ಬಿಜೆಪಿ ಮತ ಯಾಚನೆ : ಸ್ಥಿಮಿತ ಕಳೆದುಕೊಂಡು ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ನಾಯಕರು!
ಹೇಳಿ ಕೇಳಿ ದಕ್ಷಿಣಕನ್ನಡ ಜಿಲ್ಲೆ ಮೊದಲೇ ಬಿಜೆಪಿಯ ಭದ್ರಕೋಟೆ. ಅದರ ಮೇಲೆ ಮಂಗಳೂರಿಗೆ ಮೋದಿ ಬಂದು ಹೋದ ಮೇಲಂತೂ ಇಡೀ ಜಿಲ್ಲೆಯಲ್ಲಿ ಬಿಜೆಪಿ ಪರ ದೊಡ್ಡ ಅಲೆಯೇ ಎದ್ದಿದೆ. ಸಹಜವಾಗಿ ಕಾಂಗ್ರೆಸ್ ಪಡೆ ತತ್ತರಿಸಿ ಹೋಗಿದ್ದು ಆ ಪಕ್ಷದ ಎಲ್ಲಾ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ.
ನಗರದ ಚಿಲಿಂಬಿ ಪರಿಸರದ ಸಾರ್ವಜನಿಕ ರಸ್ತೆಯಲ್ಲಿ ಮಂಗಳೂರು ದಕ್ಷಿಣದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಅಶ್ವಿತ್ ಕೊಟ್ಟಾರಿಯವರ ನೇತೃತ್ವದಲ್ಲಿ ಕ್ಯಾ.ಬ್ರಿಜೇಶ್ ಚೌಟರ ಪರ ಪ್ರಚಾರ ನಡೆಸುತ್ತಿದ್ದ ವೇಳೆ ತಗಾದೆ ತೆಗೆದ ಕಾಂಗ್ರೆಸ್ಸಿಗರು ಗುಂಪುಗೂಡಿ ಬಂದು “ನೀವು ಬಿಜೆಪಿಯವರು ಇಲ್ಲಿ ಪ್ರಚಾರ ಮಾಡಬಾರದು, ಇದು ನಮ್ಮ ಜಾಗ” ಎಂದು ನೇರವಾಗಿ ಹಲ್ಲೆಗೆ ಮುಂದಾಗಿ ಸಾರ್ವಜನಿಕ ಪ್ರದೇಶದಲ್ಲಿ ಬಿಜೆಪಿಯವರ ಮತಯಾಚನೆಗೆ ಅಡ್ಡಿಪಡಿಸಲು ಯತ್ನಿಸಿದರು.
ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದೇ ವೇಳೆ ಉದ್ದೇಶಪೂರ್ವಕವಾಗಿ ರಸ್ತೆ ಬ್ಲಾಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೂ ಸಂಯಮ ಕಳೆದುಕೊಳ್ಳದ ಬಿಜೆಪಿ ಕಾರ್ಯಕರ್ತರು, ಯಾವುದೇ ಗಲಭೆಗೆ ಆಸ್ಪದ ನೀಡದೇ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು.
ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕ ವೇದವ್ಯಾಸ ಕಾಮತರು ಕೂಡಲೇ ಅಲ್ಲಿಗೆ ಆಗಮಿಸಿ ಸಾರ್ವಜನಿಕ ಸ್ಥಳದಲ್ಲಿ ಮತಯಾಚನೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಅಂತಹ ಘಟನೆಗಳು ದೇವಸ್ಥಾನದ ಒಳಗೆ ನಡೆದಿದ್ದರೆ ಸಿಸಿಟಿವಿ ದೃಶ್ಯವನ್ನು ಬಹಿರಂಗಪಡಿಲಿ. ಸೇರಿದ್ದ ಸಾರ್ವಜನಿಕರೂ ಸಹ ಕಾಂಗ್ರೆಸ್ಸಿನ ಈ ಪ್ರಜಾಪ್ರಭುತ್ವ ವಿರೋಧಿ ವರ್ತನೆಗೆ ಹಿಡಿ ಶಾಪ ಹಾಕುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಲ್ಲಿನ ವಾಸ್ತವತೆಯನ್ನು ಅರಿತು ವಿನಾಕಾರಣ ಗೊಂದಲ ಸೃಷ್ಟಿಸಿದ ಕಾಂಗ್ರೆಸ್ ನಾಯಕರನ್ನು ಚದುರಿಸಲು ಯತ್ನಿಸಿದರು.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಲಿಯಾಸ್ ಕೊತ್ವಾಲ್ ಶಿಷ್ಯನ ಚಾಳಿಯನ್ನೇ ನಮ್ಮ ಜಿಲ್ಲೆಗೂ ಮುಂದುವರಿಸಿ ಗೂಂಡಾವರ್ತನೆ ತೋರಿದ ಕಾಂಗ್ರೆಸ್ ನಾಯಕರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್ಸಿಗರ ದಬ್ಬಾಳಿಕೆಯ ಹೊರತಾಗಿಯೂ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತಯಾಚನೆ ನಡೆಸಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Leave A Reply