• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶಾಲೆಗಳಲ್ಲಿ ಬೈಬಲ್ ಬೋಧಿಸುವುದು ಬೇಕಾ!!

Hanumantha Kamath Posted On April 30, 2022


  • Share On Facebook
  • Tweet It

ಬೆಂಗಳೂರಿನ ಕ್ರೈಸ್ತ ಮಿಷನರಿ ಶಾಲೆಯೊಂದರಲ್ಲಿ ಬೈಬಲ್ ಕಲಿಸಲಾಗುತ್ತದೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಮಕ್ಕಳನ್ನು ಶಾಲೆಗೆ ದಾಖಲಿಸುವಾಗಲೇ ನಾವು ಅವರ ಪೋಷಕರಿಂದ ನಿರಪೇಕ್ಷಣಾ ಪತ್ರದಲ್ಲಿ ಸಹಿ ಹಾಕಿಸಿದ್ದೇವೆ ಎಂದು ಶಾಲಾ ಅಡಳಿತ ಮಂಡಳಿ ಹೇಳುತ್ತಿದೆ. ಹಾಗಾದರೆ ಶಾಲೆಯಲ್ಲಿ ಆಗುತ್ತಿರುವುದು ಸರಿಯಾ ಎಂದು ನಿಮಗೆ ಅನಿಸಬಹುದು. ಇಲ್ಲಿ ಎರಡು ರೀತಿಯ ಆಯಾಮಗಳು ಇವೆ. ಮೊದಲನೇಯದಾಗಿ ನಿರಪೇಕ್ಷಣಾ ಪತ್ರ ಎನ್ನುವುದು ನಿರೀಕ್ಷಣಾ ಜಾಮೀನು ಅಲ್ಲ. ಆ ಪತ್ರಕ್ಕೆ ಅರ್ಥ ಇಲ್ಲಿ ಇರುವುದೇ ಇಲ್ಲ. ಕರ್ನಾಟಕ ಶಿಕ್ಷಣ ಮಂಡಳಿಯ ಅಡಿಯಲ್ಲಿ ನೋಂದಾವಣಿಯಾಗಿರುವ ಯಾವ ಶಾಲೆ ಕೂಡ ಹೀಗೆ ಶಾಲೆಯಲ್ಲಿ ಮಕ್ಕಳಿಗೆ ಬೈಬಲ್ ಬೋಧಿಸುತ್ತೇವೆ ಮತ್ತು ಅದಕ್ಕೆ ನಮ್ಮ ಸಮ್ಮತಿ ಇದೆ ಎಂದು ಪೋಷಕರಿಂದ ನಿರಪೇಕ್ಷಣಾ ಪತ್ರಕ್ಕೆ ಸಹಿ ಹಾಕಿಸುವುದೇ ತಪ್ಪು. ಯಾಕೆಂದರೆ ಇದು ಕಾನೂನಿಗೆ ವಿರುದ್ಧವಾಗಿರುವ ಪ್ರಕ್ರಿಯೆ. ಕೆಇಎಯ ನಿಯಮದಲ್ಲಿಯೇ ಇದು ಅಡಕವಾಗಿದೆ. ಆದ್ದರಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾದರೆ ಆಡಳಿತ ಮಂಡಳಿ ಮೊದಲ ಹಂತದಲ್ಲಿಯೇ ತನ್ನ ವಾದದಲ್ಲಿ ವಿಫಲವಾಗುತ್ತದೆ. ತರಗತಿಯಲ್ಲಿ ಬೈಬಲ್ ಬೋಧಿಸುವುದು ತಪ್ಪು ಎನ್ನುವುದು ಆಡಳಿತ ಮಂಡಳಿಗೆ ಗೊತ್ತಿದ್ದ ಕಾರಣ ಮತ್ತು ಇದರಿಂದ ಭವಿಷ್ಯದಲ್ಲಿ ಹಿಂದೂ ಸಂಘಟನೆಗಳಿಂದ ವಿರೋಧ ಬರಬಹುದು ಎಂದು ತಿಳಿದಿದ್ದ ಕಾರಣ ನಿರಪೇಕ್ಷಣಾ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ. ಯಾರಾದರೂ ಕೇಳಿದರೆ ಪೋಷಕರದ್ದೇ ವಿರೋಧವಿಲ್ಲ, ಇನ್ನು ನಿಮ್ಮದೇನ್ರಿ ಎಂದು ಜಾಡಿಸಬಹುದು ಎನ್ನುವುದು ಆಡಳಿತ ಮಂಡಳಿಯ ನಿಲುವು ಆಗಿತ್ತು. ಇಲ್ಲಿ ಇನ್ನೊಂದು ಆಯಾಮ ಇದೆ. ಅದೇನೆಂದರೆ ಅನೇಕ ಹೆತ್ತವರು ಮಕ್ಕಳನ್ನು ಸೇರಿಸುವಾಗ ಅಲ್ಲಿ ಒಮ್ಮೆ ಸೀಟು ಸಿಕ್ಕಿದರೆ ಸಾಕು ಎನ್ನುವ ಮನೋಭಾವನೆಯನ್ನು ಹೊಂದಿರುತ್ತಾರೆ. ಆದ್ದರಿಂದ ಶಾಲೆಯವರು ಬೆರಳು ತೋರಿಸಿದ ಕಡೆ ಇವರು ಸಹಿ ಹಾಕಿಬಿಡುತ್ತಾರೆ. ಅದರಲ್ಲಿ ಏನು ಬರೆದಿದ್ದಾರೆ ಎಂದು ಓದಲು ಕುಳಿತರೆ ಎಲ್ಲಿ ಸೀಟು ಮಿಸ್ ಆಗುತ್ತದೋ ಎನ್ನುವ ಆತಂಕ ಇವರಿಗೆ ಇರುತ್ತದೆ. ಬ್ಯಾಂಕುಗಳಲ್ಲಿ ಲೋನ್ ಸಿಕ್ಕಿದರೆ ಸಾಕು ಎಂದು ಒಮ್ಮೆ ಕಣ್ಣುಮುಚ್ಚಿ ಸಹಿ ಹಾಕುತ್ತಾರಲ್ಲ, ಅದೇ ರೀತಿ ಇಲ್ಲಿಯೂ ನಡೆಯುತ್ತದೆ. ಬೆಂಗಳೂರಿನಲ್ಲಿ ಬ್ರಾಂಡೆಂಡ್ ಶಾಲೆಗಳು ಎಂದು ಇವೆಯಲ್ಲ, ಅವರು ಹೇಳಿದ್ದೇ ರೂಲ್ಸ್. ಅವರು ಮಾಡಿದ್ದೇ ನಿಯಮ.ಓಕೆ. ಈಗ ಇನ್ನೊಂದು ದೃಷ್ಟಿಕೋನದಲ್ಲಿ ನೋಡೋಣ. ನೀವು ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಲು ಹೊರಟಿದ್ದೀರಿ. ಅದೇ ನಾವು ಬೈಬಲ್ ಕಲಿಸಲು ಹೋದರೆ ವಿರೋಧ ಯಾಕೆ ಎನ್ನುವುದು ಕೆಲವು ಕ್ರೈಸ್ತ ಮುಖಂಡರ ವಾದ. ಇಲ್ಲಿ ಎರಡು ವಿಷಯಗಳಿವೆ. ಬೈಬಲ್ ಕ್ರೈಸ್ತ ಮತದ ಧಾರ್ಮಿಕ ಗ್ರಂಥ. ಅದನ್ನು ಬೋಧಿಸಿದರೆ ಕ್ರೈಸ್ತ ಮತವನ್ನು ಪ್ರಚಾರ ಮಾಡಿದಂತೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಭಗವದ್ಗೀತೆ ಹಿಂದೂ ಧರ್ಮದ ಧಾರ್ಮಿಕ ಗ್ರಂಥವಲ್ಲ. ಇದರಲ್ಲಿ ಇರುವ ಉತ್ತಮ ಸಂದೇಶಗಳನ್ನು ಆಯ್ದು ಅದನ್ನು ಪಠ್ಯದಲ್ಲಿ ಸೇರಿಸಿದರೆ ಅದು ಧರ್ಮದ ಪ್ರಚಾರ ಆಗುವುದಿಲ್ಲ. ಇನ್ನು ಭಗವದ್ಗೀತೆ, ರಾಮಾಯಾಣ, ಮಹಾಭಾರತದಲ್ಲಿರುವ ಉದಾತ್ತ ಅಂಶಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಅದರಲ್ಲಿರುವ ಸಂದೇಶಗಳು ಇಡೀ ಮನುಕುಲಕ್ಕೆ ಅಗತ್ಯವಾಗಿರುವುದು. ಬೇರೆ ಮತಗಳ ಧಾರ್ಮಿಕ ಗ್ರಂಥಗಳು ತಮ್ಮ ಧರ್ಮವೇ ಶ್ರೇಷ್ಟ ಎಂದು ಬೋಧಿಸಿದರೆ, ಭಗವದ್ಗೀತೆ ಎಲ್ಲಿಯೂ ಅನ್ಯ ಮತಗಳ ಬಗ್ಗೆ ನಂಜು ಕಾರಿಲ್ಲ. ಆದ್ದರಿಂದ ಬೈಬಲ್ ಮತ್ತು