• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆ!

Santhosh Kumar Mudradi Posted On January 5, 2024
0


0
Shares
  • Share On Facebook
  • Tweet It

95 ಪರ್ಸೆಂಟ್ ಅಂಕವನ್ನು ಪಡೆದ ಕೇಶವನಿಗಿಂತ 35% ಅಂಕವನ್ನು ಪಡೆದ ಶಿವಲಿಂಗಪ್ಪ ಜಾತಿಯ ಆಧಾರದಲ್ಲಿ ಐಎಎಸ್ ಕೆಲಸವನ್ನು ಗಿಟ್ಟಿಸಿಕೊಂಡ. ಆತನ ತಮ್ಮ ನಿಜಲಿಂಗಪ್ಪ ಇಷ್ಟೇ ಮಾರ್ಕನ್ನು ತೆಗೆದುಕೊಂಡು ಈಗ ಜಡ್ಜ್ ಆಗಿದ್ದಾನೆ. ಮತ್ತೊಬ್ಬ ತಮ್ಮ ಪೊಲೀಸ್ ಆಗಿದ್ದಾನೆ. ಯಾರು ಕೂಡ ಕಲಿತು ಹುದ್ದೆಯನ್ನು ಗಿಟ್ಟಸಿಕೊಂಡವರಲ್ಲ.

ಭೂ ಮಸೂದೆಯ ಕಾನೂನಿನಡಿಯಲ್ಲಿ 50 ಎಕರೆಯನ್ನು ಕಳೆದುಕೊಂಡ ಕೇಶವ ಜೋಶಿಗಳು 5 ಸೆನ್ಸ್ ಜಾಗದಲ್ಲಿ ಮನೆಯೊಂದಿಗೆ ತಾಗಿಸಿಕೊಂಡು ಅಂಗಡಿಯನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಕೊರೋನದ ಸಂದರ್ಭದಲ್ಲಿ ಪರಿಹಾರ ನಿಧಿಗಾಗಿ ಸಾಲಿಗೆ ನಿಂತರೆ ಹತ್ತಿರದ ಮನೆಯ 10 ಮಕ್ಕಳ ತಂದೆ ಅಬ್ದುಲ್ಲನಿಗೆ 10 ಕೆಜಿ ಅಕ್ಕಿಯೊಂದಿಗೆ ಇನ್ನಿತರ ಧಾನ್ಯ ಕಾಳುಗಳೆಲ್ಲವೂ ಉಚಿತ. ಜಾತಿಯ ಆಧಾರದಲ್ಲಿ ಗತಿ ಇಲ್ಲದಿದ್ದರೂ ಜೋಷಿಯ ಹೊಟ್ಟೆಗೆ ತಣ್ಣೀರ ಬಟ್ಟೆ ಮಾತ್ರ.

ಹಗಲು ರಾತ್ರಿ ಓದಿ ಸರ್ಕಾರದ ಕೆಲಸಕ್ಕೆ ಹೇಗಾದರೂ ಮಾಡಿ ಸೇರಬೇಕೆಂದುಕೊಂಡ ರಾಘು,ಕೊನೆಗೂ ತಾಲೂಕು ಆಫೀಸಿನಲ್ಲಿ ಗುಮಾಸ್ತನಾಗಿ ಸೇರಿಕೊಂಡ. ತಹಸಿಲ್ದಾರನಾಗಿ ಬಂದದ್ದು ಇವನ ಬಾಲ್ಯದ ಗೆಳೆಯ ಹನುಮಂತಪ್ಪ. ಪ್ರತಿಯೊಂದು ಕ್ಲಾಸಿನಲ್ಲೂ ಎರಡೆರಡು ಬಾರಿ ಕೂತು ಜಾತಿಯ ಆಧಾರದಲ್ಲಿ ಅಧಿಕಾರವನ್ನು ಹಾಗೂ ಗೌರವವನ್ನು ಪಡೆದುಕೊಂಡ.

