ಬಿಜೆಪಿಗೆ ಬಹುಮತ ಇದ್ದರೂ SDPI ಅಧ್ಯಕ್ಷರಾದದ್ದು ಹೇಗೆ?
ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಕೊನೆಗೆ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಂದು ಗ್ರಾಮ ಪಂಚಾಯತ್ ನಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಸದಸ್ಯರು ಬಹುಮತದಲ್ಲಿ ಇರುವಾಗ ಅಲ್ಲಿ ಎಸ್ ಡಿಪಿಐ ಬೆಂಬಲಿತ ವ್ಯಕ್ತಿ ಹೇಗೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ವಿಷಯ ಸಿಂಪಲ್. ಏನೆಂದರೆ ಗ್ರಾಮ ಪಂಚಾಯತ್ ನಲ್ಲಿ ಯಾರೂ ಕೂಡ ಪಕ್ಷದ ಚಿನ್ನೆಯಡಿ ಸ್ಪರ್ಧೆ ಮಾಡುವುದಿಲ್ಲ. ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಇಂತವರಿಗೆನೆ ಮತ ಹಾಕಬೇಕು ಎಂದು ಯಾವ ಪಕ್ಷ ಕೂಡ ಯಾರಿಗೂ ನಿರ್ದೇಶನ ಮಾಡುವಂತಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ರಾಜಕೀಯ ಇರಬಾರದು ಎಂದು ಮಹಾತ್ಮ ಗಾಂಧಿಯವರು ಆವತ್ತು ಕಂಡ ಕನಸು ಇವತ್ತಿಗೂ ನಡೆಯುತ್ತಿದೆ.
ಗ್ರಾಮ ಪಂಚಾಯತ್ ಸದಸ್ಯರ ತಪ್ಪಿಗೆ ಬಿಜೆಪಿ ಪಕ್ಷ ಹೊಣೆನಾ?
ಈಗ ತಲಪಾಡಿ ವಿಷಯಕ್ಕೆ ಬರೋಣ. ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಒಟ್ಟು ಸಂಖ್ಯಾಬಲ 24. ಅದರಲ್ಲಿ ಬಿಜೆಪಿ ಬೆಂಬಲಿತರು 13. ಎಸ್ ಡಿಪಿಐ ಬೆಂಬಲಿತರು 10. ಒಬ್ಬರು ಕಾಂಗ್ರೆಸ್ ಬೆಂಬಲಿತರು ಇದ್ದಾರೆ. ಬಿಜೆಪಿ ಪಕ್ಷದ ತೀರ್ಮಾನದಂತೆ ಸತ್ಯರಾಜ್ ಎಂಬವರನ್ನು ಅಧ್ಯಕ್ಷರಾಗಿ ಸೂಚಿಸಲಾಗಿತ್ತು. ಬಹುಮತ ಇರುವುದರಿಂದ ಅವರೇ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ಮುಖಂಡರ ಅನಿಸಿಕೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಸ್ ಡಿಪಿಐ ನ ಆಸೆ, ಆಮಿಷವೋ, ಒತ್ತಡವೋ ಬಲಿಯಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಮ್ಮದ್ ಫಯಾಜ್ ಮತ್ತು ಮಹಮ್ಮದ್ ಅವರು ಅಡ್ಡ ಮತದಾನ ಮಾಡಿದ ಪರಿಣಾಮ ಎಸ್ ಡಿಪಿಐ ಅಧ್ಯಕ್ಷರಾಗಿ ಇಸ್ಮಾಯಿಲ್ ಅವರಿಗೂ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತ್ಯರಾಜ್ ಅವರಿಗೂ ಸಮಬಲದ ಮತಗಳು ಬಿದ್ದಿವೆ.
ಇಲ್ಲಿ ವಿಷಯ ಏನೆಂದರೆ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರೂ ಮಹಮ್ಮದ್ ಫಯಾಜ್ ಹಾಗೂ ಮಹಮ್ಮದ್ ಅವರು ಎಸ್ ಡಿಪಿಐ ಅಧ್ಯಕ್ಷ ಅಭ್ಯರ್ಥಿಗೆ ಮತ ಹಾಕಿದ ಕಾರಣ ಅಲ್ಲಿ ಎಸ್ ಡಿಪಿಐ ಮತ್ತು ಬಿಜೆಪಿ ಸಮಬಲ ಸಾಧಿಸಿದೆ. ಯಾಕೆಂದರೆ ಎಸ್ ಡಿಪಿಐ ಬೆಂಬಲಿತ ಸದಸ್ಯೆ ಹಬೀಬಾ ಹಾಗೀ ಕಾಂಗ್ರೆಸ್ ಬೆಂಬಲಿತ ಸದಸ್ಯ ವೈಭವ್ ಶೆಟ್ಟಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಕೊನೆಗೆ ಚುನಾವಣಾ ಅಧಿಕಾರಿಯವರು ಅದೃಷ್ಟದ ಚೀಟಿಯ ಮೂಲಕ ಎಸ್ ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಅವರನ್ನು ಅಧ್ಯಕ್ಷರೆಂದು ಘೋಷಿಸಿದರು.
ಇದರೊಂದಿಗೆ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪವತಿ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇಲ್ನೋಟಕ್ಕೆ ಎಸ್ ಡಿಪಿಐ ನಿಂದ ಅಧ್ಯಕ್ಷರು, ಬಿಜೆಪಿಯಿಂದ ಉಪಾಧ್ಯಕ್ಷರು ಆಗಿರುವುದರಿಂದ ಅದು ಒಳಹೊಂದಾಣಿಕೆ ಎಂದು ಅನಿಸಿ ಅದನ್ನು ರಾಷ್ಟ್ರೀಯ ವಾಹಿನಿಗಳು ಕೂಡ ಸುದ್ದಿ ಮಾಡಿವೆ. ಆದರೆ ಯಾವುದೇ ಪಕ್ಷದ ಬೆಂಬಲದಿಂದ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಉಪಾಧ್ಯಕ್ಷರ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಬಂದ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ವಿನ: ಯಾವುದೇ ಪಕ್ಷದ ಬೆಂಬಲದಿಂದ ಅಲ್ಲ.
Leave A Reply