• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕದ್ರಿ ದೇವಸ್ಥಾನದ ವಿಷಯದಲ್ಲಿ ಸರಕಾರ ಹಿಂದೂಗಳ ಭಾವನೆಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಲಿದೆ!

Hanumantha Kamath Posted On December 23, 2017


  • Share On Facebook
  • Tweet It

ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದರೆ ಎಂತಯ್ಯಾ ಎನ್ನುವ ಮಾತೆ ಇದೆ. ಬ್ಲೇನಿ ಡಿಸೋಜಾ ಎನ್ನುವವರು ಕದ್ರಿ ದೇವಸ್ಥಾನದ ಎದುರಿನ ಫ್ಲಾಟಿನಲ್ಲಿ ವಾಸಿಸುತ್ತೀದ್ದೇನೆ, ಮೊಸರುಕುಡಿಕೆ, ದೀಪಾವಳಿ, ಜಾತ್ರೆಯ ಸಂದರ್ಭದಲ್ಲಿ ಮೈಕ್ ನ ಶಬ್ದವನ್ನು ಕಡಿಮೆ ಮಾಡಿ, ಭಕ್ತರಿಗೆ ಕೇಳಿಸುವ ಹಾಗೆ ಮಾತ್ರ ಮಾಡಿ ಎನ್ನುವ ಅರ್ಥದ ಮನವಿಯನ್ನು ಬರೆದು ಅದಕ್ಕೆ ತನ್ನ ಸಹಿ ಹಾಕಿಸಿ, ಅಲ್ಲಿಯೇ ಸನಿಹದ ಅಪಾರ್ಟ್ ಮೆಂಟಿನಲ್ಲಿ ವಾಸಿಸುವ ವರದಾರಾಜ ಬಾಳಿಗಾ, ಅವರ ತಂದೆ, ಚಿಕ್ಕಪ್ಪ ಅವರ ಸಹಿ ತೆಗೆದುಕೊಂಡು ನಂತರ ಒಂದಿಷ್ಟು ಕ್ರೈಸ್ತರ ಸಹಿ ಕೂಡ ತೆಗೆದುಕೊಂಡು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ, ಮೇಯರ್ ಅವರಿಗೆ ದೂರು ನೀಡಿದ್ದಾರೆ. ಅದು ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೇವಳದ ಕಾರ್ಯ ನಿರ್ವಹಣಾ ಅಧಿಕಾರಿಗೆ ಸೂಚನೆ ಹೋಗಿದೆ. ಇದೇ ಈಗ ವಿವಾದಕ್ಕೆ ತಿರುಗಿರುವುದು.

ಬ್ಲೇನಿ ಡಿಸೋಜಾ ಅವರ ಸಹಿ ಸಂಗ್ರಹ ಪತ್ರದಲ್ಲಿ ವರದರಾಜ ಬಾಳಿಗಾ ಅವರ ಸಹಿ ತೆಗೆದುಕೊಳ್ಳುವಾಗ ಇದು ದೇವಸ್ಥಾನಕ್ಕೆ ಕೊಡುವ ಮನವಿ ಪತ್ರ. ತನಗೆ ಕಿವಿಯ ಸಮಸ್ಯೆಯಿರುವುದರಿಂದ ಸ್ಪೀಕರ್ ಶಬ್ದವನ್ನು ಸ್ಪಲ್ಪ ಕಡಿಮೆ ಮಾಡುವಂತೆ ವಿನಂತಿಸಲು ಹೀಗೆ ಮಾಡಿರುತ್ತೇನೆ ಎಂದು ಎಂದಿದ್ದರು. 2016 ರಲ್ಲಿ ಅದಕ್ಕೆ ಒಪ್ಪಿ ವರದರಾಜ ಬಾಳಿಗಾ ಮತ್ತು ಕುಟುಂಬ ಅದಕ್ಕೆ ಸಹಿ ಹಾಕಿತ್ತು. ಸರಿ, ದೇವಸ್ಥಾನಕ್ಕೆ ಕೊಡುವ ಮನವಿ ತಾನೆ, ನಾನು ಕೂಡ ನಿತ್ಯ ದೇವಸ್ಥಾನಕ್ಕೆ ಹೋಗುವವನು, ಅಲ್ಲಿನ ಆಡಳಿತ ಮಂಡಳಿಯವರಿಗೆ ಬೇಕಾದರೆ ಈ ಕುರಿತು ಹೇಳುತ್ತೇನೆ ಎಂದು ವರದರಾಜ ಬಾಳಿಗಾ ಹೇಳಿದ್ದಾರೆ. ಅದರ ನಂತರ ಒಂದೂವರೆ ವರ್ಷದ ಬಳಿಕ ಈಗ ಈ ವಿಷಯ ಸಾಮಾಜಿಕ ತಾಣಗಳಲ್ಲಿ ಬಂದು ಆ ಮನವಿ ಪತ್ರವೋ ಅಥವಾ ದೂರಿನ ಪತ್ರವೊ ಬ್ಲೇನಿ ಡಿಸೋಜಾ ಬರೆದ ಪತ್ರಕ್ಕೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಅವರಿಗೆ ಆಘಾತ ತಂದಿದೆ. ಯಾವ ಉದ್ದೇಶಕ್ಕೆ ತಮ್ಮ ಸಹಿ ತೆಗೆದುಕೊಳ್ಳಲಾಗಿತ್ತೋ ಅದಕ್ಕೆ ಬಳಸದೆ ನೇರವಾಗಿ ಸರಕಾರದ ಅಧೀನದಲ್ಲಿ ಬರುವ ಇಲಾಖೆಗೆ ದೂರು ಕೊಟ್ಟು ತಮ್ಮ ಸಹಿಯನ್ನು ದುರುಪಯೋಗಪಡಿಸಲಾಗಿರುವ ಬಗ್ಗೆ ವರದರಾಜ ಬಾಳಿಗಾ ಅವರಿಗೆ ತೀವ್ರ ಅಸಮಾಧಾನವಾಗಿದೆ. ಅದಕ್ಕಾಗಿ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಬ್ಲೇನಿ ಡಿಸೋಜಾ ಅವರ ವಿರುದ್ಧ ದೂರು ನೀಡಿದ್ದಾರೆ.

