• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುಜರಾತ್ ಗೆ ಕಾಂಗ್ರೆಸ್ ಮಾಡಿದ ಅನ್ಯಾಯ ಸಹಿಸಿಕೊಂಡು ಜನ ಮತ ನೀಡಿಯಾರೇ?

-ವೀರೇಶ್ ಸೊಬರದ್, ಧಾರವಾಡ Posted On November 16, 2017


  • Share On Facebook
  • Tweet It

  • 12 ಜೂನ್ 2009, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ನರ್ಮದಾ ನದಿಗೆ ಕಟ್ಟಿರುವ ಸರ್ದಾರ್ ಸರೋವರದ ಎತ್ತರಕ್ಕೇರಿಸಲು ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ಅನುಮತಿ ಕೇಳಿದ್ದರು, ಅಲ್ಲದೇ -ಸುದೀರ್ಘ ಚರ್ಚೆ ನಡೆಸಿದ್ದರು.
  • 7 ನವೆಂಬರ್ 2017 ರಂದು ಮಾಜಿ ಪ್ರಧಾನಿ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳುತ್ತಾರೆ. ನರೇಂದ್ರ ಮೋದಿ ಅಂದು ನನಗೆ ಸರ್ದಾರ್ ಸರೋವರದ ಎತ್ತರ ಹೆಚ್ಚಳ ಕುರಿತು ಭೇಟಿಯೇ ಮಾಡಿಲ್ಲ ಎಂದು ಹೇಳಿದರು.

ಹೀಗೆ ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿಯೊಬ್ಬರು ಕೇವಲ ಪ್ರಚಾರಕ್ಕಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದರೂ ಭೇಟಿಯಾಗಿಲ್ಲ ಎಂದು ಸುಳ್ಳು ಹೇಳಿದ್ದು, ದೇಶಕ್ಕಷ್ಟೇ ಅಲ್ಲ, ಗುಜರಾತಿಗಳ ನಾಯಕನೊಬ್ಬನಿಗೆ ಅವಮಾನ ಮಾಡಿದಂತಾಯಿತು. ಹೀಗೆ ಸಾಗುತ್ತೇ ಗುಜರಾತ್ ನಲ್ಲಿ ಕಾಂಗ್ರೆಸ್ಸಿಗರ ಸುಳ್ಳಿನ ಸರಮಾಲೆ. ಅದೇ ಕಾರಣಕ್ಕೆ ಅಲ್ಲವೇ ಗುಜರಾತಿಗರು ದಶಕಗಳಿಂದ ಕಾಂಗ್ರೆಸ್ ನ್ನು ಆಡಳಿತದಿಂದ ದೂರವಿಟ್ಟಿದ್ದು.

ಅದು 80 ದಶಕ ಗುಜರಾತ್ ನಲ್ಲಿ ಉದ್ಯೋಗವಿಲ್ಲದೇ ನೆಲೆ ಕಾಣಲು ಜನರು ಮುಂಬೈನತ್ತ ಪಯಣ ಆರಂಭಿಸಿದ್ದರು. ಕೆಲಸ ದೊರೆಯದೇ ನಿತ್ಯ ಸಂಕಷ್ಟಕ್ಕಿಡಾಗಿ ಆಡಳಿತ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಗುಜರಾತ್ ನಲ್ಲಿ ಉತ್ತಮ ಭವಿಷ್ಯವಿಲ್ಲ ಎಂದು ನಿತ್ಯ ಮುಂಬೈನತ್ತ ವಲಸೆ ಹೋಗುತ್ತಿದ್ದರು.

