• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹಿಜಾಬ್ ಗಲಾಟೆಯಿಂದ ಇಲ್ಲಿ ಕಸಬ್, ಲಾಡೆನ್ ಜನ್ಮತಾಳದಿರಲಿ!!

Hanumantha Kamath Posted On February 12, 2022
0


0
Shares
  • Share On Facebook
  • Tweet It

ರಾಜ್ಯದ ಉಚ್ಚನ್ಯಾಯಾಲಯದ ತ್ರಿಸದಸ್ಯ ಪೀಠ ತಾತ್ಕಾಲಿಕ ಆದೇಶವನ್ನು ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳನ್ನು ತೊಡುವಂತಿಲ್ಲ ಎನ್ನುವ ಅರ್ಥದ ಮಾತುಗಳನ್ನು ಹೇಳಿದೆ. ಅಷ್ಟೇ ಅಲ್ಲ, ಶಾಲಾ, ಕಾಲೇಜುಗಳನ್ನು ತಕ್ಷಣಕ್ಕೆ ಆರಂಭಿಸಬೇಕು ಎಂದು ಕೂಡ ಹೇಳಿದೆ. ಅಲ್ಲಿಗೆ ಸೋಮವಾರದ ಮಧ್ಯಾಹ್ನಕ್ಕೆ ವಿಚಾರಣೆ ಮುಂದುವರೆಯುವುದರಿಂದ ಹಿಜಾಬ್-ಕೇಸರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುವುದಿಲ್ಲ. ಕೋರ್ಟಿನ ಆದೇಶ ಏನೇ ಬರಲಿ, ನಾವು ಹಿಜಾಬ್ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೆಲವು ಮೂಲಭೂತವಾದಿ ಸಂಘಟನೆಗಳು ಘೋಷಿಸಿವೆ. ಒಂದು ವೇಳೆ ನ್ಯಾಯಾಲಯ ಕಟ್ಟುನಿಟ್ಟಾಗಿ ಯಾವುದೇ ಧಾರ್ಮಿಕ ವಸ್ತ್ರಕ್ಕೆ ಅನುಮತಿ ಇಲ್ಲ ಎನ್ನುವುದನ್ನೇ ಅಂತಿಮ ಆದೇಶ ಎನ್ನುವುದನ್ನು ಹೇಳಿಬಿಟ್ಟರೆ ರಾಜ್ಯದಲ್ಲಿ ಅನಾವಶ್ಯಕ ಗಲಾಟೆಗಳಿಗೆ ಇದು ಕಾರಣವಾಗಬಹುದು. ಈ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಕೂಡ ಏರಬಹುದು. ಅಲ್ಲಿ ವಿಚಾರಣೆ ನಡೆದರೆ ಏನಾಗುತ್ತದೆ? ಅದು ಬೇರೆ ಬೇರೆ ರಾಜ್ಯದಲ್ಲಿ ಈ ವಿಷಯದಲ್ಲಿ ಆಯಾ ಸರಕಾರಗಳು ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡುತ್ತದೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಒಂದು ವಿವಾದವೇ ಅಲ್ಲ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ. ಹಾಗಾದರೆ ಕರ್ನಾಟಕದಲ್ಲಿ ಯಾಕೆ ವಿವಾದ ಆಯಿತು ಎಂದು ಸರಕಾರದ ಪರವಾಗಿ ವಾದಿಸುವ ವಕೀಲರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೇಳಬಹುದು. ಕರ್ನಾಟಕ ರಾಜ್ಯ ಸರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಪಾಲಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಅದನ್ನು ಪಾಲಿಸಬೇಕು ಎನ್ನುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ವಕೀಲರು ಹೇಳಬಹುದು. ಮೂಲಭೂತವಾದಿಗಳ ಪರವಾಗಿ ಇರುವ ವಕೀಲರು ಬೇರೆಯದ್ದೇ ರಾಗ ಎಳೆಯಬಹುದು. ಅಂತಿಮವಾಗಿ ಅದು ರಾಜ್ಯ ಸರಕಾರದ ವಿಷಯ. ಅವರೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿದರೆ ಅದು ಬೊಮ್ಮಾಯಿ ಅಂಗಳಕ್ಕೆ ಬಂದು ಬೀಳುತ್ತದೆ. ಈ ವಿಷಯದಲ್ಲಿ ಸರಕಾರದ ನಿಲುವು ಅಚಲವಾಗಿದೆ. ಯಾವುದೇ ಕಾರಣಕ್ಕೂ ಸಮವಸ್ತ್ರ ಬಿಟ್ಟು ಬೇರೆ ವಸ್ತ್ರ ಇಲ್ಲ. ಅದನ್ನು ಯಥಾಪ್ರಕಾರ ಸಿದ್ದು ವಿರೋಧಿಸುತ್ತಾರೆ. ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ಕುಳಿತು ಗಾಳಿ ಯಾವ ಕಡೆ ಜೋರಾಗಿ ಬೀಸುತ್ತಿದೆ ಎಂದು ನೋಡುತ್ತಿದ್ದಾರೆ. ಎಸ್ ಡಿಪಿಐ ತರಹದ ಪಕ್ಷಗಳು ತಮ್ಮ ಅಸ್ತಿತ್ವವನ್ನು ತೋರಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಇಲ್ಲ ಎಂದು ಗಾಳಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಮಕ್ಕಳು ಮಾತ್ರ ಮನಸ್ಸು ಕೊಟ್ಟು ಓದಲಾಗದೇ ಪರೀಕ್ಷೆಯಲ್ಲಿ ಹೇಗೆ ಉತ್ತಮ ಅಂಕಗಳನ್ನು ತೆಗೆಯುವುದು ಎಂದು ಗೊಂದಲಕ್ಕೆ ಬಿದ್ದಿದ್ದಾರೆ.

