ಬೇಕಾದರೆ ಬೆಟ್ ಕಟ್ಟಿ, ಇನ್ನೂ 10 ವರ್ಷ ಗುಜರಾತಲ್ಲಿ ಮೋದಿ-ಶಾ ಅವರನ್ನು ಅಲುಗಾಡಿಸಲು ಆಗಲ್ಲ!
ರಾಜ್ಯದಲ್ಲಿ ಒಂದು ಒರಿಜಿನಲ್ ಹಿಂದೂ ಪರ ಪಕ್ಷವಿರುವಾಗ, ಜನರೇಕೆ ಬೇರೆ ಕಡೆ ವಾಲುತ್ತಾರೆ?
ಗುಜರಾತಿನಲ್ಲಿ ಚುನಾವಣೆ ಆರಂಭವಾಗುತ್ತಲೇ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತಿಗೆ ಧಾವಿಸಿ ಬಂದರು. ಸಾಲು ಸಾಲು ಸಭೆಗಳನ್ನು ಏರ್ಪಡಿಸಿ, ಕೇಂದ್ರ ಸರ್ಕಾರವನ್ನು ಟೀಕಿಸಿದರು. ಜಿಎಸ್ಟಿ ಎಳೆದು ತಂದು ರಾಜಕೀಯಕ್ಕೆ ಬಳಸಿದರು. ಎಲ್ಲದಕ್ಕೂ ಮೇಲಾಗಿ ಹಿಂದೂ ದೇವಾಲಯಗಳಿಗೆ ತೆರಳಿ, ತಾವೂ ಹಿಂದೂ, ಹಿಂದೂ ಪರ ನಿಲುವುಳ್ಳವರು ಎಂಬುದನ್ನು ಸಾಬೀತುಪಡಿಸಲು ಹೊರಟರು.
ಮಾತನ್ನು ಹೇಳಿದ್ದು. ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು ನಕಲಿ ಹಿಂದೂ ಎಂದು ಜರಿದಿದ್ದು.
ಬೇಕಾದರೆ ಬೆಟ್ ಕಟ್ಟಿ ಹೇಳುತ್ತೇನೆ. ಈ ಚುನಾವಣೆ ಬಿಡಿ, ಇನ್ನೂ ಹತ್ತು ವರ್ಷ ಗುಜರಾತಿನಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಲುಗಾಡಿಸಲು ಆಗಲ್ಲ.
ಹಾಗಂತ ನಾನೇನು ಸುಖಾಸುಮ್ಮನೆ ಈ ಮಾತನ್ನು ಹೇಳುತ್ತಿಲ್ಲ. ಬಿಜೆಪಿಯನ್ನು ಮೆಚ್ಚಿಸುವ ಉದ್ದೇಶವೂ ನನಗಿಲ್ಲ. ಕಳೆದ ಹತ್ತು ವರ್ಷಗಳಿಂದ ಗುಜರಾತಿನಲ್ಲಿ ಬೀದಿ ಬೀದಿ, ಗಲ್ಲಿ ಗಲ್ಲಿ ಅಲೆಯುತ್ತಿರುವ ಅನುಭವ, ಇಲ್ಲಿ ಬಗ್ಗೆ, ಮೋದಿ ಬಗ್ಗೆ ಪುಸ್ತಕ ಬರೆದ, ಕಂಡ, ಕೇಳಿದ, ಸ್ವತಃ ಅನುಭವಿಸಿದ ಕಾರಣ ಈ ಮಾತನ್ನು ಹೇಳುತ್ತಿದ್ದೇನೆ
ಪ್ರಸ್ತುತ ಗುಜರಾತಿನಲ್ಲಿ ಎರಡು ಬಣಗಳ ನಡುವೆ, ಅಂದರೆ, ಎಚ್ಎಜೆ ಹಾಗೂ ಆರ್ ಎಎಮ್ (ರಾಮ್ ಅಂತಲೂ ಓದಿಕೊಳ್ಳಬಹುದು) ಚುನಾವಣೆಯಲ್ಲಿ ಯುದ್ಧ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೂ ಬಿಡಿಸಿ ಹೇಳುವುದಾದರೆ, ಹಾರ್ದಿಕ್ ಪಟೇಲ್, ಅಲ್ಪೇಶ್ ಹಾಗೂ ಜಿಗ್ನೇಶ್ ಮತ್ತು ರೂಪಾನಿ, ಅಮಿತ್ ಶಾ, ಮೋದಿ ಎಂಬ ಬಣಗಳ ನಡುವಿನ ಯುದ್ಧ ಎಂದೇ ಹೇಳಲಾಗುತ್ತಿದೆ.