ನಮ್ಮ ಕಥೆಯೇ ಇಷ್ಟು ಎಂದು ಬೇಸತ್ತಿದ್ದ ಗುಜರಾತಿಗರಲ್ಲಿ 90 ದಶಕದಲ್ಲಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಾರ್ಟಿ ಹೊಸ ಆಸೆಯ ಚಿಗುರು ಮೂಡಿಸಿತ್ತು.  ಆಗಲೇ ಮಧ್ಯಮ ವರ್ಗದಲ್ಲಿ ಆಶಾಕಿರಣವೊಂದು ಮೂಡಿತ್ತು. ಬದಲಾದ ಸನ್ನಿವೇಶದಲ್ಲಿ ಸರಿಯಾದ ವಿದ್ಯುತ್, ಗುಣಮಟ್ಟದ ರಸ್ತೆಗಳು, ಕೈಗಾರಿಕೆಗಳು ನಿರ್ಮಾಣವಾದವು. ಅಲ್ಲಿಗೆ ಗುಜರಾತ್ ನಲ್ಲಿ ಹೊಸ ಯುಗವೊಂದರ ಆರಂಭವಾಯಿತು. ಆದರೆ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದ ಗುಜರಾತ್ ನ ಚಿತ್ರಣವನ್ನು ಕೆಲ ಕುತಂತ್ರಿಗಳು ತೋರಿಸಿದ್ದು ಕೋಮು ಗಲಭೆ, ಪ್ರತಿಭಟನೆಯನ್ನು ಮಾತ್ರ. ಅಲ್ಲಿಗೆ ಮೋದಿ ಮತ್ತು ಬಿಜೆಪಿ ವಿರೋಧಿಗಳು ಅಧಿಕಾರಕ್ಕಾಗಿ ಗುಜರಾತಿಗರ ಭಾವನೆಗಳಿಗೆ ಧಕ್ಕೆ ತಂದರು. ಬರೀ ಗುಜರಾತಿನ ಬಗ್ಗೆ ನಕಾರಾತ್ಮಕ ಸುದ್ದಿಗಳನ್ನೇ ಹರಡಿದ್ದರೂ, ಅಲ್ಲಿಗೆ ಮತ್ತೊಮ್ಮೆ ಮೋದಿ ವಿರೋಧಿಗಳು ವಿಶೇಷವಾಗಿ ಕಾಂಗ್ರೆಸ್ ಗುಜರಾತಿಗಳ ಮನದಲ್ಲಿ ದೂರಾಗಿ ಬಿಟ್ಟಿತ್ತು. ಮೋದಿಯನ್ನು ವಿರೋಧಿಸುವ ಭರದಲ್ಲಿ ರಾಜ್ಯವನ್ನೇ ಗುರಿಯಾಗಿಸಿದ್ದು, ಬೇಸರ ಮೂಡಿಸಿತ್ತು.

ಗುಜರಾತಿಗರೂ ಮಹಾನ್ ಸ್ವಾಭಿಮಾನಿಗಳು ಅದೆಷ್ಟೇ ಹೊಡೆತಗಳು ಬಿದ್ದರೂ ಮತ್ತೇ ಎದ್ದು ನಿಲ್ಲುವ ಛಾತಿ ಹೊಂದಿದ್ದವರು. ಅದಕ್ಕೆ ಸಾಕ್ಷಿ ಮಹಮ್ಮದ ಘಜನಿ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ, ಐಶ್ವರ್ಯ ಲೂಟಿ ಮಾಡಿದ್ದರೂ, ಮತ್ತೇ ಅದ್ಭುತವಾದ ಸೋಮನಾಥ ದೇವಾಲಯ ನಿರ್ಮಿಸಿದ್ದವರು. ಅಂತಹವರು ರಾಜ್ಯಕ್ಕೆ ಅಂಟಿದ ಕೋಮುವಾದದ ಹೆಸರನ್ನು ಬಿಟ್ಟಾರೇಯೇ. ಅದಕ್ಕೆ ಮೋದಿ ಅವರನ್ನು ಮೂರು ಬಾರಿ ಆಯ್ಕೆ ಮಾಡಿದರು. ವಿಶ್ವಕ್ಕೆ ಗುಜರಾತ್ ಮಾದರಿಯನ್ನು ತೋರಿಸಿದರು. ನಾವೇನು ಎಂಬುದನ್ನು ಪದೇ ಪದೆ ಸಾರಿದರು. ಮತ್ತೆ ದೇಶಕ್ಕೆ ಗುಜರಾತಿಗರೊಬ್ಬರನ್ನು ಪ್ರಧಾನಿಯಾಗಿ ನೀಡಿದರು.

ಸ್ವಾಭಿಮಾನಿ ಗುಜರಾತಿಗರ ಭಾವನೆಗೆ ಕಾಂಗ್ರೆಸ್ ಸದಾ ಪೆಟ್ಟು ನೀಡುತ್ತಲೇ ಬಂತು. ಸರಕಾರವನ್ನು ದೂಷಿಸುವ ನೆಪದಲ್ಲಿ ಇಡೀ ಗುಜರಾತ್ ನ್ನು ಕೋಮುವಾದಿಗಳ ತವರು ಎಂಬ ಮಟ್ಟಿಗೆ ಕಾಂಗ್ರೆಸ್ ಬಿಂಬಿಸಿತು. ಅದಷ್ಟೇ ಅಲ್ಲ ಕಾಂಗ್ರೆಸ್ ಗುಜರಾತಿಗೆ ಮಾಡಿದ ಅನ್ಯಾಯ ಇಲ್ಲಿದೆ ನೋಡಿ ದೊಡ್ಡ ಪಟ್ಟಿ.