ಇದರೊಂದಿಗೆ ಇಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ಒಂದನೇಯದಾಗಿ ಉಡುಪಿಯಲ್ಲಿ ಆರಂಭವಾದ ಈ ವಿವಾದಕ್ಕೆ ಆರಂಭಿಕ ತೈಲ ಸುರಿದವರು ಯಾರು? ಯಾವುದಾದರೂ ಇಸ್ಲಾಂ ಪರ ಸಂಘಟನೆ ಇರಬಹುದು. ನೀವು ಹಿಜಾಬ್ ಧರಿಸಿದರೆ ನಮ್ಮವರು ಕೇಸರಿ ಧರಿಸುತ್ತಾರೆ ಎಂದು ಹೇಳಿದ್ದು ಶಾಸಕ ರಘುಪತಿ ಭಟ್. ಅದು ಸಹಜವಾಗಿ ಬಂದ ಪ್ರತಿಕ್ರಿಯೆಯಾ, ರಾಜಕೀಯದ ಅನುಭವದಿಂದ ಬಂದ ಅಭಿಪ್ರಾಯನಾ ಅಥವಾ ಈ ಘಟನೆ ದೊಡ್ಡದಾಗಲಿ ಎಂದು ಅವರು ಬಯಸುತ್ತಿದ್ದರಾ? ಈ ಮೂರರಲ್ಲಿ ಒಂದು ವಿಷಯ ಸತ್ಯ ಇರುತ್ತದೆ. ಎರಡನೇಯದಾಗಿ ಈ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿದ್ದು. ಈ ವಿಷಯದಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿದ್ದ ಮಾತೊಂದು ಸರಿ ಕಾಣುತ್ತದೆ. ಸರಕಾರಿ ಕಾಲೇಜುಗಳಲ್ಲಿ ಫೀಸ್ ಸ್ವಲ್ಪ ಏರಿಸಿದರೆ ಪ್ರತಿಭಟನೆ ಮಾಡುತ್ತಾರೆ. ಇದ್ದ ಕನಿಷ್ಟ ಫೀಸ್ ಅನ್ನೇ ರಿಯಾಯಿತಿ ಮಾಡಿ ಎನ್ನುತ್ತಾರೆ. ಹಾಗಿದ್ದ ಮೇಲೆ ಹೈಕೋರ್ಟ್ ಗೆ ಹೋಗಿ ಪ್ರಕರಣ ದಾಖಲಿಸುವುದು ಎಂದರೆ ಏನರ್ಥ? ಈ ವಿಷಯ ಸರಿ, ನಾವು ಜನಪರವಾಗಿರುವ ಅನೇಕ ಹೋರಾಟಗಳನ್ನು ನೋಡುವಾಗ ಕೆಲವು ವಿಷಯಗಳು ಹೈಕೋರ್ಟಿಗೆ ಹೋದರೆ ಜನರ ಪರವಾಗಿ ಆದೇಶ ಬರಬಹುದು ಎಂದು ಅನಿಸುತ್ತದೆ. ಆದರೆ ಹೈಕೋರ್ಟಿಗೆ ಹೋಗುವುದು ಎಂದರೆ ಮಣ್ಣಗುಡ್ಡೆಯಿಂದ ಸ್ಟೇಟ್ ಬ್ಯಾಂಕಿಗೆ ಬಸ್ಸಿನಲ್ಲಿ ಟಿಕೆಟ್ ತೆಗೆದುಕೊಂಡಷ್ಟು ಸುಲಭವಲ್ಲ. ವಕೀಲರನ್ನು ಹಿಡಿದು ಪ್ರಕರಣ ದಾಖಲಿಸುವುದು ಸಾಮಾನ್ಯರಿಗೆ ಸಾಧ್ಯವೂ ಇಲ್ಲ. ಇನ್ನು ಈ ಪ್ರಕರಣದಲ್ಲಿ ಯಾರಾದರೂ ಆ ಆರು ಹುಡುಗಿಯರಿಗೆ ಬೆಂಬಲ ಕೊಟ್ಟು ನ್ಯಾಯಾಲಯದಲ್ಲಿ ಈ ಕೇಸ್ ದಾಖಲಿಸಲು ಆರ್ಥಿಕ ಶಕ್ತಿ ತುಂಬಿರುವುದು ನಿಜ. ಹಾಗಿದ್ದ ಮೇಲೆ ಈ ಪ್ರಕರಣ ಅಷ್ಟು ಸುಲಭವಾಗಿ ನಿಲ್ಲುವ ಯಾವ ಲಕ್ಷಣಗಳು ಕೂಡ ಕಾಣುವುದಿಲ್ಲ.

