• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!

Hanumantha Kamath Posted On May 7, 2023
0


0
Shares
  • Share On Facebook
  • Tweet It

ರಾಜ್ಯದ ಭಾರತೀಯ ಜನತಾ ಪಾರ್ಟಿ ಒಂದು ಪ್ರಣಾಳಿಕೆಯನ್ನು ರಾಜ್ಯಕ್ಕಾಗಿ ವಿಶೇಷ ಗಮನವಿಟ್ಟು ಬಿಡುಗಡೆ ಮಾಡಿದ್ದರೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಪ್ರಣಾಳಿಕೆಯನ್ನು ತಯಾರು ಮಾಡಿ ಜನರ ಮುಂದಿಟ್ಟಿದ್ದಾರೆ. ಈಗ ಅದರಲ್ಲಿ ಪಕ್ಕಾ ನಗರ ಕ್ಷೇತ್ರವಾಗಿರುವ ಮಂಗಳೂರು ನಗರ ದಕ್ಷಿಣದ ಕಥೆಯನ್ನು ನೋಡೋಣ. ಅಲ್ಲಿ ಶಾಸಕರೂ ಮತ್ತು ಈಗ ಅಭ್ಯರ್ಥಿಯೂ ಆಗಿರುವ ವೇದವ್ಯಾಸ ಕಾಮತ್ ಅವರ ಪ್ರಣಾಳಿಕೆಯಲ್ಲಿ ಈಡೇರಿಸಲೇಬೇಕಾದ ಮೂರು ವಿಷಯಗಳನ್ನು ಮಾತ್ರ ಈಗ ತೆಗೆದುಕೊಳ್ಳೋಣ. ಮೊದಲನೇಯದಾಗಿ ಮಂಗಳೂರು ನಗರದ ನೀರಿನ ಸಮಸ್ಯೆ. ಅದಕ್ಕೆ ಮುಖ್ಯ ಪರಿಹಾರ ತುಂಬೆ ಹೊಸ ಅಣೆಕಟ್ಟಿನಲ್ಲಿ ಏಳು ಮೀಟರ್ ನೀರು ನಿಲ್ಲಿಸಲು ಇರುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳುವುದು. ಹಾಗೆ ಮಾಡಬೇಕಾದರೆ ಅದಕ್ಕೆ ಅಂದಾಜು 120 ಕೋಟಿಗಿಂತ ಜಾಸ್ತಿ ಹಣ ಬೇಕು. ಯಾಕೆಂದರೆ ಅಷ್ಟು ಎತ್ತರಕ್ಕೆ ನೀರು ನಿಲ್ಲಿಸಿದರೆ ಖಂಡಿತವಾಗಿ ಮುಳುಗಡೆಯಾಗಲಿರುವ ಆಸುಪಾಸಿನ ಜಮೀನಿನ ರೈತರಿಗೆ ಪರಿಹಾರ ನೀಡಲು ಹಣ ಬೇಕು. ಅದನ್ನು ಮುಂದಿನ ಅವಧಿಯ ರಾಜ್ಯ ಸರಕಾರ ಆದ್ಯತೆಯಾಗಿ ತೆಗೆದುಕೊಳ್ಳಬೇಕಾಗಿದೆ. ಅದರೊಂದಿಗೆ ಹರೇಕಳದ ಡ್ಯಾಂನಿಂದ ನೀರು ತರುವುದು ಕೂಡ ನಡೆದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುವುದು ನಿಲ್ಲುತ್ತದೆ. ಇನ್ನು ಜನರು ಕೇಳುತ್ತಿರುವುದು ಸರಿಯಾದ ಕಸ ತ್ಯಾಜ್ಯ ಸಂಗ್ರಹ ವ್ಯವಸ್ಥೆ. ಅದನ್ನು ಈಗ ಆಂಟೋನಿ ವೇಸ್ಟ್ ನವರು ನಡೆಸುತ್ತಿದ್ದಾರೆ. ಅವರ ಅವಧಿ ಮುಗಿದು ಅವರಿಗೆ ಪ್ರತಿ ಬಾರಿ ವಿಸ್ತರಣೆ ಸಿಗುತ್ತಾ ಇದೆ. ಅದು ತಪ್ಪಬೇಕು. ಈ ಸಮಸ್ಯೆಗೆ ಬೇರೆಯದ್ದೇ ಒಂದು ವ್ಯವಸ್ಥೆ ಮುಂದಿನ ಅವಧಿಯಲ್ಲಿ ಮೊದಲಾಗಿ ಮಾಡಿ ಮುಗಿಸಬೇಕು. ಮೂರನೇಯದ್ದು ಜೋರು ಮಳೆ ಬಂದರೆ ಡ್ರೈನೇಜ್ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ಕೃತಕ ಕಾರಂಜಿಯಂತೆ ಹೊರಗೆ ಚಿಮ್ಮುವುದು. ಅದಕ್ಕೆ ಮುಖ್ಯ ಕಾರಣ ಅನೇಕ ಬೃಹತ್ ವಸತಿ ಸಮುಚ್ಚಯದವರು ತಮ್ಮ ವ್ಯಾಪ್ತಿಯಲ್ಲಿ ಬೀಳುವ ಮಳೆಯ ನೀರನ್ನು ಡ್ರೈನೇಜಿಗೆ ಕನೆಕ್ಷನ್ ಕೊಟ್ಟಿರುವುದು. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಬಹಳ ಪ್ರಮುಖವಾಗಿ ಆಗಬೇಕಿರುವುದು ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ.

ವೇದವ್ಯಾಸ ಕಾಮತ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಹಂಪನಕಟ್ಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಸಮುಚ್ಚಯ ಕಾಮಗಾರಿ ಆರಂಭಗೊಂಡಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಗೆ ಆದ್ಯತೆ, ಭವಿಷ್ಯದ ಟ್ರಾಫಿಕ್ ನಿರ್ವಹಣೆಗೆ ವಿಶೇಷ ಯೋಜನೆ, ಕಮಾಂಡ್ ಕಂಟ್ರೋಲ್ ಮೂಲಕ ಟ್ರಾಫಿಕ್ ನಿರ್ವಹಣೆ, ಅತ್ಯಾಧುನಿಕ ಮಾದರಿಯ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಲ್ ಇಂಟಲಿಜೆನ್ಸ್ ಕ್ಯಾಮೆರಾ ಅಳವಡಿಸಿ ಟ್ರಾಫಿಕ್ ವ್ಯವಸ್ಥೆ ಸುಧಾರಣೆ ಮುಂತಾದ ಅಂಶಗಳನ್ನು ಸೇರಿಸಿದ್ದಾರೆ. ಇದೆಲ್ಲಾ ಕ್ರಮಬದ್ಧವಾಗಿ ಆಗಬೇಕಾದರೆ ಇದಕ್ಕೆ ಪೊಲೀಸ್ ಇಲಾಖೆಯಲ್ಲಿನ ಮಾನವ ಸಂಪನ್ಮೂಲ ಅಂದರೆ ಸಿಬ್ಬಂದಿಗಳ ಕರ್ತವ್ಯದ ಗರಿಷ್ಟ ಬಳಕೆ ಆಗಬೇಕು. ಟ್ರಾಫಿಕ್ ಪೊಲೀಸರನ್ನು ಸಮರ್ಥವಾಗಿ ಬಳಸಿ ಅವರಿಂದ ಕೆಲಸ ತೆಗೆಸಬೇಕು. ಈಗ ನೋಡಿ, ಮಂಗಳೂರು ನಗರದ ರಸ್ತೆಗಳು ಸಾಕಷ್ಟು ಅಗಲವಾಗಿದೆ. ಆದರೂ ಟ್ರಾಫಿಕ್ ಜಾಮ್ ತಪ್ಪಿಲ್ಲ. ಯಾಕೆಂದರೆ ವಾಹನಗಳನ್ನು ಎಲ್ಲೆಲ್ಲಾ ರಸ್ತೆ ಅಗಲವಾಗಿದೆಯೋ ಅಲ್ಲಿಯೇ ತಂದು ನಿಲ್ಲಿಸಲಾಗುತ್ತದೆ. ಆದ್ದರಿಂದ ಅಂತಹ ಮುಖ್ಯ ರಸ್ತೆಗಳನ್ನು ನೋ ಪಾರ್ಕಿಂಗ್ ಝೋನ್ ಮಾಡಿಬಿಡಬೇಕು. ಆ ಮೂಲಕ ಆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ರಸ್ತೆಯಲ್ಲಿ ಜಾಗ ಖಾಲಿ ಇದ್ದ ಕಡೆ ವಾಹನಗಳನ್ನು ನಿಲ್ಲಿಸಿ ಚಾಲಕರು ಎಲ್ಲಿಯೋ ಹೋಗುವುದನ್ನು ಕಡಿಮೆ ಮಾಡಬಹುದು. ಇನ್ನು ನಗರದ ಯಾವೆಲ್ಲ ಕಟ್ಟಡಗಳಲ್ಲಿ ಪಾರ್ಕಿಂಗ್ ಜಾಗವಿಲ್ಲದೆ ಅಲ್ಲಿಗೆ ಬರುವ ಗ್ರಾಹಕರು ಅಥವಾ ಉದ್ಯೋಗಿಗಳು ರಸ್ತೆಯಲ್ಲಿಯೇ ವಾಹನ ಪಾರ್ಕ್ ಮಾಡಿ ಹೋಗುವ ಪರಿಸ್ಥಿತಿ ಇದೆ ಎನ್ನುವುದನ್ನು ಮುಂದಿನ ಅವಧಿಯ ಆರಂಭದಲ್ಲಿಯೇ ಪಟ್ಟಿ ಮಾಡಬೇಕು. ಅಂತಹ ಕಟ್ಟಡಗಳ ಮಾಲೀಕರಿಗೆ ನೋಟಿಸು ಕೊಡಬೇಕು. ಪಾಲಿಕೆಯಿಂದ ಲೈಸೆನ್ಸ್ ಪಡೆದುಕೊಳ್ಳುವಾಗ ಕಟ್ಟಡದ ಯಾವ ಭಾಗದಲ್ಲಿ ಪಾರ್ಕಿಂಗ್ ಎಂದು ನಮೂದಿಸಲಾಗಿತ್ತೋ ಅಲ್ಲಿ ಈಗ ಏನಾಗಿದೆ ಎಂದು ನೋಡಬೇಕು. ಪಾರ್ಕಿಂಗ್ ಗಾಗಿ ಮೀಸಲಿರಿಸಿದ ಜಾಗದಲ್ಲಿ ಕಟ್ಟಡದ ಮಾಲೀಕರು ಏನಾದರೂ ಅನಧಿಕೃತ ನಿರ್ಮಾಣ ಮಾಡಿದ್ದಾರೆ ಎಂದಾದರೆ ಅದನ್ನು ಕಾನೂನಿನ ನಿಯಮದ ಅಡಿಯಲ್ಲಿಯೇ ತೆರವು ಮಾಡಲು ಸೂಚನೆ ನೀಡಬೇಕು. ಆಗ ಆ ಕಟ್ಟಡಕ್ಕೆ ಬರುವ ಗ್ರಾಹಕರು, ಸಿಬ್ಬಂದಿಗಳು ಶಾಸಕರಿಗೆ ಆಭಾರಿಯಾಗಿರುತ್ತಾರೆ. ಇನ್ನು ಟ್ರಾಫಿಕ್ ಸಮಸ್ಯೆ ಸುಧಾರಿಸಲು ಇರುವ ಮೂರನೇ ಅಸ್ತ್ರ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದಂತೆ ವೆಂಡರ್ ಸ್ಟ್ರೀಟ್ (ಬೀದಿಬದಿ ವ್ಯಾಪಾರಿಗಳ ಬೀದಿ) ಮಾಡಿ ಅಲ್ಲಿಯೇ ಕಡ್ಡಾಯವಾಗಿ ವ್ಯಾಪಾರಕ್ಕೆ ಕುಳಿತುಕೊಳ್ಳಬೇಕೆಂದು ಸೂಚನೆ ನೀಡಬೇಕು. ಆಗ ನಗರದ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳಿಂದ ರಸ್ತೆ ಅಗಲಕಿರಿದಾಗುವುದಿಲ್ಲ. ಹೀಗೆ ಮೂರು ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದೇನೂ ರಾಕೆಟ್ ವಿಜ್ಞಾನ ಅಲ್ಲ. ಮನಸ್ಸು ಮಾಡಿದರೆ ಸಾಧ್ಯವಿದೆ. ಆದರೆ ಎಲ್ಲಿಂದಲೂ ಒತ್ತಡ ಬರಬಾರದು. ಅದರೊಂದಿಗೆ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲೇಬೇಕೆಂಬ ಇಚ್ಚಾಶಕ್ತಿ ಪ್ರಬಲವಾಗಿರಬೇಕು!!

0
Shares
  • Share On Facebook
  • Tweet It




Trending Now
ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
Hanumantha Kamath October 28, 2025
ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
Hanumantha Kamath October 28, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
  • Popular Posts

    • 1
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • 2
      ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • 3
      ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • 4
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 5
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!

  • Privacy Policy
  • Contact
© Tulunadu Infomedia.

Press enter/return to begin your search