ಟಿಎ,ಡಿಎಗಾಗಿ ಆಗುವ ಸಾಹಿತ್ಯ ಸಮ್ಮೇಳನಗಳೇ ಬೇರೆ, ಇದೇ ಬೇರೆ!
Special Report from Belgavi:
ಸಾಹಿತ್ಯ ಸಮ್ಮೇಳನ ಎನ್ನುವ ಹೆಡ್ಡಿಂಗ್ ಪತ್ರಿಕೆಗಳಲ್ಲಿ ಓದುವಾಗ ನಿಮ್ಮ ಮನಸ್ಸಿನಲ್ಲಿ ಯಾವ ಚಿತ್ರಣ ಬರುತ್ತೇ? ಬಿಳಿ ಕೂದಲು, ಉದ್ದದ ಪೈಜಾಮ, ಕುರ್ತಾ, ಕನ್ನಡಕ, ಅದರೊಳಗೆ ಆಳವಾದ ಕಣ್ಣುಗಳು, ಸಾಂಪ್ರದಾಯಿಕ ಪಾದರಕ್ಷೆ, ಹೆಗಲಿಗೆ ಉದ್ದನೆಯ ಬಟ್ಟೆಯ ಚೀಲ ಪಕ್ಕಾ ಐದಾರು ವರ್ಷಗಳ ಹಿಂದಿನ ಸದಾಶಿವ ಬ್ರಹ್ಮಾವರ ಅವರನ್ನು ನೋಡಿದಂತೆ ಕಾಣುವ ಸಾಹಿತಿಗಳು. ಅಂತವರೇ ವೇದಿಕೆಯ ಮೇಲೆಯೂ ಇರುತ್ತಾರೆ, ವೇದಿಕೆಯ ಕೆಳಗೆ ಮೊದಲೆರಡು ಸಾಲಿನಲ್ಲಿಯೂ ಇರುತ್ತಾರೆ. ಬೆಳಿಗ್ಗೆ ಟಿಫಿನ್, ಮಧ್ಯಾಹ್ನ ಊಟ, ಸಂಜೆ ಚಾಗೆ ಇನ್ನೆರಡು ಸಾಲು ತುಂಬಿರುತ್ತವೆ. ಇನ್ನು ಗೋಷ್ಟಿಗಳು. ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಲು ಇದ್ದವನಿಗೆ ಸಬ್ಜೆಕ್ಟ್ ಗಿಂತ ಅವನ ಟಿಎ ಡಿಎ ಮೇಲೆ ಕಣ್ಣು. ಸಂಜೆ ತನ್ನ ಪಾಲಿನ ಭಾಷಣ ಕುಟ್ಟಿದ ತಕ್ಷಣ ಯಾವ ಬಾಗಿಲಿನಿಂದ ಓಡುವುದು ಎಂದು ಆತುರ. ಸಮ್ಮೇಳನಾಧ್ಯಕ್ಷರು ಬೆಳಿಗ್ಗೆ ಉದ್ಘಾಟನೆಗೆ ಬಂದು ನಾಲ್ಕು ಹಳೆ ಜಿಡ್ಡುಹಿಡಿದ ಮಾತುಗಳನ್ನು ಹೇಳಿ ತಮ್ಮ ಕೋಣೆಗೆ ಹೋಗಿ ಮಲಗಿದರೆ ನಂತರ ಬರುವುದು ಯಾರಾದರೂ ಸಚಿವರು ಸಭಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಇದ್ದರೆ ಮಾತ್ರ.
ಇನ್ನು ಸಮ್ಮೇಳನ ನಡೆಯುವ ಸ್ಥಳದ ಅಕ್ಕಪಕ್ಕದವರಿಗೆ ಅಲ್ಲಲ್ಲಿ ಕಾಣುವ ಧ್ವಜ ಬಿಟ್ಟರೆ ಅವರಿಗೆ ಒಳಗೆ ಏನು ನಡೆಯುತ್ತದೆ ಎನ್ನುವುದು ಗೊತ್ತಿಲ್ಲ, ಬೇಕಿರುವುದಿಲ್ಲ. ಸಮ್ಮೇಳನ ಮುಗಿಯುವ ಸಮಯಕ್ಕೆ ಸರಿಯಾಗಿ ಸಮಾರೋಪದಲ್ಲಿ ಯಾರಾದರೂ ವಿವಾದದ ಹೇಳಿಕೆ ಕೊಟ್ಟರೆ ಅದಕ್ಕೆ ಆ ಊರಿನ ಪತ್ರಿಕೆಯಲ್ಲಿ ಸುದ್ದಿ ಬರುತ್ತೆ ಬಿಟ್ಟರೆ ಇಲ್ಲದಿದ್ದರೆ ಯಾವುದಾದರೂ ಮೂಲೆಯಲ್ಲಿ ಸಿಂಗಲ್ ಕಾಲಂ ನ್ಯೂಸ್ ಆಗಿ ಹೊರಳುತ್ತೆ. ಇದು ವಾಸ್ತವ. ಹಾಗಿರುವಾಗ ಯಾವುದೇ ಸಾಹಿತ್ಯ ಸಮ್ಮೇಳನ ಹೀಗೆ ಇರುತ್ತೆ ಎನ್ನುವ ನಂಬಿಕೆ ಮತ್ತು ಸತ್ಯದ ನಡುವೆ ಶುರುವಾದದ್ದು ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ.
ಮಂಗಳೂರಿನಲ್ಲಿ ನಡೆದ ಉದ್ಘಾಟನಾ ಸಮ್ಮೇಳನದ ಬಗ್ಗೆ ಪುಸ್ತಕವೇ ಬಂದಿರುವುದರಿಂದ ಅದು ಎಲ್ಲರಿಗೂ ಗೊತ್ತೆ ಇರುವ ವಿಷಯ. ಸಂಘಟನಾತ್ಮಕವಾಗಿ ಮಂಗಳೂರಿನಲ್ಲಿ ಯುವ ಬ್ರಿಗೇಡ್ ಗೆ ಜೀವ ತುಂಬುವ ಶಕ್ತಿಗಳು ಇರುವುದರಿಂದ ಅಲ್ಲಿ ನಡೆದ ವೈಭವವನ್ನು ಎಲ್ಲರೂ ಅನುಭವಿಸಿದ್ದಾರೆ. ಆದರೆ ಅಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮ ಚರಣವನ್ನು ಬೆಳಗಾವಿಯಲ್ಲಿ ಹಾಕಬೇಕು ಎಂದು ಅಂದುಕೊಳ್ಳುವಾಗ ಚಕ್ರವರ್ತಿಯವರಿಗೆ ಬೆಳಗಾವಿಯಲ್ಲಿ ಯುವ ಬ್ರಿಗೇಡಿನ ಕಾರ್ಯಕತ್ತರ ಸಂಖ್ಯೆ ಎಷ್ಟಿರಬಹುದು ಎಂದು ಗೊತ್ತಿರಲಿಲ್ಲ. ಆದರೂ ಹೇಳಿಯಾಗಿದೆ, ಅದನ್ನು ಅನುಷ್ಟಾನಕ್ಕೆ ತರಲೇಬೇಕು ಎಂದು ಹೊರಟುಬಿಟ್ಟೆವು ಎಂದು ಹೇಳುತ್ತಾ ತಮ್ಮ ಸಮಾರೋಪದ ನುಡಿಗಳಲ್ಲಿ ಭಾವುಕರಾಗಿ ಬಿಟ್ಟರು ಚಕ್ರವರ್ತಿ ಸೂಲಿಬೆಲೆ.
ಆದರೆ ತಾನು ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ 20 ದಿನಗಳ ತನಕ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿ ವಾಸ್ತವ್ಯ ಹೊಂದಿದಾಗಲೂ ಒಂದೆರಡು ದಿನಗಳಿಗಿಂತ ಹೆಚ್ಚು ಹೊರಗೆ ಬರಬೇಕಾಗುವ ಪ್ರಸಂಗ ಬಂದಿರಲಿಲ್ಲ ಎಂದರೆ ಬೆಳಗಾವಿಯ ಯುವ ಬ್ರಿಗೇಡಿನ ಕಾರ್ಯಕತ್ತ ಮಿತ್ರರ ಸಂಘಟನಾ ಶಕ್ತಿ ಮತ್ತು ಕೆಲಸದ ಆವೇಶ ಎಷ್ಟಿದ್ದಿರಬಹುದು ಎಂದು ನೀವೆ ಊಹಿಸಿ ಎಂದು ಅವರು ಹೇಳಿದ್ದರಲ್ಲಿ ಯಾವ ಉತ್ರ್ಪೇಕ್ಷತೆ ಇರಲಿಲ್ಲ. ಯಾಕೆಂದರೆ ಬೆಳಗಾವಿಯಂತಹ ರಾಜ್ಯದ ತುದಿಯಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಮಾಡುವಾಗ ಬೇಕಾಗುವುದು ನಿಜಕ್ಕೂ ಅರ್ಹನಿಶಿಯಾಗಿ ಸಮಯದ ಪರಿವೇ ಇಲ್ಲದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಾರ್ಥರಹಿತ ಯುವಕರ ತಂಡ.
ಬೇರೆ ಸಾಹಿತ್ಯ ಸಮ್ಮೇಳನವಾದರೆ ಅದಕ್ಕೆ ಸರಕಾರದ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬರುತ್ತದೆ. ಅತಿಥಿಗಳು ಕೂಡ ಕೇಳುವವರು ಇರುತ್ತಾರೋ ಇಲ್ವೋ ಕೊಡುವವರು ಇದ್ದರೆ ಸಾಕು ಎಂದು ಬರುತ್ತಾರೆ. ಆದರೆ ಇಲ್ಲಿ ಹಾಗೆ ಅಲ್ಲ. ಇದು ಅಪ್ಪಟ ಕಾರ್ಯಕತ್ತರ ಶಕ್ತಿಯನ್ನು ನಂಬಿಯೇ ಮಾಡುವ ಸಾಹಿತ್ಯ ಸಮ್ಮೇಳನ. ಹಾಗಿರುವಾಗ ಇದು ಕಾಟಾಚಾರಕ್ಕೆ ಮುಗಿಯುವ ಸಾಧ್ಯತೆಗಳು ಇರುವುದಿಲ್ಲ. ಎಲ್ಲಕ್ಕಿಂತಲೂ ಸಮ್ಮೇಳನದ ಪ್ರೇರಕ ಶಕ್ತಿ ಚಕ್ರವರ್ತಿ ಸೂಲಿಬೆಲೆ ಅವರು ಇರುವಾಗ ಅಲ್ಲಿ ಪ್ರೇಕ್ಷಕರ ಕೊರತೆ ಆಗುವ ಚಾನ್ಸೆ ಇಲ್ಲ. ಸೆಪ್ಟೆಂಬರ್ 10 ಮತ್ತು 11 ರಂದು ಎರಡು ದಿನ ಎಲ್ಲ ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯಕ್ಕೆ ಮುಗಿದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಂದು ಗೋಷ್ಟಿಗೂ ಬೆಳಗಾವಿಯ ಕೆಎಲ್ ಇ ಸಭಾಂಗಣ ತುಂಬಿ ತುಳುಕುತ್ತಿತ್ತು. ಅದರಲ್ಲಿಯೂ ಚಕ್ರವರ್ತಿಯವರು ಮಾತನಾಡಲು ವೇದಿಕೆಗೆ ಬರುತ್ತಿದ್ದಂತೆ ಕುರ್ಚಿಗಳು ಖಾಲಿ ಇಲ್ಲದೆ ಜನ ನಿಂತು ನೋಡುತ್ತಿದ್ದರೂ ಮಾತ್ರವಲ್ಲ ಒಳಗೆ ಕಾಲಿಡುವುದು ಕೂಡ ಕಷ್ಟವಾಗುತ್ತಿತ್ತು. ಗೋಷ್ಟಿಗಳು ವೈವಿದ್ಯಮಯವಾಗಿತ್ತು ಮಾತ್ರವಲ್ಲದೆ ಯುವಕರು ದೇಶಪ್ರೇಮ ಜೈಕಾರ ಹಾಕುತ್ತಿದ್ದರು. ಇದೆಲ್ಲ ಅನುಭವಿಸಿದವರಿಗೆ ಗೊತ್ತು
Leave A Reply