ಮೊದಲಿಗೆ ಲೇಡಿಹಿಲ್, ಹ್ಯಾಮಿಲ್ಟನ್ ಸರ್ಕಲ್ ಸರಿ ಮಾಡಿ ಶಾಸಕರೇ!
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಮಂಗಳೂರಿನ ಸೌಂದರ್ಯ ಹೆಚ್ಚಿಸಲು ಬಿರುಸಿನ ಕೆಲಸಗಳನ್ನು ಮಾಡಲು ಶಾಸಕ ಜೆ.ಆರ್. ಲೋಬೊ ಮುಂದಾಗಿದ್ದಾರೆ. ಅದಕ್ಕಾಗಿ ಅವರು ಕೈಗೆತ್ತಿಕೊಂಡಿರುವುದು ವೃತ್ತಗಳ ಅಭಿವೃದ್ಧಿ. ಸೆಂಟ್ ಆಗ್ನೆೆಸ ಸರ್ಕಲ್ 25 ಲಕ್ಷ ರು., ಸಿಟಿ ಆಸ್ಪತ್ರೆ 15 ಲಕ್ಷ ರು., ಕರಾವಳಿ ವೃತ್ತ 60 ಲಕ್ಷ ರುಪಾಯಿಗಳಲ್ಲಿ ನಿರ್ಮಾಣವಾಗಲಿದೆ. ಹೊಸ ಸರ್ಕಲ್‌ಗಳು ಬರಲಿ, ಸಂತೋಷ. ಆದರೆ ನನ್ನ ಪ್ರಶ್ನೆ ಇರುವುದು ನೀವು ಈಗ ಇರುವ ಪ್ರಮುಖ ವೃತ್ತಗಳನ್ನು ಹಾಗೆ ಜಿಡ್ಡು ಹಿಡಿದು, ಸೊಳ್ಳೆ ಉತ್ಪಾದನಾ ಕೇಂದ್ರವನ್ನಾಗಿ ಮಾಡಿ, ಅಲ್ಲಿರುವ ಕಾರಂಜಿಗಳನ್ನು ನಾಮಾವಶೇಷ ಮಾಡಿ ಆ ಸರ್ಕಲ್‌ಗಳನ್ನು ದೂರದಿಂದ ನೋಡುವಾಗ ಯಾವುದೋ ಸಮಾಧಿಯ ಲೆವೆಲ್ಲಿಗೆ ತಂದು ನಿಲ್ಲಿಸಿದ್ದೀರಿ. ಈಗ ಹೊಸ ಸರ್ಕಲ್‌ಗಳಿಗೆ ಶಿಲಾನ್ಯಾಸದ ಹೆಸರಿನಲ್ಲಿ ಮಣ್ಣು, ಗೊಬ್ಬರ ಹಾಕಿ ಅದಕ್ಕಾಗಿ ಒಂದು ಕೋಟಿ ರುಪಾಯಿಗಳನ್ನು ಇಟ್ಟಿದ್ದಿರಿ. ಇದರಿಂದ ಮಂಗಳೂರು ಚೆಂದವಾಗುತ್ತೆ ಎಂದು ಅಂದುಕೊಳ್ಳಲು ನಾವೇನು ಘಟ್ಟದ ಮೇಲಿನಿಂದ ಬಂದು ಕಿವಿ ಮೇಲೆ ಹೂ ಇಟ್ಟು ಮೈದಾನದ ಹೊರಗೆ ಕೂಲಿ ಕೆಲಸಕ್ಕೆ ಕಾಯುವವರು ಅಂದುಕೊಂಡಿದ್ದಿರಾ?
ಮಂಗಳೂರಿಗೆ ಉಡುಪಿ ಮತ್ತು ಆ ಭಾಗದಿಂದ ಬರುವವರಿಗೆ ಮೊದಲಿಗೆ ಸರ್ಕಲ್ ಎಂದು ಸಿಗುವುದು ಲೇಡಿಹಿಲ್ ವೃತ್ತ. ಅದನ್ನು ಸರಿಯಾಗಿ ಚೆಂದ ಮಾಡಿದಿದ್ದರೆ ಅದು ಚಿಲಿಂಬಿಯಿಂದ ಬರುವಾಗಲೇ ಕಣ್ಣಿಗೆ ಹಬ್ಬದಂತೆ ಕಾಣುತ್ತಿತ್ತು. ಬಹುಶ: ಮಣಿಪಾಲದಲ್ಲಿ ಟೈಗರ್ ಸರ್ಕಲ್ ಇದ್ದ ಹಾಗೆ ಇದು ಕೂಡ ಒಂದು ಲ್ಯಾಾಂಡ್‌ಮಾರ್ಕ್ ಆಗುತ್ತಿತ್ತು. ಅದರೊಂದಿಗೆ ಕರಾವಳಿಯ ಹೊರಜಿಲ್ಲೆಗಳಿಂದ ಮಂಗಳೂರು ನಗರದೊಳಗೆ ಪ್ರವೇಶ ಮಾಡುವವರಿಗೆ ಮಂಗಳೂರು ಎಷ್ಟು ಚೆಂದ ಇದೆ ಎನ್ನುವುದನ್ನು ಒಂದು ವೃತ್ತದ ಮೂಲಕ ಉದಾಹರಣೆ ಕೊಡಬಹುದಿತ್ತು. ಆದರೆ ಆ ಸರ್ಕಲ್ ಯಾವ ಪರಿ ಗಬ್ಬೆದ್ದು ಹೋಗಿದೆ ಎಂದರೆ ಅಲ್ಲಿ ನೋಡಿದರೆ ಕಾಣುವುದು ಬ್ಯಾಂಕೊಂದರ ಜಾಹೀರಾತು ಮಾತ್ರ. ಉಳಿದಂತೆ ಚಿಟ್ಟೆ ಪಾರ್ಕ್ ಎಂದು ಇದ್ದ ಹಾಗೆ ಆ ಸರ್ಕಲ್ ಸೊಳ್ಳೆ ಪಾರ್ಕ್ ಆಗಿದೆ. ಒಂದೇ ಒಂದು ಒಳ್ಳೆಯ ಗಿಡ ಇಲ್ಲ. ಇಡೀ ಊರು ಬೆಂಕಿಗೆ ಆಹುತಿ ಆದ ನಂತರ ಕಪ್ಪು ಕರಕಲಾಗಿರುವ ಹಳೆಯ ಪಳೆಯುಳಿಕೆಗಳು ಯಾ
ವುದಾದರೂ ಸಿನೆಮಾದವರಿಗೆ ಬೇಕಾದರೆ ಈ ಸರ್ಕಲ್‌ನಲ್ಲಿ ಹೋಗಿ ತೆಗೆಯಬಹುದು.
ಇದನ್ನು ಸಿಂಡಿಕೇಟ್ ಬ್ಯಾಂಕಿನವರು ತಾವು
ನಿರ್ವಹಣೆ ಮಾಡುತ್ತೇವೆ ಎಂದು ತೆಗೆದುಕೊಂಡಿದ್ದರು. ಅಲ್ಲಿ ನಾಲ್ಕು ದಿನ ಕಾರಂಜಿ ಹಾರಿದ್ದೇ ಹಾರಿದ್ದು. ದೂರದಿಂದ ಬರುವವರಿಗೆ ಸಿಂಡಿಕೇಟ್ ಬ್ಯಾಂಕಿನ ಜಾಹೀರಾತು ಕಾಣುವಂತೆ ವ್ಯವಸ್ಥೆ ಕೂಡ ಬ್ಯಾಂಕಿನವರು ಮಾಡಿದ್ದರು. ವೃತ್ತದ ಸುತ್ತಲೂ ಬ್ಯಾಂಕಿನ ಹೆಸರು ಈಗಲೂ ಇದೆ. ಆದರೆ ಅವರು ನಿರ್ವಹಣೆ ಮಾಡುವುದನ್ನು ಮರೆತಂತೆ ಕಾಣುತ್ತದೆ. ಅದನ್ನು ಸರಿ ಮಾಡುವುದು ಬಿಟ್ಟು ಬೇರೆ ಕಡೆ ಶಿಲಾನ್ಯಾಸ ಮಾಡಿದರೆ ಅದರಿಂದ ಏನು ಸಾಧಿಸಿದಂತೆ ಆಗುತ್ತದೆ ಶಾಸಕರೇ?
