಶ ಏನಿತ್ತು ಎಂದರೆ ರೈತರಿಗಾಗಿ ಮಾಡಿದ ಮೂರು ಕಾಯ್ದೆಗಳನ್ನು ಕೇಂದ್ರ ಹಿಂದೆ ಪಡೆಯಬೇಕು. ಒಬ್ಬ ರೈತ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಹೊರಗೆ ಬಂದು ಸ್ವತಂತ್ರವಾಗಿ ತನ್ನ ಉತ್ಪನ್ನಗಳಿಗೆ ತಾನು ಮಾರುಕಟ್ಟೆ ಕಲ್ಪಿಸಬೇಕು ಎನ್ನುವುದನ್ನು ಸೇರಿಸಿಕೊಂಡು ರೈತರಿಗಾಗಿ ಮಾಡಿದ ಈ ಯೋಜನೆ ನಿಜಕ್ಕೂ ಉಪಯುಕ್ತವಾಗಿತ್ತು. ಆದರೆ ಈ ಯೋಜನೆಯನ್ನು ನಾಗರಿಕರಿಗೆ ಅದರಲ್ಲಿಯೂ ಮುಖ್ಯವಾಗಿ ಕೃಷಿಕನಿಗೆ ತಲುಪಿಸಲು ಮೊತ್ತಮೊದಲಬಾರಿಗೆ ಕೇಂದ್ರ ಸರಕಾರ ವಿಫಲವಾಯಿತು. ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣಗಳನ್ನು ಸೇರಿಸಿ ಮಾಧ್ಯಮಗಳ ಮೇಲಿರುವ ಹಿಡಿತವನ್ನು ಗಣನೆಗೆ ತೆಗೆದುಕೊಂಡು ವಾಗ್ಮಿಗಳ ಸಂಖ್ಯೆಯನ್ನು ಪರಿಗಣನೆ ತೆಗೆದುಕೊಂಡರೆ ಇವರ ಎದುರಿಗೆ ಕಾಂಗ್ರೆಸ್ ಏನೂ ಇಲ್ಲ. ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಶರದ್ ಪವಾರ್ ಅವರ ಗಡಿಯಾರದ ಪಕ್ಷ ಲೆಕ್ಕಕೆ ಇಲ್ಲ. ಆದರೆ ಮೋದಿಯವರ ಚಿಂತನೆಯನ್ನು ಮೊತ್ತಮೊದಲ ಬಾರಿಗೆ ರೈತರ ಹೆಸರಿನಲ್ಲಿ ಕುಳಿತಿರುವ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ. ಅದರೊಂದಿಗೆ ಈ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಎದ್ದಿರುವ ಅಲೆ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅರ್ಧಕರ್ಧ ತಿಂದು ಹಾಕಲಿದೆ ಎನ್ನುವ ಸುದ್ದಿ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಅನ್ನು ಮಣಿಸಬೇಕಾದರೆ ಅಮರೀಂದರ್ ಸಿಂಗ್ ಹಾಕಿರುವ ಷರತ್ತನ್ನು ಈಡೇರಿಸಲು ಮೋದಿ ತಮ್ಮ ರಾಜಕೀಯ ಬದುಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿವರ್ಸ್ ಹೆಜ್ಜೆ ಇಡಬೇಕಾಯಿತು. ಸಿಂಹ ನಾಲ್ಕು ಹೆಜ್ಜೆ ಹಿಂದೆ ಇಟ್ಟರೆ ಯಾವುದೋ ಹೊಸ ಬೇಟೆಗೆ ತಯಾರಾಗಿದೆ ಎಂದು ಅರ್ಥ ಎನ್ನುವುದನ್ನು ಮೋದಿ ಸಮರ್ಥಕರು ಹೇಳಿಕೊಂಡು ಬರುತ್ತಿದ್ದಾರಾದರೂ ಯಾವುದೋ ಬೇಟೆ ಎನ್ನುವುದು ಯುಪಿ, ಪಂಜಾಬ್ ಚುನಾವಣೆ ಎನ್ನುವುದು ಅವರಿಗೂ ಗೊತ್ತಿರುವ ಸಂಗತಿ. ನಾವು ಚುನಾವಣೆಗಾಗಿ ಇದನ್ನು ಹಿಂದಕ್ಕೆ ಪಡೆದುಕೊಂಡಿಲ್ಲ, ದೇಶದ ನಾಗರಿಕರಾಗಿ ಹಿಂದಕ್ಕೆ ಪಡೆದುಕೊಂಡಿದ್ದೇವೆ ಎಂದು ಬಿಜೆಪಿ ಮುಖಂಡರು ಎಷ್ಟೇ ಹೇಳಿಕೊಂಡರೂ ರೈತ ವೋಟ್ ಬ್ಯಾಂಕ್ ಮತ್ತು ಆ ವೋಟ್ ಬ್ಯಾಂಕನ್ನು ಸಮಾಧಾನಪಡಿಸದಿದ್ದರೆ ನಮಗೆ ಆಪತ್ತು ಎನ್ನುವುದು ಅವರಿಗೆ ಒಳಗೊಳಗೆ ಗೊತ್ತಿರುವ ಸಂಗತಿ. ಆದರೆ ಈ ಕಾಯ್ದೆ ಹಿಂದಕ್ಕೆ ಪಡೆದುಕೊಂಡರೆ ಮೋದಿ ಟೆನ್ಷನ್ ಸರಿಯಾಗುತ್ತಾ ಎಂದು ನಿಮಗೆ ಅನಿಸಬಹುದು. ಇಲ್ಲ, ಯುಪಿ, ಪಂಜಾಬ್ ನಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ರಣವೀಳ್ಯವನ್ನು ಪಡೆದುಕೊಂಡು ಹೊರಟಿರುವ ಟಿಕಾಯತ್ ಮತ್ತು ಬಳಗ ಈ ವಿಷಯವನ್ನು ಆ ರಾಜ್ಯಗಳ ಚುನಾವಣೆಗಳ ತನಕ ಎಳೆದೊಯ್ಯಲಿದೆ. ಅದಕ್ಕೆ ತಾಜಾ ಉದಾಹರಣೆ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಿ ಎನ್ನುವ ಬೇಡಿಕೆ.
