ಲವ್ ಜಿಹಾದ್ ಬಲೆಯಿಂದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದೂ ಸಂಘಟನೆಗಳು!
ಮಂಗಳೂರು: ದೇಶದಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿದ್ದು, ಕರ್ನಾಟಕದ ಮಂಗಳೂರಿನಲ್ಲೇ ಶಂಕೆ ವ್ಯಕ್ತವಾಗಿದ್ದ ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯುವತಿಯ ಮನವೊಲಿಸುವಲ್ಲಿ ಸಫಲವಾಗಿದ್ದು, ಯುವತಿಯನ್ನು ರಕ್ಷಿಸಲಾಗಿದೆ.
ನಗರದ ಕಾಲೇಜೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ಯುವತಿ ಆಮೀರ್ ಸೋಹೇಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಸೋಹೆಲ್ ಅಕ್ರಮವಾಗಿ ಗಾಂಜಾ ಸಾಗಣೆಯಲ್ಲಿ ತೊಡಗಿದ್ದಾನೆ ಎಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಈತನೊಂದಿಗೆ ಹಿಂದೂ ಯುವತಿಯೊಬ್ಬಳು ನಿಂತಿದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದಲ್ಲದೇ, ಇದು ಲವ್ ಜಿಹಾದ್ ಎಂದೇ ವಿಶ್ಲೇಷಿಸಲಾಗಿತ್ತು.
ಕೊನೆಗೆ ಆ ಯುವತಿ ಯಾರು ಎಂಬುದನ್ನು ಹಿಂದೂ ಸಂಘಟನೆಗಳ ಮುಖಂಡರು ಪತ್ತೆ ಹಚ್ಚಿದ್ದು, ಕೌನ್ಸೆಲಿಂಗ್ ಮಾಡಿ ಲವ್ ಜಿಹಾದ್ ಕುರಿತು ಉದಾಹರಣೆ ಸಮೇತ ತಿಳಿಸಿದ್ದಾರೆ. ಅದರಿಂದಾಗುವ ಅಪಾಯದ ಕುರಿತು ಮನವರಿಕೆ ಮಾಡಿದ್ದಾರೆ.
ಈಗ ಯುವತಿ ಮನ ಪರಿವರ್ತನೆ ಹೊಂದಿದ್ದು, ನಾನು ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಯುವತಿಗೆ ಕಂಟಕಪ್ರಾಯವಾಗಿದ್ದ ಲವ್ ಜಿಹಾದ್ ಗೆ ಹಿಂದೂ ಸಂಘಟನೆಗಳು ಮುಕ್ತಿ ನೀಡಿದ್ದು, ಯುವತಿಯ ಕುಟುಂಬದವರು ಸಹ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Leave A Reply