• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರ‍್ಯಾಲಿಗಳಿಲ್ಲದ ಚುನಾವಣೆಗಳು ಮತ್ತು ಸಚಿವ ಸಂಪುಟ ಪುನರಾಚನೆ ಆಗುವ ಆಸೆಯೂ!

Hanumantha Kamath Posted On January 15, 2022


  • Share On Facebook
  • Tweet It

ಚುನಾವಣಾ ಬೃಹತ್ ಸಭೆಗಳಿಗೆ ಅಂದರೆ ರ‍್ಯಾಲಿಗಳಿಗೆ ವಿಧಿಸಿರುವ ನಿರ್ಭಂದನೆಯನ್ನು ರಾಷ್ಟ್ರೀಯ ಚುನಾವಣಾ ಆಯೋಗ ಜನವರಿ 22ರ ತನಕ ಮುಂದುವರೆಸಿದೆ. ಇದು ಹೀಗೆ ಮುಂದುವರೆದು ಮುಂದಿನ ತಿಂಗಳ ಮಧ್ಯದ ತನಕ ಕೊರೊನಾ ನಿರ್ಭಂದನೆ ನಡೆದರೆ ನಿಜಕ್ಕೂ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರ್ನಾಕು ರಾಜ್ಯಗಳು ಜನಸ್ತೋಮವನ್ನು ಒಂದು ಕಡೆ ಸೇರಿಸದೇ ಚುನಾವಣೆಗಳನ್ನು ಕಂಡ ಮೊದಲ ರಾಜ್ಯಗಳಾಗಿ ಇತಿಹಾಸದ ಪಟ್ಟಿಯಲ್ಲಿ ಸೇರಲಿವೆ.