 

  • ಉಕ್ಕಿನ ಮನುಷ್ಯ, ಭವ್ಯ ಭಾರತದ ಏಕತೆ ಸೂತ್ರದಾರ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಪ್ರಧಾನ ಮಂತ್ರಿ ಆಗುವ ಅವಕಾಶವನ್ನು ಬೆಂಬಲವಿಲ್ಲದಿದ್ದರೂ ಕಸಿದುಕೊಂಡ ಕಾಂಗ್ರೆಸ್ ಅಧಿನಾಯಕ ಜವಹರಲಾಲ್ ನೆಹರು ಮಾಡಿದ ಮೋಸ ಗುಜರಾತಿಗರಿಗೆ ಕಾಂಗ್ರೆಸ್ ಮಾಡುವ ಅನ್ಯಾಯಕ್ಕೆ ಮುನ್ನುಡಿ ಬರೆಯಿತು.
  • 80 ದಶಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗುಜರಾತ್ ನಾದ್ಯಂತ ಜಾತಿ, ಜಾತಿಗಳ ಮಧ್ಯೆ ವೈಷಮ್ಯ ತಾಂಡವವಾಡುತ್ತಿತ್ತು. ಅದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಡಿಮೆಯಾಯಿತು.
  • ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದೇ ತಡ, ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಮುಂದಾಯಿತು. ಇದು ಕೋಮು ಗಲಭೆ ಸೃಷ್ಟಿಸಲು ಮತ್ತೊಂದು ಅವಕಾಶ ಸೃಷ್ಟಿಸಿತು. ಅಲ್ಲಿಗೆ 2002ರಲ್ಲಿ ಉಂಟಾದ ಗಲಭೆಗಳಿಂದ ಗುಜರಾತ್ ಹೆಸರು ನಕರಾತ್ಮಕ ಸುದ್ದಿಗೆ ಹೆಸರಾಯಿತು. ಇದು ಗುಜರಾತಿಗರಿಗೆ ಭಾರಿ ನೋವುಂಟು ಮಾಡಿತ್ತು.
  • 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನರೇಂದ್ರ ಮೋದಿ ಅವರನ್ನು ಮೌಥ್ ಕಾ ಸೌದಾಗರ (ಸಾವಿನ ವ್ಯಾಪಾರಿ) ಎಂದು ಹೇಳಿದ್ದು ಗುಜರಾತಿಗರಿಗೆ ಭಾರಿ ಆಕ್ರೋಶ ಹುಟ್ಟು ಹಾಕಿತ್ತು. ಇನ್ನು ಅಷ್ಟು ಭಾರಿ ಜನರೇ ಆಯ್ಕೆ ಮಾಡಿದ್ದ ಪ್ರತಿನಿಧಿ ವಿರುದ್ಧ ಅಂತ ಹೀನ ಪದಗಳನ್ನು ಬಳಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
  • ನರ್ಮದಾ ನದಿಗೆ ನಿರ್ಮಿಸಿದ್ದ ಸರ್ದಾರ್ ಸರೋವರದ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಂದಿನ ಯುಪಿಎ ಸರಕಾರ, ಮಧ್ಯಪ್ರದೇಶ, ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರಗಳು ವಿರೋಧ ವ್ಯಕ್ತಪಡಿಸಿದ್ದವು. ಜನ ಹಿತಕ್ಕಾಗಿ ಅಲ್ಲ. ಕೇವಲ ಮತಕ್ಕಾಗಿ ಎಂಬುದು ವಿಶೇಷ. ಇಷ್ಟು ಸಾಕಿತ್ತು ಗುಜರಾತಿಗರ ನೆಮ್ಮದಿಗೆ ಕೊಳ್ಳಿ ಇಡಲು.
  • ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರನ್ನು ನರೇಂದ್ರ ಮೋದಿ ಸರೋವರದ ಎತ್ತರ ಹೆಚ್ಚಳ ಕುರಿತು ಭೇಟಿಯಾಗಿದ್ದರು. ಆದ್ರೆ ಇತ್ತೀಚೆಗೆ ಸಿಂಗ್ ಅವರು ಮೋದಿ ನನ್ನನ್ನು ಭೇಟಿಯೇ ಆಗಿಲ್ಲ ಎಂದು ಸುಳ್ಳು ಹೇಳಿದರು. ಅಲ್ಲಿಗೆ ಕಾಂಗ್ರೆಸ್ ಮತ್ತೊಮ್ಮೆ ಜನರನ್ನು ಸೆಳೆಯುವಲ್ಲಿ ಸೋತಿದೆ.
  • ಕಚ್ ಮತ್ತು ಸೌರಾಷ್ಟ್ರದ ಜನರು ಕಾಂಗ್ರೆಸ್ ಅನ್ಯಾವಯನ್ನು ಮರೆಯುವಂತೆಯೇ ಇಲ್ಲ. ತಮ್ಮದೇ ಪ್ರದೇಶದಲ್ಲಿ ನಿರ್ಮಾಣವಾದ ಸರೋವರದ ನೀರನ್ನು 30 ವರ್ಷದವರೆಗೆ ತಮಗೆ ನೀಡಲಿಲ್ಲ ಎಂಬ ಕೊರಗು ಕಚ್ ಮತ್ತು ಸೌರಾಷ್ಟ್ರದ ಜನರಿಗೆ ಸದಾ ಕಾಡಿತ್ತು.
  • ಯುಪಿಎ ಸರಕಾರದ ಅನ್ಯಾಯದಿಂದ ಗುಜರಾತ್ ಸರಕಾರಕ್ಕೆ ಪೆಟ್ರೋಲಿಯಂ ರಾಯಲ್ಟಿ ಸಂಬಂಧಿಸಿದಂತೆ 10 ಸಾವಿರ ಕೋಟಿ ರೂಪಾಯಿ ನಷ್ಟವಾಗಿತ್ತು. ಅದನ್ನು ಗುಜರಾತಿಗರು ಮರೆಯಲು ಸಾಧ್ಯವೇ?
  • ವಿದ್ಯುತ್ ಉತ್ಪಾದನೆಯಲ್ಲಿ ಕುರಿತು ನೀಡುವ ಪ್ರಶಸ್ತಿಯಲ್ಲೂ 2013ರಲ್ಲಿ ಕೇಂದ್ರದ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಿತ್ತು. ಟಾಪ್ ರೇಟಿಂಗ್ಸ್ ನಲ್ಲಿ ಗುಜರಾತ್ ಇದ್ದರೂ, ಕಾಂಗ್ರೆಸ್ ಅಧಿಕಾರದಲ್ಲಿರುವ ಮಹಾರಾಷ್ಟ್ರಕ್ಕೆ ಉದ್ದೇಶಪೂರ್ವಕವಾಗಿ ಗುಜರಾತ್ ನ್ನು ದೂರವಿಟ್ಟಿತ್ತು, ಯುಪಿಎ ಸರಕಾರ.

