ಕೇರಳದಲ್ಲಿ ಹೀಗೊಂದು ಪರಿಸರ ಸ್ನೇಹಿ ಮದುವೆ ಶೈಲಿ…
ಎಲ್ಲರೂ ಪರಿಸರ ಕಾಪಾಡಬೇಕು, ಅರಣ್ಯ ರಕ್ಷಿಸಬೇಕು, ಜಲಸಂಪತ್ತಿನ ರಕ್ಷಣೆ ಮಾಡಬೇಕು, ನೀರು, ಆಹಾರ ಉಳಿಸಬೇಕು…
ಹೀಗೆ ವೇದಿಕೆ ಸಿಕ್ಕರೆ ಎಲ್ಲರೂ ಮಾರುದ್ದ ಭಾಷಣ ಬಿಗಿಯುತ್ತೇವೆ. ಆದರೆ ನಮ್ಮೆದುರೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಬಿಸ್ಲೇರಿ ನೀರು ನೋಡು ನಗುತ್ತಿರುತ್ತದೆ. ವೇದಿಕೆ ಇಳಿದ ಮೇಲಂತೂ ನಾವ್ಯಾರೋ, ನಮ್ಮ ಮಾತುಗಳಾವವೋ ಎಂಬಂತೆ ವರ್ತಿಸುತ್ತೇವೆ.
ಆದರೆ ಕೇರಳದ ಕಣ್ಣೂರು ಜಿಲ್ಲೆ ಕೊಲಾದ್ ನಲ್ಲಿ ಹಾಗಲ್ಲ. ಪರಿಸರ ರಕ್ಷಣೆ ಇಲ್ಲಿ ಸಿದ್ಧಾಂತ ಅಲ್ಲ, ಪ್ರಾಯೋಗಿಕ…
ಹೌದು, ಈ ಊರಿನಲ್ಲಿ ಮದುವೆಯಾಗಬೇಕಾದರೆ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿರಬೇಕು. ಮದುವೆಯಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ ಉಪಯೋಗಿಸುವಂತಿಲ್ಲ ಎಂದು ಪಂಚಾಯಿತಿ ನಿಯಮ ಮಾಡಿದೆ. ಹಾಗೊಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ 10 ಸಾವಿರ ರುಪಾಯಿ ದಂಡ ಹಾಕಲಾಗುತ್ತದೆ. ಮದುವೆ ನೋಂದಣಿ ರದ್ದುಗೊಳಿಸಲಾಗುತ್ತದೆ.
ಈ ಪರಿಸರ ಸ್ನೇಹಿ ಕಠಿಣ ನಿಯಮದಿಂದ ಪ್ರಸ್ತುತ ಬಹುತೇಕ ಜನ ಮದುವೆಯಲ್ಲಿ ಪ್ಲಾಸ್ಟಿಕ್ ವಸ್ತು ಬಳಸುತ್ತಿಲ್ಲ. ಪಂಚಾಯಿತಿಯ ಕಟ್ಟುನಿಟ್ಟಿನ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಕೆಲವೊಬ್ಬರು ಉಪಟಳ ಮಾಡಿದರೆ ದಂಡಕ್ಕೆ ಗುರಿಯಾಗಿಯೂ ಇದ್ದರೆ.
ಪರಿಸರ ರಕ್ಷಣೆ ದೃಷ್ಟಿಯಿಂದ ಪಂಚಾಯಿತಿ ಈ ನಿಯಮ ಜಾರಿಗೆ ತಂದ್ದಿದ್ದು, ಈ ಕುರಿತು ಜಾಗೃತಿ ಸಹ ಮೂಡಿಸಲಾಗಿದೆ. ಈ ಜಾಗೃತಿ ಅಭಿಯಾನದ ರೂಪ ಪಡೆದು ಈಗ 100 ಜನ ಸೇರುವ ಪ್ರತಿ ಕಾರ್ಯಕ್ರಮದಲ್ಲೂ ಪ್ಲಾಸ್ಟಿಕ್ ವಸ್ತು ಬಳಸುವುದಿಲ್ಲ ಎಂಬ ಮತ್ತೊಂದು ನಿಯಮ ಜಾರಿಗೊಳಿಸಲಾಗಿದೆ.
ನಾವು ಸಹ ಮನಸ್ಸು ಮಾಡಿದರೆ, ಪರಿಸರದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸಿದರೆ ಕೇರಳ ಮಾದರಿ ಅನುಸರಿಸೋಣ.
Leave A Reply