• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹುಲಿವೇಷದಿಂದ ಸಂಗ್ರಹವಾದ ಒಂದೂಕಾಲು ಲಕ್ಷ ದೇವರಿಗೆ!

Hanumantha Kamath Posted On October 28, 2017


  • Share On Facebook
  • Tweet It

ವಾರಿಜಾ ಶೆಟ್ಟಿ, ಅವರಿಗೆ ಆರು ತಿಂಗಳ ಹಿಂದೆ ಕನಸಿನಲ್ಲಿ ಶ್ರೀ ವಿಠೋಭ ರುಕುಮಾಯಿ ದೇವರು ಕಾಣಿಸಿಕೊಳ್ಳುತ್ತಾರೆ. ನನಗೆ ಏನೂ ಕೊಡುವುದಿಲ್ವಾ ಎಂದು ಪದೇ ಪದೇ ದೇವರು ಕೇಳಿದಂತೆ ಆಗುತ್ತದೆ. ಆಕೆಗೆ ತಾನು ದೇವರೊಂದಿಗೆ ಮಾತನಾಡಿದಂತೆ ಭಾಸವಾಗುತ್ತದೆ. ವಾರಿಜಾ ಶೆಟ್ಟಿ ನಿರ್ಧಾರ ಮಾಡುತ್ತಾರೆ. ತಾನು ದೇವರಿಗೆ ಏನಾದರೂ ಕೊಡಬೇಕು. ಆಕೆ ತಡ ಮಾಡುವುದಿಲ್ಲ. ಮನೆಯ ಕಪಾಟು ನೋಡುತ್ತಾರೆ. 23 ಗ್ರಾಂ ಚಿನ್ನದ ಹಾರ ಸಿಗುತ್ತದೆ. ಅದನ್ನು ತೆಗೆದುಕೊಂಡು ಬಂದು ದೇವರಿಗೆ ಅರ್ಪಿಸುತ್ತಾರೆ. ಮನಸ್ಸು ಖುಷಿಯಾಗುತ್ತದೆ. ಮತ್ತೆ ಭಜನಾ ಪ್ರಿಯ ವಿಠೋಭನನ್ನು ಭಜಿಸಲು ಅಲ್ಲಿ ಕುಳಿತುಬಿಡುತ್ತಾರೆ. ಒಬ್ಬ ಭಕ್ತ ಅಥವಾ ಭಕ್ತೆ ಮತ್ತು ಭಗವಂತನ ನಡುವಿನ ಸಂಬಂಧವೇ ಹಾಗೆ. ದೇವರು ಕೇಳಿದ ಎಂದ ಕೂಡಲೇ ಕೊಟ್ಟು ಬಿಡುವುದು. ನಾಳೆ ತನಗೆ ಅದು ಬೇಕಾಗಬಹುದು. ತಾನು ಕಷ್ಟಪಟ್ಟು ದುಡಿದು ಕೂಡಿಟ್ಟದ್ದು ಎನ್ನುವ ಸಣ್ಣ ಆತಂಕವೂ ಅಲ್ಲಿ ಬರುವುದಿಲ್ಲ. ಹಾಗಂತ ವಾರಿಜಾ ಶೆಟ್ಟಿ ಶ್ರೀಮಂತೆ ಏನೂ ಅಲ್ಲ. ಆದರೆ ಮನಸ್ಸು ಶ್ರೀಮಂತ. ಪ್ರಪಂಚದಲ್ಲಿ ಹೆಚ್ಚು ಸುಖಿ ಯಾರು ಎಂದರೆ ಕೊಡುವ ವ್ಯಕ್ತಿ ವಿನ: ತೆಗೆದುಕೊಂಡ ವ್ಯಕ್ತಿ ಅಲ್ಲ ಎನ್ನುವುದು ನಾಣ್ಣುಡಿ. ವಾರಿಜಾ ಶೆಟ್ಟಿ ಅವರ ಬಾಳು ಹಸನಾಗಲಿ ಎಂದು ಭಗವಂತನಲ್ಲಿ ಹಾರೈಸೋಣ.
ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ವಾರ್ಷಿಕ ಅಖಂಡ ಭಜನಾ ಮಹೋತ್ಸವ ಸಂದರ್ಭದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವಾರಿಜಾ ಶೆಟ್ಟಿ ದೇವಸ್ಥಾನಕ್ಕೆ ಬರುತ್ತಾರೆ. ಯಾವುದೇ ಮಂಡಳಿ ಭಜನೆಯಲ್ಲಿ ಪಾಲ್ಗೊಂಡಿರಲಿ ಅವರೊಂದಿಗೆ ಸೇರಿ ತಾಳಕ್ಕೆ ಕೈ ಜೋಡಿಸುತ್ತಾರೆ. ಉಳಿದ ದಿನಗಳಲ್ಲಿ ಸಂಜೆ 6 ರಿಂದ 8 ಗಂಟೆಯ ತನಕ ನಡೆಯುವ ಭಜನೆಯಲ್ಲಿ ಕೂಡ ಭಾಗವಹಿಸುತ್ತಾರೆ. ಅಕ್ಕಪಕ್ಕದ ದೇವಸ್ಥಾನಗಳಲ್ಲಿ ಕೂಡ ಭಜನೆಗೆ ಹೋಗುತ್ತಾರೆ. ಹಾಗೆ ತನು, ಮನಗಳಲ್ಲಿ ದೇವರನ್ನು ಆರಾಧಿಸುವಾಗ ಧನದ ಚಿಂತೆ ಬರುವುದಿಲ್ಲವೇನೋ. ಕೆಲವರು ದೇವರಿಲ್ಲ, ಇದ್ದರೆ ತೋರಿಸಿ ಹೀಗೆ ಅಸಂಬದ್ಧ ಪ್ರಶ್ನೆಗಳನ್ನು ಹಾಕಿರುವುದನ್ನು ನೀವು ನೋಡಿರಬಹುದು. ದೇವರನ್ನು ನಂಬದಿರುವುದೇ ಫ್ಯಾಶನ್ ಎಂದು ಕೆಲವರು ಅಂದುಕೊಳ್ಳುತ್ತಾರೆ. ದೇವರ ಮೂರ್ತಿಗಳ ಬಗ್ಗೆ ಅಂತವರು ತಮಾಷೆಯಾಗಿ ಮಾತನಾಡುತ್ತಾರೆ. ಅವರ ಎದುರು ದೇವರಿದ್ದಾನೆ ಎಂದು ವಾದಿಸುವುದು ಕೋಣದ ಮುಂದೆ ತುತ್ತೂರಿ ಬಾರಿಸಿದಂತೆ. ಅಂತವರಿಗೆ ಭಜನೆಯ ಮಹತ್ವ ಗೊತ್ತಾಗಲು ಸಾಧ್ಯವಿಲ್ಲ. ವಿದ್ಯುತ್ ಕಣ್ಣಿಗೆ ಕಾಣುವುದಿಲ್ಲ. ಹಾಗಂತ ವಿದ್ಯುತ್ ಪ್ರವಹಿಸುವ ತಂತಿಯನ್ನು ಹಿಡಿದು ನೋಡಿದಾಗ ಅನುಭವವಾಗುತ್ತದೆ. ಅರ್ಧ ಗಂಟೆ ತನ್ಮಯರಾಗಿ ದೇವರ ಭಜನೆ ಮಾಡಿದರೆ ದೇಹದಲ್ಲಿ ಏನರ್ಜಿ ಸ್ಟಾಕ್ ಆಗುತ್ತದೆ. ಆ ಶಕ್ತಿ ನಮ್ಮನ್ನು ಕ್ರಿಯಾತ್ಮಕವಾಗಿ ಮಾಡುತ್ತದೆ. ಇಲ್ಲದಿದ್ದರೆ ಅಂತಹ ವ್ಯಕ್ತಿ ಬ್ಯಾಟರಿ ಇಲ್ಲದ ನೋಕಿಯಾ ಫೋನಿನಂತೆ. ಅಸ್ತಿತ್ವ ಇದೆ, ಉಪಯೋಗ ಇಲ್ಲ, ಸಮಾಜಕ್ಕೆ.
ಇನ್ನು ದೇವರಿಗಾಗಿ ತಾವು ಸಂಗ್ರಹಿಸುವ ಹಣವನ್ನು ಪ್ರತಿ ವರ್ಷ ಅರ್ಪಿಸುವ ಯುವಕರ ಬಳಗವೊಂದಿದೆ. ಅದರ ಕಥೆಯನ್ನು ಹೇಳಬೇಕು.
ಮಂಗಳೂರಿನ ಬಂದರು ಪ್ರದೇಶದ ಸನಿಹ ನಿರೇಶ್ವಾಲ್ಯ ಗೂಡ್ ಶೆಡ್ ಎನ್ನುವ ಸ್ಥಳದಲ್ಲಿ ನಿತ್ಯಾನಂದ ಆಶ್ರಮ ಇದೆ. ಸುಮಾರು 18 ವರ್ಷಗಳ ಹಿಂದೆ ಅಲ್ಲಿನ ಸ್ಥಳೀಯ ಯುವಕರು ಆಶ್ರಮಕ್ಕೆ ಬಂದು “ನಾವು ರಥಬೀದಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಪೂಜಿಸುವ ಶಾರದಾ ಮಾತೆಯ ಉತ್ಸವದ ದಿನ ಹುಲಿವೇಷ ಹಾಕಬೇಕು ಎಂದು ನಿರ್ಧರಿಸಿದ್ದೇವೆ. ನಿತ್ಯಾನಂದ ಆಶ್ರಮದ ಹೆಸರಿನಲ್ಲಿ ಹುಲಿವೇಷ ಹಾಕಲು ಅನುಮತಿ ನೀಡಬೇಕು” ಎಂದು ಕೇಳಿಕೊಂಡಿದ್ದರು. ಅನುಮತಿ ಕೊಡುವುದೇನೋ ಸರಿ, ಆದರೆ ಮುಂದೆ ಯಾರಾದರೂ ಹುಲಿವೇಷದ ಖರ್ಚು ವೆಚ್ಚವನ್ನು ತೋರಿಸಿ ಎಂದು ಲೆಕ್ಕಪತ್ರ ಕೇಳಿದರೆ ಏನು ಮಾಡುವುದು ಎಂದು ಆಗಿನ ಆಡಳಿತ ಮಂಡಳಿಗೆ ಅನಿಸಿತು. ಆಡಳಿತ ಮಂಡಳಿಯ ಅನುಮಾನವನ್ನು ಪರಿಹರಿಸಿದ ಯುವಕರು ನಾವು ಹುಲಿವೇಷವನ್ನು ಹಾಕಿ ಅದರಿಂದ ಸಂಗ್ರಹವಾಗುವ ಹಣದಲ್ಲಿ ಖರ್ಚು ವೆಚ್ಚ ತೆಗೆದು ಉಳಿದ ಹಣವನ್ನು ಆಶ್ರಮಕ್ಕೆ ಕೊಡುತ್ತೇವೆ ಎಂದು ಹೇಳಿದರು. ಅದರಂತೆ ಹುಲಿವೇಷ ಪ್ರತಿ ವರ್ಷ ನಿತ್ಯಾನಂದ ಆಶ್ರಮದ ಪರಿಸರದ ಹುಲಿಗಳು ಹಾಕುತ್ತಾರೆ. ಪ್ರಾರಂಭದ ವರ್ಷಗಳಲ್ಲಿ 15 ಸಾವಿರ ರೂಪಾಯಿ ದೇವರಿಗೆ ಸಮರ್ಪಿಸಿದ ಯುವಕರ ಪಡೆ ಕಳೆದ ಬಾರಿ ಒಂದು ಲಕ್ಷ ಮತ್ತು ಈ ಬಾರಿ ಒಂದೂ ಕಾಲು ಲಕ್ಷ ರೂಪಾಯಿಗಳನ್ನು ನಿತ್ಯಾನಂದ ಆಶ್ರಮದಲ್ಲಿ ಪೂಜಿಸಲ್ಪಡುವ ದೇವರಿಗೆ ಅರ್ಪಿಸಿದ್ದಾರೆ. ಅದೇನೂ ಚಿಕ್ಕ ಮೊತ್ತವಲ್ಲ. ಅದೇ ರೀತಿಯಲ್ಲಿ ಆ ಯುವಕರು ಹದಿನೆಂಟು ವರ್ಷಗಳಲ್ಲಿ ವಯಸ್ಸು, ಅನುಭವ ಮತ್ತು ದೇಹದಲ್ಲಿ ಬದಲಾಗಿರಬಹುದು. ಆದರೆ ಕಮಿಂಟ್ ಮೆಂಟ್ ಮಾತ್ರ ಅದೇ. ದೇವರಿಗೆ ಸಮರ್ಪಣೆ.
ದಕ್ಷಿಣ ಕನ್ನಡ ಜಿಲ್ಲೆ ಗಾಂಜಾ, ಡ್ರಗ್ಸ್ ನ ಕಪಿಮುಷ್ಟಿಯಲ್ಲಿ ಸಿಲುಕಿದೆ ಎಂದು ಪ್ರಚಾರ ಆಗಿದೆ. ಅದು ಒಂದಷ್ಟರ ಮಟ್ಟಿಗೆ ನಿಜ ಕೂಡ ಹೌದು. ಆದರೆ ಅದೇ ನಿಜವಲ್ಲ. ಎಷ್ಟೋ ಯುವಕ ಮಂಡಲ,ಯುವತಿ ಮಂಡಲ ಸೈಲೆಂಟ್ ಆಗಿ ತಮ್ಮ ಪಾಡಿಗೆ ತಾವು ಸಮಾಜಸೇವೆಯಲ್ಲಿ ತೊಡಗಿದ್ದಾರೆ. ನಾನು ಈ ಯುವಕರ ಬಗ್ಗೆ ಹೇಳಿ ಅವರನ್ನು ಹೊಗಳುವುದು ಎಂದಲ್ಲ. ಒಳ್ಳೆಯದು ಮಾಡಿದಾಗ ಬೆನ್ನು ತಟ್ಟದಿದ್ದರೆ ಅವರಿಗೇನೂ ನಷ್ಟವಿಲ್ಲ. ಆದರೆ ಅಂತವರ ಪ್ರೇರಣೆಯಿಂದ ನಾವು ಕೂಡ ಏನನ್ನಾದರೂ ಸಾಧಿಸೋಣ ಎಂದು ಹೊರಡ ಬಯಸುವವರನ್ನು ಪ್ರೋತ್ಸಾಹಿಸುವುದು ನಿಲ್ಲಿಸದಂತೆ ಆಗುತ್ತದೆ.

  • Share On Facebook
  • Tweet It


- Advertisement -
NeereshwallyaNithyananda AshramaVarija shetty


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search