ಹೀಗೆ ಗುಜರಾತ್ ಮತ್ತು ಸ್ವಾಭಿಮಾನಿ, ಶ್ರಮಜೀವಿ ಗುಜರಾತಿಗರಿಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಗೆ ಪೂರಕವಾಗಿರುವ ಪಕ್ಷಗಳು ಮಾಡಿದ ಸಾಲು ಸಾಲು ಅನ್ಯಾಯದ ಪಟ್ಟಿಯೇ ದೊರೆಯುತ್ತದೆ. ಅದೆಲ್ಲವನ್ನು ಸಹಿಸಿಕೊಂಡು ಗುಜರಾತಿಗರು ಕಾಂಗ್ರೆಸ್ ಗೆ ಅಧಿಕಾರ ನೀಡುತ್ತಾರೆ ಎಂಬ ಯಾವ ಭರವಸೆ ಉಳಿದಿಲ್ಲ.

ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಗುಜರಾತ್ ಗೆ ನೀಡಿದ್ದು ಕೋಮುವಾದಿ ಪಟ್ಟ. ಆದರೆ ಅದೇ ಕೋಮುವಾದಿಗಳು ಇಂದು ರಾಜ್ಯವಲ್ಲದೇ, ದೇಶವನ್ನು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರನ್ನು ಬಿಟ್ಟು ಕಾಂಗ್ರೆಸ್ ‘ಕೈ’ ಹಿಡಿಯಲು ಗುಜರಾತಿಗರು ಸ್ವಾಭಿಮಾನಿಗಳಲ್ಲವೇ?

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
-ವೀರೇಶ್ ಸೊಬರದ್, ಧಾರವಾಡ February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
-ವೀರೇಶ್ ಸೊಬರದ್, ಧಾರವಾಡ February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search