ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
ಭಾರತದ ರೈಲ್ವೆ ವ್ಯವಸ್ಥೆಯಲ್ಲಿ ಈಗ ಅಮೂಲಾಗ್ರ ಬದಲಾವಣೆಗಳು ಆಗಿರುವುದನ್ನು ನೀವು ಗಮನಿಸಬಹುದು. ಕೆಲವು ವರ್ಷಗಳ ಹಿಂದೆ ರೈಲು ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದದ್ದೇ ಅದರ ಕೋಚುಗಳ ಬಣ್ಣ. ಕೆಳಗೆ ಕಡು ನೀಲಿಬಣ್ಣ ಮತ್ತು ಮಧ್ಯದಲ್ಲಿ ತಿಳಿ ನೀಲಿಬಣ್ಣದ ಕೋಚುಗಳು.
ಅಲ್ಲಿಂದ ಆರಂಭವಾದ ರೈಲುಗಳ ಯಶೋಗಾಥೆ ಈಗ ಅತ್ಯಾಧುನಿಕವಾದ ವಂದೇ ಭಾರತ್ ರೈಲುಗಳ ತನಕ ಬಂದು ತಲುಪಿದೆ. ರೈಲ್ವೆ ತಂತ್ರಜ್ಞಾನವನ್ನು ತುಲನೆ ಮಾಡುವಾಗ ಕಾಂಗ್ರೆಸ್ ಅವಧಿಯಲ್ಲಿದ್ದ ರೈಲು ಬೋಗಿಗಳ ವ್ಯವಸ್ಥೆ ಮತ್ತು ಈಗ ಮೋದಿ ಯುಗದಲ್ಲಿ ರೈಲುಗಳ ಆಕರ್ಷಣೆ ಎಂದು ಎರಡು ವಿಧವಾಗಿ ಗಮನಿಸಬಹುದು.
ಕೆಲವು ವರ್ಷಗಳ ಹಿಂದೆ ಹೆಚ್ಚಾಗಿ ಕಾಣುತ್ತಿದ್ದಂತಹ ಮತ್ತು ಈಗಲೂ ಅಲ್ಲಲ್ಲಿ ನಾವು ನೋಡುತ್ತಿರುವ ರೈಲು ಬೋಗಿಗಳನ್ನು ಐಸಿಎಫ್ ತಂತ್ರಜ್ಞಾನದಿಂದ ತಯಾರಿಸಿದ್ದು ಎನ್ನಬಹುದು. ಐ ಎಂದರೆ Integral, ಸಿ ಎಂದರೆ ಕೋಚ್ ಮತ್ತು ಎಫ್ ಎಂದರೆ ಫ್ಯಾಕ್ಟರಿ. ಇದು ಸ್ವಿಸ್ ತಂತ್ರಜ್ಞಾನವಾಗಿದ್ದು, 1955 ರಲ್ಲಿ ಅನುಷ್ಟಾನಕ್ಕೆ ಬಂದಿತ್ತು. ಈ ಶೈಲಿಯ ರಚನೆಯನ್ನು 2009 ರಲ್ಲಿಯೇ ಫಿಲಿಫೈನ್ಸ್ ನಂತಹ ದೇಶಗಳಲ್ಲಿ ಸ್ತಬ್ಧಗೊಳಿಸಲಾಗಿದೆ. ಆದರೂ ಭಾರತದಲ್ಲಿ ಇದು ಕೆಲವು ಕಡೆ ಈಗಲೂ ಚಲಾವಣೆಯಲ್ಲಿರುವುದನ್ನು ನಾವು ಗಮನಿಸಬಹುದು.
ನಂತರ ಬಂದಿರುವುದೇ ಎಲ್ ಎಚ್ ಬಿ ಕೋಚ್ ನಿರ್ಮಾಣ. ಎಲ್ ಎಂದರೆ Linke ಎಫ್ ಎಂದರೆ Hofmann ಬಿ ಎಂದರೆ Busch. 2014 ರಲ್ಲಿ ಈ ತಂತ್ರಜ್ಞಾನದಡಿ 543 ಕೋಚುಗಳ ನಿರ್ಮಾಣ ಮಾಡಲಾಗಿದ್ದರೆ, 2023 ರಲ್ಲಿ 5869 ಕೋಚುಗಳನ್ನು ನಿರ್ಮಿಸಲಾಗಿದೆ. ಎಲ್ ಎಚ್ ಬಿ ಕೋಚುಗಳನ್ನು ನೀವು ವಿಶೇಷವಾಗಿ ರಾಜಧಾನಿ/ಶತಾಬ್ದಿ ರೈಲುಗಳಲ್ಲಿ ಕಾಣಬಹುದು. ಇದು 1962ರ ತಂತ್ರಜ್ಞಾನವಾಗಿದ್ದರೂ, ಭಾರತಕ್ಕೆ 1998 ರಲ್ಲಿ ಪರಿಚಯವಾಗಿತ್ತು. ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ದೂರದೃಷ್ಟಿಯಿಂದಾಗಿ ಎಲ್ ಎಚ್ ಬಿ ತಂತ್ರಜ್ಞಾನ ಭಾರತದ ರೈಲು ಬೋಗಿಗಳ ನಿರ್ಮಾಣಕ್ಕೆ ಕಾರಣವಾಯಿತು. ಇದನ್ನು ಆಲ್ ಸ್ಟೋಮ್ ಟ್ರಾನ್ಸಪೋರ್ಟ್ ಇಂಡಿಯಾ ಎಂಬ ಸಂಸ್ಥೆ ನಿರ್ಮಿಸುತ್ತದೆ. ಇದು ಬೆಂಗಳೂರಿನಲ್ಲಿದೆ.
ಕೊನೆಗೂ ಭಾರತ ತನ್ನ ಸ್ವಂತ ತಂತ್ರಜ್ಞಾನವನ್ನು ಬಳಸಿ ರೈಲು ಬೋಗಿಗಳನ್ನು ನಿರ್ಮಿಸಲು ಆರಂಭಿಸಿದ್ದೇ 2019 ರಲ್ಲಿ. ವಂದೇ ಭಾರತ್ ನಂತಹ ರೈಲುಗಳು ಆಧುನಿಕ ರೀತಿಯಲ್ಲಿ ನಿರ್ಮಾಣಗೊಂಡು ಜನಮನ ಸೂರೆಗೊಳ್ಳುತ್ತಿವೆ. ಮೋದಿಯವರ ದೂರದೃಷ್ಟಿಯ ಪ್ರತಿಫಲದಿಂದಾಗಿ ಈಗ ಭಾರತದ ತಂತ್ರಜ್ಞಾನ ಮತ್ತು ಇಲ್ಲಿಯೇ ನಿರ್ಮಾಣಗೊಂಡ ರೈಲು ಬೋಗಿಗಳು ಭೌವಿಷ್ಯದ ಭಾರತ ಎನ್ನಬಹುದು.
Leave A Reply