• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸರಕಾರ, ಬಿಲ್ಡರ್ಸ್, ಜನ ಕೈ ಜೋಡಿಸಿದ್ದೇ ಬೆಂಗಳೂರು ನೆರೆಗೆ ಕಾರಣ!

Hanumantha Kamath Posted On September 8, 2022


  • Share On Facebook
  • Tweet It

ಬೆಂಗಳೂರಿನ ಜನ ಈ ಮಳೆಗಾಲವನ್ನು ಮುಂದಿನ ಒಂದು ದಶಕದ ತನಕ ಮರೆಯಲಾರರು. ಅಷ್ಟು ಹಾನಿ ಮತ್ತು ಕಿರಿಕಿರಿಯನ್ನು ಅವರು ಈ ವಾರ ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯನ್ನು ಮಂಗಳೂರಿನವರು ಕೂಡ ಅನುಭವಿಸಿರುವ ಉದಾಹರಣೆಗಳಿವೆ. ಈ ಎರಡು ಪ್ರದೇಶಗಳಲ್ಲಿ ಮಳೆಯ ಆವಾಂತರಕ್ಕೆ ಹೆಚ್ಚು ಕಡಿಮೆ ಕಾರಣಗಳು ಒಂದೇ. ಸಿಎಂ ಹೇಳಿದಂತೆ ನೂರು ವರ್ಷಗಳಲ್ಲಿ ಇಂತಹ ಮಳೆಯನ್ನು ಬೆಂಗಳೂರು ನೋಡಿಲ್ಲ. ಅದಕ್ಕೆ ಇಂತಹ ತೊಂದರೆ ಉಂಟಾಗಿದೆ ಎಂದಿದ್ದಾರೆ. ಅದು ಒಂದೇ ಕಾರಣವಾಗಿದ್ದರೆ ಚರ್ಚೆಯ ಅಗತ್ಯವೇ ಇರಲಿಲ್ಲ. ಅದು ಕಾಂಗ್ರೆಸ್, ಜಾತ್ಯಾತೀತ ಜನತಾದಳ ಅಥವಾ ಭಾರತೀಯ ಜನತಾ ಪಾರ್ಟಿಯ ಸರಕಾರ ಯಾವುದೇ ಇರಲಿ, ದಾಖಲೆಗಿಂತ ಮಳೆ ಜಾಸ್ತಿ ಬಂದರೆ ಯಾವ ಮುಖ್ಯಮಂತ್ರಿ ಕೂಡ ಆಕಾಶಕ್ಕೆ ಅಡ್ಡ ನಿಂತು ಮಳೆಯಿಂದ ರಕ್ಷಣೆ ನೀಡಲು ಆಗುವುದಿಲ್ಲ. ಆದರೆ ಈ ಆವಾಂತರಕ್ಕೆ ಪ್ರಕೃತಿಯನ್ನು ಮಾತ್ರ ದೂಷಿಸುವುದು ಬಿಟ್ಟು ಬೇರೆ ಕಾರಣಗಳು ಕೂಡ ಇವೆ ಎಂದು ಆತ್ಮಸಾಕ್ಷಿಯಿಂದ ಪ್ರಯತ್ನಪಟ್ಟರೆ ನಿಜಕ್ಕೂ ಏನಾದರೂ ಬದಲಾವಣೆ ಸಾಧ್ಯ. ಸಮಸ್ಯೆಗಳನ್ನು ಚರ್ಚಿಸುವುದಕ್ಕಿಂತ ನೇರವಾಗಿ ಪರಿಹಾರದ ಕಡೆ ಹೋಗೋಣ. ಸರಕಾರ ಈಗ ಅರ್ಜೆಂಟಾಗಿ ಒಂದು ಸಮಿತಿ ನೇಮಿಸಬೇಕು. ಆ ಸಮಿತಿ ಎಲ್ಲೆಲ್ಲಿ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ಆಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಅದೇನು ಕಷ್ಟದ ಕೆಲಸವಲ್ಲ. ಈಗ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿಟ್ಯಾಂಕಿ ಕೆರೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಅದು ದಾಖಲೆಗಳಲ್ಲಿ ಎಷ್ಟು ಉದ್ದ ಮತ್ತು ಅಗಲ ಇತ್ತು ಎನ್ನುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಲೆಕ್ಕ ಇದೆ. ಈಗ ವಾಸ್ತವವಾಗಿ ಎಷ್ಟಿದೆ ಎಂದು ಸರ್ವೆ ಮಾಡಿದರೆ ಮುಗಿಯಿತು. ಒತ್ತುವರಿ ಮಾಡಿದವರಿಗೆ ನೋಟಿಸು ಕೊಡುವುದು ಮತ್ತು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಒಂದು ವರದಿ ನೀಡಿ ಅದರಲ್ಲಿ ಯಾವೆಲ್ಲ ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿ ಆಗಿದೆ ಎಂದು ನಮೂದಿಸಬೇಕು. ಅತಿಕ್ರಮಣ ಮಾಡಿದವರಿಗೆ ನೋಟಿಸ್ ನೀಡಿದ್ದೇವೆ. ಅತಿಕ್ರಮಣವನ್ನು ಕೆಡವುಹ ಮೂಲಕ ಒತ್ತುವರಿಯನ್ನು ತೆರವುಗೊಳಿಸಲು ಅನುಮತಿ ನೀಡಿ ಎಂದು ವಿನಂತಿಸುವುದು. ನ್ಯಾಯಾಲಯ ಕೂಡ ತಡ ಮಾಡಲಿಕ್ಕಿಲ್ಲ. ಅಲ್ಲಿಂದ ಸೂಚನೆ ಬಂದ ಕೂಡಲೇ ಅತಿಕ್ರಮಣವನ್ನು ತೆರವು ಮಾಡಿಬಿಡುವುದು. ಇದು ಬೆಂಗಳೂರಿನ ಮಟ್ಟಿಗೆ ಮಾತ್ರ ಸೀಮಿತವಾಗಿ ಮಾಡಬೇಕು ಎಂದು ನಾನು ಹೇಳುವುದಿಲ್ಲ. ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವ ರೀತಿಯಲ್ಲಿ ಆ ಸಮಿತಿಗೆ ಅಧಿಕಾರ ನೀಡಿದರೆ ರಾಜ್ಯ ಸರಕಾರ ಈ ವಿಷಯದಲ್ಲಿ ಇಚ್ಚಾಶಕ್ತಿ ತೋರಿಸಿದೆ ಎಂದು ನಂಬಬಹುದು. ಹಾಗಂತ ಇದೇನು ಅಸಾಧ್ಯವಾಗಿರುವ ಕೆಲಸವಲ್ಲ. ಉತ್ತರ ಪ್ರದೇಶದಲ್ಲಿ, ನೋಯ್ಡಾದಲ್ಲಿ ಹೀಗೆ ಅತಿಕ್ರಮಣ ಮಾಡಿ ಕಟ್ಟಲಾದ ಕಟ್ಟಡಗಳನ್ನು ಕೆಡವಲಾಗಿದೆ. ಅದು ಇಲ್ಲಿಯೂ ಅನ್ವಯಿಸಬಹುದು.

ಹಾಗಾದರೆ ಅತಿಕ್ರಮಣ ಸುಮ್ಮಸುಮ್ಮನೆ ಆಯಿತಾ? ನಮ್ಮ ದೇಶದಲ್ಲಿ ಪ್ರಭಾವಿ ಬಿಲ್ಡರ್ಸ್ ಮತ್ತು ರಾಜಕಾರಣಿಗಳು ಸೇರಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಅದೊಂದು ಸ್ಯಾಂಪಲ್ ಅಷ್ಟೆ. ಇವರು ಅವರಿಗೆ ಕಾಣಿಕೆ ಕೊಟ್ಟು ಕಟ್ಟಿರುತ್ತಾರೆ. ಕೊನೆಗೆ ಅನುಭವಿಸಬೇಕಾಗಿರುವುದು ಜನಸಾಮಾನ್ಯರು ಮಾತ್ರ. ನ್ಯಾಯಾಲಯವೊಂದು ಮಳೆಯಿಂದ ನಷ್ಟ ಅನುಭವಿಸಿದ ಕುಟುಂಬವೊಂದಕ್ಕೆ 9 ಲಕ್ಷ ಪರಿಹಾರ ಕೊಡಲು ಸರಕಾರಕ್ಕೆ ಸೂಚಿಸಿದೆ. ಇಲ್ಲಿ ಪರಿಹಾರ ಕೊಡಬೇಕಾಗಿರುವುದು ಸರಕಾರ ಅಲ್ಲವೇ ಅಲ್ಲ. ಯಾಕೆಂದರೆ ಸರಕಾರ ಕೊಟ್ಟರೆ ಅದು ನಮ್ಮ ತೆರಿಗೆಯ ಹಣ. ಬಿಲ್ಡರ್ ತಪ್ಪಿಗೆ ನಾವು ಯಾಕೆ ಹಣ ಕೊಡುವುದು. ಅದರ ಬದಲಿಗೆ ಆ ಬಿಲ್ಡರ್ ತಾನೇ ಆ ನಷ್ಟವನ್ನು ತುಂಬಿಸಿಕೊಡಬೇಕು. ಮಂಗಳೂರಿನಲ್ಲಿಯೂ ಜೆಪ್ಪಿನಮೊಗರು, ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ. ಆದರೆ ನಗರಾಭಿವೃದ್ಧಿ ಇಲಾಖೆ, ಪಾಲಿಕೆ ಮತ್ತು ಒತ್ತುವರಿ ಆಗಿರುವ ಭೂಮಿಯನ್ನು ಖರೀದಿಸಿರುವ ಓರ್ವ ಶಿಕ್ಷಣೋದ್ಯಮಿಯ ನಡುವಿನ ಅಪವಿತ್ರ ಮೈತ್ರಿಯಿಂದ ಸ್ಥಳೀಯಾಡಳಿತದ ಪರವಾಗಿ ವಾದ ಮಾಡಿರುವ ವಕೀಲರಿಗೆ ಸೋಲಾಯಿತು. ಯಾಕೆಂದರೆ ಶಿಕ್ಷಣೋದ್ಯಮಿಯ ವಿರುದ್ಧವಾಗಿ ವಾದಿಸಬೇಕಿದ್ದ ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವಕೀಲರಿಗೆ ಸೂಕ್ತವಾದ ದಾಖಲೆಗಳನ್ನು ಒದಗಿಸಲೇ ಇಲ್ಲ. ಇನ್ನು ಗೆಲ್ಲುವುದು ಎಲ್ಲಿಂದ ಬಂತು? ವಿಷಯ ಹೀಗೆ ಇರುವಾಗ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಈ ಸಮಸ್ಯೆಗೆ ಪರಸ್ಪರ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಿವೆ. ನಾವು ಸರಕಾರದಲ್ಲಿದ್ದಾಗ ಈ ಒತ್ತುವರಿ ತೆರವಿಗೆ 350 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವು. ಆದರೆ ಬಿಜೆಪಿ ಸರಕಾರ ಬಂದ ನಂತರ ಆ ಹಣವನ್ನು ಬೇರೆ ಕೆಲಸಕ್ಕೆ ವಿನಿಯೋಗಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇತ್ತ ಬಿಜೆಪಿ ಇಷ್ಟೆಲ್ಲ ಅತಿಕ್ರಮಣ ಮತ್ತು ಒತ್ತುವರಿಗಳು ಆದದ್ದೇ ನಿಮ್ಮ ಅವಧಿಯಲ್ಲಿ. ಆಗ ಅದಕ್ಕೆ ಪ್ರೋತ್ಸಾಹ ನೀಡಿ ಈಗ ಚೆಂದ ನೋಡುತ್ತೀರಾ ಎಂದು ತಿರುಗೇಟು ನೀಡಿದೆ. ಹೀಗೆ ಆರೋಪ-ಪ್ರತ್ಯಾರೋಪದಲ್ಲಿ ರಾಜ್ಯ ಈ ಮಳೆಗಾಲವನ್ನು ನೋಡುವ ಪರಿಸ್ಥಿತಿ ಇದೆ. ಅದರ ನಡುವೆ ಜನರು ಕೂಡ ಈ ಪರಿಸ್ಥಿತಿಗೆ ಹೊಣೆಗಾರರು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಎಷ್ಟೋ ಮಂದಿ ಮನೆಯ ಕಸವನ್ನು ಮರುದಿನ ತ್ಯಾಜ್ಯ ಸಂಗ್ರಹಕಾರರು ಬರುವ ತನಕ ಕಾಯುವ ತಾಳ್ಮೆ ಇಲ್ಲದೆ ಪಕ್ಕದ ರಾಜಕಾಲುವೆಗೆ ಬಿಸಾಡುವುದನ್ನು ನಾವೇ ಎಷ್ಟೋ ಸಲ ಕಣ್ಣಾರೆ ನೋಡಿದ್ದೇವೆ. ಆದರೆ ಯಾರು ಕೂಡ ಈ ಬಗ್ಗೆ ಧ್ವನಿ ಎತ್ತಿಲ್ಲ. ನಮಗೇಕೆ ಅದರ ಉಸಾಬರಿ ಎಂದು ಸುಮ್ಮನಿದ್ದೇವು. ಆದರೆ ಈಗ ಕೃತಕ ಸಮುದ್ರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡು ಅದರ ಅಲೆಗಳು ಮನೆಯ ಬೆಡ್ ರೂಂನಲ್ಲಿ ಎದ್ದೇಳುತ್ತಿದ್ದಂತೆ ನಾವು ಸರಕಾರವನ್ನು ಬೈಯುತ್ತಿದ್ದೇವೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search