ರಾಕೆಟ್ ವೇಗದಲ್ಲಿ ಶಿಕ್ಷಣ ವ್ಯವಸ್ಥೆ ಇರುವಾಗ, ದೆಹಲಿಯ ಮದರಸಾಗಳ 3.6 ಲಕ್ಷ ವಿದ್ಯಾರ್ಥಿಗಳಿಗಿನ್ನೂ 18 ಶತಮಾನದ ಶಿಕ್ಷಣ!
ದೆಹಲಿ: ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕೈ ಬೆರಳಲ್ಲಿ ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರುವ ಆಧುನಿಕ ಕಾಲದಲ್ಲೂ ದೆಹಲಿಯ ಮೂರು ಸಾವಿರ ಮದರಸಾಗಳಲ್ಲಿ ಇಂದಿಗೂ 18 ನೇ ಶತಮಾನದ ಸಾಂಪ್ರದಾಯಿಕ, ಜಡ್ಡು ಹಿಡಿದ ಶಿಕ್ಷಣ ನೀಡಲಾಗುತ್ತಿದೆ. ಮೂರು ಸಾವಿರ ಮದರಸಾಗಳಲ್ಲಿ 3.6 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಖುರಾನ್, ಉರ್ದು ಮತ್ತು ಪರ್ಶಿಯನ್ ವಿಷಯವನ್ನು ಬೋಧಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಮುಸ್ಲಿಂ ವಿದ್ಯಾರ್ಥಿಗಳು ಉದ್ಯೋಗವಿಲ್ಲದೇ ಬೀದಿಗೆ ಬೀಳುವಂತಾಗಿದೆ. ಮದರಸಾಗಳ ಶಿಕ್ಷಣ ನೀಡುವ ಪಠ್ಯಕ್ಕೆ ಸಿಮಿತ ಉದ್ಯೋಗಗಳಿವೆ. ಇನ್ನು ನೂತನ ಪಠ್ಯಕ್ಕೆ ಹೊಂದಿಕೊಳ್ಳದಿರುವುದರಿಂದ ಬೇರೆ ಉದ್ಯೋಗ ದೊರೆಯುವುದು ಕಷ್ಟವಾಗಿದೆ.
‘ಮದರಸಾಗಳಲ್ಲಿ ಶಿಕ್ಷಣ ಪಡೆದವರಲ್ಲಿ ಕೆಲವರು ಮೌಲ್ವಿಗಳಾಗುತ್ತಾರೆ. ಆದ್ರೆ ಉಳಿದವರ ಉದ್ಯೋಗವಿಲ್ಲದೆ ಪರದಾಡುತ್ತಾರೆ. ಇವರು ಸಮಾಜಕ್ಕೆ ಹೊರೆಯಾಗುತ್ತಿದ್ದು, ಇದಕ್ಕೆ ಉದ್ಯೋಗಕ್ಕೆ ಬೇಕಾದ ಸೂಕ್ತ ಶಿಕ್ಷಣ, ತರಬೇತಿ ಇಲ್ಲದೇ ಇರುವುದು ಕಾರಣ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಫಿರೋಜ್ ಬಕ್ತ್ ಅಹ್ಮದ್.
ಮದರಸಾಗಳ ಪಠ್ಯ ಬದಲಾವಣೆ ಅಗತ್ಯವಿದೆ. ಲಖನೌ ಸ್ಕಾಲರ್ ರಚಿಸಿರುವ ಪಠ್ಯವನ್ನೇ ಅತಿ ಹೆಚ್ಚು ಮದರಸಾಗಳಲ್ಲಿ ಬೋಧಿಸಲಾಗುತ್ತಿದೆ. ಆದರೆ ಆ ಪಠ್ಯ ಪ್ರಸ್ತುತ ದಿನಕ್ಕೆ, ಅಗತ್ಯತೆಗಳಿಗೆ ಹೊಂದಿಕೊಳ್ಳುವುದಿಲ್ಲ. ಸರ್ಕಾರವಾದರೂ ಈ ಕುರಿತು ಬದಲಾಯಿಸಬೇಕು ಮತ್ತು ಮೂಲಭೂತವಾದಿಗಳು ಕೂಲಂಕಷವಾಗಿ ಪರೀಕ್ಷಿಸಬೇಕು. ಇಲ್ಲದಿದ್ದರೇ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಭೀತಿ ವ್ಯಕ್ತಪಡಿಸುತ್ತಾರೆ ಅಹ್ಮದ್.
ಭಾರತ ದೇಶದ ಮದರಸಾಗಳು ವಿದೇಶಗಳನ್ನು ನೋಡಿ ಕಲಿಯಬೇಕು, ವಿಶೇಷವಾಗಿ ಮುಸ್ಲಿಂ ರಾಷ್ಟ್ರ ಈಜಿಪ್ತ ಹೊಂದಿರುವ ನೂತನ ನಿಲುವು ಶ್ಲಾಘನೀಯವಾದದ್ದು. ಈಜಿಪ್ತನ ಅಲ್ ಅಜ್ಹರ್ ವಿಶ್ವವಿದ್ಯಾಲಯ ಸಾವಿರಾರು ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿದೆ. ಆದರೆ ಭಾರತದ ಮದರಸಾಗಳು ಹೊಸ ಪಠ್ಯ ವ್ಯವಸ್ಥೆಗೆ ಹೊಂದಿಕೊಳ್ಳದೆ ಮುಸುಕು ಧರಿಸಿಕೊಂಡಿವೆ ಎನ್ನುವುದು ಅಹ್ಮದ್ ಅಭಿಪ್ರಾಯ.
ಲೇಖಕ, ಸಾಮಾಜಿಕ ಕಾರ್ಯಕರ್ತ ಸದಿಯಾ ದಲ್ವಿ ‘ಮದರಸಾಗಳು ಕೇವಲ ಮುಸ್ಲಿಂ ಶಿಕ್ಷಣವನ್ನು ನೀಡುತ್ತಿವೆ. ಅದರ ಪಠ್ಯ ಆಧುನಿಕರಣವಾಗಬೇಕಿದೆ. ಇಲ್ಲದಿದ್ದರೇ ಉದ್ಯೋಗಕ್ಕೆ ತೀವ್ರ ಸಮಸ್ಯೆಯಾಗಲಿದೆ. ಅಲ್ಲಿನ ಪಠ್ಯಪುಸ್ತಕಗಳ ಮತ್ತು ಮದರಸಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಶ್ರಮಿಸಬೇಕಿದೆ. ಉದ್ಯೋಗ ಆಧಾರಿತ ಕೌಶಲ ಬೆಳೆಸುವ ತರಬೇತಿ ನೀಡಬೇಕಿದೆ ಎನ್ನುತ್ತಾರೆ.
‘ನಾನು ಬೆಳಗ್ಗೆ ಮದರಸಾ ಶಿಕ್ಷಣವನ್ನು ಪಡೆಯುತ್ತಿದ್ದು, ನಂತರ ಫತೇಪುರ ಮುಸ್ಲಿಂ ಸಿನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಆಧುನಿಕ ಶಿಕ್ಷಣ ಪಡೆಯುತ್ತಿದ್ದೇನೆ. ಮದರಸಾದಲ್ಲಿ ಉರ್ದು ಮತ್ತು ಪರ್ಶಿಯನ್ ಕಲಿಯುತ್ತಿದ್ದೇನೆ. ಸ್ಕೂಲ್ ನಲ್ಲಿ ಆಧುನಿಕ ಶಿಕ್ಷಣ ಪಡೆಯುತ್ತೀದ್ದೇನೆ ಎನ್ನುತ್ತಾನೆ 16 ವರ್ಷದ ವಿದ್ಯಾರ್ಥಿ ಮಹಮ್ಮದ್ ಬಕ್ವಿ.
ವಿದ್ಯಾರ್ಥಿ ಮಹಮ್ಮದ್ ಬಕ್ಕಿ ಅಂತಹ ಕೆಲವೇ ಕೆಲವು ಉದಾಹರಣೆಗಳು ದೊರೆಯುತ್ತಿವೆ. ಬಹುತೇಕ ವಿದ್ಯಾರ್ಥಿಗಳು ಕೇವಲ ಮದರಸಾ ಶಿಕ್ಷಣಗಳಿಗೆ ಸೀಮಿತವಾಗಿದ್ದಾರೆ. ಇಸ್ಲಾಂ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಉತ್ತಮ ಶಿಕ್ಷಣ ದೊರೆಯುಬೇಕು ಎಂಬ ಮಾನವ ಹಕ್ಕನ್ನು ಕಸಿಯುವ ನೀತಿ ಹೊಂದಿದೆ ಎಂಬ ಟೀಕೆಗಳು ಕೇಳಿ ಬಂದಿವೆ.
ಉತ್ತಮ ಶಿಕ್ಷಣದಿಂದ ವಂಚಿತವಾಗುತ್ತಿರುವ ಮದರಸಾಗಳ ವಿದ್ಯಾರ್ಥಿಗಳ ಶಿಕ್ಷಣದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯೂ ಕಳಕಳಿ ವ್ಯಕ್ತಪಡಿಸಿದ್ದು. ಕ್ರಮ ಕೈಗೊಳ್ಳಬೇಕು. ಇದೇ ಸ್ಥಿತಿ ಮುಂದುವರಿದರೆ ಮುಸ್ಲಿಂ ಯುವಕರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನವಾಹಿ ಹಕ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಸಾದ್ ಘಾಜಿ.
Leave A Reply