ಎಷ್ಟು ಕಲಿತರು ವಿದ್ಯೆಗೆ ಹಾಗೂ ಯೋಗ್ಯತೆಗೆ ಇಲ್ಲಿ ಬೆಲೆಯೇ ಇಲ್ಲ. ಬ್ರಾಹ್ಮಣರಿಗೆ ದುಡಿದು ತಿನ್ನುವ ಎಂದರೆ ಇದ್ದಬದ್ದ ಕೃಷಿ ಜಾಗವೆಲ್ಲ ಈಗಾಗಲೇ ಕಳೆದುಕೊಂಡಾಗಿದೆ. ಪರಂಪರೆಯಿಂದ ಬಂದ ಮಠ ಮಂದಿರಗಳ ಅರ್ಚಕ ಸ್ಥಾನ ಕೂಡ ಪ್ರಮಾಣ ಪತ್ರದ ಆಧಾರದಲ್ಲಿ ಇನ್ನಿತರ ಜಾತಿಯವರಿಗೆ ಹಂಚಿಕೆಯಾಗುತ್ತಿದೆ. ಪಾರಂಪರಿಕವಾಗಿ ಬಂದ ಯಾವ ವೃತ್ತಿಯೂ ಈಗ ಬ್ರಾಹ್ಮಣರಲ್ಲಿ ಉಳಿದಿಲ್ಲ. ಸಾಧ್ಯವಿದ್ದಷ್ಟು ಮಟ್ಟಿಗೆ ಉಳಿಸಿಕೊಂಡು ಬೆಳೆಸಿಕೊಂಡು ಬಂದರೂ ಕೂಡ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿದೆ ಈ ಸಮಾಜ. ಸಾಮಾಜಿಕವಾಗಿ ಈ ರೀತಿಯಾಗಿ ಪಾರಂಪರಿಕ ವೃತ್ತಿಯನ್ನು ಕಳೆದುಕೊಂಡ ಯಾವ ಜಾತಿಯು ಇರಲಿಕ್ಕಿಲ್ಲ. ಬ್ರಾಹ್ಮಣರಲ್ಲಿ ಬುದ್ಧಿವಂತಿಕೆಯುಳ್ಳವ ಹೇಗಾದರೂ ಬದುಕಿಕೊಳ್ಳುತ್ತಿದ್ದಾನೆ. ಇನ್ನು ಹಣವಂತರು ಸ್ವಂತ ಉದ್ಯಮವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯರ ಬದುಕು ಈ ಜಾತಿಯಾಧಾರಿತ ಮೀಸಲಾತಿಯ ನಡುವಲ್ಲಿ ಸಿಕ್ಕಿ ನೀರಿನಿಂದ ಮೇಲೆ ಬಂದ ಮೀನಿನಂತೆ ಒದ್ದಾಡುತ್ತಿದೆ. ಅತ್ತ ನೀರಿಗೆ ಹೋಗಲು ದಾರಿಯಲ್ಲ. ಇತ್ತ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ.

ಒಕ್ಕಲು ಮಸೂದೆಯಲ್ಲಿ ಕೃಷಿ ಜಾಗವನ್ನು ಪಡೆದುಕೊಂಡವರು ಈಗೇನು ಕೃಷಿ ಮಾಡುತ್ತಿದ್ದಾರೆಯೇ. ಎಲ್ಲಾ ಮಾರಿ ತಿಂದು ದೂರದ ಪಟ್ಟಣಗಳಲ್ಲಿ ಮನೆ ಮಾಡಿಕೊಂಡು ಹಾಯಾಗಿದ್ದಾರೆ. ಸರಕಾರದಿಂದ ಪೇಟೆಗಳಲ್ಲಿ ಸಿಗುವ ಮಾಡ ಎನ್ನುವ ಮನೆಗಳನ್ನು ಸುತಾರಾಂ ಮಾರಲು ಸಾಧ್ಯವಿಲ್ಲ. ಮನೆಯನ್ನು ತೆಗೆದುಕೊಂಡವರಿಗೆ ಸರ್ಕಾರ ಅಂತಹ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮಾಡಿದೆ. ಅದೇ ಸರ್ಕಾರಕ್ಕೆ ಊಳುವವನೆ ಹೊಲದ ಒಡೆಯ ಎಂದಾಗ ಊಳದಿದ್ದಲ್ಲಿ ಒಡೆಯನಿಗೆ ಆ ಹೊಲ ಸೇರುತ್ತದೆ ಎಂದು ಹೇಳಲು ಬಾಯಿ ಬಂದಿರಲಿಲ್ಲ. ಏಕೆಂದರೆ ಸರಕಾರಕ್ಕೆ ಯಾವಾಗಲೂ ಬ್ರಾಹ್ಮಣರನ್ನು ಹೇಗಾದರೂ ಮಾಡಿ ಗುಂಡಿ ಮಾಡಿ ಹೂತು ಹಾಕಬೇಕು ಎನ್ನುವ ಕೆಟ್ಟ ಯೋಚನೆಯೇ ಇರುತ್ತದೆ.

