ರಕ್ತಪರೀಕ್ಷೆಗೆ ಇನ್ನು ಸೂಜಿ ಚುಚ್ಚಬೇಕಾಗಿಲ್ಲ!

ರಕ್ತದಲ್ಲಿನ ಸಕ್ಕರೆ ಪ್ರಮಾಣ ಪತ್ತೆಹಚ್ಚಲು ಸೂಜಿ ಚುಚ್ಚುವ ದಾರಿಗೆ ಪರ್ಯಾಯವಾಗಿ ಒಂದು ಸೆಕೆಂಡ್ ಕೂಡ ನೋವಿಲ್ಲದೇ, ಚರ್ಮಕ್ಕೆ ರಂಧ್ರ ಇಲ್ಲದೇ ” ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್” ಮೂಲಕ ಸಕ್ಕರೆ ಪ್ರಮಾಣ ಅಳೆಯುವ ಸಂಶೋಧನೆಯನ್ನು ನಗರ ಭಾರತೀಯ ವಿಜ್ಞಾನ ಸಂಸ್ಥೆಯ ” ಇನ್ ಸ್ಟುಮೆಂಟೇಷನ್ ಆಂಡ್ ಅಪ್ಲೈಡ್ ಫಿಸಿಕ್ಸ್” ( ಐಎಪಿ) ವಿಭಾಗ ಮಾಡಿದೆ.
ಈ ಕುರಿತು ಸಂಶೋಧನಾ ವರದಿ ಬಿಡುಗಡೆ ಮಾಡಲಾಗಿದೆ. ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಪತ್ತೆಹಚ್ಚಲು ಆಗಾಗ ಸೂಜಿ ಚುಚ್ಚುವುದರಿಂದ ಅವರಿಗೆ ಕಿರಿಕಿರಿ ಆಗುವ ಜೊತೆ ಸೋಂಕು ಉಂಟಾಗುವ ಸಾಧ್ಯತೆಯೂ ಇದೆ. ಆದರೆ ಈ ಸಂಶೋಧನೆಯಲ್ಲಿ ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್ ತಂತ್ರ ಬಳಸಿ ಅಂಗಾಂಶದ ಮೇಲೆ ಲೇಸರ್ ಕಿರಣಗಳನ್ನು ಬಿಡಲಾಗುತ್ತದೆ. ಆಗ ಅಂಗಾಂಶ ಬಿಸಿಯಾಗಿ ಕಂಪನ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಅಲ್ಟ್ರಾಸಾನಿಕ್ ಸೌಂಡ್ ವೇವ್ಸ್ ಗಳನ್ನು ಸೂಕ್ಷ್ಮ ಸೆನ್ಸರ್ ಗಳು ಸೆರೆಹಿಡಿಯುತ್ತವೆ.
ಲೇಸರ್ ಕಿರಣಗಳನ್ನು ಬಿಟ್ಟಾಗ ಅಂಗಾಶದೊಳಗಿನ ಬೇರೆ ಬೇರೆ ಅಣುಗಳು ಮತ್ತು ಬೇರೆ ಬೇರೆ ಅಂಶಗಳು ಬೇರೆ ಬೇರೆ ರೀತಿಯಲ್ಲಿ ಧ್ವನಿ ತರಂಗಗಳ ಮೂಲಕಪ್ರತಿಕ್ರಿಯಿಸುತ್ತವೆ. ಫಲಿತಾಂಶದ ಆಧಾರದ ಮೇಲೆ ಗ್ಲೂಕೋಸ್ ಪ್ರಮಾಣವನ್ನು ಕಂಡುಹಿಡಿಯಬಹುದು. ಈ ತಂತ್ರದಲ್ಲಿ ಅಂಗಾಂಶಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಐಐಎಸ್ಸಿಯ ಐಎಪಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ತಿಳಿಸಿದ್ದಾರೆ.
ನಿರ್ದಿಷ್ಟ್ಯ ದಿಕ್ಕಿನಲ್ಲಿ ಸಾಗುವ ಧ್ರುವೀಕೃತ ಕಿರಣಗಳನ್ನು ಬಳಸಿ ಗ್ಲೂಕೋಸ್ ಅಣುವಿನ ಸಾಂದ್ರತೆ ಮಾತ್ರ ಅಳತೆ ಮಾಡಲಾಗಿದೆ. ಆರೋಗ್ಯಕರ ವ್ಯಕ್ತಿ ದೇಹದಲ್ಲಿ ಊಟಕ್ಕೆ ಮೊದಲು ಮತ್ತು ಊಟದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಳೆಯಲು 3 ದಿನಗಳ ಕಾಲ ಪ್ರಾಯೋಗಿಕ ಅಧ್ಯಯನ ಕೂಡ ಮಾಡಲಾಗಿದೆ. ಈ ಪ್ರಯೋಗಕ್ಕೆ ಬಳಸಿರುವ ಲೇಸರ್ ಯಂತ್ರವು ಸಣ್ಣ ಪ್ರಮಾಣದ ಕಿರಣಗಳನ್ನು ಬಿಡುಗಡೆ ಮಾಡುತ್ತದೆ. ದುಬಾರಿಯಾಗಿದ್ದು, ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ.
Leave A Reply