• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹೊಸ ಐಡಿಯಾ ಇದೆ!

Hanumantha Kamath Posted On July 5, 2023
0


0
Shares
  • Share On Facebook
  • Tweet It

ಮಂಗಳೂರು ನಗರದಲ್ಲಿ ಎರಡು ಕಡೆ ಪ್ಲೈಒವರ್ ಗಳು ನಿರ್ಮಾಣವಾಗಬೇಕು ಎನ್ನುವ ಪ್ರಸ್ತಾವನೆ ಬಹಳ ಹಿಂದಿನದು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಯಾವುದೇ ವಿಘ್ನಗಳು, ಆಕ್ಷೇಪಗಳು ಇಲ್ಲದೇ ಹೋದರೆ ನಾವು ಸರ್ಕೂಟ್ ಹೌಸಿನ ಎದುರಿನಿಂದ ಕೆಪಿಟಿ ಕಾಲೇಜಿನ ಮುಂದಿನ ತನಕ ಮತ್ತು ನಂತೂರ್ ಜಂಕ್ಷನ್ ಮೇಲೆ ಎರಡು ಪ್ರತ್ಯೇಕ ಮೇಲ್ಸೆತುವೆಗಳನ್ನು ಕಾಣಬಹುದಾಗಿದೆ. ಇದರಿಂದ ವಾಹನಗಳ ದಟ್ಟಣೆಗೆ ಪರಿಹಾರ ಕಂಡುಬರಲಿದೆ. ಅದರೊಂದಿಗೆ ಬೆಂದೂರ್ ವೆಲ್, ನಂತೂರ್ ಏರಿಯಾಗಳಲ್ಲಿ ಅಮಾಯಕ ಜೀವಗಳ ಬಲಿ ಮತ್ತು ಅನೇಕರು ಅಪಘಾತದಿಂದ ಗಾಯಾಳುಗಳಾಗುವುನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ಒಂದು ಶಾಶ್ವತ ಪರಿಹಾರಕ್ಕೆ ಇಲ್ಲಿ ಪ್ಲೈ ಒವರ್ ಗಳು ಕಡ್ಡಾಯ ಎನ್ನುವುದನ್ನು ಯಾವ ಜನಸಾಮಾನ್ಯ ಕೂಡ ಕಣ್ಣಮುಚ್ಚಿ ಹೇಳಬಹುದು. ಹಾಗಾದರೆ ಎಲ್ಲವೂ ಸಲೀಸಾ? ಖಂಡಿತ ಅಲ್ಲ. ಯಾಕೆ?
ಯಾವುದೇ ಒಂದು ದೊಡ್ಡ ನಿರ್ಮಾಣ ಆಗುವಾಗ ಸಹಜವಾಗಿ ಒಂದಿಷ್ಟು ಬದಲಾವಣೆ ಆಗಿಯೇ ಆಗುತ್ತದೆ. ಹಾಗೆ ಎರಡು ಪ್ಲೈ ಓವರ್ ಗಳು ನಿರ್ಮಾಣವಾಗುವಾಗ ಆ ಪ್ರದೇಶದಲ್ಲಿ ಇರುವ ಮರಗಳು ಈಗ ಇದ್ದ ಪ್ರದೇಶದಲ್ಲಿಯೇ ಇರಬೇಕು, ಕಡಿಯುವಂತಿಲ್ಲ ಎಂದು ಹಟ ಹಿಡಿದರೆ ಪ್ಲೈ ಒವರ್ ಗಳನ್ನು ಮರೆತುಬಿಡಬೇಕು. ಪ್ಲೈ ಒವರ್ ಬೇಡಾ ಎಂದರೆ ಮರಗಳು ಹಾಗೆ ಉಳಿಯಬಹುದು. ಆದರೆ ಅಪಘಾತದಲ್ಲಿ ದುದೈವಿಗಳು ಬಲಿಯಾದಾಗ ” ಎಲ್ಲಿ ಹೋದರು ಜನಪ್ರತಿನಿಧಿಗಳು, ಕಣ್ಣು ಕಾಣುವುದಿಲ್ಲವೇ? ಜೀವಕ್ಕೆ ಬೆಲೆ ಇಲ್ಲವೇ? ಮೇಲ್ಸೆತುವೆ ನಿರ್ಮಿಸಲು ಆಗುವುದಿಲ್ಲವೇ” ಎಂದು ಕೆಲವರು ಮಾಧ್ಯಮಗಳ ಮುಂದೆ ಹಾಗೂ ನಂತೂರ್ ಜಂಕ್ಷನ್ ನಲ್ಲಿ ನಿಂತು ಪ್ರತಿಭಟನೆ ಮಾಡುತ್ತಾರೆ. ಹಾಗಂತ ಪ್ಲೈ ಒವರ್ ಕಟ್ಟುತ್ತೇವೆ ಎಂದು ರೂಪುರೇಶೆ ಸಿದ್ಧಪಡಿಸಿ ಜನರ ಮುಂದೆ ಇಟ್ಟರೆ ಇಷ್ಟು ಮರಗಳನ್ನು ಕಡಿಯಬೇಕಾಗುತ್ತದೆಯಾ? ಇದು ಶುದ್ಧ ಅನ್ಯಾಯ. ಮರಗಳನ್ನು ಉಳಿಸಿ ಎಂದು ಪ್ರತಿಭಟನೆ ಮಾಡುತ್ತಾರೆ. ಅದಕ್ಕಾಗಿ ಸಹಿ ಸಂಗ್ರಹ, ಮೇಲ್ ಅಭಿಯಾನ, ಮನವಿ ಸಲ್ಲಿಕೆ ಹೀಗೆ ವೃಕ್ಷಪ್ರಿಯರನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಯುತ್ತದೆ. ಕೊನೆಗೆ ಐದಾರು ಸಾವಿರ ಜನ ವಿರೋಧ ಮಾಡಿದರೆ ಈ ಅಭಿವೃದ್ಧಿ ಕಾರ್ಯ ನಿಂತುಬಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಎಷ್ಟು ಮರಗಳು ಧರಾಶಾಯಿಗಳಾಗಲಿವೆ!