ಇದು ನಿಜವಾಗಲೂ ಹಿಂದಿನ ವರ್ಷವೇ ಆಗಬೇಕಿತ್ತು. ಆದರೆ ಚುನಾವಣಾ ಆಯೋಗಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ಬುದ್ಧಿ ಬರುವಾಗ ವರ್ಷ ಕಳೆದು ಹೋಗಿದೆ. ರ‍್ಯಾಲಿ ನಡೆಸದೇ ಚುನಾವಣೆ ನಡೆದರೆ ಇದನ್ನೊಂದು ಆಶ್ಚರ್ಯಕರ ಸಂಗತಿ ಅಥವಾ ದೊಡ್ಡ ಸಾಧನೆ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಚುನಾವಣೆಗಳು ನಿಜವಾಗಿಯೂ ನಡೆಯಬೇಕಾಗಿರುವುದೇ ಹಾಗೆ. ಅಷ್ಟಕ್ಕೂ ರ‍್ಯಾಲಿಗಳಿಂದ ಆಗಬೇಕಾಗಿರುವುದೇನು? ಕೇವಲ ಒಣ ಭಾಷಣಗಳು, ಎಂದೂ ಈಡೇರಿಸಲಾಗದ ಭರವಸೆಗಳು, ಪರಸ್ಪರ ಆರೋಪ, ಪ್ರತ್ಯಾರೋಪಗಳು ಮತ್ತು ಒಂದಿಷ್ಟು ಕೋಟಿಗಳು ಕೈ ಬದಲಾಯಿಸುತ್ತವೆ ಬಿಟ್ಟರೆ ಅದರಿಂದ ಏನೂ ಆಗುವುದಿಲ್ಲ. ಜನರು ಯಾರಿಗೆ ಮತ ಹಾಕಬೇಕು ಎಂದು ನಮ್ಮ ದೇಶದಲ್ಲಿ ನಿರ್ಧಾರವಾಗುವುದು ಮತದಾನಕ್ಕೆ ಕೊನೆಯ ಹತ್ತು ದಿನಗಳು ಇರುವಾಗ ಮಾತ್ರ. ಆ ಸಮಯದಲ್ಲಿ ಸಿಗುವ ಆಶ್ವಾಸನೆಗಳು, ದೊಡ್ಡ ದೊಡ್ಡ ನಾಯಕರ ಆಗಮನ, ಒಂದಿಷ್ಟು ಆಮಿಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಭಿನ್ನ ಪೋಸ್ಟರ್ಸ್, ವಿಡಿಯೋಗಳೇ ಮತದಾರರ ಮನಸ್ಸನ್ನು ಪ್ರಭಾವಿಸಿ ಯಾರಿಗೆ ಮತ ಹಾಕಬೇಕು ಎಂದು ನಿಶ್ಚಯಿಸುವಂತೆ ಮಾಡುತ್ತವೆ. ಅದು ಬಿಟ್ಟು ಯಾರೂ ಕೂಡ ಕಳೆದ ಐದು ವರ್ಷಗಳಲ್ಲಿ ತಮ್ಮನ್ನು ಆಳಿದ ಸರಕಾರ, ಇದ್ದ ಜನಪ್ರತಿನಿಧಿ ಐದು ವರ್ಷಗಳಲ್ಲಿ ಏನು ಮಾಡಲು ಸಾಧ್ಯವಿತ್ತೋ ಅದನ್ನು ಮಾಡಿದ್ದಾರಾ ಎಂದು ನೋಡಿ ಅದನ್ನು ಮನಸ್ಸಿನಲ್ಲಿ ಇಟ್ಟು ಮತ ಹಾಕುವುದು ನೂರರಲ್ಲಿ ಒಂದೆರಡು ಶೇಕಡಾ ಮಾತ್ರ. ಹೀಗೆ ಆಗುವುದರಿಂದ ರಾಜಕೀಯ ಪಕ್ಷಗಳು ಕೂಡ ಐದು ವರ್ಷ ಏನೂ ಮಾಡದಿದ್ದರೂ ಪರವಾಗಿಲ್ಲ. ಕೊನೆಗೆ ಮೂರು ತಿಂಗಳು ಇರುವಾಗ ಯಾವುದಾದರೂ ಪ್ರೋಫೆಶನಲ್ ಮೀಡಿಯಾ ಹ್ಯಾಂಡಲ್ ಅಂದರೆ ಪ್ರಶಾಂತ್ ಕಿಶೋರ್ ತರಹ ಯಾರಿಗಾದರೂ ಗುತ್ತಿಗೆ ಕೊಟ್ಟು ಅವರಿಂದಲೇ ಎಲ್ಲ ಕೆಲಸ ಮಾಡುವ ಮತ್ತು ಆ ಮೂಲಕ ಅಧಿಕಾರಕ್ಕೆ ಬರುವ ಕೆಲಸ ಮಾಡುತ್ತವೆ. ಅದನ್ನು ಪಶ್ಚಿಮ ಬಂಗಾಲದಲ್ಲಿ ಮಾಡಿ ತೋರಿಸಿದವರು ಮಮತಾ ಬ್ಯಾನರ್ಜಿ. ಆಡಳಿತ ವಿರೋಧಿ ಅಲೆಯ ನಡುವೆ ಪ್ರಶಾಂತ್ ಕಿಶೋರ್ ಹೆಣೆದ ಭರವಸೆಗಳು ಅವರನ್ನು ಉಳಿಸಿವೆ. ಆ ನಿಟ್ಟಿನಲ್ಲಿ ಕೊರೊನಾ ಮಹಾಮಾರಿ ಬಂದು ಚುನಾವಣೆಗೆ ರಾಜಕೀಯ ರ್ಯಾಲಿಗಳು ಅಗತ್ಯ ಇಲ್ಲ ಎಂದು ತೋರಿಸಿಕೊಟ್ಟಿವೆ. ಅದಕ್ಕಿಂತ ಹೆಚ್ಚಾಗಿ ಚುನಾವಣಾ ಆಯೋಗ ಅದನ್ನು ಒಪ್ಪಿಕೊಂಡಿದೆ. ಅದು ಸಮಾಧಾನಕರ ಸಂಗತಿ. ಅದು ಬಿಟ್ಟು ಟಿವಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಪದೇ ಪದೇ ಹೇಳುತ್ತಾ ಬರುವ ನಾಯಕರು ಅದೇ ದಿನ ಸಂಜೆ ಸಾವಿರಾರು ಜನರನ್ನು ಸೇರಿಸಿಕೊಂಡು ರ್ಯಾಲಿ ಮಾಡುವುದು ನಡೆಯುತ್ತಲೇ ಇತ್ತು. ಅದು ಈ ಬಾರಿ ಆಗದೇ ಇರಲಿ ಎನ್ನುವುದೇ ಹಾರೈಕೆ.