ಒಂದು ರಾಜಕೀಯ ಪಕ್ಷ ತಾನು ವಿಪಕ್ಷದಲ್ಲಿ ಇದ್ದಾಗ ಕೊಡುವ ಹೇಳಿಕೆ ಮತ್ತು ಅದೇ ಪಕ್ಷ ಆಡಳಿತಕ್ಕೆ ಬಂದಾಗ ತೆಗೆದುಕೊಳ್ಳುವ ನಿಲುವುಗಳು ಯಾವಾಗಲೂ ತಾಳೆ ಹಾಕಲ್ಪಟ್ಟಿರುತ್ತದೆ. ಉದಾಹರಣೆಗೆ ಪೆಟ್ರೋಲ್, ಡಿಸೀಲ್ ಬೆಲೆ. ಹಿಂದೆ ಇವುಗಳ ಬೆಲೆ ಏರಿದಾಗ ಇದೇ ಬಿಜೆಪಿಯವರು ನಿರಂತರ ಪ್ರತಿಭಟನೆ ನಡೆಸಿದ್ದರು. ಈಗ ಬೆಲೆ ಲೀಟರಿಗೆ ನೂರು ಹೋದಾಗ ಜನರೇ ಬಿಜೆಪಿಗೆ ಆವತ್ತಿನ ಪ್ರತಿಭಟನೆಯನ್ನು ನೆನಪಿಸುತ್ತಿದ್ದಾರೆ. ನೀವು ಆ ಹಣವನ್ನು ಎಷ್ಟೇ ಅಭಿವೃದ್ಧಿಗೆ ತೊಡಗಿಸಿದ್ದೇವೆ ಎಂದು ಹೇಳಿದರೂ ಮಧ್ಯಮ ವರ್ಗದ ಜನಸಾಮಾನ್ಯ ಪೆಟ್ರೋಲ್ ಪಂಪಿನಲ್ಲಿ ಅದೆಲ್ಲವನ್ನು ಮರೆಯುತ್ತಾನೆ. ಇದು ಕೂಡ ಹಾಗೆ, ಇದೇ ಮೋದಿಯವರು ಗುಜಜರಾತ್ ಸಿಎಂ ಆಗಿದ್ದಾಗ ರೈತರಿಗೆ ಬೆಂಬಲ ಬೆಲೆ ಕೊಡಿಸುವ ಬಗ್ಗೆ ಪರವಾಗಿದ್ದರು. ಆಗಲೇಬೇಕು ಎಂದು ಆಗ ಯುಪಿಎ ಅಧಿಕಾರದ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಈಗ ಟೀಕಾಯತ್ ಅದೇ ವಿಷಯವನ್ನು ಹಿಡಿದು ಮೋದಿಯವರನ್ನು ಛೇಡಿಸುತ್ತಿದ್ದಾರೆ. ಮೋದಿ ಈ ವಿಷಯಕ್ಕೆ ಒಂದು ಸೂತ್ರ ಹೆಣೆಯಲು ಸಮಿತಿಯನ್ನು ರಚಿಸಿದ್ದಾರೆ. ಕೆಲವೇ ತಿಂಗಳಲ್ಲಿ ಅದಕ್ಕೂ ಪರಿಹಾರ ಸಿಗಲಿದೆ. ಆದರೆ ಅದಾದ ಕೂಡಲೇ ರೈತರ ಹೆಸರಿನಲ್ಲಿ ಟೀಕಾಯತ್ ತಂಡ ಮಾಡುತ್ತಿರುವ ಪ್ರತಿಭಟನೆ ನಿಂತು ಹೋಗುತ್ತಾ? ನೋ ಚಾನ್ಸ್, ಅವರು ಪ್ರತಿಭಟನೆಗೆ ಕುಳಿತದ್ದೇ ಅಲ್ಲ. ಯುಪಿ, ಪಂಜಾಬ್ ನಲ್ಲಿ ಬಿಜೆಪಿ ಸೋಲಿಸುವ ಪಣ ತೊಟ್ಟು ಹೊರಟವರಿಗೆ ಬೇಡಿಕೆ ಈಡೇರುವುದು ಮುಖ್ಯವಲ್ಲ. ತಮ್ಮನ್ನು ಪೋಷಿಸುವವರ ಉದ್ದೇಶ ಈಡೇರುವದು ಮುಖ್ಯ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search