ನನ್ನನ್ನು ಕಂಡರೆ ಪ್ರಧಾನಿ ಮೋದಿಗೆ ಭಯ: ಇದು ವರ್ಷದ ಜೋಕ್ ಎಂದ ಬಿಎಸ್ ವೈ
Posted On November 1, 2017
ಬೆಂಗಳೂರು: ನನ್ನನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದು, “ಇದು ವರ್ಷದ ಜೋಕ್” ಎಂದು ಜರಿದಿದ್ದಾರೆ.
ಆಚಾರವಿಲ್ಲದ ನಾಲಗೆ ಏನು ಬೇಕಾದರೂ ಮಾತನಾಡುತ್ತದೆ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಮಾತೇ ಸಾಕು. ಮೋದಿಯವರು ಉಪವಾಸ ಇದ್ದು, ಭಕ್ತಿಯಿಂದ ಮಂಜುನಾಥನ ದರ್ಶನ ಮಾಡಿದರೆ, ಸಿದ್ದರಾಮಯ್ಯ ಅವರು ಕೋಳಿ ಮಾಂಸ, ಮೀನು ತಿಂದು ಹೋಗಿದ್ದಾರೆ. ಇದೇ ಪ್ರಧಾನಿ ಮೋದಿ ಹಾಗೂ ಸಿದ್ದರಾಮಯ್ಯ ಅವರಿಗೆ ಇರುವ ವ್ಯತ್ಯಾಸ ಎಂದು ಟೀಕಿಸಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು ಮಾತನಾಡಿದ ಯಡಿಯೂರಪ್ಪ, ರಾಜ್ಯದ ರಾಜಕೀಯ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗುತ್ತದೆ. ಯಾತ್ರೆಗೆ ಸಕಲ ಸಿದ್ಧತೆ ನಡೆದಿವೆ. ನ.2ರಿಂದ ಅಭೂತಪೂರ್ವ ಚಾಲನೆ ದೊರೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
- Advertisement -
Leave A Reply