ವಿವೇಕಾನಂದರ ಕಲ್ಪನೆಯಂತೆ ಭಾರತ, ಚೀನಾದತ್ತ 21ನೇ ಶತಮಾನ: ಮೋದಿ
ದೆಹಲಿ: ವಿಶ್ವಕ್ಕೆ ಮೊದಲ ಬಾರಿ ‘ಒನ್ ಏಷ್ಯಾ’ ಕಲ್ಪನೆಯನ್ನು ನೀಡಿದ್ದು ಸ್ವಾಮಿ ವಿವೇಕಾನಂದರು. ಅವರ ಕಲ್ಪನೆಯಂತೆ 21ನೇ ಶತಮಾನ ಭಾರತ ಮತ್ತು ಚೀನಾದ್ದು ಎಂಬುದು ಸಾಬೀತಾಗುತ್ತಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಶ್ವಕ್ಕೆ ಭಾರತದ ಸಂಸ್ಕೃತಿಯ ತಾಕತ್ತನ್ನು ತಿಳಿಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125ನೇ ವರ್ಷಾಚರಣೆ ಮತ್ತು ದಿನದಯಾಳ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಕಾಲೇಜುಗಳಲ್ಲಿ ‘ರೋಸ್ ಡೆ’ ಆಚರಿಸುವುದನ್ನು ವಿರೋಧಿಸುವುದಿಲ್ಲ. ಆ ದಿನ ಕೇರಳ ದಿನ, ಪಂಜಾಬ್ ದಿನವಾಗಿ ಪರಿವರ್ತಿತನೆಯಾಗಬೇಕು. ಅದರ ಮೂಲಕ ಆಯಾ ರಾಜ್ಯದ ಕಲೆ, ಸಂಸ್ಕೃತಿ ಬಿಂಬಿತವಾಗಬೇಕು. ಯುವಕರು ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಕಾರಿಯಾಗಬೇಕು ಎಂದು ಹೇಳಿದರು.
ಸ್ವಚ್ಛತೆ ಮಾಡುವ ಪೌರಕಾರ್ಮಿಕರ ಆರೋಗ್ಯದತ್ತ ಗಮನ ಹರಿಸಬೇಕು. ಕೊಳಕು ತುಂಬಿದ ಗಂಗೆಯನ್ನು ನಾವು ಹೇಗೆ ಸ್ವೀಕರಿಸಬೇಕು. ಗಂಗೆಯ ಪಾವಿತ್ರ್ಯ ಕಾಪಾಡುವುದು ನಮ್ಮ ಕರ್ತವ್ಯ. ಗಂಗೆಯ ಮಾಲಿನ್ಯ ತಡೆದು ನಾವು ನಂತರ ವಂದೆ ಮಾತರಂ ಹಾಡಿದರೆ ಅದಕ್ಕೆ ಅರ್ಥ ದೊರೆಯುತ್ತದೆ ಎಂದು ಹೇಳಿದರು.
ಸೆ.11ರಂದು ಭಯೋತ್ಪಾಾದಕರ ದಾಳಿ ಬಗ್ಗೆಯೇ ಚರ್ಚೆಯಾಗುತ್ತದೆ. ಆದರೆ 1983 ಸೆ.11ರಂದು ಸ್ವಾಮಿ ವಿವೇಕಾನಂದರು ನೀಡಿದ ಸ್ಫೂರ್ತಿದಾಯಕ ಭಾಷಣದ ಸ್ಮರಣೆ, ಆರಾಧನೆ ನಡೆಯಬೇಕು. ಅಮೆರಿಕನ್ನರು 1983 ಸೆ.11ರ ದಿನವನ್ನು ಮರೆತಿದ್ದಾರೆ.ಆ ಸ್ಮರಣೀಯ ದಿನದ ಜಾಗಕ್ಕೆ 2011ರ ಸೆ.11ರ ದಾಳಿಯ ಕಹಿ ನೆನಪು ವಕ್ಕರಿಸಿದೆ ಎಂದು ಹೇಳಿದರು.
ವಂದೇ ಮಾತರಂ ಹೇಳಲು ಹೆಮ್ಮೆ
ನನ್ನ ಹೃದಯ ವಂದೇ ಮಾತರಂ ಹೇಳಿದರೆ ನನ್ನ ಹೃದಯ ಮೀಡಿಯುತ್ತೇ, ಹೆಮ್ಮೆ ಉಕ್ಕಿ ಬರುತ್ತೆ. ಆದರೆ ಕೆಲವು ಜನ ವಂದೇ ಮಾತರಂ ಘೋಷಣೆ ಹೇಳಲು ಹಿಂಜರಿಯುತ್ತಿದ್ದಾರೆ ಎಂದು ರಾಷ್ಟ್ರವಿರೋಧಿಗಳಿಗೆ ಟಾಂಗ್ ನೀಡಿದರು.
Leave A Reply