ಅಂಗಾರ ಕಾಗೆ ಬಂಗಾರ ಎಂದು ಸಾಬೀತು!
ಚುನಾವಣೆ ಎಂದರೆ ಅದು ಒಂದು ಪಕ್ಷದ ವಿರುದ್ಧ ಮತ್ತೊಂದು ಪಕ್ಷ ಸ್ಪರ್ಧಿಸಿ ಕೊನೆಗೆ ಬಹುಮತ ಪಡೆಯುವ ಪಕ್ಷ ಅಧಿಕಾರ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು. ಆದ್ದರಿಂದ 224 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸುತ್ತದೆ ಎಂದಾಗ ಒಬ್ಬ ಕಾರ್ಯಕರ್ತ ಪಕ್ಷದ ಗುರುತಿನ ಅಡಿಯಲ್ಲಿ ಸ್ಪರ್ಧಿಸುವುದು ಸಾಮಾನ್ಯ. ಹಾಗಂತ ಪಕ್ಷ ಯಾರಿಗೆ ಬೇಕಾದರೂ ಅವರಿಗೆ ಟಿಕೆಟ್ ಕೊಡಬಹುದು. ಯಾಕೆಂದರೆ ವ್ಯಕ್ತಿ ಅಲ್ಲಿ ಯಾವಾಗಲೂ ಎರಡನೇ ಆದ್ಯತೆ. ಆದರೆ ಯಾವಾಗ ಪಕ್ಷಕ್ಕಿಂತ ನಾವು ಮುಖ್ಯ. ನಾವೇ ಪಕ್ಷ, ನಾವೇ ಗೆಲ್ಲಿಸುವುದು ಎನ್ನುವ ಅಹಂ ವ್ಯಕ್ತಿಗಳ ತಲೆಗೆ ಹೋಗುತ್ತದೆಯೋ ಆಗ ಅಂತಹ ವ್ಯಕ್ತಿಗಳ ಅಹಂಕಾರ ಇಳಿಸಲೇಬೇಕು. ಯಾಕೆಂದರೆ ಪಕ್ಷಕ್ಕಿಂತ ದೊಡ್ಡದು ಯಾರೂ ಇಲ್ಲ. ಮೊದಲಿಗೆ ಅಂಗಾರ ಎನ್ನುವ ಆರು ಬಾರಿ ಶಾಸಕರಾಗಿ, ಕೊನೆಯ ಅವಧಿಗೆ ಸಚಿವರೂ ಆಗಿರುವ ಮನುಷ್ಯನ ಬಗ್ಗೆ ತಿಳಿಯೋಣ. ಅಂಗಾರ ಅವರು ಆರು ಬಾರಿ ಗೆದ್ದರಲ್ಲ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಏನು ಮಾಡಿದರು ಎಂದು ಕೇಳಿ. ಅಲ್ಲಿನ ಮತದಾರರೇ ತಲೆ ಬಡಿದುಕೊಳ್ಳುತ್ತಾರೆ. ಅಷ್ಟಕ್ಕೂ ಪಕ್ಷ ಬಿಟ್ಟು ಅಂಗಾರ ಅವರಿಗೆ ಬೇರೆ ಏನು ವ್ಯಕ್ತಿತ್ವ ಇದೆ. ಯಾರೂ ಬೇರೆಯವರು ಇರಲಿಲ್ಲ ಎಂದು ಅವರಿಗೆ ನಿರಂತರವಾಗಿ ಟಿಕೆಟ್ ಸಿಗುತ್ತಿತ್ತು ಬಿಟ್ಟರೆ ಏನೂ ಸಮರ್ಥ ಶಾಸಕ ಎಂದು ಅಲ್ಲ. ಆರು ಸಲ ಶಾಸಕರಾಗಿ ಸಂಬಳ, ಭತ್ಯೆ ಪಡೆದುಕೊಂಡಿದ್ದಾರೆ ಬಿಟ್ಟರೆ ಬೇರೆನಿದೆ. ಅಷ್ಟು ನಮ್ಮ ತೆರಿಗೆಯ ಹಣದಿಂದ ಅವರಿಗೆ ಕೊಟ್ಟಿದ್ದೇ ವೇಸ್ಟ್. ಕೆಲವರು ಸಜ್ಜನರಾಗಿರುತ್ತಾರೆ ಬಿಟ್ಟರೆ ಅವರಷ್ಟು ಅಪ್ರಯೋಜಕರು ಬೇರೆ ಯಾರೂ ಇಲ್ಲ. ಅವರು ಅಸಮರ್ಥರಾಗಿರುತ್ತಾರೆ, ಆದ್ದರಿಂದ ಪ್ರಯೋಜನಕ್ಕೆ ಇಲ್ಲದವರಾಗಿರುತ್ತಾರೆ. ಅವರು ಏನೂ ಮಾಡಿರುವುದಿಲ್ಲ, ಅದಕ್ಕಾಗಿ ಮೂಲೆಗುಂಪಾಗಿರುತ್ತಾರೆ. ಕೊನೆಗೆ ಹಿರಿತಲೆ, ಜಾತಿ ಲೆಕ್ಕಾಚಾರ ನೋಡಿ ಸ್ಥಾನಮಾನ ಸಿಕ್ಕಿದರೆ ಒಂದು ಗಾದೆ ಇದೆ. “ಅದು ಯಾರನ್ನೋ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಕ್ಕೆ ತಾನೇ ರಾಜ ಎಂದುಕೊಂಡಿತಂತೆ”. ಹಾಗೆ ಇರುತ್ತದೆ ಇವರ ಪರಿಸ್ಥಿತಿ.