ನಿಮಗೆ ಲಾಭ ಏನೆಂದರೆ ತಾವು ತುಂ
ಬಾ ಯೋಜನೆಗಳನ್ನು ತಂದಿದ್ದೇವೆ ಎಂದು ಪ್ರಾಜೆಕ್ಟ್ ಮಾಡಬಹುದು. ಇನ್ನು ತಮ್ಮ ಆಪ್ತ ಗುತ್ತಿಗೆದಾರರಿಗೆ ಕೆಲಸ ಕೊಡಬಹು
ದು. ಆರೇಳು ತಿಂಗಳ ಬಳಿಕ ಅದಕ್ಕೆ ಪ್ರತಿಯಾಗಿ ಗುತ್ತಿಗೆದಾರರು ನಿಮಗೆ ಪ್ರತ್ಯುಪಕಾರ ಮಾಡಬಹುದು. ಅದು ಬಿಟ್ಟು ಬೇರೆ ಏನೂ ಸಾಧಿಸಿದ ಹಾಗೆ ಆಗುವುದಿಲ್ಲ. ಇದು ಲೇಡಿಹಿಲ್ ಸರ್ಕಲ್ ಕಥೆಯಾದರೆ ಇನ್ನು ಸ್ಟೇಟ್ ಬ್ಯಾಾಂಕ್ ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಇರುವ ಹ್ಯಾಮಿಲ್ಟನ್ ಸರ್ಕಲ್ ಕಥೆ ಹೇಗಿದೆ ಎಂದು ಶಾಸಕರಿಗೆ, ಮೇಯರ್ ಗೆ ಮತ್ತೆ ಹೇಳಬೇಕಾಗಿಲ್ಲ. ಹ್ಯಾಮಿಲ್ಟನ್ ಸರ್ಕಲ್ ಎಷ್ಟು ಜನನಿಬಿಡ ಸ್ಥಳದಲ್ಲಿ ಇದೆ ಎಂದರೆ ಬೆಂಗಳೂರಿನ ಮೆಜೆಸ್ಟಿಕ್ ಕೂಡ ಒಂದೆ, ಮಂಗಳೂರಿ
ನ ಸ್ಟೇಟ್ ಬ್ಯಾಂಕ್ ಕೂಡ ಒಂದೇ. ಎರಡಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಮಂಗಳೂರಿನ ಪ್ರತಿಯೊಬ್ಬ ನಾಗರಿಕ ಒಂದಲ್ಲ ಒಂದು ಸಲ ಇಲ್ಲಿ ಬಂದೇ ಹೋಗಿರುತ್ತಾನೆ. ನಿತ್ಯ ಸಾವಿರಾರು ಜನ ಇಲ್ಲಿ ಬಂದು ತಮ್ಮ ಕೆಲಸ ಮುಗಿಸಿ ಹೋಗಿರುತ್ತಾಾರೆ. ಆ ಸರ್ಕಲ್ ಹೇಗಿದೆ?
ಹಿಂದೆ ಅಲ್ಲೊಂದು ಕಾರಂಜಿ ಇತ್ತು, ಹೂಗಿಡಗಳು ಚೆಂದನೆ ಅರಳಿ ಜನರನ್ನು ಆಕರ್ಷಿಸುತ್ತಿದ್ದವು ಎನ್ನುವುದಕ್ಕೆ ಅಲ್ಲಿ ಕುರುಹುಗಳು ಇವೆ. ಈಗ ಕಾರಂಜಿಗೆ ಹಾಕಿದ್ದ ಕಬ್ಬಿಿಣದ ಪೈಪ್ ತುಕ್ಕು ಹಿಡಿದಿದೆ. ಮಳೆಯ ನೀರು ನಿಂತರೆ ಸೊಳ್ಳೆಗಳಿಗೆ ಸ್ವಿಮ್ಮಿಂಗ್ ಪೂಲ್. ಹೀಗೆ ನಗರದ ಎರಡು ಹೃದಯಭಾಗದಲ್ಲಿರುವ ವೃತ್ತಗಳು ಅವಸಾನದ ಹಾದಿಯಲ್ಲಿ ಇದ್ದು ನಗರಕ್ಕೆ ಕಪ್ಪು ಚುಕ್ಕೆ ಉಂಟು ಮಾಡುತ್ತಿದ್ದರೆ ಲೋಬೋ ಮತ್ತು ಕವಿತಾ ಸನಿಲ್ ಗುದ್ದಲಿ ಹಿಡಿದು ಹೊಸ ವೃತ್ತಗಳಿಗೆ ಶಿಲಾನ್ಯಾಸ ಮಾಡಲು ಪೋಸ್ ಕೊಡುತ್ತಿದ್ದಾರೆ.
Leave A Reply