ತಿಂಗಳಾಂತ್ಯಕ್ಕೆ ಮಂಗಳೂರು ಏರ್‍ಪೋರ್ಟ್ ಲಗ್ಗೇಜ್ ಸ್ಟ್ಯಾಂಪಿಂಗ್ ಮುಕ್ತ
ನಾಗರಿಕ ವಿಮಾನ ಪ್ರಯಾಣ ಸೂಪರ್‍ಫಾಸ್ಟ್!
ದೆಹಲಿ: ನಾಗರಿಕ ವಿಮಾನಯಾನ ಪ್ರಯಾಣಿಕರಿಗೆ ಪ್ರಯಾಣ ಅವಧಿ 1 ಅಥವಾ 2 ಗಂಟೆಯದಾಗಿದ್ದರೆ ಅದರಷ್ಟೇ ಸಮಯ ವ್ಯರ್ಥವಾಗುತ್ತಿದ್ದದ್ದು ಲಗ್ಗೇಜ್ ತಪಾಸಣೆ(ಸ್ಟ್ಯಾಂಪಿಂಗ್). ಮಾರುದ್ದ ಸಾಲಿನಲ್ಲಿ ನಿಂತು ಹೊತ್ತುಕೊಂಡಿದ್ದ ಲಗ್ಗೇಜ್‍ಗಳನ್ನು ಪೊಲೀಸ್ ಸಮವಸ್ತ್ರಧಾರಿಗೆ ಒಂದೊಂದಾಗಿ ನೀಡುತ್ತಾ ಕೈ ಎತ್ತಿ, ಬೆಲ್ಟ್ ಬಿಚ್ಚಿ ಎಂದು ಆತ ಕುಣಿಸಿದಂತೆ ಕುಣಿದು ವಿಮಾನಯಾನ ಸಂಸ್ಥೆ ಲಾಬಿಗೆ ಬಂದು ಕೂರುವಷ್ಟರಲ್ಲಿ ಸಾಕಪ್ಪಾ ಸಾಕು ಅನಿಸುತ್ತಿತ್ತು.
ಆದರೆ ಇನ್ಮುಂದೆ ಆ ಸಮಸ್ಯೆಯೇ ಬೇಡ ಎಂದು ಪ್ರಧಾನಿ ಮೋದಿ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ತಪಾಸಣೆಯನ್ನು ಜಾರಿಗೆ ತಂದಿತ್ತು. ಜೂನ್ 1ರಿಂದಲೇ ಚೆನ್ನೈ, ಜೈಪುರ, ಪಟನಾದಲ್ಲಿ ಆರಂಭಗೊಂಡು ಯಶಸ್ವಿಯಾಗಿತ್ತು ಕೂಡ.
ಈಗ ಮಂಗಳೂರಿಗೂ ಈ ವ್ಯವಸ್ಥೆ ವಿಸ್ತರಿಸಲಿದ್ದೇವೆ ಎಂದು ದೇಶದ ಸುಮಾರು 59 ನಾಗರಿಕ ನಾಗರಿಕ ವಿಮಾನಿಲ್ದಾಣಗಳ ಭದ್ರತೆ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ(ಸಿಐಎಸ್‍ಎಫ್) ತಿಳಿಸಿದೆ. ಪ್ರಸ್ತುತ 17 ಏರ್‍ಪೋರ್ಟ್‍ಗಳಲ್ಲಿ ಲಗ್ಗೇಜ್ ಸ್ಟ್ಯಾಂಪಿಂಗ್ ಇಲ್ಲ. ಬದಲಿಗೆ ಅತ್ಯಾಧುನಿಕ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಹೆಚ್ಚುವರಿಯಾಗಿ ಇನ್ನೂ 10 ನಗರಗಳ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸ್ಯಾಂಪಿಂಗ್ ಮುಕ್ತ ತಪಾಸಣೆ ವಿಸ್ತರಿಸಲಿದ್ದೇವೆ ಎಂದು ಸಿಐಎಸ್‍ಎಫ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.
Leave A Reply