ಸಿಆರ್ ಪಿಎಫ್ ಯೋಧನ ಪತ್ನಿ ಪಾಕಿಸ್ತಾನಿ, ಪ್ರೀತಿಯ ಹೆಸರಿನಲ್ಲಿ ಸುರಕ್ಷತೆ ಪಣದಲ್ಲಿ?

ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಭಾರತದ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ಯೋಧನೊಬ್ಬನನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದಳು. ಆಕೆಯ ಹೆಸರು ಮೀನಾಲ್ ಖಾನ್. ಆಕೆ ತನ್ನದೇ ಸಂಬಂಧಿಯ ಮಗನಾದ ಮುನೀರ್ ಖಾನ್ ನನ್ನು ಮದುವೆಯಾಗಿದ್ದಳು. ಅವಳಿಗೆ ಭಾರತಕ್ಕೆ ಬರಲು ವೀಸಾ ತೊಂದರೆಯಾದ ಕಾರಣ ಇಬ್ಬರೂ ಆನ್ ಲೈನ್ ಮೂಲಕ ಮದುವೆಯಾಗಿದ್ದರು. ಆಕೆಗೆ ಒಂಭತ್ತು ವರ್ಷಗಳ ಬಳಿಕ ಭಾರತಕ್ಕೆ ಬರಲು ಟೂರಿಸ್ಟ್ ವೀಸಾ ಸಿಕ್ಕಿತ್ತು.
ಆಕೆ ದೀರ್ಘಾವಧಿ ವೀಸಾಕ್ಕಾಗಿ ಆಕೆ ಅರ್ಜಿ ಹಾಕಿದ್ದಾಳೆ. ಆದರೆ ಅದು ಸಿಗುವ ಮೊದಲೇ ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರಕೃತ್ಯ ನಡೆದು ಹೋಗಿದೆ. ಆದ್ದರಿಂದ ಎರಡು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಬಂದವಳು ಈಗ ಪಾಕಿಸ್ತಾನಕ್ಕೆ ಹಿಂತಿರುಗಬೇಕಾಗಿದೆ. ಬಹಳ ಬೇಸರದಿಂದ ಪತ್ನಿಯನ್ನು ಪತಿ ಮುನೀರ್ ಖಾನ್ ಗಡಿಯಾಚೆಗೆ ಕಳುಹಿಸಿಕೊಡಬೇಕಾಯಿತು. ಯಾಕೆಂದರೆ ಇಲ್ಲಿಯೇ ಇದ್ದರೆ ಅಂತಹ ಪಾಕಿಸ್ತಾನಿಗಳನ್ನು ಮೂರು ವರ್ಷದ ತನಕ ಜೈಲಿನಲ್ಲಿ ಇಡುವ ಶಿಕ್ಷೆ ವಿಧಿಸಲಾಗುತ್ತದೆ. ಇದು ವಿಷಯ.
ಭಾರತದಲ್ಲಿರುವ ಪುರುಷರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿರುವ ಪಾಕಿಸ್ತಾನಿ ಮಹಿಳೆಯರು ಹಲವರಿದ್ದಾರೆ. ಅಂತವರಲ್ಲಿ ಧೀರ್ಘಾವಧಿ ವೀಸಾ ಹೊಂದಿದ ಪಾಕಿಸ್ತಾನಿಗಳನ್ನು ನಮ್ಮ ದೇಶ ತೊರೆಯಬೇಕಾಗಿಲ್ಲ ಎನ್ನುವ ವಿನಾಯಿತಿಯನ್ನು ಕೊಡಲಾಗಿದೆ. ಆದರೆ ಟೂರಿಸ್ಟ್ ವೀಸಾದಲ್ಲಿದವರು ತೊರೆಯಬೇಕು. ಆದರೆ ವಿಷಯ ಇರುವುದು ಸೇನೆ, ಸುರಕ್ಷಾ ಪಡೆ, ಜಮ್ಮು-ಕಾಶ್ಮೀರದ ಪೊಲೀಸ್ ಇಲಾಖೆ ಹೀಗೆ ಆಯಕಟ್ಟಿನ ಸೇವೆಯಲ್ಲಿರುವವರು ತೀರಾ ಪಾಕಿಸ್ತಾನದ ಯುವತಿಯರನ್ನು ಮದುವೆಯಾದರೆ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಭಾರತದ ಕೆಲವು ಯೋಧರು, ಪೊಲೀಸರು, ಅಧಿಕಾರಿಗಳು ಪಾಕಿಸ್ತಾನದ ಸುಂದರ ಯುವತಿಯರ ಹನಿ ಟ್ರಾಪಿಗೆ ಸಿಲುಕಿ ಇಲ್ಲಿನ ರಹಸ್ಯಗಳನ್ನು ಹೇಳಿ ನಂತರ ಸಿಕ್ಕಿಬಿದ್ದ ಘಟನೆಗಳು ಈ ಹಿಂದೆ ನಡೆದಿವೆ.
ಇದು ಹನಿಟ್ರಾಪ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮದುವೆನೂ ಆಗಿ ನಿತ್ಯ ಮಾಹಿತಿಯನ್ನು ಗಂಡನಿಂದ ಪಡೆದು ಗಡಿಯಾಚೆಯಲ್ಲಿ ಇರುವವರಿಗೋ ಅಥವಾ ಅಲ್ಲಿಯೇ ಇರುವ ಸ್ಲೀಪರ್ ಸೆಲ್ ನವರಿಗೆ ಕೊಡಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ. ಹಾಗಿರುವಾಗ ಪರಮ ಶತ್ರು ರಾಷ್ಟ್ರದ ನೆಲೆದಲ್ಲಿ ಇದ್ದವಳನ್ನು ಆನ್ ಲೈನ್ ಮೂಲಕ ಮದುವೆಯಾಗುವುದೆಂದರೆ ಅದು ದೇಶದ ಸುರಕ್ಷತೆಗೂ ಒಂದು ಸವಾಲಲ್ವಾ?
ಇದನ್ನು ಅವರ ಇಲಾಖೆಯ ಉನ್ನತ ಅಧಿಕಾರಿಗಳು ಹೇಗೆ ನೋಡುತ್ತಾರೆ ಎನ್ನುವುದೇ ಈಗ ಇರುವ ಪ್ರಶ್ನೆ. ಇಲ್ಲಿ ಮಿನಾಲ್ ಖಾನ್ ಹಾಗೂ ಮುನೀರ್ ಖಾನ್ ಮದುವೆಯ ಮೊದಲು ಸಂಬಂಧಿಯಾಗಿದ್ದರು ಎನ್ನಲಾಗುತ್ತಿದೆ. ಆದರೆ ಈ ಸಂಬಂಧ, ಮದುವೆ, ಗಡಿಯಾಚೆಗಿನ ಕಲಹಗಳು, ಹನಿಟ್ರಾಪ್ ಗಳು ಎಷ್ಟರಮಟ್ಟಿಗೆ ನಮ್ಮ ದೇಶದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಡ್ಡಿಗಳಾಗಿರುತ್ತವೆ ಎನ್ನುವುದು ಕೂಡ ಮುಖ್ಯ.
Leave A Reply