ಈಗ ಕೇಳಿದರೆ ತಾನು ಭಾಗಿರಥಿ ಮುರುಳ್ಯ ಅವರ ಪರ ಮತಯಾಚನೆಗೆ, ಪ್ರಚಾರಕ್ಕೆ ಹೋಗಲ್ಲ ಎನ್ನುತ್ತಿದ್ದಾರೆ. ನಿಜವಾಗಿ ಹೇಳಬೇಕಾದರೆ ಅಂಗಾರ ಪ್ರಚಾರಕ್ಕೆ ಇಳಿದರೆ ಅದೇ ಪಕ್ಷಕ್ಕೆ ಮೈನಸ್. ಒಬ್ಬ ವ್ಯಕ್ತಿಗೆ ಒಳ್ಳೆಯ ಕೆಲಸಗಾರ ಎನ್ನುವ ಚಾರ್ಮ್ ಇದ್ದರೆ ಮಾತ್ರ ಆತ ಪ್ರಚಾರಕ್ಕೆ ಹೋಗಬೇಕು. ಅದು ಬಿಟ್ಟು ತಾನು ಹೋಗುವುದಿಲ್ಲ ಎಂದು ಅಂಗಾರ ಹೇಳುತ್ತಿದ್ದಾರೆಂದರೆ ಅವರ ಮುಖವನ್ನು ನೋಡಿದರೆ ಬಿಜೆಪಿಗೆ ಮತ ಹಾಕುವವ ಕೂಡ ಹಾಕಲ್ಲ ಎನ್ನುವುದು ಜನರ ಅಭಿಪ್ರಾಯ. ಓರ್ವ ಹಿಂದುಳಿದ ಜಾತಿಯ ಹೆಣ್ಣುಮಗಳು ಭಾಗೀರಥಿ. ಅವರ ಜಾತಿಯಿಂದ ಯಾರಾದರೂ ತಾಲೂಕು ಪಂಚಾಯತ್ ಗೆ ಸದಸ್ಯರಾಗುವುದೇ ದೊಡ್ಡ ಸಾಧನೆ. ಹಾಗಿರುವಾಗ ಅಂತವರಿಗೆ ಭಾಜಪಾ ಶಾಸಕರಾಗುವ ಅವಕಾಶ ನೀಡಿದೆ. ಇಂತಹ ಸಮಯದಲ್ಲಿ ಆಕೆಯನ್ನು ಹಿರಿಯಣ್ಣನಂತೆ ಬೆಂಬಲಿಸುವುದು ಬಿಟ್ಟು ಪ್ರಚಾರಕ್ಕೆ ಹೋಗಲ್ಲ ಎಂದು ಹೇಳುವ ಮೂಲಕ ಅಂಗಾರ ಇಷ್ಟು ವರ್ಷ ಸಜ್ಜನ ಎನ್ನುವ ಲಾಟ್ ಪುಟ್ ಹೆಗ್ಗಳಿಕೆಯನ್ನಾದರೂ ಉಳಿಸಿಕೊಂಡಿದ್ದರು. ಈಗ ಅದು ಕೂಡ ಮಸಿ ನುಂಗಿದಂತೆ ಆಗಿದೆ. ಇನ್ನು ಅವರು ಪಕ್ಷದ ಕಾರ್ಯಕ್ರಮಗಳಿಗೆ ಬಂದರೂ ಅವರನ್ನು ಮೂಸುವವರು ಇರುವುದಿಲ್ಲ. ಕೆಲವೊಮ್ಮೆ ಕೆಲವು ವಿಷಯಗಳು ಲೆಕ್ಕಕ್ಕಿಂತ ಜಾಸ್ತಿ ಸಿಕ್ಕಿದರೆ ನಾವು ನಮ್ಮನ್ನು ದೇವರೆಂದೇ ಅಂದುಕೊಂಡು ಬಿಡುತ್ತೇವೆ. ನಮ್ಮ ಯೋಗ್ಯತೆ ಗೊತ್ತಾಗುವುದೇ ಇಂತಹ ಸಂದರ್ಭದಲ್ಲಿ.