ಹಾಗಾದರೆ ಈಗ ಪ್ರಕೃತಿ ಪ್ರಿಯರ ಆತಂಕಗಳೇನು? ಒಬ್ಬ ಜನಸಾಮಾನ್ಯನಾಗಿ ಮರಗಳನ್ನು ಕಡಿಯುವುದಕ್ಕೆ ಎಲ್ಲರಂತೆ ನನ್ನ ಸಮ್ಮತಿಯೂ ಇಲ್ಲ. ಆದರೆ ಇಲ್ಲಿ ಪ್ರಕೃತಿಯನ್ನು ಕೂಡ ಉಳಿಸಿ, ಪ್ಲೈಒವರ್ ಕೂಡ ನಿರ್ಮಿಸಬಹುದಾದ ಯೋಜನೆಯನ್ನು ನಾವು ಹಾಕಿಕೊಳ್ಳಬಹುದು. ಈಗ ಒಂದು ಅಂದಾಜಿನ ಪ್ರಕಾರ ಸುಮಾರು ಆರು ನೂರರಷ್ಟು ಮರಗಳು ಅಲ್ಲಿ ನಿರ್ಮಾಣಕ್ಕೆ ಅಡ್ಡಬರುತ್ತಿವೆ. ಅದರಲ್ಲಿ ಸುಮಾರು 370 ರಷ್ಟು ಮರಗಳನ್ನು ಅಲ್ಲಿಂದ ಬೇರೆ ಸ್ಥಳಗಳಿಗೆ ವರ್ಗಾಯಿಸುವ ಯೋಜನೆ ಇದೆ. ಈಗಿನ ಆಧುನಿಕ ತಂತ್ರಜ್ಞಾನದ ಮೂಲಕ ಮರಗಳನ್ನು ಬೇರು ಸಹಿತ ಎತ್ತಿ ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಹಾಗೆ ನೆಲದಲ್ಲಿ ಆಳ ಕೊರೆದು ಅಲ್ಲಿ ನೆಡುವ ಪ್ರಕ್ರಿಯೆ ನಡೆಯಲಿದೆ. ಇದು ಈಗಾಗಲೇ ಹಲವು ಕಡೆ ಯಶಸ್ವಿಯಾಗಿ ನಡೆದಿದೆ. ಇನ್ನು ಬಾಕಿ ಉಳಿದ ಸಣ್ಣ ಮರಗಳು ಅಂದಾಜು 232 ರಷ್ಟು ಮರಗಳನ್ನು ಕಡಿಯುವ ಅನಿವಾರ್ಯತೆ ಇದೆ. ಈಗ ಈ ಮರಗಳನ್ನು ಉಳಿಸಲು ಹೋದರೆ ಪ್ಲೈ ಒವರ್ ಎನ್ನುವುದು ನಮಗೆ ಮರೀಚಿಕೆಯಾಗಿಯೇ ಉಳಿಯಲಿದೆ. ಹಾಗಾದರೆ ಏನು ಮಾಡಬೇಕು?