ಇನ್ನು ವರದರಾಜ ಬಾಳಿಗಾ ಅವರು ಮಧ್ಯಮವೊಂದರಲ್ಲಿ ಹೇಳಿದ ಹಾಗೆ ಆ ಪರಿಸರದಲ್ಲಿ ಬ್ಲೇನಿ ಡಿಸೋಜಾ ಮತ್ತು ಇನ್ನೊಂದು ಕ್ರೈಸ್ತ ಕುಟುಂಬ ಮಾತ್ರ ವಾಸಿಸುತ್ತಿದೆ. ಹಾಗಿರುವಾಗ ಬ್ಲೇನಿ ಡಿಸೋಜಾ ಅವರು ಆ ಪತ್ರದಲ್ಲಿ ಅನೇಕ ಕ್ರೈಸ್ತ ಭಾಂದವರ ಸಹಿಯನ್ನು ಕೂಡ ತೆಗೆದುಕೊಳ್ಳುವ ಮೂಲಕ ಏನು ಸಾಧಿಸಲು ಹೊರಟಿದ್ದಾರೆ ಎನ್ನುವುದು ಅವರ ಪ್ರಶ್ನೆ.

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬಂದು ಉಳಿದುಕೊಂಡಿದ್ದರು ಎನ್ನುವುದಕ್ಕೆ ಕುರುಹಾಗಿ ಅಲ್ಲಿ ಪಾಂಡವರ ಗುಹೆ, ಸೀತಾಬಾವಿ ಇದೆ. ಇಲ್ಲಿಯೇ ಯೋಗಿಮಠದ ಪರಂಪರೆಯ ಅಶ್ರಮ ಇದೆ. ಕಳೆದ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದಾಗ ರಾತ್ರಿ ಇಲ್ಲಿಯೇ ಉಳಿದುಕೊಂಡಿದ್ದರು. ದೇವಸ್ಥಾನಕ್ಕೆ ಬರುವ ಭಕ್ತರು ಗೋಮುಖದಿಂದ ಬರುವ ಕಾಶೀ ಭಾಗೀರಥಿ ತೀರ್ಥವನ್ನು ಸೇವಿಸಲು ಮರೆಯುವುದಿಲ್ಲ. ಎಲ್ಲಿಂದಲೋ ಹರಿದು ಬರುವ ಆ ತೀರ್ಥಕ್ಕೆ ವಿಶೇಷ ಶಕ್ತಿ ಇದೆ ಎನ್ನುವ ನಂಬಿಕೆ. ಮಂಗಳೂರಿನಲ್ಲಿ ಮಳೆಗಾಲದಲ್ಲಿ ಮಳೆ ಕಡಿಮೆ ಬಂದರೆ ಅಥವಾ ಯಾವುದೇ ರೀತಿ ತೊಂದರೆ ಆದರೆ ಕದ್ರಿ ಮಂಜುನಾಥನಿಗೆ ವಿಶೇಷವಾದ ಸೇವೆ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳುವುದು ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ. ಈ ಪರಿಸರದಲ್ಲಿ ವಾಸಿಸುವವರು ಪುಣ್ಯವಂತರು ಎಂದು ಹೇಳುವವರಿದ್ದಾರೆ. ಯಾಕೆಂದರೆ ಮಂಜುನಾಥನ ಸನ್ನಿಧಿಯಲ್ಲಿ ವಾಸಿಸುವ ಯೋಗ ಸಿಕ್ಕಿದ್ದಕ್ಕೆ. ಹಾಗಿರುವಾಗ ಬ್ಲೇನಿ ಡಿಸೋಜಾ ಎನ್ನುವವರು ನೇರವಾಗಿ ಸರಕಾರಿ ಇಲಾಖೆಗೆ ದೂರನ್ನು ಕೊಟ್ಟಿರುವುದಕ್ಕೆ ಹಿಂದೂ ಭಾಂದವರಿಂದ ವಿರೋಧ ವ್ಯಕ್ತವಾಗುತ್ತಿದೆ.         

ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಹಿಂದೆ ಬೇರೆ ಬೇರೆ ವ್ಯಕ್ತಿಗಳು ದೂರು ಕೊಟ್ಟು ವಿಚಾರಣೆಗೆ ಬಂದಾಗ ತನ್ನ ತೀರ್ಪಿನಲ್ಲಿ ಜಾತ್ರೆ, ಉತ್ಸವಗಳನ್ನು ನಿಷೇಧಿಸಬೇಕು ಎಂದು ಹೇಳಿಲ್ಲ. ಆದರೆ  ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10  ಗಂಟೆಯವರೆಗೆ ಇಂತಿಂಷ್ಟು ಶಬ್ದಗಳ ತರಂಗಾತರದ ಒಳಗೆ ಇರಬೇಕು ಎಂದಿದೆ (ಡೆಸಿಬಲ್ 10 (ಎ) ಸಭಾಂಗಣದ ಒಳಗೆ ಆದರೆ, 75 ಡೆಸಿಬಲ್ ಹೊರ ಭಾಗದಲ್ಲಾದರೆ, ಯಾವುದು ಕಡಿಮೆಯೋ ಅದನ್ನು ಬಳಸಬೇಕು).

ವಿವಿಧ ಜಾತಿ, ಧರ್ಮ ಇರುವ ದೇಶದಲ್ಲಿ ಪರಸ್ಪರ ಸೌಹಾರ್ಧಯುತವಾಗಿ ಬಾಳುವುದು ಅಗತ್ಯ. ಯಾವುದೋ ಟಿವಿಯವರು ಈ ಕುರಿತು ಮುಸ್ಲಿಮ್ ಮುಖಂಡರೊಬ್ಬರ ಅಭಿಪ್ರಾಯ ಕೇಳಿದಾಗ ಅವರು ಕೂಡ ಹೇಳಿದ್ದು ಅದನ್ನೇ, ಪರಸ್ಪರ ಧರ್ಮದ ಬಗ್ಗೆ ಪ್ರೀತಿ, ಗೌರವ ಹೊಂದುವುದು ಇವತ್ತಿನ ಅನಿವಾರ್ಯತೆ. ಯಾರಿಗೂ ಮನಸ್ಸು ಕೆಡುವುದು ಬೇಡವಾಗಿದೆ. ನಾವು ಶಾಂತಿಯುತವಾಗಿ ಬಾಳಬೇಕು. ಈಗ ಸರಕಾರಕ್ಕೆ ಬ್ಲೇನಿ ಡಿಸೋಜಾ ಅವರ ಪತ್ರ ತಲುಪಿರುವುದರಿಂದ ಏನಾಗುತ್ತೆ, ಬ್ಲೇನಿ ಡಿಸೋಜಾ ಅವರ ಪರವಾಗಿ ನಿಂತು ಜಾತ್ಯಾತೀತರನ್ನು ಒಲೈಸುವ ಸಲುವಾಗಿ ಸರಕಾರ ಏನಾದರೂ ಕ್ರಮ ತೆಗೆದುಕೊಳ್ಳುತ್ತದೆ. ಅದರಿಂದ ಹಿಂದೂಗಳ ಮನಸ್ಸಿಗೆ ನೋವಾಗುತ್ತದೆ. ಅದರ ಬದಲು ಬ್ಲೇನಿಯವರು ಇದನ್ನು ಸೌಹಾರ್ಧಯುತವಾಗಿ ಪರಿಹರಿಸಬಹುದಿತ್ತು. ಪರಿಹಾರ ಇಲ್ಲದ ಸಮಸ್ಯೆಗಳೇ ಇಲ್ಲ. ಎಲ್ಲ ದೇವಸ್ಥಾನಗಳಿಗೆ ಕೈ ಹಾಕಲು ಸಿದ್ಧರಾಮಯ್ಯನವರನ್ನೇ ಕರಿಬೇಕಿಲ್ಲ. ಮೀನು ತಿಂದು ಬರಬಾರದು ಎಂದು ದೇವರು ಹೇಳಿದ್ದಾನಾ ಎಂದು ಹೇಳುವವರು ನಾಳೆ ಮೊಸರು ಕುಡಿಕೆ, ದೀಪಾವಳಿ ಮಾಡಲು ದೇವರು ಹೇಳಿದ್ದಾನಾ, ಬಂದ್ ಮಾಡ್ರಿ ನಿಮ್ಮ ಸೌಂಡ್ ಸಿಸ್ಟಮ್ ಎಂದು ಆದೇಶ ಕೊಡಲು ಕೂಡ ಹಿಂದೇಟು ಹಾಕುವವರಲ್ಲ.

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search