• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!

Hanumanth Kamath Posted On June 5, 2023
0


0
Shares
  • Share On Facebook
  • Tweet It

ಕರ್ನಾಟಕದ ನೂತನ ರಾಜ್ಯ ಸರಕಾರಕ್ಕೆ ಬ್ರಾಹ್ಮಣ ಸಮುದಾಯದ ಮೇಲೆ ಎಷ್ಟು ಪ್ರೀತಿ ಇದೆಯೋ, ಗೊತ್ತಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರುವ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಕ್ಕೂ ಮೀಸಲಾತಿಯನ್ನು ನೀಡಬೇಕು ಎನ್ನುವ ತೀರ್ಪನ್ನು ಪಾಲಿಸಬೇಕಾಗಿದೆ. ಮೀಸಲಾತಿ ಎಂದರೆ ಕೇವಲ ಜಾತಿ, ಧರ್ಮದ ಆಧಾರದಲ್ಲಿ ಮಾತ್ರವೇ ವಿನ: ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೂಲಕ ಸಂವಿಧಾನದ ಆಶಯಗಳಿಗೆ ಇದು ವಿರುದ್ಧವಾಗಿದೆ ಎಂದು ಸುಮಾರು 30 ಅರ್ಜಿಗಳು ಬಂದಿದ್ದವು. ಆದರೆ ಸುಪ್ರಿಂಕೋರ್ಟಿನ ಪಂಚ ನ್ಯಾಯಮೂರ್ತಿಗಳ ಪೀಠದ ಬಹುಮತದ ಆಧಾರದ ಮೇಲೆ ಆರ್ಥಿಕ ದುರ್ಬಲ ವರ್ಗಗಳಿಗೆ ಶೇಕಡಾ 10 ಮೀಸಲಾತಿ ನೀಡುವ ತೀರ್ಪನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದೆ.

Linguistic Minorities ಕೋಟಾದಲ್ಲಿ ಏನಿದೆ?

ಜನಸಾಮಾನ್ಯರಲ್ಲಿ ಬಹಳ ಹಿಂದಿನಿಂದಲೂ ಒಂದು ತಪ್ಪು ಅಭಿಪ್ರಾಯ ಇದೆ. ಅದೇನೆಂದರೆ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಮೀಸಲಾತಿ ಅಗತ್ಯವಿಲ್ಲ, ಯಾಕೆಂದರೆ ಅವರು ಆರ್ಥಿಕವಾಗಿ ಉನ್ನತ ಸ್ಥಾನಮಾನ ಹೊಂದಿದ್ದಾರೆ ಎನ್ನುವ ತಪ್ಪು ತಿಳುವಳಿಕೆ ಇದೆ. ಬ್ರಾಹ್ಮಣರಿಗೆ ಮೇಲ್ವರ್ಗದವರು ಎಂದು ಹಣೆಪಟ್ಟಿ ಕಟ್ಟಿ ಸರಕಾರದ ಎಲ್ಲಾ ಸೌಲಭ್ಯಗಳಿಂದ ಅವರನ್ನು ದೂರ ಇಡುವ ಪ್ರಯತ್ನ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಎಂದ ಕೂಡಲೇ ಬ್ರಾಹ್ಮಣರ ಪರಿಸ್ಥಿತಿ ಹೇಗಿದೆ ಎಂದರೆ ಎಲ್ಲರಿಗೆ ಕೊಟ್ಟು ಉಳಿದರೆ ಮಾತ್ರ ಎಂಬ ವಾತಾವರಣ ಸೃಷ್ಟಿಯಾಗಿದೆ. ಬ್ರಾಹ್ಮಣರಲ್ಲಿಯೂ ಬಡವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದರೆ ನಂಬುವವರ ಸಂಖ್ಯೆ ಕಡಿಮೆ ಇದೆ. ಇದನ್ನು ಮನಗಂಡು ನರೇಂದ್ರ ಮೋದಿ ಸರಕಾರ ಆರ್ಥಿಕ ದುರ್ಬಲ ವರ್ಗದವರಿಗೆ ಹತ್ತು ಶೇಕಡಾ ಮೀಸಲಾತಿಯನ್ನು ಘೋಷಿಸಿತ್ತು. ಆದರೆ ಹಿಂದಿನ ಭಾರತೀಯ ಜನತಾ ಪಾರ್ಟಿಯ ನಮ್ಮ ರಾಜ್ಯ ಸರಕಾರ ಅದನ್ನು ಜಾರಿಗೆ ತರುವ ಬಗ್ಗೆ ಏನೂ ಆಸಕ್ತಿ ತೋರಿಸಿರಲಿಲ್ಲ. ಇನ್ನು ನಾವು ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿ ಅದನ್ನು ಪಡೆದುಕೊಳ್ಳುವಾಗ ಅದರಲ್ಲಿ ಬ್ರಾಹ್ಮಣ ಎಂದು ಬರೆದುಕೊಡುವುದರಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಅಂತಹ ಪ್ರಯೋಜನ ಇಲ್ಲ. ಅದರ ಬದಲಿಗೆ ಸರ್ಟಿಫಿಕೇಟ್ ನಲ್ಲಿ ಜಿಎಸ್ ಬಿ ಎಂದು ಬರೆಯುವುದರಿಂದ ಭಾಷಾವಾರು ಅಲ್ಪಸಂಖ್ಯಾತ ಅಂದರೆ Linguistic Minorities ಕೋಟಾದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಸಾಧ್ಯ. ಉದಾಹರಣೆಗೆ ಕೆಎಂಸಿ ಮೆಡಿಕಲ್ ಕಾಲೇಜ್ ಭಾಷಾವಾರು ಅಲ್ಪಸಂಖ್ಯಾತ ಸ್ಥಾನಮಾನ ಪಡೆದಿರುವ ಕಾಲೇಜು ಆಗಿರುವುದರಿಂದ ಅಲ್ಲಿ ಜಿಎಸ್ ಬಿಗಳಿಗೆ ಮೀಸಲಾತಿ ಇದೆ. ಅದೇ ಸೌಲಭ್ಯ ಮಂಗಳೂರಿನ ಎಜೆ ಕಾಲೇಜಿನಲ್ಲಿ ಬಂಟ ಸಮುದಾಯದ ಶಿಕ್ಷಣಾರ್ಥಿಗಳಿಗೂ ಇದೆ. ಯಾಕೆಂದರೆ ಎಜೆ ಶಿಕ್ಷಣ ಸಂಸ್ಥೆಗಳು ಕೂಡ Linguistic Minorities ಅಡಿಯಲ್ಲಿ ಬರುತ್ತದೆ.

