• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಲೇಡಿಹಿಲ್ ಹೆಸರು ಕಾಲಗರ್ಭದಲ್ಲಿ ಕರಗಿ ಹೋಗಿ ನಾರಾಯಣ ಗುರು ವೃತ್ತ ಶಾಶ್ವತವಾಗಲಿದೆ!

Hanumantha Kamath Posted On February 1, 2022
0


0
Shares
  • Share On Facebook
  • Tweet It

ಮಂಗಳೂರಿನ ಲೇಡಿಹಿಲ್ ನಲ್ಲಿರುವ ವೃತ್ತವೊಂದಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಬರೆದು ಬಿರುವೆರ್ ಕುಡ್ಲ ಹಾಗೂ ಬಜರಂಗದಳ ಎರಡೂ ಸಂಘಟನೆಯವರು ಬೋರ್ಡ್ ಹಾಕಿದ್ದಾರೆ. ಹಾಗಂತ ಬೋರ್ಡ್ ಬಂದ ಕೂಡಲೇ ಅದು ಅಧಿಕೃತ ಹೆಸರು ಎಂದು ಆಗುವುದಿಲ್ಲ. ಆದರೆ ಅದೇ ಹೆಸರನ್ನು ದಶಕಗಳ ತನಕ ಜನರು ಉಲ್ಲೇಖಿಸುತ್ತಾ ಹೋದರೆ ನಂತರ ಅದೇ ಹೆಸರು ಶಾಶ್ವತವಾಗಿ ಹೋಗುತ್ತದೆ. ಅದರ ಬದಲು ಆ ಹೆಸರನ್ನು ಸರಕಾರಿ ದಾಖಲೆಗಳಲ್ಲಿ ಒಮ್ಮೆ ನೋಟಿಫೈ ಆದರೆ ನಂತರ ಅದು ತಾಂತ್ರಿಕವಾಗಿಯೂ ಶಾಶ್ವತವಾಗಿ ಹೋಗುತ್ತದೆ. ಇಲ್ಲದಿದ್ದರೆ ಲೇಡಿಹಿಲ್ ಎನ್ನುವ ಹೆಸರು ಹೇಗೆ ಈಗ ಹೆಚ್ಚು ಚಾಲ್ತಿಯಲ್ಲಿ ಇದೆಯೋ ಅದರಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಅಲ್ಲಿನ ಬೋರ್ಡಿನಿಂದಲಾದರೂ ಜನಮಾನಸದಲ್ಲಿ ಉಳಿಯಲಿದೆ. ಹಿಂದೆ ಆ ಪ್ರದೇಶ ಬೋಳುಗುಡ್ಡೆಯಾಗಿತ್ತು. ಬ್ರಿಟಿಷರ ಕಾಲದಲ್ಲಿ ಅಲ್ಲೊಬ್ಬಳು ಮಹಿಳೆ ವಾಸವಾಗಿದ್ದಳು ಎಂದು ಹೇಳಲಾಗುತ್ತಿದೆ. ಆಕೆ ಗುಡ್ಡದಂತಹ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಕಾರಣ ಕಾಲಕ್ರಮೇಣ ಅವಳನ್ನು ಲೇಡಿಹಿಲ್ ಎಂದು ಜನ ಗುರುತಿಸಲಾರಂಭಿಸಿದರು. ಆದರೆ ಈಗಲೂ ಅದೇ ಹೆಸರು ಕರೆಯುವ ಅವಶ್ಯಕತೆ ಇಲ್ಲ. ಹಾಗೆಂದು ತಕ್ಷಣ ಬೋರ್ಡ್ ಹಾಕಿದ ಕೂಡಲೇ ಆ ಹೆಸರು ಬದಲಾಗುವುದಿಲ್ಲ. ಹೆಸರು ಇಡುವ ಪ್ರಕ್ರಿಯೆಗೆ ಬೇರೆಯದ್ದೇ ವಿಧಾನಗಳಿವೆ. ಮೊದಲಿಗೆ ಈ ಬಗ್ಗೆ ಮೇಯರ್ ಅಥವಾ ಪಾಲಿಕೆ ಕಮೀಷನರ್ ಅವರಿಗೆ ಮನವಿ ಕೊಡಬೇಕು. ಆ ನಂತರ ಅದನ್ನು ಯಾರಾದರೂ ಒಬ್ಬರು ಮನಪಾ ಸದಸ್ಯರು ಅದನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಇಡಬೇಕಾಗುತ್ತದೆ. ಅಲ್ಲಿ ಆ ಹೆಸರಿನ ಮತ್ತು ಎಲ್ಲಿ ಇಡಬೇಕು ಎನ್ನುವುದರ ಬಗ್ಗೆ ಚರ್ಚೆಯಾಗುತ್ತದೆ. ಅದನ್ನು ಎಲ್ಲಾ ಸದಸ್ಯರು ಒಪ್ಪಿದ ಬಳಿಕ ಸ್ಥಳೀಯ ಜನಪ್ರಿಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಯಲ್ಲಿ ಅದರ ಜಾಹೀರಾತನ್ನು ನೀಡಲಾಗುತ್ತದೆ. ಯಾರಿಗಾದರೂ ಈ ಬಗ್ಗೆ ಆಕ್ಷೇಪಗಳಿದ್ದರೆ ಅದರ ಸಕಾರಣಗಳನ್ನು ಲಿಖಿತವಾಗಿ ಬರೆದು ನೀಡಬೇಕು ಎಂದು ತಿಳಿಸಲಾಗುತ್ತದೆ. ಅಲ್ಲಿ ಯಾವುದೇ ರೀತಿಯ ಆಕ್ಷೇಪಗಳು ಬರದೇ ಇದ್ದರೆ ಆ ಪ್ರಪೋಸಲ್ಲನ್ನು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಆ ಇಲಾಖೆಯ ಕಾರ್ಯದರ್ಶಿ ಈ ಹೆಸರನ್ನು ಅಂತಿಮಗೊಳಿಸುವ ಮೊದಲು ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಕಮೀಷನರ್ ಅಥವಾ ಪೊಲೀಸ್ ವರಿಷ್ಟಾಧಿಕಾರಿಗಳ ಅಭಿಪ್ರಾಯ ಕೇಳುತ್ತಾರೆ. ಅಭಿಪ್ರಾಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಷರಾ ಬರೆದರೆ ಆ ಹೆಸರನ್ನು ಸರಕಾರಿ ದಾಖಲೆಗಳಲ್ಲಿ ನಮೂದಿಸಲಾಗುತ್ತದೆ. ಹೀಗೆ ಪ್ರಕ್ರಿಯೆ ಇದೆ. ಇದರ ನಂತರ ಯಾರಾದರೂ ನ್ಯಾಯಾಲಯಕ್ಕೆ ಹೋದರೂ ಆ ಪ್ರಕರಣ ನಿಲ್ಲುವುದಿಲ್ಲ. ಈಗ ಬಹುತೇಕ ಎಲ್ಲ ಸರಕಾರಿ ಪ್ರಕ್ರಿಯೆ ಮುಗಿದು ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗ ಲೇಡಿಹಿಲ್ ಪ್ರದೇಶದಲ್ಲಿರುವ ಆ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇಡಲು ಯಾವುದೇ ತೊಂದರೆ ಇಲ್ಲ ಎಂದು ಡಿಸಿ, ಪೊಲೀಸ್ ಕಮೀಷನರ್ ಬರೆದು ಕೊಟ್ಟರೆ ಮುಗಿಯಿತು. ಹೆಚ್ಚೆಂದರೆ ಒಂದು ತಿಂಗಳೊಳಗೆ ಹೆಸರನ್ನು ಅಧಿಕೃತವಾಗಿ ಇಡುವ ಸಮಾರಂಭವನ್ನು ಹಮ್ಮಿಕೊಳ್ಳಬಹುದು.

