ಭಾರತ ಉಡಾಯಿಸಿದ್ದು ಬರೀ ಬ್ರಹ್ಮೋಸ್ ಕ್ಷಿಪಣಿಯನ್ನಲ್ಲ, ದೇಶದ ಆತ್ಮವಿಶ್ವಾಸವನ್ನೂ! ಏಕೆ ಗೊತ್ತಾ?
ದೆಹಲಿ: ಇದೇ ಮೊದಲ ಬಾರಿಗೆ ಸುಖೋಯ್ 30 ಎಂಕೆಐ ಯುದ್ಧ ವಿಮಾನದ ಮೂಲಕ ಬಹುನಿರೀಕ್ಷಿತ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಯಿಸ್ ಕ್ಷಿಪಣಿಯನ್ನ ಭಾರತ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ದೇಶದ ರಕ್ಷಣಾ ಇಲಾಖೆ ಹೊಸ ಭಾಷ್ಯ ಬರೆದಿದೆ.
ಸುಮಾರು 2.5 ಟನ್ ತೂಕದ ಸುಖೋಯ್ ಯುದ್ಧವಿಮಾನ ನಭಕ್ಕೆ ಹಾರುತ್ತಲೇ ಬಂಗಾಳ ಕೊಲ್ಲಿಯಲ್ಲಿ ನಿಗದಿಪಡಿಸಿದ್ದ ಗುರಿ ತಲುಪಿತು.
ಭಾರತದ ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ರಷ್ಯಾದ ಎನ್ ಪಿಒಎಂ ಜಂಟಿಯಾಗಿ ಕ್ಷಿಪಣಿ ಅಭಿವೃದ್ಧಿಪಡಿಸಿವೆ.
ಅಲ್ಲದೆ ಪ್ರಸ್ತುತ ಕ್ಷಿಪಣಿ ಉಡಾವಣೆ ಭಾರತಕ್ಕೆ ಬಲ ಬಂದಂತಾಗಿದ್ದು, ಮೊದಲ ಬಾರಿಯ ಉಡಾವಣೆಯಲ್ಲೇ ಯಶಸ್ವಿಯಾಗಿದ್ದು ಸಂತಸ ತಂದಿದೆ. ಹಾಗಾದರೆ ಕ್ಷಿಪಣಿಯ ಮಹತ್ವದ ಅಂಶಗಳೇನು? ಏಕೆ ಉಡಾವಣೆಗೆ ಮಹತ್ವ ನೀಡಲಾಗುತ್ತದೆ? ಕ್ಷಿಪಣಿ ಉಡಾವಣೆಯಿಂದ ಭಾರತದ ಆತ್ಮವಿಶ್ವಾಸವೇಕೆ ಹೆಚ್ಚಾಗಬೇಕು? ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
-
ಸುಖೋಯ್ 30 ಎಂಕೆಐ ಕ್ಷಿಪಣಿ ಗಂಟೆಗೆ 3,200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಇದು, ಪ್ರಪಂಚದ ವೇಗದ ಕ್ಷಿಪಣಿಗಳಲ್ಲಿ ಇದೂ ಒಂದು ಎಂಬ ಖ್ಯಾತಿಗೆ ಭಾಜನ.
-
ಭೂಮಿ, ಜಲ ಹಾಗೂ ಗಾಳಿ ಮೂಲಕದಿಂದಲೂ ಉಡಾಯಿಸಬಲ್ಲ ಈ ಕ್ಷಿಪಣಿ ಭಾರತೀಯ ಸೈನ್ಯಕ್ಕೆ ಪ್ರಮುಖ ಅಸ್ತ್ರ.
-
ಸರ್ಜಿಕಲ್ ಸ್ಟ್ರೈಕ್ ಗೆ ಹೇಳಿಮಾಡಿಸಿದ ಕ್ಷಿಪಣಿ ಇದಾಗಿದ್ದು, ಶತೃವಿನನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
-
ವಾಯುಮಾರ್ಗದಲ್ಲಿ ಬ್ರಹ್ಮೋಸ್ ಗೆ ಇದು ಮೊದಲ ಉಡಾವಣೆಯಾಗಿದ್ದು, ಮೊದಲ ಯತ್ನದಲ್ಲೇ ಸಫಲವಾಗಿದ್ದು ವೈರಿ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.
-
ಬ್ರಹ್ಮೋಸ್ ಜಗತ್ತಿನ ಮೊದಲ ಮೂರು ಕ್ಷೇತ್ರಗಳ ಕ್ಷಿಪಣಿ. ಅಂದರೆ ಸೇನೆ, ನೌಕಾದಳ ಹಾಗೂ ವಾಯುದಳಗಳಲ್ಲೂ ಬ್ರಹ್ಮೋಸ್ ಮಾದರಿ ಕ್ಷಿಪಣಿ ಹೊಂದಿದ್ದು ಭಾರತ ಮಾತ್ರ.
-
ಸುಮಾರು 450 ಕಿ.ಮೀ. ದೂರದವರೆಗೂ 200-300 ಕೆಜಿ ತೂಕದ ಶಸ್ತ್ರಾಸ್ತ್ರ ಹೊತ್ತೊಯ್ದು, ಶತೃವಿನನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲದು.
ಈ ಎಲ್ಲ ಅಂಶಗಳಿಂದ ಬ್ರಹ್ಮೋಸ್ ಕ್ಷಿಪಣಿ ಭಾರತದ ರಕ್ಷಣಾ ವಿಚಾರವಾಗಿ ಆನೆಬಲವಾಗಿದ್ದು, ದೇಶದ ರಕ್ಷಣೆ ಹಾಗೂ ಸರ್ಜಿಕಲ್ ದಾಳಿಗೆ ಈ ಕ್ಷಿಪಣಿ ಹೇಳಿಮಾಡಿಸಿದ್ದಾಗಿದೆ. ಅದಕ್ಕೇ ಹೇಳಿದ್ದು, ಭಾರತ ಕ್ಷಿಪಣಿ ಜತೆಗೆ ನಮ್ಮ ಆತ್ಮವಿಶ್ವಾಸವನ್ನೂ ನಭಕ್ಕೆ ಹಾರಿಸಿದೆ ಎಂದು!
Leave A Reply