ಇನ್ನು ಚುನಾವಣೆಗೆ ಹೆಚ್ಚು ಕಡಿಮೆ ಒಂದು ವರ್ಷ ಇರುವ ಈ ಹಂತದಲ್ಲಿ ಭಾರತೀಯ ಜನತಾ ಪಾರ್ಟಿಯ ಶಾಸಕರು ಎಷ್ಟು ಸಂಯಮದಿಂದ ಇರುತ್ತಾರೋ ಅಷ್ಟು ಒಳ್ಳೆಯದು. ಈ ರೇಣುಕಾಚಾರ್ಯನಂತವರು ಮತ್ತೆ ಮತ್ತೆ ತಮಗೆ ಸಚಿವ ಸ್ಥಾನ ಸಿಗಬೇಕು ಎಂದು ಮಾಧ್ಯಮಗಳಲ್ಲಿ ಹೇಳುತ್ತಾ ಬರುವುದು ಮಾತ್ರವಲ್ಲ, ತಮ್ಮದೇ ಸರಕಾರದ ಹಿರಿಯ ಸಚಿವರ ವಿಷಯದಲ್ಲಿ ಲೂಸ್ ಕಮೆಂಟ್ ಮಾಡುತ್ತಾ ಇರುವುದು ಇವತ್ತಲ್ಲ ನಾಳೆ ಬಿಜೆಪಿಗೆ ಬಿಸಿತುಪ್ಪವಾಗಲಿದೆ. ಅವರು ಹಾಗೆ ಹೇಳುವುದರ ಹಿಂದೆ ಅವರದ್ದೇ ಪಕ್ಷದ ಯಾರದ್ದಾದರೂ ಕುಮ್ಮಕ್ಕು ಇರಬಹುದು. ಆದರೆ ಅದು ಪಕ್ಷಕ್ಕೆ ದುಬಾರಿಯಾಗಲಿದೆ. ಇನ್ನು 150 ಸೀಟ್ ಸಿಗುತ್ತದೆ ಎಂದು ಹೇಳುತ್ತಾ ಬರುತ್ತಿರುವ ಬಿಜೆಪಿ ಮುಖಂಡರು ಹೀಗೆ ಎಡಬಿಡಂಗಿಗಳಾಗಿರುವ ಯಾರ್ಯಾರಿಂದಲೋ ಮಾತನಾಡಿಸಿದರೆ ಕೊನೆಗೆ ಆಗುವ ಡ್ಯಾಮೇಜ್ ರಿಕವರಿ ಮಾಡಲು ಆಗುವುದಿಲ್ಲ. ಸಚಿವ ಸಂಪುಟ ಆಗಾಗ ಪುನರ್ ರಚನೆ ಮಾಡುತ್ತಾ ಕುಳಿತರೆ ಅದರಿಂದ ಇವರಿಗೆ ಅಧಿಕಾರ ನಡೆಸಲು ಬರುವುದಿಲ್ಲ ಎಂದು ಜನರೇ ತೀರ್ಮಾನ ಮಾಡಿಬಿಡುತ್ತಾರೆ. ಇನ್ನು ಆಡಳಿತ ಪಕ್ಷದಲ್ಲಿ ಇರುವಾಗ ಆ ಪಕ್ಷದ ಪ್ರತಿಯೊಬ್ಬ ಶಾಸಕನಿಗೂ ಸಚಿವನಾಗುವ ಆಸೆ ಇರುತ್ತದೆ. ಹಾಗೆಂದು ಎಲ್ಲರನ್ನು ಮಾಡಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಎರಡು ಸಿಎಂ ಬಿಜೆಪಿ ಆಡಳಿತದಲ್ಲಿ ಬಂದಾಗಿದೆ. ಬಸ್ಸು ಬೊಮ್ಮಾಯಿ ಬಂದಾಗಲೇ ಇವರು ಕೆಲವೇ ತಿಂಗಳಲ್ಲಿ ಬದಲಾಗುತ್ತಾರೆ ಎಂದು ಅವರದ್ದೇ ಪಕ್ಷದ ಶಾಸಕರಲ್ಲಿ ಕೆಲವರು ಹೇಳುತ್ತಾ ಬರುತ್ತಿದ್ದರು. ಅದಕ್ಕೆ ಸರಿಯಾಗಿ ತಮಗೆ ಕಾಲು ನೋವು ಇರುವುದು ಮತ್ತು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದನ್ನು ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. ಅವರು ಚಿಕಿತ್ಸೆ ಪಡೆಯಲು ಅಮೇರಿಕಾಕ್ಕೆ ಹೋಗುತ್ತಾರೆ ಎಂದು ಕೂಡ ಹೇಳಲಾಗಿತ್ತು. ಈಗ ಅವರು ಬದಲಾಗಲ್ಲ. ಬೇರೆ ಎಲ್ಲರೂ ಬದಲಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ಸಂಕ್ರಾತಿಯಂದು ಸಚಿವ ಸಂಪುಟ ಬದಲಾವಣೆ ಆಗುತ್ತದೆ ಎಂದು ಆಸೆ ಹೊತ್ತುಕೊಂಡವರು ಈಗ ಶಿವರಾತ್ರಿಗೆ ಅದನ್ನು ಪೋಸ್ಟ್ ಪೋನ್ ಮಾಡಿದ್ದಾರೆ. ಆಗಲೂ ಆಗದಿದ್ದರೆ ಯುಗಾದಿ. ಅಲ್ಲಿಯ ತನಕ ರೇಣು ಬಾಯಿ ಮುಚ್ಚಿ ಕುಳಿತರೆ ಓಕೆ. ಬಾಯಿ ಬಿಟ್ಟಷ್ಟು ಬಿಜೆಪಿ ಗೋಡೆಯ ಒಂದೊಂದೆ ಇಟ್ಟಿಗೆ ಜಾರಿದಂತೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search