ಅದು ಬಿಟ್ಟು ಯಾವುದೇ ಸಂಘಟನೆಯವರು ಬೋರ್ಡ್ ಹಾಕಿದ ಕೂಡಲೇ ಅದು ಆಗುವುದಿಲ್ಲ. ಕಳೆದ ಬಾರಿ ನಂತೂರು ಸರ್ಕಲ್ ಗೆ ಕನ್ನಡ ರಕ್ಷಣಾ ವೇದಿಕೆಯವರು ಕಯ್ಯಾರ ಕಿಂಣ್ಣಣ್ಣ ರೈ ವೃತ್ತ ಎಂದು ಬರೆದು ಬೋರ್ಡ್ ಹಾಕಿದರು. ಆದರೆ ಅದು ಅಧಿಕೃತ ಅಲ್ಲ.  ಆದರೆ ಒಂದು ಸಂಚಲನ ಮಾತ್ರ ಖಂಡಿತ ಸಾಧ್ಯವಿದೆ. ಇಲ್ಲಿಯ ತನಕ ಲೇಡಿಹಿಲ್ ನಲ್ಲಿರುವ ಆ ವೃತ್ತವನ್ನು ದೂರದಿಂದ ನೋಡಿದರೆ ಬೋರ್ ಹೊಡೆಯುತ್ತಿತ್ತು. ಈಗ ಸುತ್ತಲೂ ಬೋರ್ಡ್ ಗಳೇ ರಾರಾಜಿಸುತ್ತಿವೆ. ಹಳದಿ ಧ್ವಜ, ಪತಾಕೆಗಳ ನಡುವೆ ಬ್ರಹ್ಮಶ್ರೀಗಳ ಮುಖವಿರುವ ಫೋಟೋಗಳು ಚೆನ್ನಾಗಿ ಕಾಣುತ್ತವೆ. ಇನ್ನು ಮುಂದೆ ಜನರೂ ಅದನ್ನು ನಾರಾಯಣ ಗುರು ಸರ್ಕಲ್ ಎಂದು ಬಾಯಿ ಮಾತಿನಲ್ಲಿ ಕರೆಯಲು ಶುರು ಮಾಡಬಹುದು. ಈಗ ನೋಡಿ, ಅಲ್ಲಿಯೇ ಪಕ್ಕದಲ್ಲಿರುವ ಶಾಲೆಯನ್ನು ಲೇಡಿಹಿಲ್ ಶಾಲೆ ಎನ್ನುತ್ತಾರೆ. ಇನ್ನೊಂದನ್ನು ಲೇಡಿಹಿಲ್ ಚರ್ಚ್ ಎನ್ನುತ್ತಾರೆ. ಆದರೆ ಅದು ಪೊಂಪೈ ಚರ್ಚ್ ಆಗಿದೆ. ಈ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ನಲ್ಲಿರುವ ವೃತ್ತಕ್ಕೆ ಕಾಂಗ್ರೆಸ್ ಆಕ್ಷೇಪ ಎತ್ತದೇ ಇದ್ರೆ ಇದು ಯಾವಾಗಲೂ ಆಗುತ್ತಿತ್ತು. ಆದರೆ ಈ ಹೆಸರನ್ನು ಭಾರತೀಯ ಜನತಾ ಪಾರ್ಟಿಯ ಪಾಲಿಕೆ ಮತ್ತು ಶಾಸಕರು ಇಡಲು ಸಹಕರಿಸಿದರೆ ಆ ಕ್ರೆಡಿಟ್ ಅವರಿಗೆ ಹೋಗುತ್ತೆ ಎಂದು ಹೆದರಿದ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಒಂದು ವೇಳೆ ಕ್ರೆಡಿಟ್ ಬಿಜೆಪಿಗೆ ಹೋಗುತ್ತೆ ಎಂದು ಆತಂಕ ಇದ್ದಿದ್ದರೆ ಏಳು ವರ್ಷಗಳ ಹಿಂದೆ ಬಿರುವೆರ್ ಕುಡ್ಲ ಸಂಘಟನೆಯವರು ಮನವಿ ಕೊಟ್ಟ ಕೂಡಲೇ ಆಗಿನ ಕಾಂಗ್ರೆಸ್ ಶಾಸಕರೊಬ್ಬರು ಮಾಡಬಹುದಿತ್ತಲ್ಲ. ಆದರೆ ಮಾಡಿಲ್ಲ. ಕಾರಣ ಕ್ರಿಶ್ಚಿಯನ್ನ್ ಸಮುದಾಯಕ್ಕೆ ಲೇಡಿಹಿಲ್ ಹೆಸರು ಹೃದಯಕ್ಕೆ ಹತ್ತಿರ, ಆದ್ದರಿಂದ ನಾರಾಯಣ ಗುರುಗಳ ಹೆಸರು ಇಟ್ಟರೆ ತಮ್ಮ ವೋಟ್ ಬ್ಯಾಂಕಿಗೆ ತೊಂದರೆ ಆಗಬಹುದು ಎಂದು ಆತಂಕದಿಂದ ಬಿರುವೆರ್ ಕುಡ್ಲಕ್ಕೆ ಸಹಕರಿಸಲೇ ಇಲ್ಲ. ಈಗ ಶಾಸಕ ವೇದವ್ಯಾಸ ಕಾಮತ್ ಅವರು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ರಾಜ್ಯ ಸರಕಾರದಿಂದ ಈ ಹೆಸರು ಅಂತಿಮಗೊಳ್ಳುವಂತೆ ಮಾಡಿದ್ದಾರೆ. ಅಲ್ಲಿಗೆ ಈ ಬೋರ್ಡ್ ಗಳು ಹೆಸರಿನೊಂದಿಗೆ ಶಾಶ್ವತವಾಗಲಿವೆ!

0
Shares
  • Share On Facebook
  • Tweet It




Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
Hanumantha Kamath January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Hanumantha Kamath January 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
  • Popular Posts

    • 1
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • 2
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 3
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!

  • Privacy Policy
  • Contact
© Tulunadu Infomedia.

Press enter/return to begin your search