ಇನ್ನು ರಘುಪತಿ ಭಟ್ ಅವರ ವಿಚಾರ ತೆಗೆದುಕೊಳ್ಳಿ. ಹೆಂಡತಿ ಸತ್ತಾಗಲೂ ಇವರ ಕಣ್ಣಲ್ಲಿ ನೀರು, ಹೃದಯದಲ್ಲಿ ನೋವು ಮಡುಗಟ್ಟಿರಲಿಲ್ಲ. ಅದೇ ಈ ಬಾರಿ ಟಿಕೆಟ್ ಇಲ್ಲ ಎಂದು ಆದ ಕೂಡಲೇ ನಮ್ಮನ್ನು ಒಂದು ಮಾತು ಕೇಳಬೇಕು ಎಂದು ಹೇಳುತ್ತಿದ್ದಾರೆ. ಇವರಿಗೆ ಕೂಡ ಇಪ್ಪತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಟಿಕೆಟ್ ಸಿಕ್ಕಿದಾಗ ಅದು ಕೂಡ ಯಾರದ್ದೋ ಟಿಕೆಟ್ ಕಸಿದು ಇವರಿಗೆ ಕೊಟ್ಟಿದ್ದಲ್ಲವೇ? ರಘುಪತಿ ಏನೂ ಭಾರತೀಯ ಜನತಾ ಪಾರ್ಟಿಗೆ ಜನ್ಮ ಕೊಟ್ಟಿಲ್ಲ. ಯಾರೋ ನೆಟ್ಟ ಸಸಿಗೆ, ಲಕ್ಷಾಂತರ ಕಾರ್ಯಕರ್ತರ ಜೊತೆ ಸೇರಿ ನೀರು ಹಾಕಿರಬಹುದು. ಅಂತಹ ಅಸಂಖ್ಯಾತ ಕಾರ್ಯಕರ್ತರಲ್ಲಿ ಹದಿನೈದು ವರ್ಷ ಶಾಸಕರಾದ ಭಟ್ ಈಗ ತಮಗೆ ಕೇಳಿಲ್ಲ ಎಂದು ಅಳುತ್ತಿದ್ದಾರೆ. ಬಂಡಾಯದ ಮಾತುಗಳನ್ನು ಆಡುತ್ತಿದ್ದಾರೆ. ಈಗ ಮತ್ತೊಮ್ಮೆ ಇವರಿಗೆ ಟಿಕೆಟ್ ಕೊಟ್ಟರೆ ಏನಾಗುತ್ತದೆ? ಇವರು ಗೆಲ್ಲಬಹುದು. ಅದೇ ಬೇರೆಯವರಿಗೂ ಕೊಟ್ಟರೂ ಅವರು ಗೆಲ್ಲುತ್ತಾರೆ. ಯಾಕೆಂದರೆ ಗೆಲ್ಲಿಸುವವರು ಎಲ್ಲಿಯೂ ಗುರುತಿಸಲ್ಪಡ, ತನ್ನ ಪಾಡಿಗೆ ತಾನು ಪ್ರಚಾರ ಮಾಡುತ್ತಿರುವ ನಿಷ್ಠಾವಂತ ಕಾರ್ಯಕರ್ತ. ಅದನ್ನು ಯಾವಾಗ ಮರೆತರೋ ಭಟ್ ಅವರ ಕಣ್ಣಿನಲ್ಲಿ ನೀರು ಬರುತ್ತಿದೆ.
ಇನ್ನು ಸವದಿಯಂತವರು ಬಿಡಿ, ಅತ್ತ ಕಡೆಯವರದ್ದು ಇಂತಹ ರಗಳೆ ಇದ್ದದ್ದೇ. ಆದರೆ ಕರಾವಳಿಯವರು ಹೀಗೆ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದ್ದಿಲ್ಲ. ಈಗ ಇಂತವರೇ ಮಾತನಾಡುತ್ತಿದ್ದಾರೆ ಎಂದರೆ ಸಂಘದ ಶಿಸ್ತು ಎಲ್ಲಿ ಹೋಯಿತು? ಪಾರ್ಟಿ ವಿದ್ ಡಿಫರೆನ್ಸ್ ಎನ್ನುವುದು ಎಲ್ಲಿಗೆ ಹೋಯಿತು? ಸಂಘದ ಚೌಕಟ್ಟಿನಲ್ಲಿ ಪೂರ್ತಿಯಾಗಿ ಬರದಂತಹ ಹಾಲಾಡಿ ಶ್ರೀನಿವಾಸ್ ಶೆಟ್ಟಿಯಂತವರೇ ಶಿಸ್ತಿನಿಂದ ಪಕ್ಷ ನಾಲ್ಕು ಬಾರಿ ಟಿಕೆಟ್ ಕೊಟ್ಟಿದೆ. ನಾನು ಒಂದು ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಒಟ್ಟು ಐದು ಬಾರಿ ಶಾಸಕನಾಗಿದ್ದಾನೆ. ಇನ್ನು ಸಾಕು, ಹೊಸಬರಿಗೆ ಅವಕಾಶ ಕೊಡೋಣ ಎಂದು ಸೈಡಿಗೆ ಸರಿದು ನಿಂತಿರುವಾಗ ಅಂಗಾರ ಅಂತವರು ರಸ್ತೆಯ ಮಧ್ಯೆ ನಿಂತು ಕೆಂಪು ಬಾವುಟ ಹಾರಿಸುತ್ತಿರುವುದು ನಾಚಿಕೆಗೇಡು
Leave A Reply