ಇವತ್ತು ಕುಂಕುಮ ತೆಗೆಯಿರಿ ಎಂದವರು ನಾಳೆ ಅವರಿಗೂ ಕುರಾನ್ ಓದಿಸಿ ಎನ್ನಬಹುದು!!

ಹಿಜಾಬ್ ಇಸ್ಲಾಂನಲ್ಲಿ ಇಲ್ಲ ಎಂದು ಹೇಳಿದರೆ ಖಂಡಿತ ಇದೆ ಎನ್ನುವವರು ಇದ್ದಾರೆ. ಪರೀಕ್ಷೆಗಿಂತ ಹಿಜಾಬ್ ಮುಖ್ಯ ಎಂದು ಪರೀಕ್ಷೆಯನ್ನು ಬರೆಯಲು ಮನಸ್ಸು ಇಲ್ಲದವರು ಹಾಗೆ ಹೇಳಿ ತಪ್ಪಿಸಿಕೊಂಡಿದ್ದಾರೆ. ಬಹುಶ: ಈ ಪ್ರಕರಣ ತಣ್ಣಗಾದ ನಂತರ ರಾಜ್ಯ ಸರಕಾರವೇ ಪರೀಕ್ಷೆ ಬರೆಯದವರಿಗೆ ಏನಾದರೂ ಪರಿಹಾರ ನೀಡಲಿದೆ ಎನ್ನುವ ಧಾಷ್ಟ್ಯತನ ಅಂತವರಲ್ಲಿ ಅಡಗಿದೆ. ನ್ಯಾಯಾಲಯದಲ್ಲಿ ಅಂತಿಮ ಆದೇಶ ಏನೇ ಬಂದರೂ ನಾವು ಹಿಜಾಬ್ ತೆಗೆದು ಕ್ಲಾಸಿನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹಟ ಹಿಡಿಯುವವರು ಈಗ ಬೇರೆಯದ್ದೇ ವರಾತ ತೆಗೆದಿದ್ದಾರೆ. ಅವರಿಗೆ ಈಗ ಹಿಂದೂ ಹೆಣ್ಣುಮಕ್ಕಳ ಕುಂಕುಮ ಅಥವಾ ಬಿಂದಿಗೆ ಮತ್ತು ಬಳೆಯ ಮೇಲೆ ಕಣ್ಣು ಬಿದ್ದಿದೆ. ಕೊನೆಗೆ ಇದು ಎಲ್ಲಿ ಬಂದು ನಿಲ್ಲುತ್ತದೆ ಎಂದರೆ ನಾವು ಹಿಜಾಬ್ ಧರಿಸಲ್ಲ, ಅವರಿಗೆ ಕುಂಕುಮ, ಬಳೆ, ಹೂ ಹಾಕಬಾರದು ಎಂದು ಹೇಳಿ. ಇಲ್ಲದಿದ್ದರೆ ನಮಗೂ ಹಿಜಾಬ್ ಧರಿಸಲು ಅವಕಾಶ ನೀಡಿ ಎನ್ನುವ ತನಕ ಹಿಜಾಬ್ ಪರ ಇರುವವರು ಈ ವಿಷಯವನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಗ್ಯಾರಂಟಿಯಾಗಿದೆ. ಒಂದು ಕಣ್ಣಿಗೆ ಇನ್ನೊಂದು ಕಣ್ಣು. ಒಂದು ಕೈಗೆ ಇನ್ನೊಂದು ಕೈ. ಇದು ಕರ್ಮಠ ಮುಸ್ಲಿಂ ರಾಷ್ಟ್ರಗಳಲ್ಲಿ ಷರಿಯತ್ ಪ್ರಕಾರ ನಡೆದು ಬಂದಿರುವ ಕ್ರಮ. ಅದೇ ಶೈಲಿಯನ್ನು ಕೆಲವು ಮೂಲಭೂತವಾದಿಗಳು ಇಲ್ಲಿ ಅಳವಡಿಸಲು ಹೊರಟಿದ್ದಾರೆ.
