2018ರಲ್ಲಿ ಚಂದ್ರಯಾನ-2 : ಐತಿಹಾಸಿಕ ಸಾಹಸಕ್ಕೆ ಮುಂದಾದ ಇಸ್ರೊ

ದೆಹಲಿ: ಹೊಸ ಆವಿಷ್ಕಾರಗಳ ಮೂಲಕ, ತಂತ್ರಜ್ಞಾನದಲ್ಲೇ ಭಾರತದ ತಾಕತ್ತನ್ನು ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆಗೆ ಸೇರಿಸಿದ ಇಸ್ರೊ ಇದೀಗ ಮತ್ತೊಂದು ಐತಿಹಾಸಿಕ ಕಾರ್ಯಕ್ಕೆ ಮುಂದಾಗಿದೆ.
ಸುಮಾರು 3290 ಕೆ.ಜಿ. ತೂಕದ ರಾಕೆಟ್ ಚಂದ್ರನತ್ತ ಇಸ್ರೊ ಕಳುಹಿಸಲಿದೆ. ಚಂದ್ರಯಾನ -2 ಯೋಜನೆಗಾಗಿ ಇಸ್ರೊ ಸುಮಾರು 600 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
10 ವರ್ಷಗಳ ಹಿಂದೆ 2008ರಲ್ಲಿ ಮೊದಲ ಚಂದ್ರಯಾನ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಇಸ್ರೊ ಚಂದ್ರನತ್ತ ಮುಖ ಮಾಡಿದ್ದು ಚಂದ್ರಯಾನ -2 ಯೋಜನೆಗೆ ಸಿದ್ಧತೆ ನಡೆಸಿದೆ. ಚಂದ್ರನ ಮೇಲ್ಮೈ ಲಕ್ಷಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ. ನಿರ್ಧಾರದಂತೆ ಎಲ್ಲವೂ ನಡೆದರೆ 2018ರ ಮಾರ್ಚನಲ್ಲಿ ಇಸ್ರೊ ಚಂದ್ರನ ಮೇಲೆ ಮಾನವರಹಿತ ವಾಹನ ಇಳಿಸಲಿದೆ.
ಒಂದು ಚಂದ್ರನ ಮೇಲ್ಮೈ ಮೇಲೆ ಓಡಾಡುವ ಚಕ್ರವಿರುವ ಮಾನವರಹಿತ ವಾಹನ (ರೋವರ್), ಒಂದು ಚಂದ್ರನ ಮೇಲ್ಮೈ ಕಕ್ಷೆಯಲ್ಲಿ ಸುತ್ತುವ ಗಗನನೌಕೆ (ಆರ್ಬಿಟರ್) ಮತ್ತು ರೋವರ್, ಆರ್ಬಿಟರ್ ಇಳಿಸಲು ನೆರವಾಗುವ ಲ್ಯಾಂಡರ್ ಚಂದ್ರನತ್ತ ರಾಕೆಟ್ ಮೂಲಕ ಕಳುಹಿಸಲಿದೆ. 14 ಭೂ ದಿನಗಳಲ್ಲಿ ಯಾನ ಅಂತ್ಯವಾಗಲಿದೆ.
ಸೂರ್ಯನತ್ತಲೂ ಸಾಗಲಿದೆ ಭಾರತದ ರಾಕೇಟ್: ಚಂದ್ರಯಾನವಷ್ಟೇ ಅಲ್ಲ ಸೂರ್ಯನತ್ತವು ಇಸ್ರೊ ಗುರಿಯಿಟ್ಟಿದ್ದು 2019ಕ್ಕೆ ಸೂರ್ಯಯಾನ ಕೈಗೊಳ್ಳುವ ಗುರಿ ಹೊಂದಿದೆ. ಸೂರ್ಯನತ್ತ ಸಾಗುವ ಯೋಜನೆಗೆ ಆದಿತ್ಯ ಎಲ್-1 ಎಂದು ನಾಮಕರಣವೂ ಮಾಡಿದೆ.
ಹೀಗೆ ಕೆಲಸ ಮಾಡುತ್ತೆ
ಚಂದ್ರನ ಮೇಲೆ ಕೆಲವು ರಾಸಾಯನಿಕ ಪರೀಕ್ಷೆಗಳನ್ನು ಇದು ಮಾಡುತ್ತದೆ. ಅಲ್ಲದೇ ಮೇಲ್ಮೈನ 3ಡಿ ಮ್ಯಾಪ್ ಸೆರೆಹಿಡಿಯುತ್ತದೆ. ರೋವರ್ ಚಂದ್ರನ ಒಳಾಂಗಣವನ್ನು ಅಧ್ಯಯನ ಮಾಡಲಿದೆ. 6 ಚಕ್ರಗಳ ರೋವರ್ ವಾಹನ ಸೆಮಿ-ಆಟಾನಮಸ್ ಮೋಡ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೆ ಮಾಹಿತಿಗಳನ್ನು ಭೂಮಿಗೆ ಕಳುಹಿಸುತ್ತದೆ. ಭೂಮಿಯಿಂದಲೇ ರೋವರ್ ನಿಯಂತ್ರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ವಿಫಲವಾಗಿತ್ತು ಚಂದ್ರಯಾನ
2008ರ ಅಕ್ಟೋಬರ್‌ನಲ್ಲಿ ಇಸ್ರೊ ಚಂದ್ರಯಾನ ಕೈಗೊಂಡಿತ್ತು. 5 ಅಡಿ ಉದ್ದ ಮತ್ತು 5 ಅಡಿ ಅಗಲದ ಚೌಕಾಕೃತಿಯ ಉಪಗ್ರಹ ಚಂದ್ರನ ಕುಳಿಯೊಂದರಲ್ಲಿ ದ್ರವರೂಪದ ಮ್ಯಾಗ್ಮಾವನ್ನು (ಮ್ಯಾಗ್ಮಾಟಿಕ್‌ವಾಟರ್) ಗುರುತಿಸಿತ್ತು. ಆದರೆ, ಒಂದೇ ತಿಂಗಳಲ್ಲಿ ಉಪಗ್ರಹ ಪತನಗೊಂಡಿತ್ತು.
Leave A Reply