ಭಾರತ ಸಿಂಧೂ ನದಿ ಒಪ್ಪಂದ ರದ್ದು ಮಾಡಿದ್ದಕ್ಕೆ ಪಾಕಿಸ್ತಾನದಿಂದ ಶಿಮ್ಲಾ ಒಪ್ಪಂದ ರದ್ದು! ಏನದು ವಿಷಯ?

1960 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ಜಲ ಒಪ್ಪಂದವನ್ನು ಭಾರತ ರದ್ದು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪಾಕಿಸ್ತಾನದ 80 ಶೇಕಡಾ ಜನ ನೀರಿಗಾಗಿ ಪರದಾಡುವಂತಹ ಸ್ಥಿತಿಗೆ ತರುವ ಮುನ್ಸೂಚನೆ ನೀಡಿದರೆ ಇನ್ನೊಂದೆಡೆ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ರದ್ದು ಮಾಡುವ ಸೂಚನೆ ನೀಡಿದೆ.
ಅಷ್ಟಕ್ಕೂ ಶಿಮ್ಲಾ ಒಪ್ಪಂದ ಎಂದರೇನು?
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದ ನಂತರ 1972 ರಲ್ಲಿ ಶಿಮ್ಲಾ ಒಪ್ಪಂದ ನಡೆಸಲಾಯಿತು. ಪೂರ್ವ ಪಾಕಿಸ್ತಾನದ ವಿಷಯದಲ್ಲಿ ಭಾರತ ಹಸ್ತಕ್ಷೇಪ ನಡೆಸಿದ ಪರಿಣಾಮ ಭಾರತ ಮತ್ತು ಪಾಕ್ ಯುದ್ಧ ನಡೆದು ಬಾಂಗ್ಲಾದೇಶದ ಉಗಮ ಆದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತ ಮತ್ತು ಪಾಕಿಸ್ತಾನದ ನಡುವೆ ಅದರ ಬಳಿಕ ಒಂದು ಒಪ್ಪಂದ ಏರ್ಪಟ್ಟಿತ್ತು. ಅದೇ ಶಿಮ್ಲಾ ಒಪ್ಪಂದ. ಭವಿಷ್ಯದಲ್ಲಿ ಏನಾದರೂ ಸಮಸ್ಯೆಗಳು ಉದ್ಭವಿಸಿದರೆ ಎರಡು ರಾಷ್ಟ್ರಗಳು ಶಾಂತಿಯುತ ಮಾತುಕತೆ ನಡೆಸಬೇಕು ಎನ್ನುವುದೇ ಈ ಒಪ್ಪಂದದ ಸಾರಂಶವಾಗಿತ್ತು. ಅದರ ಪ್ರಥಮ ಅಂಶವೇ ಕಾಶ್ಮೀರದ ವಿಷಯದಲ್ಲಿ ಏನಾದರೂ ಸಮಸ್ಯೆ ಆದರೆ ಆ ಸಂದರ್ಭದಲ್ಲಿ ಯಾವುದೇ ಘರ್ಷಣೆ ಇಲ್ಲದೇ ಪರಿಸ್ಥಿತಿಯನ್ನು ನಿಯಂತ್ರಿಸುವುದು.
ಎರಡನೇಯ ಅಂಶ ಗಡಿ ನಿಯಂತ್ರಣ ರೇಖೆಗೆ ( ಎಲ್ ಒಸಿ) ಎರಡು ದೇಶಗಳು ಬದ್ಧರಾಗಿರುವುದು. ಯಾವುದೇ ಕಾರಣಕ್ಕೂ ಇದನ್ನು ಉಲ್ಲಂಘಿಸದೇ ಇರುವುದು. ಮೂರನೇಯದಾಗಿ ಭಾರತ ವಶಪಡಿಸಿಕೊಂಡ 13000 ಚದರ ಕಿಲೋ ಮೀಟರ್ ಜಾಗವನ್ನು ಹಿಂತಿರುಗಿಸುವುದು. ಆದರೆ ಕೆಲವು ಸೂಕ್ಷ್ಮ ಪ್ರದೇಶಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳುವುದು.
ನಾಲ್ಕನೇಯದಾಗಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ರಾಜತಾಂತ್ರಿಕ ಗೌರವವನ್ನು ನೀಡುವುದು. ಈ ಎಲ್ಲಾ ನಿಯಮಗಳ ನಂತರವೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವುದು ಕಂಡು ಬಂದಿದೆ. ಅದಕ್ಕೆ 1980 ರ ಸಿಯಾಚಿನ್ ಗ್ಲೇಸಿಯರ್ ಸಂಘರ್ಷ, 1999 ರ ಕಾರ್ಗಿಲ್ ಯುದ್ಧ ಮತ್ತು ಈಗ ನಡೆದ ಕಾಶ್ಮೀರದ ಹಿಂದೂ ನರಮೇಧವೇ ಉದಾಹರಣೆ.
1984 ರಲ್ಲಿ ಆಪರೇಶನ್ ಮೇಘದೂತದಿಂದ ಭಾರತ ಸಿಯಾಚಿನ್ ಗ್ಲೇಸಿಯರ್ ವಶಪಡಿಸಿಕೊಂಡಿದ್ದ ಕಾರಣ ಆಗ ಶಿಮ್ಲಾ ಒಪ್ಪಂದ ಉಲ್ಲಂಘನೆ ಎಂದು ಪಾಕಿಸ್ತಾನ ಅವಲತ್ತುಕೊಂಡಿತ್ತು. ಈಗ ಪಾಕಿಸ್ತಾನ ಶಿಮ್ಲಾ ಒಪ್ಪಂದ ರದ್ದು ಮಾಡಿರುವುದರಿಂದ ಭಾರತದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೆ ಸಿಂಧೂ ನದಿ ಒಪ್ಪಂದ ಮುರಿದು ಬಿದ್ದ ಕಾರಣ ಮುಂದಿನ ದಿನಗಳಲ್ಲಿ ಒಂದೊಂದು ಹನಿಗಳು ಪಾಕಿಸ್ತಾನ ಬೊಬ್ಬೆ ಹೊಡೆಯಲು ಇದೆ.
Leave A Reply