ಉತ್ತರಾಖಂಡದ ರೈಲ್ವೆ ಬೋರ್ಡ್ ಗಳಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಹೆಸರು ಇರಲಿ!
ಸಂಸ್ಕೃತ ಭಾಷೆ ಉತ್ತರಖಂಡ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿದೆ. ಹಾಗಿದ್ದ ಮೇಲೆ ಅದಕ್ಕೊಂದು ಗೌರವ, ಸ್ಥಾನಮಾನ ಕೊಡಬೇಕು ತಾನೆ. ಭಾರತೀಯ ಜನತಾ ಪಾರ್ಟಿ 2022 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹೊಸ ಮನ್ವಂತರ ಆರಂಭವಾಗಬಹುದು ಎಂಬ ಅಪೇಕ್ಷೆ ಎಲ್ಲರಲ್ಲಿತ್ತು. ಹಾಗೆ ಈ ರೈಲ್ವೆ ನಿಲ್ದಾಣಗಳಲ್ಲಿ ಊರಿನ ಹೆಸರನ್ನು ತೋರಿಸುವ ಸೈನ್ ಬೋರ್ಡ್ ಗಳಿರುತ್ತವಲ್ಲ, ಅಂತಹ ಬೋರ್ಡ್ ಗಳಲ್ಲಿ ಮೂರು ಭಾಷೆಗಳಲ್ಲಿ ಊರಿನ ಹೆಸರನ್ನು ನಮೂದಿಸಲಾಗಿತ್ತು. ಅದರಲ್ಲಿ ಒಂದು ಹಿಂದಿ, ಇನ್ನೊಂದು ಇಂಗ್ಲೀಷ್, ಮತ್ತೊಂದು ಉರ್ದು.
2020 ಫೆಬ್ರವರಿಯಲ್ಲಿ ಡೆಹ್ರಾದೂನ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸುವಾಗ ಅದರ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯಿಂದ ಉರ್ದು ಭಾಷೆಯ ಮೇಲೆ ಸಂಸ್ಕೃತದಲ್ಲಿ ಊರಿನ ಹೆಸರನ್ನು ಬರೆದ ಸ್ಟೀಕರ್ ಅನ್ನು ಪೇಸ್ಟ್ ಮಾಡಲಾಗಿತ್ತು. ಇದರಿಂದ ಸಂಸ್ಕೃತ ಭಾಷೆಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದಂತೆ ಆಗಿತ್ತು. ಸನಾತನಿಗಳೇ ಹೆಚ್ಚಿನ ನೆಲೆಸಿರುವ, ಸಾಧು ಸಂತರ ನಾಡೆಂದು ಖ್ಯಾತವಾಗಿರುವ ಉತ್ತರಾಖಂಡದಲ್ಲಿ ಸಂಸ್ಕೃತ ಭಾಷೆಯಲ್ಲಿ ಬೋರ್ಡ್ ಇರುವುದು ನಿಜಕ್ಕೂ ಮಾದರಿಯಾಗಿತ್ತು. ಆದರೆ ಈ ಖುಷಿ ತುಂಬಾ ದಿನ ಇರಲಿಲ್ಲ. ಅದಕ್ಕೆ ವಿವಾದ ಅಂಟಿಕೊಂಡಿತ್ತು.
ಬಳಿಕ ತಕ್ಷಣ ಮತ್ತೆ ಸಂಸ್ಕೃತದ ಮೇಲೆ ಉರ್ದು ಭಾಷೆಯಲ್ಲಿ ಬರೆದ ಊರಿನ ಹೆಸರಿನ ಸ್ಟೀಕರ್ ಕಾಣಿಸಿಕೊಂಡಿತ್ತು. ಇದರಿಂದ ಅಲ್ಲಿನ ಸ್ಥಳೀಯ ಮಠಗಳ ಸಾಧು, ಸಂತರಿಗೆ ಬೇಸರವಾಗಿತ್ತು. ಯಾರನ್ನು ಓಲೈಸಲು ಇಂತಹ ಕೆಲಸ ಎಂದು ಪ್ರಶ್ನಿಸಿದ್ದಾರೆ. ಈ ಘಟನೆಗಳು ನಡೆದು ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಈಗಲೂ ಆ ಬೋರ್ಡ್ ಗಳಲ್ಲಿ ಹಿಂದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಯನ್ನು ಮಾತ್ರ ಕಾಣಬಹುದಾಗಿದೆ.
Leave A Reply