ಅದರಂತೆ ಹಿಜಾಬ್ ಅನ್ನು ಹಿಂದೂಗಳ ಕುಂಕುಮ, ಬಳೆಗೆ ಹೋಲಿಸುತ್ತಿದ್ದಾರೆ. ಇಲ್ಲಿ ಈಗ ವಿವಾದ ಇರುವುದು ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುವುದೇ ವಿನ: ಹಿಜಾಬ್ ವಿಷಯವೇ ಅಲ್ಲ. ಸಮವಸ್ತ್ರದ ಜೊತೆಗೆ ಹಿಜಾಬ್ ಕೂಡ ಧರಿಸುತ್ತೇವೆ ಎಂದು ಕೆಲವರು ಹಟ ಮಾಡುತ್ತಿರುವುದರಿಂದ ಇಲ್ಲಿ ಈಗ ಹಿಜಾಬ್ ಶಬ್ದವೇ ದೊಡ್ಡದಾಗಿ ಕೇಳುತ್ತಿದೆ ವಿನ: ಹಿಜಾಬ್ ಇಲ್ಲಿ ಸೆಕೆಂಡರಿ. ಚರ್ಚೆಯಾಗಬೇಕಿರುವುದು ತರಗತಿಯಲ್ಲಿ ಸಮವಸ್ತ್ರ ಕಡ್ಡಾಯವಾಗಿ ಇರಬೇಕು ಎನ್ನುವುದು ಮಾತ್ರ. ಹಾಗಾದರೆ ಸಮವಸ್ತ್ರದ ಜೊತೆಗೆ ಒಂದು ಬಿಂದಿ ಅಥವಾ ಕುಂಕುಮದ ಬೊಟ್ಟು, ಎರಡೆರಡು ಬಳೆ ಧರಿಸಿದರೆ ಅದರಲ್ಲಿ ಸಮವಸ್ತ್ರವನ್ನು ಉಲ್ಲಂಘನೆ ಮಾಡುವ ವಿಷಯ ಎಲ್ಲಿಂದ ಬಂತು. ಅವರು ಅದನ್ನು ಮಾಡದೇ ಇದ್ದರೆ ನಾವು ಇದನ್ನು ಮಾಡುವುದಿಲ್ಲ ಎನ್ನುವುದು ಯಾವಾಗಲೂ ಸಮಬಲರ ನಡುವೆ ಇರಬೇಕಾದ ನಿಯಮವೇ ಹೊರತು ನಿಮ್ಮನ್ನು ಇಲ್ಲಿ ನಿಲ್ಲಲು ಅವಕಾಶ ನೀಡಿದ ಮಾಲೀಕರಿಗೆ ಮಾಡುವ ಸವಾಲು ಅಲ್ಲ. ಒಂದು ಕ್ಷಣ ಅವರು ಹೇಳಿದ್ದು ಓಕೆ ಎಂದು ನಾವು ಕುಂಕುಮ, ಬಳೆ ಬಿಟ್ಟರೆ ಅವರು ಹಿಜಾಬ್ ಬಿಡುವುದೇ ಹೌದಾದರೆ ಅವರಲ್ಲಿ ಹಿಜಾಬ್ ಎನ್ನುವುದು ಕಡ್ಡಾಯವಾಗಿರದೇ, ಕೇವಲ ವಿವಾದ ಮಾಡಲು ಬಳಸಿದ್ದು ಎನ್ನುವುದು ಸ್ಪಷ್ಟವಾಗುವುದಿಲ್ಲವೇ? ನಾವು ಹಿಜಾಬ್ ಕಳಚಲ್ಲ ಎನ್ನುವವರು ತಮ್ಮನ್ನು ತಾವು ಧರ್ಮ ರಕ್ಷಕರು ಎಂದು ಅಂದುಕೊಂಡಿದ್ದಾರೆ. ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ, ನಾವು ನಮ್ಮ ಸಂಪ್ರದಾಯವನ್ನು ಪಾಲಿಸುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಅವರಲ್ಲಿಯೇ ಅನೇಕರು ಹಿಜಾಬ್ ಧರಿಸದೇ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ.
