• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!

Hanumantha Kamath Posted On June 18, 2022
0


0
Shares
  • Share On Facebook
  • Tweet It

ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಸದಸ್ಯರ ಪರವಾಗಿ ಆಕೆಯ ಗಂಡ ಅಧಿಕಾರ ಚಲಾಯಿಸುವುದು, ಹಸ್ತಕ್ಷೇಪ ಮಾಡುವುದು ಮತ್ತು ಸರಕಾರಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದು ಹೀಗೆ ನಾನಾ ವಿಧಗಳಲ್ಲಿ ಪರೋಕ್ಷವಾಗಿ ಸೂಪರ್ ಮೆಂಬರ್ ತರಹ ಕೆಲಸ ಮಾಡುತ್ತಿದ್ದರೆ ಅಂತಹ ಮಹಿಳಾ ಸದಸ್ಯರನ್ನು ಗ್ರಾಮ ಪಂಚಾಯತ್ ಸದಸ್ಯತ್ವದಿಂದ ವಜಾಗೊಳಿಸಲು ಸರಕಾರ ಸಿದ್ಧತೆ ನಡೆಸುತ್ತಿದೆ. ಬಹಳ ಒಳ್ಳೆಯ ಕೆಲಸ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪಾಲಿಕೆಯಲ್ಲಿ ಮಹಿಳೆಯರಿಗೆ 50% ಸ್ಥಾನವನ್ನು ನಿಗದಿಗೊಳಿಸಲಾಗಿ ಕೆಲವು ವರ್ಷಗಳಾಗಿವೆ. ಆದರೆ ಎಷ್ಟೋ ಸಂದರ್ಭದಲ್ಲಿ ಅದು ಮೀಸಲಾತಿಯಾಗಿ ನಾಮಕಾವಾಸ್ತೆ ಇರುತ್ತದೆ ಬಿಟ್ಟರೆ ಮಹಿಳಾ ಸದಸ್ಯರ ಹಿಂದೆ ಎಲ್ಲಾ ಕೆಲಸಗಳನ್ನು ಮದುವೆಯಾಗಿದ್ದರೆ ಆಕೆಯ ಗಂಡ, ಸಹೋದರರಿದ್ದರೆ ಅವರು, ಕೆಲವೊಮ್ಮೆ ಗಂಡ, ಸಹೋದರ ಇಬ್ಬರೂ ನಿರ್ವಹಿಸಿಕೊಂಡು ಬರುತ್ತಿರುತ್ತಾರೆ. ಆ ಸದಸ್ಯೆ ತಿಂಗಳಿಗೊಮ್ಮೆ ನಡೆಯುವ ಸಭೆಗಳಿಗೆ ಹೋಗಿ ಅಂಬಡೆ, ಶೀರಾ ತಿಂದು ಕಾಫಿ ಕುಡಿದು ಬರುವುದಕ್ಕೆ ಮಾತ್ರ ಸೀಮಿತವಾಗಿರುತ್ತಾರೆ. ಸಭೆಗಳಲ್ಲಿ ಏನಾಯಿತು ಎಂದು ಈಕೆ ಹೇಳುವ ಮೊದಲೇ ಗಂಡನಿಗೆ ಎಲ್ಲಾ ಗೊತ್ತಿರುತ್ತದೆ. ಇದರಿಂದ ಮಹಿಳಾ ಮೀಸಲಾತಿಯ ಮೂಲ ಉದ್ದೇಶ ಹಾಳಾಗಿರುತ್ತದೆ. ಇನ್ನು ಹಲವು ಬಾರಿ ಅರ್ಹ ಮಹಿಳಾ ಸಮರ್ಥ ಅಭ್ಯರ್ಥಿಗಳು ಇದ್ದರೂ ಅವರು ಯಾವುದೇ ಪಕ್ಷದಲ್ಲಿ ಇಲ್ಲದೆ ಇರುವ ಏಕೈಕ ಕಾರಣಕ್ಕೆ ಸದಸ್ಯರಾಗಿ ಆಯ್ಕೆಯಾಗುವುದಿಲ್ಲ. ಇದರಿಂದ ಬಾಯಿಗೆ ಹೊಲಿಗೆ ಹಾಕಿಕೊಂಡಿರುವ ಸದಸ್ಯೆಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಏನೂ ಕೆಲಸ ಮಾಡಲು ಆಗದೇ ಕೇವಲ ಶೋಪೀಸ್ ಆಗಿರುತ್ತಾರೆ. ಅನೇಕ ಕಡೆ ಮಹಿಳೆಯರು ಸಭೆ, ಪಕ್ಷದ ಕಾರ್ಯಕ್ರಮಗಳಿಗೆ ಹೋಗುವಾಗ ಕೇವಲ ತಮ್ಮ ಸೀರೆ, ಮೇಕಪ್ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಅಭಿವೃದ್ಧಿ ಬಗ್ಗೆ ಯೋಚಿಸುವುದು ಕಡಿಮೆ. ಯಾಕೆಂದರೆ ಕ್ಷೇತ್ರದ ಕಾರ್ಯಗಳನ್ನು ಗಂಡ ನೋಡಿಕೊಳ್ಳುತ್ತಾನೆ ಎನ್ನುವ ಧೈರ್ಯ ಇರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಗ್ರಾಮ ಪಂಚಾಯತ್ ನಲ್ಲಿ ಇನ್ನು ಭವಿಷ್ಯದಲ್ಲಿ ಪತ್ನಿಯ ಹೆಸರಿನಲ್ಲಿ ಗಂಡ ರಾಜಭಾರ ಮಾಡುತ್ತಾರೆ ಎಂದಾದರೆ ಅಂತವರನ್ನು ವಜಾ ಮಾಡಲಾಗುವುದು ಎಂದು ನಿಯಮ ತಂದಿದೆ.

ನಾನು ಹೇಳುವುದಾದರೆ ಅದನ್ನು ಗ್ರಾಮ ಪಂಚಾಯತ್ ಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಅದನ್ನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆಗೂ ವಿಸ್ತರಿಸಬೇಕು. ಯಾಕೆಂದರೆ ಇಲ್ಲಿಯೂ 50% ಮಹಿಳಾ ಸದಸ್ಯರು ಇದ್ದಾರೆ. ಈಗ ಮಂಗಳೂರು ಮಹಾನಗರ ಪಾಲಿಕೆಯನ್ನೇ ತೆಗೆದುಕೊಳ್ಳಿ. ಇಲ್ಲಿಯೂ ಒಟ್ಟು ಅರವತ್ತು ಸದಸ್ಯರಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಇದ್ದಾರೆ. ಆದರೆ ಅದರಲ್ಲಿ ಎಷ್ಟು ಮಂದಿಯ ಹೆಸರು ಆ ವಾರ್ಡಿನ ಮತದಾರರಿಗೆ ಗೊತ್ತಿದೆ. ಗುದ್ದಲಿಪೂಜೆ, ಉದ್ಘಾಟನೆಯ ಸಂದರ್ಭದಲ್ಲಿ ಶಾಸಕರ ಬದಿಯಲ್ಲಿ ನಿಲ್ಲುವುದು ಬಿಟ್ಟರೆ ವಾರ್ಡಿನ ಸಮಸ್ಯೆಗಳಿಗೆ ಜನ ಕರೆ ಮಾಡುವುದು ಅವರ ಗಂಡನಿಗೆ. ಒಂದು ಡ್ರೈನೇಜ್ ಓವರ್ ಫ್ಲೋ ಆದರೆ ಆಕೆಯ ಗಂಡ ಬಂದು ನೋಡಬೇಕಾಗುತ್ತದೆ. ಅದಕ್ಕಾಗಿ ಪಾಲಿಕೆಯಲ್ಲಿರುವ ಜೋಕೆಂದರೆ ಈಗ ಪಾಲಿಕೆಗೆ 90 ಜನ ಸದಸ್ಯರು. ಹಾಗಂತ ಸರಕಾರ ನಿಯಮವನ್ನು ಏನೋ ತಂದಿದೆ. ಆದರೆ ಇದು ಎಷ್ಟರಮಟ್ಟಿಗೆ ಅನುಷ್ಟಾನಕ್ಕೆ ತರಬಹುದು ಎನ್ನುವುದನ್ನು ನೋಡಬೇಕು. ಯಾಕೆಂದರೆ ಸಂಸದ, ಶಾಸಕ ಸ್ಥಾನ ಬಿಟ್ಟು ಬೇರೆ ಕೆಳಗಿನ ಎಲ್ಲಾ ಕಡೆ ಮಹಿಳಾ ಮೀಸಲಾತಿ 50% ಇದೆ. ಈಗ ಈ ನಿಯಮವನ್ನು ಜಾರಿಗೆ ತಂದರು ಎಂದೇ ಇಟ್ಟುಕೊಳ್ಳೋಣ. ಆಗ ಏನಾಗುತ್ತದೆ. ಇವರು ಚುನಾಯಿತ ಜನಪ್ರತಿನಿಧಿಯನ್ನು ವಜಾ ಮಾಡಿದ ತಕ್ಷಣ ಅವರು ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ಅಲ್ಲಿ ಇಂತಹ ಪ್ರಕರಣಗಳು ಇತ್ಯರ್ಥಗೊಂಡು ಅಂತಿಮ ಆದೇಶ ಬರುವಾಗ ಆ ಜನಪ್ರತಿನಿಧಿಯ ಅಧಿಕಾರದ ಅವಧಿ ಬಹುತೇಕ ಸಂದರ್ಭದಲ್ಲಿ ಮುಗಿದಿರುತ್ತದೆ. ಕೆಲವು ಸಾರಿ ಏನಾಗಿದೆ ಎಂದರೆ ತೀರ್ಪು ಬಂದಾಗ ಒಂದು ಅವಧಿ ಮುಗಿದು ಎರಡನೇ ಅವಧಿ ಅರ್ಧ ಆಗಿರುತ್ತದೆ. ಅನೇಕ ಸಂದರ್ಭದಲ್ಲಿ ಸೂಕ್ತ ಸಾಕ್ಷಾಧಾರಗಳಿಲ್ಲದೆ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಯಾಕೆಂದರೆ ಈ ಹಸ್ತಕ್ಷೇಪ ಎನ್ನುವುದು ಬರಿ ಕಣ್ಣಿಗೆ ಎದ್ದು ಕಾಣುತ್ತದೆ. ಆದರೆ ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಕಷ್ಟ. ಇನ್ನು ಹಸ್ತಕ್ಷೇಪ ಮಾಡಿದ್ದಾರೆ ಎಂದು ದೂರು ಕೊಡಬೇಕಾದವರು ಯಾರು? ಅಧಿಕಾರಿಗಳೇ ಕೊಡಬೇಕು. ಅವರು ಕೊಡಲು ಮುಂದೆ ಬರುತ್ತಾರಾ? ಮುಂದೆ ಬಂದರೂ ಅನೇಕ ವರ್ಷಗಳ ತನಕ ನಡೆಯುವ ಪ್ರಕರಣದಲ್ಲಿ ಅವರು ಖಡಕ್ಕಾಗಿ ನಿಲ್ಲುತ್ತಾರಾ? ಇನ್ನು ಜನಸಾಮಾನ್ಯರಿಗೆ ಇದು ಬಿದ್ದು ಹೋಗಿಲ್ಲ. ಅವರಿಗೆ ತಮ್ಮ ವಾರ್ಡಿನ ಅಭಿವೃದ್ಧಿ ಕೆಲಸಗಳನ್ನು ಪತ್ನಿ ಬೇಕಾದರೂ ಮಾಡಿಕೊಡಲಿ ಅಥವಾ ಗಂಡ ಬೇಕಾದರೂ ಮಾಡಿಕೊಡಲಿ, ಅಂತಹ ವ್ಯತ್ಯಾಸ ಆಗುವುದಿಲ್ಲ ಹಾಗಿರುವಾಗ ಜನಪ್ರತಿನಿಧಿಗಳ ವಿರುದ್ಧ ನ್ಯಾಯಾಲಯಕ್ಕೆ ದೂರು ಕೊಡುವ ಅಧಿಕಾರಿ ಅವರೆಷ್ಟು ಸಾಚಾ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಆದ್ದರಿಂದ ಅವರು ಕೂಡ ದೂರು ಕೊಡುವುದಿಲ್ಲ. ಇನ್ನು ಯಾವುದಾದರೂ ಸಂಘಟನೆಯವರು ದೂರು ಕೊಡಬಹುದು. ಅವರು ಕೊಟ್ಟು ತೀರ್ಪು ಬರುವ ತನಕ ಕಾದು ಅದು ಬೇರೆಯವರಿಗೆ ಪಾಠವಾಗುವುದು ಯಾವಾಗಲೋ, ದೇವರಿಗೆ ಗೊತ್ತು. ಅಂತಹ ಒಂದು ತೀರ್ಪು ಬರಲಿ ಎಂದು ಕಾಯೋಣ!

0
Shares
  • Share On Facebook
  • Tweet It




Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Hanumantha Kamath July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Hanumantha Kamath July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search