ನೋಟ್ ಬ್ಯಾನ್ ಬಳಿಕದ ಈ ಒಂದು ವರ್ಷದಲ್ಲಿ ನಾವು ತಿಳಿಯಬೇಕಾದದ್ದು…

ಯುಪಿಎ ಆಡಳಿತ (2004-2014)
2008 – 2ಜಿ ಸ್ಪೆಕ್ಟ್ರಂ ಹಗರಣ, ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು. ನಷ್ಟ
2009 – ಸತ್ಯಂ ಕಂಪ್ಯೂಟರ್ಸ್ ಹಗರಣ, 14 ಸಾವಿರ ಕೋಟಿ ರು. ಭ್ರಷ್ಟಾಚಾರ
2010 – ಕಾಮನ್ ವೆಲ್ತ್ ಗೇಮ್ಸ್ ಆಯೋಜಿಸಿ ಸಾವಿರಾರು ಕೋಟಿ ಗುಳುಂ
2012 – ಕಲ್ಲಿದ್ದಿಲು ಹಗರಣದಲ್ಲಿ 1.86 ಲಕ್ಷ ಕೋಟಿ ರು. ಎಗರಿಸಿದ ಆರೋಪ ಕಾಂಗ್ರೆಸ್ ಮೇಲೆ
ಎನ್ ಡಿಎ ಆಡಳಿತ (2014-2017)
ಅಕ್ಟೋಬರ್ 2, 2014 – ದೇಶದ ಸ್ವಚ್ಛತೆಗೆ ಸ್ವಚ್ಛ ಭಾರತ ಅಭಿಯಾನ
ನವೆಂಬರ್ 8, 2016 –ಮ ಕಪ್ಪು ಹಣದ ಸ್ವಚ್ಛತೆಗೆ ಐನೂರು, ಸಾವಿರ ರೂ. ನೋಟು ನಿಷೇಧ
ಜುಲೈ 1, 2017 – ತೆರಿಗೆ ಸುಧಾರಣೆಗೆ ಸರಕು ಮತ್ತು ಸೇವಾ ತೆರಿಗೆ ಜಾರಿ
ದೇಶ ಡಿಜಲೀಕರಣಕ್ಕೆ ಡಿಜಿಟಲ್ ಇಂಡಿಯಾ
ದೇಶದಲ್ಲಿ ಉತ್ಪಾದನೆ, ದೇಸೀ ವ್ಯಾಪಾರ ವೃದ್ಧಿಸಲು ಮೇಕ್ ಇನ್ ಇಂಡಿಯಾ
ಉಪಟಳ ಮಾಡುವ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲ ಪೆಟ್ಟು
ನೀವು ಈ ಲೇಖನವನ್ನು ಓದಲು, ನರೇಂದ್ರ ಮೋದಿ ಉತ್ತಮ ಆಡಳಿತ ನೀಡಿದೆ ಎಂದು ಒಪ್ಪಿಕೊಳ್ಳಲು, ನೀವು ಬಿಜೆಪಿ ಸದಸ್ಯರೇ ಆಗಿರಬೇಕಿಲ್ಲ, ಆರೆಸ್ಸೆಸ್ ಸೇರಿರಬೇಕಿಲ್ಲ. ನೀವೊಬ್ಬ ದೇಶದ ಪ್ರಜ್ಞಾವಂತ ನಾಗರಿಕನಾದರೂ ಸಾಕು.
ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧಗೊಳಿಸಿ ಇಂದಿಗೆ ಭರ್ತಿ ಒಂದು ವರ್ಷ. ದೇಶಕ್ಕೆ ದೇಶವೇ ನೋಟ್ ಬ್ಯಾನ್ ಮಾಡಿದ್ದು ಒಳ್ಳೆಯದಾಯಿತು ಎಂದರೆ, ವಿರೋಧ ಪಕ್ಷಗಳು, ಎಡಬಿಡಂಗಿಗಳು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷಗಳು ಒಂದು ಹೆಜ್ಜೆ ಮುಂದೆ ಹೋಗಿ ನ.8ಅನ್ನು ಕರಾಳ ದಿನ ಆಚರಿಸಲು ಹೊರಟಿದೆ.
ಅದೇನೇ ಇರಲಿ, ನೋಟು ನಿಷೇಧ ನಿರ್ಧಾರವನ್ನು ದೇಶವೇ ಮೆಚ್ಚಿದೆ. ಆದರೂ ಕೆಲವರು ನೋಟು ನಿಷೇಧದಿಂದ ಏನು ಉಪಯೋಗವಾಯಿತು? ಕಪ್ಪು ಹಣ ಎಷ್ಟು ತಡೆಯಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹಾಕುತ್ತಾರೆ. ಅವರೆಲ್ಲರಿಗೂ ಉತ್ತರವಾಗಿ, ದೇಶದ ನಾಗರಿಕರಿಗೂ ಇದು ತಿಳಿಯಲಿ ಎಂದು ನೋಟು ನಿಷೇಧದ ಬಳಿಕದ ಉಪಯೋಗಗಳನ್ನು ಇಲ್ಲಿ ಕ್ಷೇತ್ರವಾರು ಪಟ್ಟಿ ಮಾಡಲಾಗಿದೆ. ಓದಿಕೊಳ್ಳಿ.
