ಮೇಕ್ ಇನ್ ಇಂಡಿಯಾ ಯೋಜನೆಯಿಂದ ಭಾರತಕ್ಕೆ 1 ಲಕ್ಷ ಕೋಟಿ ರು. ಉಳಿತಾಯ! ಇದು ಮೋದಿ ಮೋಡಿ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೇಕ್ ಇನ್ ಇಂಡಿಯಾ ಯೋಜನೆಗೆ ಆರಂಭದಲ್ಲಿ ಸಹಜವಾಗಿಯೇ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಕೇಂದ್ರ ಸರ್ಕಾರದ ಈ ಯೋಜನೆ ಟೀಕೆಗಳನ್ನೂ ಮೆಟ್ಟಿನಿಂತಿದ್ದು, ಮೇಕ್ ಇನ್ ಇಂಡಿಯಾದಿಂದ ಭಾರತದ ರಕ್ಷಣಾ ಸಚಿವಾಲಯ 1 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಹಣ ಉಳಿತಾಯವಾಗಿದೆ.
ಹೌದು, ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಕಳೆದ ಎರಡು ವರ್ಷಗಳಲ್ಲಿ ಸ್ಥಳೀಯ ಸಾಮಗ್ರಿ ಬಳಸಿ ಆರು ಯುದ್ಧ ವಿಮಾನ ಹಾಗೂ ಆ್ಯಂಟಿ ಟ್ಯಾಂಕ್ ಕ್ಷಿಪಣಿ ಯೋಜನೆ ಕೈಗೊಂಡಿದ್ದು, ಇದರಿಂದ ವಿದೇಶಗಳಿಂದ ಆಮದು ಮಾಡಿಕೊಂಡಿದ್ದರೆ ಭಾರತ 1 ಲಕ್ಷ ಕೋಟಿ ರೂಪಾಯಿ ಹೆಚ್ಚಿನ ಹಣ ವ್ಯಯಿಸಬೇಕಿತ್ತು. ಆದರೆ, ಭಾರತದಲ್ಲೇ ಉತ್ಪಾದನೆ ಮಾಡಲು ಮುಂದಾದ ಕಾರಣ ಇಷ್ಟು ಹಣ ಉಳಿತಾಯ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ನೌಕಾಪಡೆಗೆ ತಯಾರಿಸಿದ ಸಣ್ಣ ಶಸ್ತ್ರಾಸ್ತ್ರ, 20-25 ಕಿ.ಮೀ. ಹಾರುವ ಯುದ್ಧ ವಿಮಾನ, ಈಗ ಅಭಿವೃದ್ಧಿಪಡಿಸಲು ಒಪ್ಪಿಗೆ ಪಡೆದಿರುವ ಆಕಾಶ್ ಕ್ಷಿಪಣಿ, ಕಳೆದ ವಾರ ಯಶಸ್ವಿಯಾಗಿ ಉಡಾವಣೆಯಾದ ಆಕಾಶ್ ಎಸ್ 1 ಕ್ಷಿಪಣಿ ತಯಾರಿಕೆಯಿಂದಲೂ ಭಾರತಕ್ಕೆ ಹಣ ಉಳಿತಾಯವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ವಾರಗಳ ಹಿಂದಷ್ಟೇ ಕೇಂದ್ರ ಸರ್ಕಾರ ರಾಫೆಲ್ ಶಸ್ತ್ರಾಸ್ತ್ರ ಖರೀದಿಯಲ್ಲೂ 12 ಸಾವಿರಕ್ಕೂ ಅಧಿಕ ಕೋಟಿ ರುಪಾಯಿ ಉಳಿಸಿತ್ತು. ಈಗ ಮೇಕ್ ಇನ್ ಇಂಡಿಯಾ ಯೋಜನೆಯಿಂದಲೂ ಹಣ ಉಳಿಸಿರುವುದು ಮೋದಿ ಅವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ.
Leave A Reply