ಆದರೆ, ಗುಜರಾತಿಗೆ ಈ ಮೂವರೂ ಹೊಸಬರು. ಇಲ್ಲೇ ಹಾರ್ದಿಕ್ ಇಲ್ಲೇ ಹುಟ್ಟಿದರೂ ಅವರು ಮತ ಸೆಳೆಯಲು ಸಾಧ್ಯವಿಲ್ಲ. ಹೌದು, ಹಾರ್ದಿಕ್ ಪಟೇಲ್ ಗೆ ಮೀಸಲಾತಿ ಹೋರಾಟಕ್ಕೆ ಅಪಾರ ಬೆಂಬಲ ಸಿಕ್ಕಿತ್ತು ನಿಜ, ಆದರೆ ಇತ್ತೀಚೆಗೆ ಬಹಿರಂಗವಾದ ಸೆಕ್ಸ್ ಸಿಡಿ, ಗುಪ್ತವಾಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು, ಇದಕ್ಕೆ ದಲಿತ ನಾಯಕರಾದ ಅಲ್ಪೇಶ್ ಹಾಗೂ ಜಿಗ್ನೇಶ್ ಸಹಕಾರ ಪಡೆದಿದ್ದು, ಹಾರ್ದಿಕ್ ಪಟೇಲ್ ಮೇಲೆ ಜನರ ಒಲವು ತೀರಾ ಕಡಿಮೆಯಾಗಿದೆ. ಹಾಗಾಗಿ ಈ ಮೂರು ಬಣಗಳ ಆಟ ನಡೆಯಲ್ಲ. ರಾಹುಲ್ ಗಾಂಧಿಯವರದ್ದೂ ಇದೇ ಕತೆ.
ಇನ್ನು, ಜನಪ್ರಿಯ ಮುಖ್ಯಮಂತ್ರಿ ವಿಜಯ್ ರೂಪಾನಿ, ಚಾಣಕ್ಷ ಅಮಿತ್ ಶಾ, ಗುಜರಾತ್ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಅವರದ್ದು ನೇರ ನಡೆ, ನುಡಿ, ದಿಟ್ಟ ನಿರ್ಧಾರ, ಅಭಿವೃದ್ಧಿಯೇ ಆಧಾರ. ಹಾಗಾಗಿ ಇವರನ್ನು ಯಾರೂ ಅಲ್ಲಾಡಿಸಲು ಆಗಲ್ಲ. ಅಷ್ಟಕ್ಕೂ, ಕಳೆದ 22 ವರ್ಷಗಳಲ್ಲಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರವಿದೆ, ಉತ್ತಮ ಆಡಳಿತ ಕಂಡಿದ್ದಾರೆ. ಹೀಗಿರುವಾಗ ಅವರೇಕೆ ಬೇರೆ ಆಯ್ಕೆ ನೋಡಿಕೊಳ್ಳುತ್ತಾರೆ.
ನಾನು ಕಳೆದ ಕೆಲವು ತಿಂಗಳ ಹಿಂದೆ, ಸೂರತ್ ನ ವಜ್ರದ ವ್ಯಾಪಾರಿಗೆ ಜಿಎಸ್ಟಿ ಕುರಿತು, ಅದರಿಂದಾದ ನಷ್ಟದ ಕುರಿತು ಪ್ರಶ್ನೆ ಕೇಳಿದೆ. ಆಗ ಆತ, “ಹಾಗೊಂದು ವೇಳೆ ಅವಶ್ಯಕತೆ ಬಿದ್ದರೆ, ನನ್ನ ಆಸ್ತಿ ಮಾರಿಯಾದರೂ ಆತನ (ಮೋದಿ) ಗೆಲುವಿಗೆ ಶ್ರಮಿಸುತ್ತೇನೆ” ಎಂದು ಭಾವುಕರಾದರು. ಇದು ಬಹುತೇಕ ಜನರ ಅಭಿಪ್ರಾಯವೂ ಹೌದು. ಬೆಟ್ ಕಟ್ಟುತ್ತೀರಾ?
Leave A Reply