ಇನ್ನು ಮಲಾಲಾನಂತವರು ಹದಿನೈದು ವರ್ಷಗಳ ಹಿಂದೆ ಹಿಜಾಬಿಗೆ ವಿರೋಧವಾಗಿದ್ದವರು, ಈಗ ಅಚಾನಕ್ ಆಗಿ ಪರವಾಗಿದ್ದಾರೆ. ಆಕೆಯ ಹೇಳಿಕೆಗೂ ಈಗ “ಮೌಲ್ಯ” ಬಂದಿರಬಹುದು. ಅದೇನೆ ಇದ್ದರೂ ಮುಂದಿನ ತಿಂಗಳಿನಿಂದ ಪರೀಕ್ಷೆಯ ಫೀವರ್ ಶುರುವಾಗುತ್ತದೆ. ಆದರೆ ಈ ವಸ್ತ್ರ ವಿವಾದ ಮುಗಿಯದೇ ಇರುವಾಗ ಪರೀಕ್ಷೆಯನ್ನು ಈ ಮಕ್ಕಳು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕು. ವಿದ್ಯಾರ್ಥಿಗಳ ಈ ಗಲಾಟೆಯ ನಡುವೆ ಭವಿಷ್ಯದ ಒಬ್ಬ ಶಾಸಕ ಹುಟ್ಟಿಕೊಳ್ಳುತ್ತಾನೆ, ಭವಿಷ್ಯದ ಒಬ್ಬ ಸಂಸದ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಕನಿಷ್ಟ ಪಾಲಿಕೆಯಿಂದ ಗ್ರಾಮ ಪಂಚಾಯತ್ ತನಕದ ಭವಿಷ್ಯದ ಜನಪ್ರತಿನಿಧಿಗಳು ಹುಟ್ಟಿಕೊಳ್ಳುತ್ತಾರೆ. ಒಟ್ಟಿನಲ್ಲಿ ಕಾಲೇಜುಗಳ ಆವರಣ ನಾಯಕತ್ವದ ಪ್ರಾಕ್ಟಿಕಲ್ ಪರೀಕ್ಷೆಗೆ ವೇದಿಕೆ ಆಗುತ್ತದೆ. ಜನಪ್ರತಿನಿಧಿಯಾಗಿ ಯಾರೇ ಹುಟ್ಟಿಕೊಳ್ಳಲಿ ತೊಂದರೆ ಇಲ್ಲ, ಆದರೆ ಒಬ್ಬ ಕಸಬ್, ಒಬ್ಬ ಲಾಡೆನ್ ಹುಟ್ಟಿಕೊಳ್ಳದಿರಲಿ ಎನ್ನುವುದು ಪ್ರಾರ್ಥನೆ.!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search