ನಕಲಿ ನೋಟು
ನೋಟು ನಿಷೇಧದ ಬಳಿಕ, ಇದುವರೆಗೆ 11.23 ಕೋಟಿ ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ. ಅಂದರೆ ಅಮಾನ್ಯೀಕರಣಗೊಂಡ ನೋಟುಗಳಲ್ಲಿ ಇವುಗಳ ಪ್ರಮಾಣ ಶೇ.0.0007ರಷ್ಟು. ಈ ನೋಟುಗಳ ಸಂಖ್ಯೆ 7.62 ಲಕ್ಷ. ಇಷ್ಟು ನಕಲಿ ನೋಟು ದೇಶದ ಜನರ ಕೈ ಸೇರಿದರೆ ವಿತ್ತೀಯ ಪರಿಸ್ಥಿತಿ ಏನಾಗುತ್ತಿತ್ತು?
ಬ್ಯಾಂಕ್ ಖಾತೆದಾರರ ಸಂಖ್ಯೆ ಹೆಚ್ಚಳ
ನೋಟ್ ಬ್ಯಾನ್ ಮಾಡಿದ ಬಳಿಕ ಬ್ಯಾಂಕಿನ ಮುಖವನ್ನೇ ನೋಡದ ಜನ ಖಾತೆ ತೆರೆದರು. ಇದು ಸರ್ಕಾರದ ಎಲ್ಲ ಸಹಾಯಧನ, ಅನುದಾನ, ಬೆಳೆ ಸಾಲ ಸೇರಿ ಎಲ್ಲ ಸೌಲಭ್ಯಗಳ ಹಣ ನೇರವಾಗಿ ಖಾತೆಗೆ ಜಮೆಯಾಗತೊಡಗಿದೆ. ನೋಟು ನಿಷೇಧದ ಬಳಿಕ ದೇಶದಲ್ಲಿ 50 ಲಕ್ಷ ಹೊಸ ಬ್ಯಾಂಕ್ ಖಾತೆ ತೆರೆಯಲಾಯಿತು.
ನಕಲಿ ಕಂಪನಿಗಳಿಗೆ ಗುನ್ನ
ನೋಟು ನಿಷೇಧದ ಬಳಿಕ ಸ್ವಗತದಲ್ಲೇ ಕಾಲ ಕಳೆಯದ ಸರ್ಕಾರ ಕಪ್ಪು ಹಣದ ವಿರುದ್ಧ ಕಾರ್ಯಾಚರಣೆ ಆರಂಭಿಸಿತು. ಅದರ ಫಲವಾಗಿ 3 ಲಕ್ಷ ನಕಲಿ ಕಂಪನಿಗಳನ್ನು ಗುರುತಿಸಿತು. ಅದರಲ್ಲಿ 2.24 ಲಕ್ಷ ನಕಲಿ ಕಂಪನಿಗಳ ನೋಂದಣಿಯನ್ನೇ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ 35 ಸಾವಿರ ನಕಲಿ ಕಂಪನಿಗಳು 17 ಸಾವಿರ ಕೋಟಿ ರು. ವಹಿವಾಟು ನಡೆಸಿರುವ ಕುರಿತು ಮಾಹಿತಿ ಹೊರಬಂದಿದ್ದು, ಸರ್ಕಾರ ಕ್ರಮ ಕೈಗೊಂಡಿದೆ.
ಭಯೋತ್ಪಾದನೆಗೂ ಕುತ್ತು
ಬರೀ ಹಣಕಾಸಿನ ಮೇಲೆ ಅಷ್ಟೇ ಅಲ್ಲ, ನೋಟು ನಿಷೇಧ ಭಯೋತ್ಪಾದನೆಗೂ ಕುತ್ತು ನೀಡಿತು. ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಕಡಿಮೆಯಾದವು. ಉಗ್ರರಿಂದ ಹಣ ಪಡೆದು ಕಲ್ಲು ತೂರಾಟಗಾರರಿಗೆ ನೀಡುತ್ತಿದ್ದ ಪ್ರತ್ಯೇಕತಾವಾದಿಗಳ ಮೇಲೆ ಎನ್ಐಎ ದಾಳಿ ಮಾಡಿತು. ನೆನಪಿರಲಿ, ನೋಟು ನಿಷೇಧದ ಬಳಿಕ ಕಾಶ್ಮೀರದಲ್ಲಿ ಶೇ.75ರಷ್ಟು ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿವೆ. ಎಡಪಂಥೀಯ ಉಗ್ರವಾದದಲ್ಲಿ ಶೇ.20ರಷ್ಟು ಕುಂಠಿತವಾಗಿದೆ. ಇದು ನೋಟು ನಿಷೇಧದ ಫಲ.
ಬೇನಾಮಿ ಆಸ್ತಿ ಆಯಿತು ಸುಸ್ತು
ನೋಟ್ ಬ್ಯಾನ್ ಬಳಿಕ ಆದಾಯಕ್ಕೂ, ಬ್ಯಾಂಕ್ ಖಾತೆಗೆ ಜಮೆ ಆಗುವುದಕ್ಕೂ ವ್ಯತ್ಯಾಸ ಕಂಡು ಬಂದ 17.73 ಪ್ರಕರಣಗಳನ್ನು ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಶಂಕಿತ 23.22 ಲಕ್ಷ ಬ್ಯಾಂಕ್ ಖಾತೆಗಳಿಂದ 3.68 ಲಕ್ಷ ಕೋಟಿ ರುಪಾಯಿ ಪರಿಶೀಲನೆ ಅಡಿಯಲ್ಲಿದೆ. ನ.8ರ ಬಳಿಕ 16 ಸಾವಿರ ಕೋಟಿ ಹಣ ಬ್ಯಾಂಕಿಗೆ ಡೆಪಾಸಿಟ್ ಆಗದೆ, ಅಷ್ಟೂ ಹಣ ಮೌಲ್ಯ ಕಳೆದುಕೊಂಡಿತು. ಇದೆಲ್ಲ ಹಣ ಕಾಳಧನಿಕರದ್ದೇ ಎಂದು ಬಿಡಿಸಿ ಹೇಳಬೇಕಿಲ್ಲ. ಜತೆಗೆ 1626 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ತೆರಿಗೆದಾರರ ಹೆಚ್ಚಳ
ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಲು ತೆರಿಗೆಯೇ ಇಂಧನ. ನೋಟು ನಿಷೇಧದ ನಂತರ ದೇಶದಲ್ಲಿ ತೆರಿಗೆದಾರರ ಹೆಚ್ಚಳವಾಯಿತು. 2015-16ನೇ ಸಾಲಿನಲ್ಲಿ 66.53 ಲಕ್ಷದಷಿದ್ದ ತೆರಿಗೆದಾರರ ಸಂಖ್ಯೆ 2016-17ರ ವೇಳೆಗೆ 84.21 ಲಕ್ಷಕ್ಕೇರಿತು ಎಂದರೆ ನಂಬಲೇಬೇಕು. 3.01 ಕೋಟಿ ಜನ ಇ-ರಿಟರ್ನ್ಸ್ ಸಲ್ಲಿಸಿದರು. ಈ ಸಂಖ್ಯೆ 2016-17ರಲ್ಲಿ 2.35 ಕೋಟಿ ಇತ್ತು. ನೋಟ್ಯಂತರದಿಂದ ನೋಂದಣಿಯಾದ 18 ಲಕ್ಷ ತೆರಿಗೆದಾರರ ತೆರಿಗೆ ಜನರನ್ನು ಸೇರುವುದಿಲ್ಲವೇ?
ಈಗ ಹೇಳಿ ನೋಟು ನಿಷೇಧದ ಬಳಿಕ ದೇಶಕ್ಕೆ ನಷ್ಟವಾಗಿದೆಯಾ? ಇಷ್ಟೆಲ್ಲ ಅಂಕಿ-ಅಂಶಗಳು ದೇಶದ ಮೇಲೆ ನಕರಾತ್ಮಕ ಪರಿಣಾಮ ಬೀರಿವೆ ಎಂಬುದನ್ನು ತೋರಿಸುತ್ತವಾ? ನೋಟ್ ಬ್ಯಾನ್ ಮಾಡಿರುವುದರಿಂದ ದೇಶಕ್ಕೆ ಲಾಭವೇ ಆಗಿಲ್ಲವಾ? ಅಷ್ಟಕ್ಕೂ ಮೋದಿ ಸರ್ಕಾರ ತೆಗೆದುಕೊಂಡು ಒಂದೇ ಒಂದು ನಿರ್ಧಾರದಿಂದ ಇಷ್ಟೆಲ್ಲ ಅನುಕೂಲವಾಗಿಲ್ಲವೇ? ಯಾವ ಸರ್ಕಾರದಲ್ಲಿ ಒಂದು ನಿರ್ಧಾರದಿಂದ ಇಷ್ಟೆಲ್ಲ ಅನುಕೂಲವಾಗಿತ್ತು?
ಹೇಳುವುದನ್ನು ಹೇಳಿದ್ದೇನೆ. ವಿರೋಧಪಕ್ಷಗಳು ನೋಟು ನಿಷೇಧದ ಕುರಿತು ಏನೇ ಬೊಬ್ಬೆ ಹಾಕಲಿ, ಒಂದು ದೇಶದ ನಾಗರಿಕರಾಗಿ ನೋಟು ನಿಷೇಧದ ಕುರಿತು ಅಭಿಪ್ರಾಯ ತಾಳುವುದು ನಿಮಗೆ ಬಿಟ್ಟಿದ್ದು.
Leave A Reply