ಉತ್ತರ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ದಕ್ಷಿಣ ಭಾರತದ ಬ್ರಾಹ್ಮಣರು ಸ್ವಲ್ಪ ಸ್ಥಿತಿವಂತರಂತೆ ಕಾಣುತ್ತಾರೆ.ಆದರೆ ಈ ಸ್ಥಿತಿ ಇನ್ನು ಬಹುಕಾಲ ಉಳಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲದರಲ್ಲೂ ಸೋಲುತ್ತಿರುವ ಬ್ರಾಹ್ಮಣ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ. ಜಾತಿಯಾಧಾರಿತ ಮೀಸಲಾತಿಯಿರುವ ತನಕ ಯಾವ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಅಸಾಮಾನ್ಯನಾದವ ಹೇಗಾದರೂ ಬದುಕಿಕೊಳ್ಳುತ್ತಾನೆ. ಆದ್ದರಿಂದ ಇಲ್ಲಿಯ ಬ್ರಾಹ್ಮಣರು ಕೂಡ ಇನ್ನು ಮುಂದೆ ಉತ್ತರ ಭಾರತದ ಬ್ರಾಹ್ಮಣರಂತೆ ಗಾರೆ ಕೆಲಸವನ್ನು ಮಾಡಿಕೊಂಡು, ರಿಕ್ಷಾ ಓಡಿಸಿಕೊಂಡು, ಟಾಯ್ಲೆಟ್ ಬಾತ್ರೂಮುಗಳನ್ನು ಕ್ಲೀನ್ ಮಾಡಿಕೊಂಡು ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.

ಘಜ್ನಿ ಘೋರಿಗಳಂತೆ ಎಲ್ಲಿಯೂ ಕೊಲೆ ಸುಲಿಗೆಗಳನ್ನು ನಡೆಸಲಿಲ್ಲ. ಕ್ಸೇವಿಯರ್ನಂತೆ ಎಲ್ಲಿಯೂ ಕೂಡ ಸಾರ್ವತ್ರಿಕವಾಗಿ ಮತಾಂತರವನ್ನು ಮಾಡಲಿಲ್ಲ. ಇತಿಹಾಸದ ಉದ್ದಗಲಕ್ಕೂ ಕೂಡ ಸಾಮಾಜಿಕವಾದ ಎಲ್ಲ ಬದಲಾವಣೆಯನ್ನು ಕೂಡ ತಾನೇ ಮುಂದೆ ನಿಂತು ಮಾಡಿದ ಒಂದು ಪರಂಪರೆ,ಕಾಲ ಕಸವಾಗಿ ಹೋಗುತ್ತಿದೆ. ಇಲ್ಲಸಲ್ಲದ ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆಯನ್ನು ಹೇಳಿಕೊಂಡು ಈಗಲೂ ಬ್ರಾಹ್ಮಣರನ್ನು ದೂರುವವರು ಬೇಕಾದಷ್ಟು ಮಂದಿಯಿದ್ದಾರೆ. ಆದರೆ ದುರಂತ ಅವರೆಲ್ಲರೂ ಕೂಡ ಜಾತಿಯ ಆಧಾರದಲ್ಲಿಯೇ ಸ್ಥಾನಮಾನವನ್ನು ಗಿಟ್ಟಿಸಿಕೊಂಡದ್ದು ಎನ್ನುವುದು ಮರೆತಿದ್ದಾರೆ.

ಯಾವ ಕಾಲಕ್ಕೂ ಬ್ರಾಹ್ಮಣರ ಮೇಧಾ ಶಕ್ತಿಯನ್ನು, ಪ್ರಜ್ಞಾಶಕ್ತಿಯನ್ನು ಅಷ್ಟು ಸುಲಭದಲ್ಲಿ ಕೃಷಿ ಜಾಗವನ್ನು ಅಥವಾ ಇನ್ನಿತರ ಅಧಿಕಾರವನ್ನು ಪಡೆದುಕೊಂಡಂತೆ ಗುತ್ತಿಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಕಸ್ತೂರಿಯ ಪರಿಮಳ ಎಷ್ಟು ಒಳಗಿಟ್ಟರು ಬಂದೇ ಬರುತ್ತದೆ. ಹೇಗೆ ತುಳಿದರು ಚೆಂಡಿನಂತೆ ಮತ್ತೆ ಹಳೆಯ ರಭಸಕ್ಕಿಂತಲೂ ಹೆಚ್ಚಾಗಿ ಪುಟ್ಟಿದೇಳುವ ಶಕ್ತಿ ಬ್ರಾಹ್ಮಣರಲ್ಲಿ ಇದ್ದೇ ಇದೆ.

ಅದಕ್ಕೆ ಬೇಕಾದ ಅವಕಾಶವನ್ನು ತಾವು ತಾವುಗಳೇ ಸಂಘಟಿತರಾಗಿ ಮಾಡಿಕೊಳ್ಳಲೇಬೇಕು. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಇಲ್ಲದಿದ್ದರೆ ಅಂತಹ ಸಂಘ ಸಂಸ್ಥೆಗಳು ಇದ್ದರೂ ಪ್ರಯೋಜನವಿಲ್ಲ.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Santhosh Kumar Mudradi September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Santhosh Kumar Mudradi September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search