ಹೊಸ ಐಡಿಯಾ ಇದೆ!

ಈಗ ಕೆಲವರು ಮರಗಳನ್ನು ಕಡಿಯುವುದಕ್ಕೆ ಏನು ವಿರೋಧ ಮಾಡುತ್ತಿದ್ದಾರೆಯೋ, ಅವರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಈಗ ಕಡಿಯಲೇಬೇಕಾಗಿರುವ ಮರಗಳು ನೈಸರ್ಗಿಕವಾಗಿ ಹುಟ್ಟಿದ್ದಲ್ಲ. ಅವುಗಳನ್ನು ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆಯೇ ನೆಟ್ಟಿರುವಂತಹುದು. ಈಗ ಅದನ್ನು ಕಡಿಯುವಾಗ ಒಂದು ಲಿಖಿತ ಒಪ್ಪಂದವನ್ನು ಬೇಕಾದರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆ ನಾಗರಿಕರೊಂದಿಗೆ ಮಾಡಿಕೊಳ್ಳಲಿ. ಅದೇನೆಂದರೆ ಪ್ಲೈ ಒವರ್ ನಿರ್ಮಾಣದ ನಂತರ ಅದರ ಇಕ್ಕೆಲಗಳಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಈಗ ಕಡಿಯಲಾಗುವ ಮರಗಳ ದುಪ್ಪಟ್ಟು ಸಸಿ, ಗಿಡಗಳನ್ನು ನಾವು ನೆಡುತ್ತೇವೆ. ನಂತರ ಅದು ಬೆಳೆಯುವ ತನಕ ನಮ್ಮ ಇಲಾಖೆ, ಜನರ ಸಹಭಾಗಿತ್ವದಲ್ಲಿ ಪೋಷಿಸುತ್ತದೆ ಎಂದು ಭರವಸೆ ಕೊಡುವಂತೆ ಮಾಡುವುದು. ಆಗ ಪ್ರಕೃತಿಯನ್ನು ಕೂಡ ರಕ್ಷಿಸಿದಂತೆ ಆಗುತ್ತದೆ. ಅದರೊಂದಿಗೆ ಪ್ಲೈ ಒವರ್ ಕೂಡ ನಿರ್ಮಿಸಿದಂತೆ ಆಗುತ್ತದೆ. ಪ್ಲೈ ಒವರ್ ಪ್ರಸ್ತುತ ಅನಿವಾರ್ಯತೆ. ಯಾಕೆಂದರೆ ಅನೇಕ ಯುವಕರನ್ನು, ಮನೆಯ ಆಧಾರಸ್ತಂಭಗಳನ್ನು ನಾವು ಆಗಾಗ ಈ ಭಾಗದಲ್ಲಿ ನಡೆಯುವ ಅಪಘಾತದಲ್ಲಿ ಕಳೆದುಕೊಳ್ಳುತ್ತಾ ಬಂದಿದ್ದೇವೆ.
ಪ್ಲೈ ಒವರ್ ನಿರ್ಮಾಣಕ್ಕೆ ಮರಗಳನ್ನು ಕಡಿಯುವುದಕ್ಕೆ ವಿರೋಧಿಸುವವರ ಬಳಿ ಈ ಯೋಜನೆ ಬಿಟ್ಟು ಬೇರೆ ಐಡಿಯಾಗಳಿವೆಯಾ? ಇದ್ದರೆ ಅವರು ನೀಡಬಹುದು. ಈ ಎರಡು ಪ್ರದೇಶಗಳಲ್ಲಿ ವಿಪರೀತವಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಬೇರೆ ಏನಾದರೂ ಪರ್ಯಾಯ ಯೋಜನೆಗಳಿದ್ದರೆ ಅದನ್ನು ಅಂತವರು ಜನರ ಮುಂದೆ ಇಡಬಹುದು. ಅದು ಬಿಟ್ಟು ಅಮಾಯಕರ ಜೀವ ಉಳಿಯಬೇಕು. ಮರ ಕಡಿಯಬಾರದು. ಈ ಮೇಲಿನ ಐಡಿಯಾದ ಮೇಲೆ ಕೂಡ ನಮಗೆ ಧೈರ್ಯ ಇಲ್ಲ ಎಂದರೆ ಅಂತವರು ತಮ್ಮ ತಲೆಯಲ್ಲಿ ಏನು ತುಂಬಿದ್ದಿರಿ ಎಂದಾದರೂ ಜನರ ಮುಂದೆ ಹೇಳಿ!

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search