ಸುಷ್ಮಾ ಸ್ವರಾಜ್ ಹೊಗಳಿದ ರಾಹುಲ್ ಗಾಂಧಿ
Posted On September 24, 2017

ದೆಹಲಿ: ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಭಾಷಣವನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಅಂತಾರಾಷ್ಟ್ರೀಯ ಸಭೆಯಲ್ಲಿ ಕಾಂಗ್ರೆಸ್ ಸಾಧನೆ ಗುರುತಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ರಾಹುಲ್, “ಸುಷ್ಮಾ ಸ್ವರಾಜ್ ಅವರೇ, ಕೊನೆಗೂ ನೀವು ಕಾಂಗ್ರೆಸ್ ಸಾಧನೆ ಗುರುತಿಸಿದ್ದೀರಿ. ಐಐಟಿ, ಐಐಎಂ ಕಾಂಗ್ರೆಸ್ ಸ್ಥಾಪಿಸಿದ್ದು, ಉಲ್ಲೇಖಿಸಿದ್ದಕ್ಕೆ ಧನ್ಯವಾದ” ಎಂದಿದ್ದಾರೆ.
ನಾವು ಐಐಟಿ, ಐಐಎಂನಂಥ ಸಂಸ್ಥೆ ನಿರ್ಮಿಸಿದ್ದರೆ, ಪಾಕಿಸ್ತಾನ ಲಷ್ಕರೆ ತಯ್ಯಬಾ, ಹಿಜ್ಬುಲ್ ಮುಜಾಹಿದ್ದೀನ್ ಸೃಷ್ಟಿಸಿದೆ ಎಂದು ಸುಷ್ಮಾ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಲ್ಲದೆ ಭಾರತ ಹಿಂದಿನಿಂದಲೂ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಕಳೆದ 70 ವರ್ಷಗಳಲ್ಲಿ ಹಲವು ಸರಕಾಗಳು ಆಡಳಿತ ನಡೆಸಿದರೂ, ಅಭಿವೃದ್ಧಿಗೆ ತಮ್ಮದೇ ಪಾಲು ನೀಡಿವೆ. ಆದರೆ ಪಾಕಿಸ್ತಾನ ಮಾತ್ರ ಉಗ್ರರ ಪೋಷಣೆಯಲ್ಲಿ ತೊಡಗಿದೆ ಎಂದು ಸುಷ್ಮಾ ದೂರಿದ್ದರು.
- Advertisement -
Leave A Reply