ಭಗವದ್ಗೀತೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ಹೇಳಿಕೆ ಕೊಡುವ ಕೆಲಸವನ್ನು ಕ್ರೈಸ್ತರು ಮಾಡದಿರುವುದೇ ಒಳ್ಳೆಯದು. ಇನ್ನು ಭಾರತದಲ್ಲಿರುವ ಕ್ರೈಸ್ತರ ಮೂಲವನ್ನು ಕೆದಕಿ ಕುಳಿತುಕೊಂಡರೆ ಅದೇ ಬೇರೆ ಕಥೆಯಾದೀತು. ನೀವು ನಿಮ್ಮ ಮತವನ್ನು ಅನುಸರಿಸಿ, ಬೇಕಾದರೆ ಬೋಧಿಸಿ ಎಲ್ಲಿ ಎಂದರೆ ನಿಮ್ಮ ಚರ್ಚಿನಲ್ಲಿ. ಅದು ಬಿಟ್ಟು ಸರಕಾರದ ಅಧೀನದಲ್ಲಿ ಬರುವ ಕರ್ನಾಟಕ ಶಿಕ್ಷಣ ಮಂಡಳಿಯ ನಿಯಮಗಳಿಗೆ ಒಳಪಟ್ಟ ಶಾಲೆಯಲ್ಲಿ ಅಲ್ಲವೇ ಅಲ್ಲ.ಇನ್ನು ಈ ನಿಯಮವನ್ನು ಎಲ್ಲಾ ಕಡೆ ಅನ್ವಯಿಸಿ, ಕ್ರೈಸ್ತ ಶಾಲೆಗಳಿಗೆ ಮಾತ್ರವಲ್ಲ ಎಂದು ಕ್ರೈಸ್ತರಲ್ಲಿ ಕೆಲವರು ಹೇಳುತ್ತಿದ್ದಾರೆ. ಅದರಲ್ಲಿ ಅವರಿಗೆ ಸಂಶಯ ಬೇಡಾ. ಕುರಾನ್ ಕೆಇಎ ಶಾಲೆಗಳಲ್ಲಿ ಬೋಧಿಸುವುದು ಕೂಡ ಅಷ್ಟೇ ತಪ್ಪು. ಅದನ್ನು ಸರಕಾರ ನೋಡಿಕೊಳ್ಳುತ್ತದೆ. ಈ ಬಗ್ಗೆ ಸರಕಾರ ಸೂಕ್ತ ಕೈಗೊಳ್ಳಲಿ ಎಂದು ಎಲ್ಲರ ನಿರೀಕ್ಷೆ. ಯಾಕೆಂದರೆ ಮೊದಲೇ ರಾಜ್ಯದಲ್ಲಿ ಇಂತಹ ವಿಷಯಗಳು ಸೂಕ್ಷ್ಮತೆಯ ಪರಿಧಿಯನ್ನು ದಾಟಿಕೊಂಡು ಹೊರಗೆ ಬರಲು ಕಾಯುತ್ತಿರುತ್ತವೆ. ಹೀಗಿರುವಾಗ ಕೈಸ್ತ ಶಿಕ್ಷಣ ಸಂಸ್ಥೆಗಳು ವ್ಯರ್ಥ ಹಟ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ!

  • Share On Facebook
  • Tweet It


- Advertisement -


Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
Hanumantha Kamath February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
Leave A Reply

  • Recent Posts

    • ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
  • Popular Posts

    • 1
      ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • 2
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 3
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search