ಪೌರಕಾರ್ಮಿಕರಲ್ಲಿಯೂ ಬ್ರಾಹ್ಮಣರಿದ್ದಾರೆ!!

ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿರುವ ಹಾಗೆ ದೆಹಲಿ ರಾಜ್ಯದಲ್ಲಿಯೇ ಸುಮಾರು 75% ಪೌರ ಕಾರ್ಮಿಕರು ಬ್ರಾಹ್ಮಣ ಸಮಾಜಕ್ಕೆ ಸೇರಿದ್ದಾರೆ. ಅದೇ ರೀತಿಯಲ್ಲಿ ದೆಹಲಿ, ಮುಂಬೈ, ಬಿಹಾರ, ಉತ್ತರ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕರಲ್ಲಿ ಹೆಚ್ಚು ಕಡಿಮೆ 50% ಜನರು ಬ್ರಾಹ್ಮಣ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅಲ್ಲಿ ಬ್ರಾಹ್ಮಣ ಎಂದರೆ ಪಂಡಿತ್, ಮಿಶ್ರಾ, ಶರ್ಮಾ ಹೀಗೆ ಬೇರೆ ಬೇರೆ ಉಪನಾಮಗಳಿಂದ ಕೂಡಿದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಜಿಎಸ್ ಬಿ, ಶಿವಳ್ಳಿ, ಹವ್ಯಕ, ಸಾರಸ್ವತ್ ಹೀಗೆ ಬೇರೆ ಬೇರೆ ಉಪವರ್ಗಗಳು ಇದ್ದ ಹಾಗೆ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರನ್ನು ಈ ಮೀಸಲಾತಿಗೆ ಸೇರಿಸುವ ಮೂಲಕ ಅವರಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗಿದೆ.
ಒಂದು ಕಾಲದಲ್ಲಿ ಬ್ರಾಹ್ಮಣರು ಎಂದರೆ ದೇವಸ್ಥಾನಗಳಲ್ಲಿ ಪೌರೋಹಿತ್ಯ ಮಾಡಿ ಅಲ್ಲಿಯೇ ಸಂಬಳ, ಊಟ, ಮನೆ, ದಕ್ಷಿಣೆ ಪಡೆದುಕೊಂಡು ಆರಾಮವಾಗಿ ಇದ್ದಾರೆ ಎನ್ನುವ ಭಾವನೆ ಇತ್ತು. ಇನ್ನು ಬ್ರಾಹ್ಮಣರು ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದ ಕಾರಣ ಅವರಿಗೆ ಉನ್ನತ ಗೌರವಗಳು ಸಮಾಜದಲ್ಲಿ ಸಿಗುತ್ತಿದ್ದವು. ಅದರಿಂದ ಮೇಲ್ನೋಟಕ್ಕೆ ಬ್ರಾಹ್ಮಣರು ಅಂದರೆ ಮೀಸಲಾತಿ ಅಗತ್ಯವಿಲ್ಲದವರು ಎಂಬ ಭಾವನೆ ಇತ್ತು. ಆದರೆ ಕಾಲಾನಂತರದಲ್ಲಿ ಪರಿಸ್ಥಿತಿ ಬದಲಾಗಿದ್ದು, ಅರ್ಚಕ ವರ್ಗದವರಿಗೆ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗದಿರುವ ಪರಿಸ್ಥಿತಿ ಸೃಷ್ಟಿಯಾಯಿತು. ಅದರಿಂದ ಬ್ರಾಹ್ಮಣ ಸಮಾಜ ನಿಧಾನವಾಗಿ ಬೇರೆ ಉದ್ಯೋಗಗಳತ್ತ ಕಣ್ಣು ಹಾಯಿಸಿತು. ವಿದ್ಯಾಭ್ಯಾಸದಲ್ಲಿಯೂ ಬೇರೆ ಬೇರೆ ಅವಕಾಶಗಳನ್ನು ಪಡೆಯುವತ್ತ ದೃಷ್ಟಿ ಹರಿಸತೊಡಗಿತು. ಆಗ ಎಲ್ಲೆಡೆಯಿಂದ ಬ್ರಾಹ್ಮಣರಿಗೂ ಸ್ಪರ್ಧೆ ನಿರ್ಮಾಣವಾಯಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸಹಿತ ಕೆಲವು ಜಾತಿಯವರಿಗೆ 50% ತನಕ ಮೀಸಲಾತಿ ಜಾತಿ ಆಧಾರಿತವಾಗಿ ಇರುವಾಗ ಮೇಲ್ವರ್ಗ ಎಂದು ಹಣೆಪಟ್ಟಿ ಇರುವ ಬ್ರಾಹ್ಮಣರು
ಎಲ್ಲಿ ತಮ್ಮ ಬೇಡಿಕೆ ಇಡುವುದು? ಇದನ್ನು ಮನಗಂಡು ಮೋದಿ ಸರಕಾರ ಹತ್ತು ಶೇಕಡಾ ಮೀಸಲಾತಿ ಆರ್ಥಿಕವಾಗಿ ಹಿಂದುಳಿದವರಿಗೂ ನೀಡಿದೆ.

ಏನಿದೆ ಮಾನದಂಡ?
ಇದಕ್ಕಿರುವ ಮಾನದಂಡಗಳೆಂದರೆ ವ್ಯಕ್ತಿಯ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. 5 ಎಕರೆಗಿಂತ ಕಡಿಮೆ ಕೃಷಿಭೂಮಿ ಇರಬೇಕು. ಪಟ್ಟಣದಲ್ಲಿ ಒಂದು ಸಾವಿರ ಚದರ ಅಡಿಗಿಂತ ಕಡಿಮೆ ವಿಸ್ತ್ರೀರ್ಣದ ಮನೆ ಹೊಂದಿರಬೇಕು. ಇಷ್ಟನ್ನು ನೀವು ಪಾಲಿಸಿದರೆ ನೀವು ಕೂಡ ಆರ್ಥಿಕವಾಗಿ ಹಿಂದುಳಿದವರಿಗೆ ಸಿಗುವ ಮೀಸಲಾತಿಯನ್ನು ಪಡೆದುಕೊಳ್ಳಬಹುದು. ಈಗ ಇದಕ್ಕಿರುವ ಗೊಂದಲಗಳು ಪರಿಹಾರ ನಿಜವಾದ ಅರ್ಥದಲ್ಲಿ ಮೀಸಲಾತಿ ಎನ್ನುವುದು ಆರ್ಥಿಕವಾಗಿ ಹಿಂದುಳಿದವರಿಗೆ ಎನ್ನುವ ವಾತಾವರಣ ಸೃಷ್ಟಿಯಾಗಲಿ. ಬಡವರು ಯಾವ ಜಾತಿಯಲ್ಲಿ ಇದ್ದರೂ ಅವರಿಗೆ ನಿಜವಾದ ಸೌಲಭ್ಯ ಸಿಗಲಿ ಎನ್ನುವುದು ಅಪೇಕ್ಷೆ..

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumanth Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumanth Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search