• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೋಲಾರದ ಟವರ್ ಫೋಟೊ ಮುಂಚೆ ನೋಡಿದಾಗ ಪಾಕಿಸ್ತಾನ ಎಂದು ಅನಿಸುತ್ತಿತ್ತು!!

Hanumantha Kamath Posted On March 22, 2022
0


0
Shares
  • Share On Facebook
  • Tweet It

ಕೋಲಾರ ಪಾಕಿಸ್ತಾನದಲ್ಲಿಲ್ಲ. ಆದರೂ ಅಲ್ಲಿರುವ ಒಂದು ಟವರ್ ನಲ್ಲಿ ಕಳೆದ 75 ವರ್ಷಗಳಿಂದ ಒಂದು ಮತಕ್ಕೆ ಸಂಬಂಧಪಟ್ಟ ಧ್ವಜ ಹಾರಾಡುತ್ತಿತ್ತು. ಅದೇ ಮತದವರು ತಮ್ಮ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಬಳಸುವ ಬಣ್ಣದ ಬಟ್ಟೆಯಿಂದಲೇ ಅಥವಾ ಬಣ್ಣದಿಂದಲೇ ಆ ಟವರ್ ಅನ್ನು ಮುಚ್ಚಲಾಗಿತ್ತು. ಆದರೆ ಅಲ್ಲಿನ ಸಂಸದ ಮುನಿಸ್ವಾಮಿಯವರ ಎಚ್ಚರಿಕೆ ಮತ್ತು ಜಿಲ್ಲಾಡಳಿತಕ್ಕೆ ಕೊಟ್ಟ ಮೂರು ದಿನಗಳ ಗಡುವಿನ ಒಳಗೆ ಆ ಮತದವರ ಧ್ವಜವನ್ನು ತೆಗೆಯಲಾಗಿದೆ. ಅಲ್ಲಿ ಈಗ ಭಾರತದ ತ್ರಿವರ್ಣ ಧ್ವಜವನ್ನು ಹಾರಾಡಿಸಲಾಗಿದೆ. ಹಾಗಂತ ಇದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಜಿಲ್ಲಾಡಳಿತ ಅಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿಯೇ ಮತದ ಧ್ವಜ ತೆಗೆದು ದೇಶದ ಧ್ವಜ ಹಾಕಿದೆ. ಈ ಸಂದರ್ಭದಲ್ಲಿ ಪ್ರತಿಭಟಿಸಲು ಬಂದ ಮುಸ್ಲಿಂ ಯುವಕರನ್ನು ಅವರದ್ದೇ ಸಮುದಾಯದ ಕೆಲವರನ್ನು ಬಳಸಿ ಹಿಂದಕ್ಕೆ ಕಳುಹಿಸಲಾಗಿದೆ. ಹಾಗಂತ ವಿವಾದ ಮುಗಿಯಿತು ಎಂದಲ್ಲ. ಇದನ್ನೆಲ್ಲಾ ಮಾಡಿಸಿದ ಸಂಸದ ಮುನಿಸ್ವಾಮಿಯವರಿಗೆ ಜೀವ ಬೆದರಿಕೆಯನ್ನು ಕೆಲವರು ಒಡ್ಡುತ್ತಿದ್ದಾರೆ. ನೀವೆ ಯೋಚಿಸಿ, ಒಂದು ಲೋಕಸಭಾ ಕ್ಷೇತ್ರದ ಸಂಸದರಿಗೆನೆ ಅದೇಗೆ ನಮ್ಮ ಧ್ವಜ ತೆಗೆದೆ ಎಂದು ನೋಡುತ್ತೇವೆ, ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದು ಅನಾಮಧೇಯ ಕರೆಗಳು ಬರುತ್ತವೆ ಎಂದರೆ ಆವತ್ತು ಕಾಶ್ಮೀರದಲ್ಲಿ ಬಡಪಾಯಿ ಹಿಂದೂಗಳ ಪರಿಸ್ಥಿತಿ ಹೇಗಿರಬೇಡಾ. ಸಂಸದರಿಗೆ ಅಗತ್ಯ ಬಿದ್ದರೆ ಗನ್ ಮ್ಯಾನ್ ಕೊಡಬಹುದು ಮತ್ತು ಕರ್ನಾಟಕ ಆಗಿರುವುದರಿಂದ ಅಂತಹ ತೀವ್ರ ಹೆದರಿಕೆ ಕೂಡ ಇರುವುದಿಲ್ಲ. ಆದರೆ ವಿದೇಶದಲ್ಲಿ ಕುಳಿತು ಅಷ್ಟು ಧೈರ್ಯದಿಂದ ಎಚ್ಚರಿಕೆಗಳನ್ನು ಕೊಡುತ್ತಾರಲ್ಲ, ಅವರಿಗೆ ಅದೆಷ್ಟು ಸೊಕ್ಕು ಇದ್ದಿರಬೇಕು. ಈಗ ಏನೋ ಭಾರತೀಯ ಜನತಾ ಪಾರ್ಟಿಯ ಸರಕಾರಕ್ಕೆ ಒಂದಿಷ್ಟು ಉತ್ಸಾಹ ಬಂದಿರುವುದರಿಂದ ತಮ್ಮ ಸನಾತನ ಸಂಸ್ಕೃತಿ ನೆನಪಾಗುತ್ತಿದೆ. ಅದಕ್ಕೆ ಥ್ಯಾಂಕ್ಸ್ ಟು ಕಾಶ್ಮೀರ್ ಫೈಲ್ಸ್. ಆದರೆ ಈ ಹಿಂದಿನ ತನಕ ಕೋಲಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಂಸದರಿಗೆ ಇದು ಕಾಣ್ತಾ ಇರಲಿಲ್ಲವೋ ಎನ್ನುವುದು ಪ್ರಶ್ನೆ. ಯಾಕೆಂದರೆ ನಗರದ ನಡುವಿನಲ್ಲಿರುವ ಟವರ್ ಯಾರದ್ದೋ ಪಿತ್ರಾರ್ಜಿತ ಆಸ್ತಿ ಅಲ್ಲ. ಅದು ಸರಕಾರದ ಸ್ವತ್ತು. ಅದರಲ್ಲಿ ಯಾವುದೇ ಒಂದು ಧರ್ಮ, ಮತದ ಧ್ವಜವನ್ನು ಹಾರಾಡಿಸುವಂತಿಲ್ಲ. ಅದು 370 ಆರ್ಟಿಕಲ್ ತೆಗೆಯುವ ಮೊದಲು ಕಾಶ್ಮೀರದಲ್ಲಿ ಇದ್ದಿರಬಹುದು. ಆದರೆ ಈಗ ಅಲ್ಲಿಯೂ ಇದು ಸಾಧ್ಯವಿಲ್ಲ. ಹಾಗಿರುವಾಗ ಕೋಲಾರದಲ್ಲಿ ಸಹಿಸಲೂ ಆಗುವುದಿಲ್ಲ. ಕೆಲವು ದಿನಗಳ ಮೊದಲು ಕೋಲಾರದ ಪಕ್ಕದ ಗುಂಟೂರ್ ನಲ್ಲಿ ಟವರ್ ಒಂದಕ್ಕೆ ಹೀಗೆ ಒಂದು ಮತದ ಧ್ವಜ, ವೇಷಭೂಷಣ ತೊಡಿಸಲಾಗಿತ್ತು. ಅದನ್ನು ಯಾವಾಗ ಅಲ್ಲಿನ ಸರಕಾರ ತೆಗೆಸಿತೋ ಅದರ ನಂತರ ಕೋಲಾರದ ಸಂಸದ ನಾರಾಯಣ ಸ್ವಾಮಿಯವರಿಗೂ ಉಮ್ಮೇದು ಬಂದಿತ್ತು. ದೇವಾಲಯ, ಚರ್ಚು ಅಥವಾ ಮಸೀದಿಯಲ್ಲಿ ಆದರೆ ಅಲ್ಲಿ ನಮಗೆ ಬೇಕಾದ ಧ್ವಜವನ್ನು ಹಾಕಬಹುದು, ಬಣ್ಣ ಬಳಿಯಬಹುದು ಅಥವಾ ನಮಗೆ ಬೇಕಾಗುವ ಬಣ್ಣದ ಬಟ್ಟೆಯಿಂದ ಸಿಂಗರಿಸಬಹುದು. ಆದರೆ ಸರಕಾರದ ಸ್ವತ್ತಿನಲ್ಲಿ ಹಾಗೆ ಮಾಡುವಂತಿಲ್ಲ.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗುತ್ತಿರುವ ಈ ಸಂದರ್ಭದಲ್ಲಿ ಕೋಲಾರದಲ್ಲಿಯೇ ಈ ಪರಿಸ್ಥಿತಿ ಇತ್ತು ಎಂದರೆ ನೀವು ಅರ್ಥ ಮಾಡಿಕೊಳ್ಳಿ. ಕಾಶ್ಮೀರದಲ್ಲಿ ಆಗ ಹೇಗೆ ಇದ್ದಿರಬಹುದು. ಕಾಶ್ಮೀರದ ವಿಷಯ ಮಾತನಾಡಲು 75 ವರ್ಷಗಳ ಹಿಂದೆ ಹೋಗಬೇಕಾಗಿಲ್ಲ. 30 ವರ್ಷಗಳ ಇತ್ತೀಚಿನ ಕಥೆಗಳೇ ಸಾಕು, ಅಲ್ಲಿ ಹೇಗೆ ಜನಸಾಮಾನ್ಯರು ಜೀವನ ಮಾಡುತ್ತಿದ್ದರು ಎಂದು ಗೊತ್ತಾಗುತ್ತೆ. ಇದು ಒಂದು ರೀತಿಯಲ್ಲಿ ಮೊಗಲರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ದೇಶದ ಮೇಲೆ ದಂಡೆತ್ತಿ ಬಂದ ಅಷ್ಟೂ ಮುಸ್ಲಿಂ ರಾಜರು ತಮಗೆ ಎಲ್ಲಿ ಬೇಕೋ ಅಲ್ಲಿ ತಮ್ಮ ಮತದ ಧ್ವಜ ಹಾರಾಡಿಸಿದರು. ಅದನ್ನು ವಿರೋಧಿಸಿದ ಹಿಂದೂ ರಾಜರೊಡನೆ ಯುದ್ಧ ಮಾಡಿದರು. ಸೋತರೆ ಕ್ಷಮೆ ಕೇಳಿ ಹಿಂದೆ ಸರಿದರು. ನಂತರ ಮತ್ತೆ ಬೇರೆ ಕುತಂತ್ರ ಮಾಡಿ ಮತ್ತೆ ಯುದ್ಧ ಸಾರಿದರು. ಹೀಗೆ ಹತ್ತಾರು ಬಾರಿ ಸೋತ ನಂತರ ಮೋಸದಿಂದ ಒಂದೊಮ್ಮೆ ಗೆದ್ದರೂ ಗೌರವದಿಂದ ನಡೆದುಕೊಳ್ಳದೇ ಆ ಹಿಂದೂ ಅರಸನ ಹೆಂಡತಿಯರ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಕಿದರು. ಆ ಊರಿನ ಮೇಲೆ ಅಧಿಪತ್ಯ ಸ್ಥಾಪಿಸಲು ಅಲ್ಲಿನ ಪುರುಷರನ್ನು ಕೊಂದು ಹಾಕಿದರು. ಮಹಿಳೆ, ಯುವತಿಯರನ್ನು ಒಂದೋ ಮದುವೆಯಾಗು ಅಥವಾ ಹಿಂಸೆ ಅನುಭವಿಸಿ ಸತ್ತು ಹೋಗು ಎಂದು ಸೂಚಿಸಲಾಯಿತು. ನೋವು ತಡೆಯಲಾರದೇ ಕೆಲವರು ಮದುವೆಯಾದರು. ಅವರಿಗೆ ಮಕ್ಕಳನ್ನು ಹುಟ್ಟಿಸಿ ತಮ್ಮ ಪೀಳಿಗೆಯನ್ನು ಇಲ್ಲಿ ಬೆಳೆಸಿದರು. ಹೀಗೆ ಇದ್ದಾಗ ಯಾರು ತಾನೆ ಇಂತಹ ಟವರ್ ಗಳ ಮೇಲಿರುವ ಧ್ವಜವನ್ನು ತೆಗೆ ಎಂದು ಹುಕುಂ ತೋರಿಸಲು ಉಳಿಯುತ್ತಾರೆ. ಈಗ ಸದ್ಯ ಹಿಂದೂತ್ವದ ಸರಕಾರ ಇದೆ. ಎಲ್ಲರಿಗೂ ಸಮಬಾಳು, ಸಮಪಾಲು ಎನ್ನುವ ಸಿದ್ಧಾಂತ ಜಾರಿಗೆ ತರಲು ಶ್ರಮಿಸುತ್ತಿದೆ. ಅದರ ಹಿಂದೆ ಅವರ ರಾಜಕೀಯ ಕಾರಣಗಳು ಇರಬಹುದು. ಆದರೆ ಇಲ್ಲಿಯ ತನಕ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದ ಸರಕಾರದ ಎದುರು ಈಗಿನ ಸರಕಾರ ಇಂತಹ ಕೃತ್ಯಗಳಿಗೆ ಕೈ ಹಾಕಲು ಧೈರ್ಯ ಮಾಡಿತ್ತಲ್ಲ, ಅದೇ ಖುಷಿಯ ಸಂಗತಿ!

0
Shares
  • Share On Facebook
  • Tweet It




Trending Now
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
Hanumantha Kamath December 18, 2025
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Hanumantha Kamath December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
  • Popular Posts

    • 1
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 2
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 3
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 4
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 5
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search