ನಾವು ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಂಡರೆ ಟೀಚರುಗಳಿಗೆ ಏನು ತೊಂದರೆ ಎಂದು ಕೇಳುವವರಿದ್ದಾರೆ. ಹಾಗಾದರೆ ಸಮವಸ್ತ್ರ ಮಾಡಿದ್ದು ಯಾಕೆ? ಸಮವಸ್ತ್ರದಲ್ಲಿ ಕುಂಕುಮ, ಬಳೆ ಬರುವುದಿಲ್ಲ. ಯಾಕೆಂದರೆ ಅದು ಒಂದು ಹೆಣ್ಣುಮಗಳು ಸನಾತನ ಸಂಸ್ಕೃತಿಯಲ್ಲಿ ಪಾಲಿಸಿಕೊಂಡು ಬಂದಿರುವ ಅಲಂಕಾರ. ಅದಕ್ಕೂ ಸಮವಸ್ತ್ರಕ್ಕೂ ಸಂಬಂಧವಿಲ್ಲ. ಒಂದು ವೇಳೆ ಹೋಲಿಕೆ ಯಾರಾದರೂ ಮಾಡುತ್ತಿದ್ದರೆ ಅಂತವರಿಗೆ ಕುಂಕುಮ ಮತ್ತು ಹಿಜಾಬಿಗೆ ವ್ಯತ್ಯಾಸ ಗೊತ್ತಿಲ್ಲ ಎಂದೇ ಅರ್ಥ. ಅಂತವರು ಟಿಪ್ಪು, ಮೊಗಲರು, ಬಾಬರ್, ಷಹಜಹಾನ್ ಮನಸ್ಥಿತಿಯವರು ಎನ್ನುವುದು ದಿಟ. ಭಾರತದಲ್ಲಿ ಅಂತವರು ಇನ್ನು ಕೂಡ ಇದ್ದಾರೆ ಎನ್ನುವುದೇ ಆಶ್ಚರ್ಯ. ಕುಂಕುಮ, ಬಳೆಯ ವಿರುದ್ಧ ಮಾತನಾಡಿದರೆ ಅಂತವರ ನಾಲಿಗೆ ಸೀಳಿ ಹಾಕುವುದಾಗಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಮಣ್ಣಿನ ಋಣ ಇರುವವರು ಹಿಂದೂಗಳ ಕುಂಕುಮ, ಬಳೆ ಬಗ್ಗೆ ಮಾತನಾಡಲೇಬಾರದು. ಆ ಅರ್ಹತೆ, ಯೋಗ್ಯತೆ ಯಾವ ಹಿಜಾಬ್ ಪರ ಇರುವವರಿಗೂ ಕೊಟ್ಟಿಲ್ಲ. ಬೇಕಾದರೆ ಕೇಸರಿ ಶಾಲು ತರಗತಿಯಲ್ಲಿ ಧರಿಸುವ ಬಗ್ಗೆ ಆಕ್ಷೇಪ ಇದ್ದರೆ ಅದು ಮಾಡಿ. ಯಾಕೆಂದರೆ ಹಿಜಾಬ್ ವಿರುದ್ಧವಾಗಿ ಕೇಸರಿ ಶಾಲು ಚರ್ಚೆಗೆ ಬಂದಿರಬಹುದು. ಅದು ತರಗತಿಯಲ್ಲಿ ಅಗತ್ಯ ಇಲ್ಲ. ಹಿಜಾಬ್ ತೆಗೆದು ಬರುತ್ತೇವೆ, ಕೇಸರಿ ಶಾಲು ತೆಗೆದು ಬರಲು ಹೇಳಿ ಎಂದರೆ ಓಕೆ. ಕುಂಕುಮ, ಬಳೆಯ ವಿಷಯದಲ್ಲಿ ಯಾರೂ ಮಾತನಾಡಲೇಬಾರದು. ಯಾಕೆಂದರೆ ಕುಂಕುಮ ಮತ್ತು ಬಳೆ ಈ ಮಣ್ಣಿನ ಸಂಸ್ಕೃತಿ. ಈ ದೇಶದ ಮೇಲೆ ದಂಡೆತ್ತಿ ಬಂದು ಇಲ್ಲಿಯೇ ಝಂಡಾ ಊರಿ ಮಕ್ಕಳನ್ನು ಸೃಷ್ಟಿಸಿ, ಹಲವರನ್ನು ಬ್ರೇನ್ ವಾಶ್ ಮಾಡಿ, ಮತ್ತಷ್ಟು ಜನರನ್ನು ಹೆದರಿಸಿ, ಇನ್ನಷ್ಟು ಜನರ ಮೇಲೆ ದೌರ್ಜನ್ಯ ಮಾಡಿ ಮತಾಂತರ ಮಾಡಿದರಲ್ಲ, ಅವರ ಆಚಾರ, ವಿಚಾರಗಳಿಗೆ ಇಲ್ಲಿ ಅವಕಾಶ ಕೊಟ್ಟ ಮಾತ್ರಕ್ಕೆ ಅವರು ಹೇಳಿದ ಹಾಗೆ ನಡೆಯಲು ಆಗುವುದಿಲ್ಲ. ಯಾಕೆಂದರೆ ಈ ನೆಲಕ್ಕೆ ತನ್ನದೇ ಆದ ಪರಂಪರೆಯಿದೆ. ಇದನ್ನು ಭವಿಷ್ಯದಲ್ಲಿ ಇಂಡೋನೇಶಿಯಾ ಮಾಡುತ್ತೇವೆ ಎಂದು ಮತಾಂಧರು ಸ್ಕೆಚ್ ಹಾಕುತ್ತಾ ಇರಬಹುದು. ಆದರೆ ನೋಡಿ, 97 ಶೇಕಡಾ ಮುಸ್ಲಿಮರೇ ಇರುವ ಇಂಡೋನೇಶಿಯಾ ಮಾತ್ರ ತನ್ನ ಮೂಲ ಸಂಸ್ಕೃತಿಯನ್ನು ಮರೆಯದೇ ಹಾಗೆ ಜತನದಿಂದ ಇಟ್ಟುಕೊಂಡಿದೆ. ಅದೇ ಕಾರಣದಿಂದ ಎರಡು ಸಾವಿರ ನೋಟಿನ ಮೇಲೆ ಇವತ್ತಿಗೂ ಗಣಪನ ಫೋಟೋ ಇದೆ ಮತ್ತು ಅಮೇರಿಕಾದಲ್ಲಿರುವ ಇಂಡೋನೇಶಿಯಾದ ರಾಯಭಾರ ಕಚೇರಿಯ ಪ್ರವೇಶದಲ್ಲಿಯೇ ಸರಸ್ವತಿಯ ಮೂರ್ತಿ ಇದೆ. ಆ ನೆಲದಲ್ಲಿ ವಾಸಿಸುತ್ತಿರುವ ನಾಗರಿಕರು ತಮ್ಮ ಧರ್ಮ ಬದಲಿಸಿಕೊಂಡಿರಬಹುದು. ಆದರೆ ಅಲ್ಲಿನ ಮೂಲ ಸಂಸ್ಕೃತಿ ಹಿಂದೂ ಧರ್ಮ. ಅದರ ಕುರುಹುಗಳು ಅಲ್ಲಿವೆ ಮತ್ತು ಅದನ್ನು ಅವರು ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಿರುವ ಕೆಲವರಿಗೆ ಹಿಜಾಬ್ ನೆನಪಿದೆ. ಕುಂಕುಮದಿಂದ ತಮ್ಮ ಪೂರ್ವಜರ ಸಂಸ್ಕೃತಿ ಆರಂಭವಾಗಿತ್ತು ಎನ್ನುವುದು ನೆನಪಿಲ್ಲ.!
Leave A Reply