ಆಪ್ ಪಕ್ಷದ ಕಚೇರಿ ಖಾಲಿ ಮಾಡುವಂತೆ ಸುಪ್ರೀಂ ಆದೇಶ!
ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ಆಮ್ ಆದ್ಮಿ ಪಾರ್ಟಿಯ ಕೇಂದ್ರ ಕಚೇರಿಯನ್ನು ತೆರವುಗೊಳಿಸಬೇಕಾಗಿ ಸುಪ್ರೀಂ ಕೋರ್ಟ್ ಕಟ್ಟೆ ಕಡೆಯ ಡೆಡ್ ಲೈನ್ ನೀಡಿದೆ. ಮಾರ್ಚ್ 4 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಆಪ್ ಪಕ್ಷಕ್ಕೆ ಜೂನ್ 15 ರಂದು ಪಕ್ಷದ ಕಚೇರಿಯನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದರು. ಯಾಕೆಂದರೆ ಆ ಜಾಗ ದೆಹಲಿ ಉಚ್ಚ ನ್ಯಾಯಾಲಯದ ಮೂಲಭೂತ ಸೌಲಭ್ಯಗಳ ವಿಸ್ತರಣೆಗಾಗಿ ಮೀಸಲಾಗಿತ್ತು. ನ್ಯಾಯಾಲಯದ ಅಧಿಕಾರಿಗಳಿಗೆ ಕೊಠಡಿಗಳ ಕೊರತೆ ಇದ್ದು ಕನಿಷ್ಟ 90 ಕೊಠಡಿಗಳು ಅಗತ್ಯವಾಗಿ ಕಟ್ಟಬೇಕಾಗಿದೆ ಎಂದು ವಕೀಲ ಕೆ ಪರಮೇಶ್ವರ ಹೇಳಿದರು. ಅವರು ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಪರ ಆಮ್ಯೂಕುಸ್ ಕ್ಯೂರಿ ( ನ್ಯಾಯಲಯಕ್ಕೆ ಇಂತಹ ಪ್ರಕರಣದಲ್ಲಿ ಮಾಹಿತಿ, ದಾಖಲೆ ಒದಗಿಸಲು ಸಹಾಯಕನಾಗಿ ಅಥವಾ ಸ್ನೇಹಿತನಾಗಿ, ಯಾವುದೇ ಒಂದು ಸೈಡ್ ತೆಗೆದುಕೊಳ್ಳದೇ ಕಾರ್ಯ ನಿರ್ವಹಿಸುವ ವ್ಯಕ್ತಿ ಅಥವಾ ಸಂಸ್ಥೆ) ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಈಗ ಆಮ್ ಆದ್ಮಿ ಪಕ್ಷದ ಕಚೇರಿ ಇರುವ ಜಾಗ 2020 ರಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಅಗತ್ಯವಾಗಿರುವ ಸ್ಥಳಾವಕಾಶದ ಕಾರಣಕ್ಕೆ ಮೀಸಲಿಟ್ಟಿದೆ. ಈಗ ಈ ಜಾಗ ಖಾಲಿ ಇಲ್ಲದೇ ಇರುವುದರಿಂದ ದೆಹಲಿ ಹೈಕೋರ್ಟ್ ನಲ್ಲಿ ನೂತನವಾಗಿ ನೇಮಕವಾಗಿರುವ ನ್ಯಾಯಾಲಯದ ಅಧಿಕಾರಿಗಳಿಗೆ ಬಾಡಿಗೆ ಕೊಠಡಿಗಳನ್ನು ಹುಡುಕುವ ಅಗತ್ಯವಿದೆ ಎಂದು ಕೆ ಪರಮೇಶ್ವರ್ ತಿಳಿಸಿದರು.
ಈ ಬಗ್ಗೆ ಆಪ್ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು ಆಪ್ ಪಕ್ಷ ದೇಶದ ಆರು ರಾಷ್ಟ್ರೀಯ ಪಕ್ಷಗಳ ಪೈಕಿ ಒಂದಾಗಿದ್ದು, ನವದೆಹಲಿಯ ಪಾಲಿಕಾ ವ್ಯಾಪ್ತಿಯಲ್ಲಿ ಕಚೇರಿ ನಿರ್ಮಾಣಕ್ಕೆ ಸ್ಥಳಾವಕಾಶ ಹೊಂದುವ ಹಕ್ಕನ್ನು ಪಡೆದಿದೆ ಎಂದು ತಿಳಿಸಿದರು. ” ರಾಷ್ಟ್ರೀಯ ಪಕ್ಷವಾಗಿ ಆಪ್ ಪಕ್ಷಕ್ಕೆ ಏನೂ ಸಿಕ್ಕಿಲ್ಲ ಎನ್ನುವ ಭಾವನೆ ಪಕ್ಷಕ್ಕೆ ಇದೆ. ನಮಗೆ ಬದರಪುರದಲ್ಲಿ ಜಾಗ ನೀಡಲಾಗಿದ್ದರೂ, ಉಳಿದ ಪಕ್ಷಗಳಿಗೆ ಅನುಕೂಲಕರ ಜಾಗದಲ್ಲಿ ಕಚೇರಿ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಈ ದೇಶದ ಸರಕಾರವೊಂದು ನಾವು ಕೆಲಸ ಮಾಡಲು ಅಡ್ಡಿಪಡಿಸಲು ತೀರ್ಮಾನಿಸಿದಂತಿದೆ” ಎಂದು ಅಭಿಷೇಕ್ ಸಿಂಘ್ವಿ ಹೇಳಿದರು.
ಆಮ್ ಆದ್ಮಿ ಪಕ್ಷ ಅತಿಕ್ರಮಣ ಮಾಡಿದೆ ಎಂದು ವಾದ ಮಂಡಿಸಿಸ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಅವರು ” 2017 ರಲ್ಲಿ ಈ ಜಾಗವನ್ನು ಪಕ್ಷಕ್ಕೆ ನೀಡಿರುವ ಕ್ರಮವನ್ನು ಹಿಂಪಡೆಯಲಾಗಿದೆ” ಆದರೆ ಈ ವಿಷಯವನ್ನು ತಳ್ಳಿ ಹಾಕಿದ ಆಪ್ ಪಕ್ಷ ರೋಸ್ ಅವೆನ್ಯೂ ಜಾಗವನ್ನು ನಾವು ಅತಿಕ್ರಮಣ ಮಾಡಿಲ್ಲ. ದೆಹಲಿಯ ರಾಷ್ಟ್ರೀಯ ರಾಜಧಾನಿಯ ವ್ಯಾಪ್ತಿಯಲ್ಲಿ ನಮಗೆ ಅಧಿಕೃತವಾಗಿ ಈ ಜಾಗವನ್ನು ನೀಡಲಾಗಿತ್ತು ಎಂದು ತಿಳಿಸಿದೆ. ಇನ್ನು ಹೈಕೋರ್ಟ್ ಅಗಸ್ಟ್ 23, 2017 ರಂದು ಜಾಗದ ರದ್ದು ಮಾಡಿದ ಆದೇಶವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಆಪ್ ತಿಳಿಸಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ರಾಜಕೀಯ ಸೇವೆ ಮಾಡಲು ಸೂಕ್ತ ಸೌಲಭ್ಯಗಳಿರುವ ಕಚೇರಿಯ ಅಗತ್ಯ ಇದ್ದು, ಅದನ್ನು ಒದಗಿಸುವ ಮೂಲಕ ನಿಸ್ಪಕ್ಷವಾಗಿ ಚುನಾವಣೆಯನ್ನು ಎದುರಿಸುವ ವ್ಯವಸ್ಥೆ ಇರಬೇಕು ಎಂದು ಆಪ್ ವಿನಂತಿಸಿಕೊಂಡಿದೆ.
ಅಂತಿಮವಾಗಿ ಅಗಸ್ಟ್ 10 ರಂದು ಗಡುವು ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
Leave A Reply