ಕಾಶ್ಮೀರದಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ, ಇದಕ್ಕೇನು ಹೇಳುತ್ತೀರಿ ಕಮಲ್ ಹಾಸನ್?
ಶ್ರೀನಗರ: ಮೊನ್ನೆಯಷ್ಟೇ ಪಂಜಾಬಿನ ಅಮೃತಸರದಲ್ಲಿ ಹಾಡಹಗಲೇ ಆರೆಸ್ಸೆಸ್ ಮುಖಂಡರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾದ ಪ್ರಕರಣ ಮಾಸುವ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಯುವ ಮುಖಂಡರೊಬ್ಬರನ್ನು ಹತ್ಯೆ ಮಾಡಲಾಗಿದೆ.
ಶೋಪಿಯಾನ್ ಜಿಲ್ಲೆ ಕಿಲೂರ ಎಂಬಲ್ಲಿ ಗೌಹಾರ್ ಹುಸೇನ್ ಭಟ್ (30) ಎಂಬ ಬಿಜೆಪಿ ಮುಖಂಡನ ಶವ ಪತ್ತೆಯಾಗಿದ್ದು, ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು ಹುಸೇನ್ ಭಟ್ ಹತ್ಯೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಷಾದ ವ್ಯಕ್ತಪಡಿಸಿದ್ದು, ಹುತಾತ್ಮ ಭಟ್ ಕುಟುಂಬದ ಜತೆ ನಾವಿದ್ದೇವೆ ಎಂದು ಸಾಂತ್ವನ ಹೇಳಿದ್ದಾರೆ.
ಇತ್ತೀಚೆಗೆ ಶ್ರೀನಗರದಲ್ಲಿ ಹುಸೇನ್ ಭಟ್ ಕೀರ್ತಿ ಹೆಚ್ಚಾಗುತ್ತಿತ್ತು. ಆತ ಪಕ್ಷ ಸಂಘಟನೆಯಲ್ಲಿ ಚುರುಕಿನಿಂದ ತೊಡಗಿದ್ದರು. ಯುವಕರು ಸಹ ಅವನ ನಾಯಕತ್ವ ಒಪ್ಪಿದ್ದರು ಎಂದು ಬಿಜೆಪಿ ರಾಜ್ಯ ಮುಖಂಡ ಅಲ್ತಾಫ್ ಠಾಕೂರ್ ಹೇಳಿದ್ದಾರೆ.
ಹೀಗೆ ದೇಶದೆಲ್ಲೆಡೆ ಬಿಜೆಪಿ, ಆರೆಸ್ಸೆಸ್, ಹಿಂದೂಗಳ ಹತ್ಯೆಯಾಗುತ್ತಿದ್ದರೂ ಬಾಯಿಬಿಡದ, ಕೇರಳದಲ್ಲಿ ಕಮ್ಯುನಿಸ್ಟರ ಹತ್ಯಾಕಾಂಡದ ಕುರಿತು ಸೊಲ್ಲೆತ್ತದ, ಮುಸ್ಲಿಂ ಭಯೋತ್ಪಾದನೆ, ಕೇರಳದಲ್ಲಿ ಲವ್ ಜಿಹಾದ್ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಇದೆ ಎಂದು ಹೇಳಿಕೆ ನೀಡುತ್ತಾರೆ. ಇದು ಇಬ್ಬಂದಿತನವಲ್ಲವೇ?
Leave A Reply